ಗಂಟಲು ನೋವಿಗೆ ಏಲಕ್ಕಿ ಮದ್ದು

7

ಗಂಟಲು ನೋವಿಗೆ ಏಲಕ್ಕಿ ಮದ್ದು

Published:
Updated:
Deccan Herald

ಮಾಲಿನ್ಯ, ಧೂಳು, ನೀರಿನಿಂದ ಗಂಟಲು ನೋವು, ಒಣಕೆಮ್ಮು, ಕಫದಂತಹ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಪದೇ ಪದೇ ಕಾಡುವಂತಹ ಈ ಕಾಯಿಲೆಗಳಿಗೆ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಏಲಕ್ಕಿಯಿಂದ ಮುಕ್ತಿ ಪಡೆಯಬಹುದು. ಏಲಕ್ಕಿಯಿಂದ ಅನೇಕ ಆರೋಗ್ಯ ಸಂಬಂಧಿ ಪ್ರಯೋಜನಗಳಿವೆ. ಇಲ್ಲಿದೆ ಕೆಲ ಮಾಹಿತಿ.

ಜೀರ್ಣಶಕ್ತಿಯನ್ನು ಹೆಚ್ಚು ಮಾಡುತ್ತದೆ: ಕರುಳಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಟಾಕ್ಸಿನ್‌ಗಳ ಸಂಗ್ರಹವಾಗಿರುತ್ತದೆ. ಇದರಿಂದ ಗಂಟಲು ನೋವಿನಂತಹ ಆರೋಗ್ಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಏಲಕ್ಕಿ ಜೀರ್ಣಶಕ್ತಿಯನ್ನು ಹೆಚ್ಚು ಮಾಡಿ, ಅನಗತ್ಯ ಟಾಕ್ಸಿನ್‌ಗಳನ್ನು ಹೊರಹಾಕುವ ಶಕ್ತಿಯನ್ನು ಹೊಂದಿದೆ. 

ಕಫಕ್ಕೆ ಮನೆಮದ್ದು: ಒಂದು ಚಿಟಿಕೆ ಏಲಕ್ಕಿ ಪೌಡರ್‌, ಒಂದು ಚಿಟಿಕೆ ಉಪ್ಪು, ಒಂದು ಟೀ ಸ್ಪೂನ್‌ ತುಪ್ಪ, ಅರ್ಧ ಟೀ ಸ್ಪೂನ್‌ ಜೇನುತುಪ್ಪವನ್ನು ಚೆನ್ನಾಗಿ ಮಿಶ್ರ ಮಾಡಿ ಸೇವಿಸಿದರೆ ಕಫದ ಸಮಸ್ಯೆ ಕಡಿಮೆಯಾಗುತ್ತದೆ

 ಒಣಗಂಟಲು ಕಿರಿಕಿರಿ ಶಮನ: ಧೂಳು ಹಾಗೂ ಮಾಲಿನ್ಯದಿಂದ ಗಂಟಲು ನೋವು ಅಥವಾ ಗಂಟಲು ಕೆರೆತ ಆಗಿದ್ದರೆ ಏಲಕ್ಕಿ ಹಾಗೂ ಲವಂಗವನ್ನು ಮಿಶ್ರಣ ಮಾಡಿ, ಸೇವಿಸಿದರೆ ಕಡಿಮೆಯಾಗುತ್ತದೆ. 

ಗಂಟಲು ತುರಿಕೆಗೆ: ಒಂದು ಗ್ಲಾಸ್‌ ನೀರಿನಲ್ಲಿ ಏಲಕ್ಕಿ ನೆನಸಿಡಬೇಕು. ಮರುದಿನ ಬೆಳಿಗ್ಗೆ ಚಿಟಿಕೆ ಉಪ್ಪು ಹಾಕಿ, ಅದನ್ನು ಗಂಟಲಿಗೆ ಹಾಕಿಕೊಂಡು ಗುಳು ಗುಳು ಮಾಡಿದರೆ ಗಂಟಲು ಕೆರೆತ, ನೋವು ಕಡಿಮೆಯಾಗುತ್ತದೆ. 

ಶೀತಕ್ಕೆ ಮದ್ದು: ಶೀತ ಆಗಿದ್ದಾಗ ಏಲಕ್ಕಿ ಟೀಯನ್ನು ಕುಡಿದರೆ ಬೇಗ ವಾಸಿಯಾಗುತ್ತದೆ. ಇದು ಕಟ್ಟಿಕೊಂಡಿರುವ ಮೂಗನ್ನು ಗುಣಮಾಡಿ ಉಸಿರಾಟ ಸರಾಗವಾಗುವಂತೆ ಮಾಡುತ್ತದೆ. ಹಾಗೇ ಮೈಕೈ ನೋವನ್ನೂ ಕಡಿಮೆ ಮಾಡುತ್ತದೆ. 

ಏಲಕ್ಕಿ ಹಾಕಿದ ನೀರು ಕುಡಿಯುವುದರಿಂದ ಅದು ಆಗಾಗ ಬಾಯಾರಿಕೆಯಾಗುವಂತೆ ಮಾಡುತ್ತದೆ. ಇದರಿಂದ ದೇಹದಲ್ಲಿ ನೀರಿನಾಂಶವನ್ನು ಸಮಪ್ರಮಾಣದಲ್ಲಿ ಇರುವಂತೆ ಮಾಡುತ್ತದೆ. 

ಒತ್ತಡಕ್ಕೆ ಒಳಗಾದಾಗ, ಕಾಯಿಲೆ, ಸುಸ್ತು ಮತ್ತು ಬಳಲಿಕೆ ಕಾಣಿಸಿಕೊಂಡಾಗ ಏಲಕ್ಕಿ ನೀರು ಕುಡಿಯಬೇಕು. ಇದರಲ್ಲಿ ಪೋಷಕಾಂಶಗಳು ಹೆಚ್ಚಿದ್ದು, ದೇಹಕ್ಕೆ ಶಕ್ತಿ ನೀಡುತ್ತದೆ. ದಿನಪೂರ್ತಿ ಚೈತನ್ಯದಿಂದ ಇರುವಂತೆಯೂ ಮಾಡುತ್ತದೆ

ಏಲಕ್ಕಿ ಜಗಿಯುವುದರಿಂದ ಬಾಯಿಯ ದುರ್ವಾಸನೆಯನ್ನು ತಡೆಗಟ್ಟುತ್ತದೆ. ಶ್ವಾಸಕೋಶ ಸಂಬಂಧಿ ಕಾಯಿಲೆಗಳನ್ನೂ ದೂರ ಮಾಡುತ್ತದೆ 

ಬರಹ ಇಷ್ಟವಾಯಿತೆ?

 • 23

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !