ಕಣ್ಣು ದೇಹದ ಸೂಕ್ಷ್ಮ ಅಂಗ. ಪ್ರತಿದಿನ ಹೊರಗಿನ ಓಡಾಟದಿಂದ ಧೂಳು, ವಾಹನಗಳ ಹೊಗೆ ಕಣ್ಣಿನ ಒಳಹೊಕ್ಕು ತೊಂದರೆಯುಂಟು ಮಾಡಬಲ್ಲದು.

ಇದರಿಂದ ಕೆಲವರಿಗೆ ಅಲರ್ಜಿ, ತುರಿಕೆ, ಕೆಂಪಾಗುವ ಸಮಸ್ಯೆ ಕಾಡುತ್ತದೆ. ಹೀಗಾಗಿ ಕಣ್ಣಿನ ಕಾಳಜಿ ಅತಿ ಅಗತ್ಯವಾಗಿರುತ್ತದೆ. ಕಣ್ಣಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು, ದೈನಂದಿನ ಜೀವನದಲ್ಲಿ ಸುಲಭವಾಗಿ ಯಾವೆಲ್ಲ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ಎನ್ನುವ ಬಗ್ಗೆ ನಾರಾಯಣ ನೇತ್ರಾಲಯದ ವೈದ್ಯರಾದ ಡಾ. ನರೇನ್ ಶೆಟ್ಟಿ ‘ಪ್ರಜಾವಾಣಿ ಡಿಜಿಟಲ್’ಗೆ ಮಾಹಿತಿ ನೀಡಿದ್ದಾರೆ.

ಅತಿಯಾದ ಬಿಸಿಲಿನಲ್ಲಿ ಒಡಾಡುವುದು, ಹೆಚ್ಚು ಮೊಬೈಲ್, ಕಂಪ್ಯೂಟರ್ನ ಬೆಳಕನ್ನು ನೋಡುವುದು ಮತ್ತು ಹೆಚ್ಚು ಕಾಲ ಎಸಿಯಲ್ಲಿ ಕುಳಿತುಕೊಳ್ಳುವ ಕಾರಣ ಕಣ್ಣುಗಳ ಸಮಸ್ಯೆ ಉಲ್ಬಣವಾಗುತ್ತದೆ. ಹೀಗಾಗಿ ಜಾಗರೂಕರಾಗಿರುವುದು ಇರುವುದು ಮುಖ್ಯ.

ಸನ್ ಗ್ಲಾಸ್ ಆಯ್ಕೆಯಲ್ಲಿ ಎಚ್ಚರಿಕೆಯಿರಲಿ

ಬಿಸಿಲಿನಿಂದ ರಕ್ಷಿಸಿಕೊಳ್ಳಬೇಕೆಂದು ಯಾವುದೋ ಸನ್ ಗ್ಲಾಸ್ ಹಾಕಿಕೊಂಡರೆ ಕಣ್ಣಿಗೆ ಅಪಾಯವೇ ಹೆಚ್ಚು. ಹೀಗಾಗಿ ಯುವಿ 400 ಸನ್ಗ್ಲಾಸ್ ಹಾಕಿಕೊಂಡರೆ ಮಾತ್ರ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ಪಡೆಯಲು ಸಾಧ್ಯ. ಹೀಗಾಗಿ ಕಳಪೆ ಗುಣಮಟ್ಟದ ಸನ್ಗ್ಲಾಸ್ ಧರಿಸುವ ಬದಲು ಧರಿಸದಿರುವುದೇ ಒಳ್ಳೆಯದು.

ಕಣ್ಣಿನ ಸೋಂಕು ಕಡೆಗಣಿಸದಿರಿ

ಕಣ್ಣು ಕೆಂಪು ಬಣ್ಣಕ್ಕೆ ತಿರುಗಿದ್ದರೆ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ. ಜತೆಗೆ ಯಾವುದೇ ಕಾರಣಕ್ಕೂ ಕೈ ಅಥವಾ ಕೈ ಬೆರಳುಗಳ ಮೂಲಕ ಕಣ್ಣನ್ನು ಮುಟ್ಟಬೇಡಿ.

ನೀವು ಧರಿಸುವ ಬಟ್ಟೆ, ಮಲಗುವಾಗ ಬಳಸುವ ತಲೆದಿಂಬನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ಸೋಂಕು ಗುಣವಾಗುವವರೆಗೆ ಪ್ರತ್ಯೇಕವಾಗಿರಿ.

ಕಣ್ಣುಗಳಿಗೆ ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಿದ್ದರೆ, ಅದನ್ನು ತೆಗೆದು ಕನ್ನಡಕ ಬಳಸಿ. ಕಾಂಟ್ಯಾಕ್ಟ್ ಲೆನ್ಸ್ ಇದ್ದರೆ ಸೋಂಕು ಇನ್ನಷ್ಟು ಉಲ್ಬಣವಾಗುವ ಸಾಧ್ಯತೆ ಇರುತ್ತದೆ.

ಕಣ್ಣುಬೇನೆ ಸಮಯದಲ್ಲಿ ಸೋಂಕಿತರ ಕಣ್ಣುಗಳನ್ನು ನೋಡಿದರೂ ಸೋಂಕು ಹರಡುತ್ತದೆ ಎನ್ನುವುದು ಸುಳ್ಳು. ಕಣ್ಣು ಅಥವಾ ಕಣ್ಣೀರನ್ನು ಮುಟ್ಟಿ ಬೇರೆ ವಸ್ತುಗಳನ್ನು ಮುಟ್ಟಿದಾಗ ಮಾತ್ರ ಇತರರಿಗೆ ಹರಡುತ್ತದೆ.

ಧೂಳಿನಿಂದ ಕಣ್ಣುಗಳ ರಕ್ಷಣೆ ಹೀಗಿರಲಿ

ಬೈಕ್ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಗ್ಲಾಸ್ಅನ್ನು ಹಾಕಿಕೊಳ್ಳಿ

ಬೈಕ್ ರೈಡಿಂಗ್ ಗ್ಲಾಸ್ ಹಾಕಿಕೊಳ್ಳುವುದು ಒಳ್ಳೆಯದು

ಐಸ್ ಪ್ಯಾಕ್ಗಳನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ

ಸೌತೆಕಾಯಿ ತುಂಡುಗಳನ್ನು ಇರಿಸಿಕೊಂಡರೂ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.