ದೇಹವನ್ನು ಸದೃಢವಾಗಿಡಲು ಅನೇಕರ ವ್ಯಾಯಾಮ, ಜಿಮ್ ಸೇರಿದಂತೆ ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಕೆಲ ಸಂದರ್ಭದಲ್ಲಿ ಅತಿಯಾದ ತೂಕದಿಂದ ಅನೇಕ ತೊಂದರೆಗಳನ್ನು ಎದುರಿಸುತ್ತಾರೆ. ಕಠಿಣ ಪರಿಶ್ರಮ ಮತ್ತು ಸೂಕ್ತ ಆಹಾರ ಕ್ರಮದಿಂದಾಗಿ ದೇಹ ದಂಡಿಸಿದರೆ, ತೂಕ ಇಳಿಸಬಹುದು ಎಂಬುದಕ್ಕೆ 48 ವರ್ಷದ ವ್ಯಕ್ತಿ ಉತ್ತಮ ಉದಾಹರಣೆಯಾಗಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಫಿಟ್ನೆಸ್ ತರಬೇತುದಾರ ಕೆವ್ ಎಂಬುವವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ 48 ವರ್ಷದ ಡೇವಿಡ್ ಎಂಬುವವರು 6 ತಿಂಗಳ ಹಿಂದೆ 128 ಕೆಜಿ ಇದ್ದರು. ಈಗ ಅವರು 96 ಕೆಜಿಗೆ ಇಳಿಸಿಕೊಂಡಿದ್ದಾರೆ.

ಇಷ್ಟು ವೇಗವಾಗಿ ತೂಕ ಇಳಿಸಿದ್ದು ಹೇಗೆ? ಅವರ ಆಹಾರ ಕ್ರಮ ಹಾಗೂ ಅವರು ಪಾಲಿಸಿದ ದಿನಚರಿ ಹೇಗಿತ್ತು ಎಂಬುದನ್ನು ಕೆವ್ ಹಂಚಿಕೊಂಡಿದ್ದಾರೆ.

ಡೇವಿಡ್ ಅವರು 6 ತಿಂಗಳ ಹಿಂದೆ ಫಿಟ್ನೆಸ್ ತರಬೇತುದಾರ ಕೆವ್ ಅವರನ್ನು ಸಂಪರ್ಕಿಸಿದ್ದರು. 48 ವರ್ಷದ ಡೇವಿಡ್ ಉತ್ತಮ ದಿನಚರಿಯ ಹೊರತಾಗಿಯೂ, ದೇಹದ ತೂಕ ನಿಯಂತ್ರಣದಲ್ಲಿ ಇರಲಿಲ್ಲ.

ಅವರು ವ್ಯವಹಾರಗಳ ನಡುವೆ ತಮ್ಮ ಮಕ್ಕಳಿಗೆ ಬ್ಯಾಸ್ಕೆಟ್ಬಾಲ್ ತರಬೇತಿ ನೀಡುತ್ತಿದ್ದರು. ಆದರೆ ಅವರ ತೂಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಯಾವುದೇ ಕೆಲಸ ಮಾಡಲು ಆಗದೇ ಬೇಸರ ವ್ಯಕ್ತಪಡಿಸುತ್ತಿದ್ದರು.

ಆದರೆ ಅವರ ಶಿಸ್ತುಬದ್ಧ ಆಹಾರ ಸೇವನೆ, ವ್ಯಾಯಾಮ ಹಾಗೂ ಜೀವನ ಶೈಲಿಯಲ್ಲಿನ ಬದಲಾವಣೆಗಳ ಮೂಲಕ ಡೇವಿಡ್ 6 ತಿಂಗಳಿನಲ್ಲಿ 32 ಕೆಜಿ ತೂಕ ಇಳಿಸಿಕೊಂಡರು ಎಂದು ಕೆವ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ತೂಕದ ನಷ್ಟಕ್ಕೆ ಕೆವ್ ಅವರು ತಯಾರಿಸಿದ ಪಟ್ಟಿ ಹೀಗಿತ್ತು

ಉತ್ತಮ ಪ್ರೋಟಿನ್ಗಾಗಿ ಕೋಳಿ ಮಾಂಸ, ಗೋಮಾಂಸ, ಸಿರ್ಲೋಯನ್ ಸ್ಟೀಕ್, ಸಾಲ್ಮನ್ ಮೀನು, ಮೊಟ್ಟೆ, ಟರ್ಕಿ ಮಾಂಸ, ಸೀಗಡಿ, ಮೊಸರು ಮತ್ತು ಚೀಸ್ ಮತ್ತು ಸೇವಿಸಲು ಸಲಹೆ ನೀಡಿದ್ದರು.

ಕಾರ್ಬೋಹೈಡ್ರೇಟ್ಗಾಗಿ ಅನ್ನ, ಸಿಹಿ ಗೆಣಸು, ಆಲೂಗಡ್ಡೆ, ಓಟ್ಸ್, ಕಾರ್ನ್, ಇವುಗಳ ಜೊತೆಗೆ ತರಕಾರಿಗಳಾದ ಬ್ರೊಕೊಲಿ, ಮೆಣಸು, ಪಾಲಕ್ ಮತ್ತು ಹಸಿರು ಬೀನ್ಸ್ ಸೇವಿಸುತ್ತಾರೆ.

ಅವರ ಊಟದ ಯೋಜನೆ ಹೀಗಿತ್ತು

ಬೆಳಗಿನ ಆಹಾರ: ಪ್ರೋಟೀನ್ ಶೇಕ್ ಜೊತೆಗೆ ಮೊಸರು, ಟರ್ಕಿ ಮಾಂಸ , 3 ಮೊಟ್ಟೆಗಳು ಅಥವಾ ಹೆಚ್ಚಿನ ಪ್ರೋಟೀನ್ಗಾಗಿ ಮೊಸರಿನೊಂದಿಗೆ ಚೀಸ್ ಸೇವನೆ.

ಮಧ್ಯಾಹ್ನದ ಊಟ: ಅನ್ನ, ಬ್ರೊಕೊಲಿಯ ಜೊತೆಗೆ ಚಿಕನ್, ಸಿಹಿ ಗೆಣಸು. ತರಕಾರಿಗಳ ಜೊತೆ ಗೋಮಾಂಸ ಅಥವಾ ಅನ್ನ, ಸೊಪ್ಪು ಹಾಗೂ ಸಾಲ್ಮನ್ ಮೀನನ್ನು ಸೇವಿಸುವುದು.

ರಾತ್ರಿ ಊಟ: ಆಲೂಗಡ್ಡೆ, ಹೂಕೋಸು, ಅನ್ನ, ಚಿಕನ್ ಮತ್ತು ಮಿಶ್ರ ತರಕಾರಿ ಜೊತೆ ಸೀಗಡಿ ಸೇವನೆ.

ದೈನಂದಿನ ದಿನಚರಿ ಹೇಗಿರಬೇಕು?

ಬೆಳಿಗ್ಗೆ 5:30ಕ್ಕೆ ಏಳಬೇಕು. ರಾತ್ರಿ 10 ಗಂಟೆಗೆ ಮಲಗುವುದು.

ಮದ್ಯಪಾನ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ಸಂಜೆ 7 ಗಂಟೆಯ ನಂತರ ಯಾವುದೇ ಆಹಾರವನ್ನು ಸೇವಿಸಬಾರದು.

ಪ್ರತಿದಿನ ಕನಿಷ್ಠ 8,000 ಹೆಜ್ಜೆಗಳನ್ನು ನಡೆಯಬೇಕು.

ವಾರಕ್ಕೆ 3 ರಿಂದ 4 ಬಾರಿ 45 ನಿಮಿಷಗಳ ಕಠಿಣ ವ್ಯಾಯಾಮ ಮಾಡಬೇಕು.

ಬೆಳಿಗ್ಗೆ 30 ನಿಮಿಷ ಸೂರ್ಯನ ಬೆಳಕಿನಲ್ಲಿ ಕಳೆಯುವುದು

ಪ್ರತಿದಿನ ಕನಿಷ್ಠ 150 ಗ್ರಾಂ ಪ್ರೋಟೀನ್ ಸೇವನೆ

ದೇಹಕ್ಕೆ ಸಾಕಾಗುವಷ್ಟು ನೀರನ್ನು ಕುಡಿಯುವುದು.

ಮಲಗುವ ಮುನ್ನ ಪ್ರತಿದಿನ 5 ಗ್ರಾಂ ಕ್ರಿಯೇಟೈನ್ ಮತ್ತು 400 ಮಿ.ಗ್ರಾಂ ಮೆಗ್ನೀಸಿಯಮ್ ತೆಗೆದುಕೊಳ್ಳುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.