ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗೆ ಬೇಕಾದ ಸಮಯದಲ್ಲಿ ಮಗು ಪಡೆಯಬೇಕೇ? ಈಗಲೇ ಎಗ್‌ ಫ್ರೀಜ್‌ ಮಾಡಿಕೊಳ್ಳಿ

Last Updated 12 ಜುಲೈ 2022, 5:32 IST
ಅಕ್ಷರ ಗಾತ್ರ

ಇಂದಿನ ಯುಗದಲ್ಲಿ ಮದುವೆಯಾದ ಕೂಡಲೇ ಮಕ್ಕಳು ಪಡೆಯುವವರ ಸಂಖ್ಯೆ ತೀಾ ಕಡಿಮೆ. ಜೊತೆಗೆ ವೃತ್ತಿ ಜೀವನದಲ್ಲಿ ಏನಾದರು ಸಾಧಿಸಬೇಕು ಅಥವಾ ಬೇರೆಯದೇ ಗುರಿಯನ್ನು ಹೊಂದಿರುವ ಮಹಿಳೆಯರು ಸಹ
ಸಣ್ಣ ವಯಸ್ಸಿನಲ್ಲಿಯೇ ಮಗು ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅಂಥವರಿಗಾಗಿ ವೈದ್ಯಕೀಯ ಲೋಕದಲ್ಲಿ ಹೊಸ ಮಾರ್ಗಗಳೇ ಇವೆ. ಈ ಪೈಕಿ ಘನೀಕರಣ ಅಂಡಾಣುವಿನಿಂದ (ಎಗ್ ಫ್ರೀಜಿಂಗ್) ಮಗುವನ್ನು ಪಡೆಯುವುದು ಕೂಡ ಒಂದು ಮಾರ್ಗ.

ಇನ್ನೂ ಕೆಲವರಲ್ಲಿ ವಯಸ್ಸಾಗುತ್ತಾ ಅವರ ಅಂಡಾಣುಗಳ ಫಲವತ್ತತೆ ಕುಗ್ಗುತ್ತಾ ಬರುವ ಸಾಧ್ಯತೆ ಇದೆ. ಹೀಗಾಗಿ, ಭವಿಷ್ಯದ ದೃಷ್ಟಿಯಿಂದ ಈಗಲೇ ನಿಮ್ಮ ಎಗ್‌ ಅನ್ನು ಫ್ರೀಜ್‌ ಮಾಡಿ ಇಟ್ಟುಕೊಳ್ಳುವುದರಿಂದ ನಿಮಗೆ ಬೇಕಾದ ಸಮಯದಲ್ಲಿ ಆರೋಗ್ಯಕರ ಮಗು ಪಡೆಯಬಹುದು. ಇಂದು ‘ವರ್ಲ್ಡ್ ಪಾಪುಲೇಷನ್‌ ಡೇ’ ಆಗಿದ್ದು, ಈ ಹಿನ್ನೆಲೆಯಲ್ಲಿ ಎಗ್‌ಫ್ರೀಜಿಂಗ್‌ ಕುರಿತು ವೈದ್ಯರು ವಿವರಿಸಿದ್ದಾರೆ.

ಎಗ್‌ ಫ್ರೀಜಿಂಗ್‌ ಹೇಗೆ?

ಮೊಟ್ಟೆಯ ಘನೀಕರಣವನ್ನು ‘ಓಸೈಟ್‌ ಕ್ರಯೋಪ್ರಿಸರ್ವೇಶನ್" ಅಥವಾ ಒಸಿ ಎಂದೂ ಕರೆಯಲಾಗುತ್ತದೆ. ಪ್ರೌಢ ಅಥವಾ ಆರೋಗ್ಯಕರ ಮೊಟ್ಟೆಗಳನ್ನು (ಓಸೈಟ್‌) ರಚಿಸಲು ಅಂಡಾಶಯ-ಉತ್ತೇಜಿಸುವ ಔಷಧವನ್ನು ಚುಚ್ಚಲಾಗುತ್ತದೆ. ವೈದ್ಯರು ಅಲ್ಟ್ರಾಸೌಂಡ್ ಮಾರ್ಗವನ್ನು ಬಳಸಿಕೊಂಡು ಮೊಟ್ಟೆಗಳನ್ನು ತೆಗೆಯುತ್ತಾರೆ. ನಂತರ, ಅವುಗಳನ್ನು ಫ್ರೀಜ್ ಮಾಡಿ ಸಂರಕ್ಷಿಸಲಾಗುತ್ತದೆ. ಇದನ್ನು ಕ್ರಿಯೋಬ್ಯಾಂಕಿಂಗ್ ಪ್ರಕ್ರಿಯೆ ಎಂದೂ ಕರೆಯಲಾಗುತ್ತದೆ. ನೀವು ಗರ್ಭಧರಿಸಲು ಸಿದ್ಧವಾಗುವವರೆಗೂ ಈ ಎಗ್‌ ಅನ್ನು ಘನೀಕರಿಸಿ ಇರಿಸಲಾಗುತ್ತದೆ. ನಿಮಗೆ ಮಗು ಬೇಕಿನಿಸಿದಾಗ ಇದನ್ನು ನಿಮ್ಮ ಸಂಗಾತಿಯ ವೀರ್ಯದೊಂದಿಗೆ ಫಲವತ್ತಾಗಲು ಬಿಡಲಾಗುತ್ತದೆ.

ಕ್ಯಾನ್ಸರ್‌ ಮಹಿಳೆಯರಿಗಾಗಿ ಎಗ್‌ ಫ್ರೀಜಿಂಗ್‌

ಹಿಂದೆಲ್ಲಾ ಎಗ್‌ ಫ್ರೀಜಿಂಗ್‌ ಅನ್ನು ಕ್ಯಾನ್ಸರ್ ಚಿಕಿತ್ಸೆಗೆ ಒಳಪಡುವ ಮಹಿಳೆಯರಿಗೆ ಅಥವಾ ಎಂಡೊಮೆಟ್ರಿಯೊಸಿಸ್, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (ಪಿಸಿಓಎಸ್) ಅಥವಾ ಆರಂಭಿಕ ಋತುಬಂಧದಿಂದಾಗಿ ಫಲವತ್ತತೆಯ ಮೇಲೆ ಪರಿಣಾಮ ಬೀರುವ ಮಹಿಳೆಯರಿಗೆ ಕಾಯ್ದಿರಿಸಲಾಗಿತ್ತು. ಆದರೆ, ಇಂದು, ತಮ್ಮ ವೃತ್ತಿ ಬದುಕು ಅಥವಾ ಇತರೆ ಕಾರಣಗಳಿಂದ ಈಗಲೇ ಗರ್ಭಧಾರಣೆಗೆ ಸಿದ್ಧವಿಲ್ಲದ ಮಹಿಳೆಯರೂ ಸಹ ಈ ತಂತ್ರಜ್ಞಾನವನ್ನು ಬಳಸಿಕೊಂಡು ತಮಗೆ ಬೇಕಾದ ಸಂದರ್ಭದಲ್ಲಿ ಮಗು ಪಡೆಯಬಹುದು.

ಮೊಟ್ಟೆಗಳ ಘನೀಕರಣವು ಹೇಗೆ ಕೆಲಸ ಮಾಡುತ್ತದೆ

ಎಗ್‌ ಫ್ರೀಜ್ ಮಾಡಲು, ಇನ್-ವಿಟ್ರೊ ಫಲೀಕರಣದಂತೆಯೇ ಹಾರ್ಮೋನ್ ಇಂಜೆಕ್ಷನ್ ವಿಧಾನದ ಮೂಲಕ ಹೋಗಬೇಕು.

· ನಿಮ್ಮ ಋತುಚಕ್ರದ ಪ್ರಾರಂಭದಲ್ಲಿ ಹಾರ್ಮೋನ್‌ಗಳು ಹೆಚ್ಚು ಮೊಟ್ಟೆಗಳನ್ನು ಉತ್ಪಾದಿಸಲು ಉತ್ತೇಜಿಸುತ್ತದೆ. ಈ ಸಂದರ್ಭದಲ್ಲಿ ಎಗ್‌ ಅನ್ನು ಫ್ರೀಜ್‌ ಮಾಡಲು ತೆಗೆದಿಡುವುದು ಉತ್ತಮ.
· ಮೊಟ್ಟೆಯ ಬೆಳವಣಿಗೆಯನ್ನು ಪರೀಕ್ಷಿಸಲು ಅಲ್ಟ್ರಾಸೌಂಡ್ ಮತ್ತು ರಕ್ತ ಪರೀಕ್ಷೆಗಳನ್ನು ಬಳಸಲಾಗುತ್ತದೆ. ಮೊಟ್ಟೆಯ ಕಿರುಚೀಲಗಳು ಪಕ್ವಗೊಂಡ ನಂತರ, ವೈದ್ಯರು ಟ್ರಾನ್ಸ್‌ವಾಜಿನಲ್ ಕಾರ್ಯಾಚರಣೆಯನ್ನು ಬಳಸಿಕೊಂಡು ಎಗ್‌ನನ್ನು ಹೊರತೆಗೆಯುತ್ತಾರೆ.
· ಭ್ರೂಣಶಾಸ್ತ್ರಜ್ಞರು ನಿಮ್ಮ ಮೊಟ್ಟೆಗಳನ್ನು ಹಿಂಪಡೆದ ತಕ್ಷಣ ಫ್ಲ್ಯಾಷ್-ಫ್ರೀಜ್ ಅಥವಾ ವಿಟ್ರಿಫೈ ಮಾಡುತ್ತಾರೆ. ಬಳಿಕ, ನೀವು ಗರ್ಭಿಣಿಯಾಗಲು ಸಿದ್ಧವಾಗುವವರೆಗೂ ಫ್ರೀಜ್‌ ಮಾಡಿ ಇಡಲಾಗುವುದು.

ಘನೀಕರಿಸಿರುವ ಅಂಡಾಣು ಹೇಗೆ ಕೆಲಸ ಮಾಡುತ್ತದೆ?

ವೀರ್ಯಾಣು ಮತ್ತು ಭ್ರೂಣಗಳನ್ನು ಸುಲಭವಾಗಿ ಘನೀಕರಿಸಬಹುದು. ಆದರೆ ಮನುಷ್ಯನ ದೇಹದಲ್ಲಿ ಅಂಡಾಣುವಿನಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ಜೀವಕೋಶಗಳು ಇರುತ್ತವೆ ಮತ್ತು ನೀರಿನ ಅಂಶ ಕೂಡ ಅತಿ ಹೆಚ್ಚಾಗಿರುತ್ತದೆ. ಇವುಗಳನ್ನು ಘನೀಕರಿಸಿದಾಗ ಐಸ್ ಕ್ರಿಸ್ಟಲ್‌ಗಳು ಜೀವಕೋಶಗಳನ್ನು ನಾಶ ಮಾಡುತ್ತವೆ. ಆದ್ದರಿಂದ ಅಂಡಾಣುವನ್ನು ನಿರ್ಜಲೀಕರಿಸಬೇಕು ಮತ್ತು ಘನೀಕರಿಸುವುದಕ್ಕಿಂತಲೂ ಮುನ್ನ ಐಸ್ ಕ್ರಿಸ್ಟಲ್ ಆಗುವುದನ್ನು ತಡೆಗಟ್ಟಲು ನೀರನ್ನು ಆ್ಯಂಟಿ ಫ್ರೀಜ್ ಬದಲು ಬೇರೆಯೇ ಇರಿಸಿ. ಯಾಕೆಂದರೆ ಘನೀಕರಿಸಿದಾಗ ಅಂಡಾಣುವಿನ ಶೆಲ್ ಕೂಡ ಹಾರ್ಡ್ ಆಗುತ್ತದೆ. ಅಂಡಾಣುವನ್ನು ಫಲವತ್ತತೆ ಮಾಡಲು ವೀರ್ಯಾಣುವನ್ನು ಸೂಜಿ ಮೂಲಕ ಇಂಜೆಕ್ಟ್ ಮಾಡಬೇಕು.

ಎಷ್ಟು ವರ್ಷಗಳ ಕಾಲ ಅಂಡಾಣುವನ್ನು ಘನೀಕರಿಸಿರಬಹುದು?

ಯುಎಸ್‌ಸಿ ಫರ್ಟಿಲಿಟಿ ಪ್ರಕಾರ ಭ್ರೂಣಗಳ ರೀತಿಯಲ್ಲೇ ಅಂಡಾಣುವನ್ನು ಘನೀಕರಿಸಲಾಗುತ್ತದೆ. ಫ್ರೀಜಿಂಗ್ ಟೆಂಪರೇಚರ್ ಮೈನಸ್ 196 ಡಿಗ್ರಿ ಸೆಲ್ಷಿಯಸ್ ಇರುತ್ತದೆ. ಒಂದು ಪ್ರಕರಣದಲ್ಲಿ ಘನೀಕರಿಸಿದ ಅಂಡಾಣುವನ್ನು 10 ವರ್ಷ ಇರಿಸಲಾಗಿದೆ. ಇನ್ನೂ ದೀರ್ಘಾವಧಿ ಕಾಲ ಅಂಡಾಣುವನ್ನು ಘನೀಕರಿಸಿ ಇರಿಸಿದರೂ ಗುಣಮಟ್ಟ ಕಡಿಮೆಯಾಗುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

- ಡಾ. ಮನೀಶಾ ಸಿಂಗ್‌, ಸ್ತ್ರೀರೋಗ ತಜ್ಞೆ, ಫೋರ್ಟಿಸ್‌ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT