ನನ್ನ ಮಗಳಿಗೆ 18 ವರ್ಷವಾಗಿದ್ದು, ಮುಟ್ಟಾದಾಗ ದಿನಕ್ಕೆ ಐದಾರು ಬಾರಿ ಸ್ಯಾನಿಟರಿ ಪ್ಯಾಡ್ ಬದಲಿಸುತ್ತಾಳೆ. ನಾನು ಇತ್ತೀಚೆಗೆ ನನ್ನ ಸಹೋದ್ಯೋಗಿ ಶಿಕ್ಷಕಿಯರಿಂದ ಪ್ರಭಾವಿತಳಾಗಿ ಮೆನ್ಸ್ಟ್ರುಯಲ್ ಕಪ್ (ಮುಟ್ಟಿನ ಬಟ್ಟಲು) ಬಳಸುತ್ತಿರುವೆ. ನನಗೆ ಸ್ಯಾನಿಟರಿ ಪ್ಯಾಡ್ ಬಳಕೆಯಿಂದ ಜನನಾಂಗದ ಭಾಗದಲ್ಲಿ ಕೆರೆತ, ಸೆಲೆತು ನೋವಾಗುವಂತಹ ಸಮಸ್ಯೆಗಳು ಆಗುತ್ತಿದ್ದವು. ಮುಟ್ಟಿನ ಕಪ್ ಬಳಕೆಯಿಂದ ಅವೆಲ್ಲ ಕಡಿಮೆಯಾಗಿವೆ. ನನಗೆ ಅದನ್ನು ಒಳಗೆ ಹಾಕುತ್ತೀನಲ್ಲ ಎನ್ನುವ ಭಯವಿದೆ. ನನ್ನ ಮಗಳು ‘ಪ್ಯಾಡ್ ಆರಾಮಾಗಿದೆ’ ಎನ್ನುತ್ತಾಳೆ. ಅವಳೂ ಈ ಕಪ್ ಬಳಸಬಹುದೇ? ಅದರಿಂದ ಏನೂ ತೊಂದರೆಯಿಲ್ಲವೇ? - ಪಂಕಜಾ, ಮಂಗಳೂರು

ನೀವು, ನಿಮ್ಮ ಮಗಳು ಇಬ್ಬರೂ ಮುಟ್ಟಿನ ಕಪ್ ಬಳಸಬಹುದು. ಪ್ಯಾಡ್ ಉತ್ಪಾದನೆಗೆ ಪೆಟ್ರೋಲಿಯಂ ಹಾಗೂ ಅರಣ್ಯ ಉತ್ಪನ್ನಗಳನ್ನು ಬಳಸುತ್ತಾರೆ. ಮುಟ್ಟಿನಸ್ರಾವ ಹೀರುವಿಕೆಗಾಗಿ ಪಾಲಿಎಕ್ರಿಲೇಟ್ ಹಾಗೂ ಪರಿಮಳಕಾರಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಪ್ಯಾಡ್ಗಳ ವಿಲೇವಾರಿ ಸರಿಯಾಗಿ ಆಗದಿರುವುದರಿಂದ ಅವು ಜೀವಸಂಕುಲಕ್ಕೆ ಅಪಾಯಕಾರಿಯಾಗಿವೆ.

ಪ್ಯಾಡ್ಗಳನ್ನು ಸುಟ್ಟರೆ ಡಯಾಕ್ಸಿನ್ನಂತಹ ರಾಸಾಯನಿಕ ವಿಷವಸ್ತುಗಳು ಉತ್ಪಾದನೆಯಾಗಿ ಹಾರ್ಮೋನ್ ಅಸಮತೋಲನ, ಬಂಜೆತನದಿಂದ ಹಿಡಿದು ಕ್ಯಾನ್ಸರ್ವರೆಗೆ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಪರಿಸರಕ್ಕೂ ಮಾರಕ, ದುಬಾರಿ ಕೂಡ. ಇದಕ್ಕೆ ಪರ್ಯಾಯವಾಗಿ ಮರುಬಳಕೆಯ ಕಾಟನ್ ಪ್ಯಾಡ್ ಬಳಕೆ ಮಾಡಬಹುದು. ಖರ್ಚು ಕಡಿಮೆ. ಕೆರೆತ, ಸೋಂಕಿನ ಸಂಭವ ಕಡಿಮೆ. ಆದರೆ ನೈಜತೆ ಪರೀಕ್ಷಿಸಿ ಕೊಂಡುಕೊಳ್ಳಬೇಕು.

ಮುಟ್ಟಿನ ಬಟ್ಟಲನ್ನು ಮೆಡಿಕಲ್ ಗ್ರೇಡೆಡ್ ಸಿಲಿಕಾನ್ನಿಂದ ಮಾಡಲಾಗಿರುತ್ತದೆ. ಯಾವುದೇ ಅಪಾಯಕಾರಿ ರಾಸಾಯನಿಕಗಳಿರದೆ ಶರೀರಕ್ಕೆ ಹೊಂದಿಕೊಳ್ಳಬಹುದಾದ ವಸ್ತುವಿನಿಂದ ಕೂಡಿರುತ್ತದೆ ಮತ್ತು ಮಣ್ಣಿನಲ್ಲಿ ಕರಗಬಲ್ಲದು. ಪರಿಸರಸ್ನೇಹಿ, ಆರ್ಥಿಕವಾಗಿಯೂ ಲಾಭಕಾರಕ. ಯಾಕೆಂದರೆ ತಿಂಗಳಿಗೆ ಕೇವಲ ₹ 4ರಿಂದ 5 ಖರ್ಚಾಗುತ್ತದೆ. ಹೆಚ್ಚು ಸ್ರಾವವನ್ನು ಹೀರಿಕೊಳ್ಳುವುದರಿಂದ 8ರಿಂದ 12 ತಾಸಿಗೊಮ್ಮೆ ಬದಲಿಸಿದರೂ ಸಾಕು. ಇದನ್ನು ಬಳಸಿದಾಗ ದೈಹಿಕ ಚಟುವಟಿಕೆಗಳಲ್ಲಿ ಆರಾಮಾಗಿ ಭಾಗವಹಿಸಬಹುದು. ಸೋಂಕು, ನವೆಯಂತಹ ತೊಂದರೆಗಳು ಇರುವುದಿಲ್ಲ. ಈ ಬಟ್ಟಲನ್ನು ಸ್ವಚ್ಛವಾದ ನೀರಿನಲ್ಲಿ ತೊಳೆದು, ಅದಕ್ಕೆಂದೇ ಮೀಸಲಿಟ್ಟ ಕೈಚೀಲದಲ್ಲಿ ಸರಿಯಾದ ಸ್ಥಳದಲ್ಲಿಟ್ಟು ಮರುಬಳಕೆ ಮಾಡಬಹುದು.ಇದನ್ನು ಉಪಯೋಗಿಸುವಾಗ ಆರಂಭದಲ್ಲಿ ಸ್ವಲ್ಪ ಹಿಂಜರಿಕೆ ಆಗಬಹುದು. ಆದ್ದರಿಂದ ಸರಿಯಾದ ವಿಧಾನವನ್ನು ಕಲಿತು ಅಳವಡಿಸಿಕೊಳ್ಳಬೇಕು. ನಿಮ್ಮ ಮಗಳಿಗೆ ಚಿಕ್ಕದಾದ ಕಪ್ ಲಭ್ಯವಿರುತ್ತದೆ. ಅವರು ಕೂಡ ಇದನ್ನು ಬಳಸಬಹುದು. ಸಣ್ಣ ಮಕ್ಕಳಲ್ಲಿ ಆರಂಭದ ಹಿಂಜರಿಕೆ ತಪ್ಪಿಸಲು ಅವರು ಮರುಬಳಕೆಯ ಕಾಟನ್ ಪ್ಯಾಡ್ ಅಥವಾ ಪೀರಿಯಡ್ ಪ್ಯಾಂಟೀಸ್ಗಳನ್ನು ತಾತ್ಕಾಲಿಕವಾಗಿ ಬಳಸಿ, ನಂತರದ ದಿನಗಳಲ್ಲಿ ಮುಟ್ಟಿನ ಕಪ್ ಬಳಕೆ ಆರಂಭಿಸಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-51-497257457

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.