ಮಾನವನ ಜೀವನದಲ್ಲಿ ಯಶಸ್ಸು, ಸಂತೋಷ ಮತ್ತು ಆತ್ಮೋನ್ನತಿ ಪಡೆಯಲು ಎರಡು ಶಕ್ತಿಗಳು ಅತ್ಯಂತ ಮುಖ್ಯ—ಮನಸ್ಸು ಮತ್ತು ಬುದ್ಧಿ. ಮನಸ್ಸು ನಮ್ಮ ಭಾವನೆಗಳ ಕೇಂದ್ರವಾಗಿದ್ದರೆ, ಬುದ್ಧಿ ನಮ್ಮ ವಿವೇಕದ ದೀಪವಾಗಿದೆ. ಮನಸ್ಸು ಚಲನೆಯ ಶಕ್ತಿ; ಬುದ್ಧಿ ದಿಕ್ಕು ತೋರಿಸುವ ಶಕ್ತಿ. ಈ ಎರಡೂ ಸಮತೋಲನದಲ್ಲಿದ್ದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಕೇವಲ ಬುದ್ಧಿವಂತಿಕೆ ಸಾಕಾಗುವುದಿಲ್ಲ; ಹಾಗೆಯೇ ಕೇವಲ ಭಾವನೆಗಳೂ ಸಾಕಾಗುವುದಿಲ್ಲ. ಭಾವನೆಗೆ ವಿವೇಕದ ದಾರಿ ಬೇಕು; ವಿವೇಕಕ್ಕೆ ಮನಸ್ಸಿನ ಶಕ್ತಿ ಬೇಕು.

ಮನಸ್ಸು ಸ್ವಭಾವತಃ ಚಂಚಲ. ಅದು ಆಸೆ, ಭಯ, ಕೋಪ, ಸಂತೋಷ, ದುಃಖಗಳ ನಡುವೆ ನಿರಂತರವಾಗಿ ಓಡಾಡುತ್ತಿರುತ್ತದೆ. ಕೆಲವೊಮ್ಮೆ ಅದು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ; ಕೆಲವೊಮ್ಮೆ ಕೆಳಕ್ಕೆಳೆಯುತ್ತದೆ. ಬುದ್ಧಿಯ ಕೆಲಸ ಮನಸ್ಸಿಗೆ ಸರಿಯಾದ ದಿಕ್ಕು ನೀಡುವುದು. ಬುದ್ಧಿ ದುರ್ಬಲವಾಗಿದ್ದರೆ, ಮನಸ್ಸು ಇಂದ್ರಿಯಗಳ ಹಿಂದೆ ಓಡುತ್ತದೆ. ಮನಸ್ಸು ದುರ್ಬಲವಾಗಿದ್ದರೆ, ಬುದ್ಧಿಯ ಒಳ್ಳೆಯ ನಿರ್ಧಾರಗಳನ್ನೂ ಪಾಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಜೀವನದಲ್ಲಿ ಎರಡಕ್ಕೂ ಬಲ ಅಗತ್ಯ.

ನಮ್ಮ ವೇದಗಳಲ್ಲಿ ʻಜಿತಂ ಜಗತ್ ಕೇನ? ಮನೋ ಹಿ ಏನʼ ಎಂದು ಹೇಳಲಾಗಿದೆ. ಅಂದರೆ, ಮನಸ್ಸನ್ನು ಗೆದ್ದವನೇ ಜಗತ್ತನ್ನು ಗೆದ್ದವನಾಗುತ್ತಾನೆ. ಹೊರಗಿನ ಲೋಕವನ್ನು ಗೆಲ್ಲುವ ಮೊದಲು ಒಳಗಿನ ಮನಸ್ಸನ್ನು ಗೆಲ್ಲಬೇಕು. ಕೋಪ, ಅಸೂಯೆ, ಭಯ, ಆಲಸ್ಯ, ನಿರಾಶೆ—ಇವೆಲ್ಲವೂ ಮನಸ್ಸಿನ ದುರ್ಬಲತೆಗಳೇ. ಮನಸ್ಸು ದೃಢವಾಗಿದ್ದರೆ, ಸಂಕಷ್ಟಗಳ ನಡುವೆಯೂ ವ್ಯಕ್ತಿ ನಿಂತುಕೊಳ್ಳಬಲ್ಲನು. ವಿಫಲತೆ ಬಂದರೂ ಕುಗ್ಗುವುದಿಲ್ಲ; ಯಶಸ್ಸು ಬಂದರೂ ಅಹಂಕಾರಿಯಾಗುವುದಿಲ್ಲ.

ವೇದಮಂತ್ರಗಳಲ್ಲಿ ʻನಮ್ಮ ಬುದ್ಧಿ ಪ್ರಕಾಶಮಾನವಾಗಿರಲಿ, ಮನಸ್ಸು ಶಾಂತವಾಗಿರಲಿʼ ಎಂದು ಪ್ರಾರ್ಥಿಸಲಾಗಿದೆ. ಪ್ರಸಿದ್ಧ ಗಾಯತ್ರಿ ಮಂತ್ರದಲ್ಲಿಯೂ ʻಧಿಯೋ ಯೋ ನಃ ಪ್ರಚೋದಯಾತ್ʼ ಎಂದು ಬುದ್ಧಿಗೆ ಬೆಳಕು ಕೋರುತ್ತೇವೆ. ಏಕೆಂದರೆ, ಬುದ್ಧಿಯೇ ಸರಿಯಾದ ಮತ್ತು ತಪ್ಪಾದ ಮಾರ್ಗವನ್ನು ಗುರುತಿಸುತ್ತದೆ. ಬೆಳಕಿಲ್ಲದ ದಾರಿಯಲ್ಲಿ ಹೇಗೆ ನಡೆಯಲು ಸಾಧ್ಯವಿಲ್ಲವೋ, ವಿವೇಕವಿಲ್ಲದ ಜೀವನವೂ ಹಾಗೆಯೇ ದಿಕ್ಕುತಪ್ಪುತ್ತದೆ. ಜ್ಞಾನವು ಮಾಹಿತಿಯನ್ನು ಕೊಡಬಹುದು; ಆದರೆ ಬುದ್ಧಿಯೇ ಅದನ್ನು ಸರಿಯಾಗಿ ಬಳಸುವ ಶಕ್ತಿಯನ್ನು ನೀಡುತ್ತದೆ.

ಸಂತರು ಮಾನವನನ್ನು ಕೇವಲ ದೇಹವಲ್ಲ, ದೇಹ–ಮನಸ್ಸು–ಆತ್ಮಗಳ ಸಮಗ್ರ ರೂಪ ಎಂದು ವಿವರಿಸುತ್ತಾರೆ. ಮಹಾತ್ಮರು ಇದನ್ನೇ ತಮ್ಮ ಜೀವನದಲ್ಲೂ ತೋರಿದ್ದಾರೆ. ಅವರ ಪ್ರಕಾರ, ಮನಸ್ಸಿನ ಆರೋಗ್ಯ ಮತ್ತು ಬುದ್ಧಿಯ ಸ್ಪಷ್ಟತೆ ಇಲ್ಲದೆ ವ್ಯಕ್ತಿತ್ವದ ಪೂರ್ಣ ಬೆಳವಣಿಗೆ ಸಾಧ್ಯವಿಲ್ಲ. ಅವರು ಹೇಳುವಂತೆ, ಮಾನವನ ಒಳಜೀವನ ಅಸ್ಥಿರವಾಗಿದ್ದರೆ ಹೊರಗಿನ ಸಾಧನೆಗಳಿಗೂ ಅರ್ಥ ಇರುವುದಿಲ್ಲ. ಆಧ್ಯಾತ್ಮಿಕ ಬೆಳವಣಿಗೆಯೂ ಈ ಆಂತರಿಕ ಶಕ್ತಿಗಳ ಮೇಲೆಯೇ ನಿಂತಿದೆ.

ಗೀತೆಯಲ್ಲಿ ಶ್ರೀಕೃಷ್ಣನು ಮನಸ್ಸಿನ ಮಹತ್ವವನ್ನು ಬಹಳ ಸ್ಪಷ್ಟವಾಗಿ ಹೇಳುತ್ತಾನೆ: ʻಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ʼ ಅಂದರೆ, ಮನುಷ್ಯನು ತನ್ನ ಮನಸ್ಸಿನ ಮೂಲಕ ತಾನೇ ತನ್ನನ್ನು ಮೇಲಕ್ಕೆತ್ತಿಕೊಳ್ಳಬೇಕು; ತಾನೇ ತನ್ನನ್ನು ಕೆಳಗೆಳೆಯಬಾರದು. ಗೀತೆಯ ಮತ್ತೊಂದು ಸಂದೇಶವೆಂದರೆ—ದೃಢಸಂಕಲ್ಪ ಮತ್ತು ಸ್ಥಿರಬುದ್ಧಿ ಇದ್ದರೆ ಮನುಷ್ಯನು ಯಾವುದೇ ಗುರಿಯನ್ನು ಸಾಧಿಸಬಲ್ಲನು. ಮನಸ್ಸು ನಿಯಂತ್ರಣದಲ್ಲಿ ಇದ್ದರೆ ಅದು ಸ್ನೇಹಿತ; ನಿಯಂತ್ರಣ ತಪ್ಪಿದರೆ ಅದೇ ಶತ್ರು.

ಮನಸ್ಸು ಮತ್ತು ಬುದ್ಧಿ ಎರಡೂ ಸೇರಿ ವ್ಯಕ್ತಿತ್ವವನ್ನು ನಿರ್ಮಿಸುತ್ತವೆ. ಮನಸ್ಸು ಉತ್ಸಾಹ ನೀಡುತ್ತದೆ; ಬುದ್ಧಿ ನಿಯಂತ್ರಣ ನೀಡುತ್ತದೆ. ಮನಸ್ಸು ಕನಸು ಕಾಣುತ್ತದೆ; ಬುದ್ಧಿ ಅದನ್ನು ವಾಸ್ತವಕ್ಕೆ ತರುತ್ತದೆ. ಮನಸ್ಸು ಭಾವನೆಗಳನ್ನು ಹುಟ್ಟಿಸುತ್ತದೆ; ಬುದ್ಧಿ ಅವುಗಳನ್ನು ಸಮತೋಲನದಲ್ಲಿ ಇರಿಸುತ್ತದೆ. ಈ ಎರಡೂ ಸೇರಿ ಮಾನವನ ಚರಿತ್ರೆಯನ್ನು ರೂಪಿಸುತ್ತವೆ.

ಆಧ್ಯಾತ್ಮಿಕ ಜೀವನದಲ್ಲೂ ಈ ಎರಡರ ಪಾತ್ರ ಮಹತ್ವದ್ದಾಗಿದೆ. ಧ್ಯಾನ ಮಾಡಲು ಮನಸ್ಸಿನ ಏಕಾಗ್ರತೆ ಬೇಕು. ಸರಿಯಾದ ಮಾರ್ಗವನ್ನು ಆರಿಸಲು ವಿವೇಕಬುದ್ಧಿ ಬೇಕು. ಮನಸ್ಸು ಶಾಂತವಾಗಿದ್ದರೆ ಧ್ಯಾನ ಸಾಧ್ಯ; ಬುದ್ಧಿ ಪ್ರಕಾಶಮಾನವಾಗಿದ್ದರೆ ಆತ್ಮಜ್ಞಾನ ಸಾಧ್ಯ. ಆದ್ದರಿಂದ ನಮ್ಮ ಋಷಿಮುನಿಗಳು ಮನಸ್ಸಿನ ಶುದ್ಧತೆ ಮತ್ತು ಬುದ್ಧಿಯ ಸ್ಪಷ್ಟತೆಗಳಿಗೆ ಸಮಾನ ಮಹತ್ವ ನೀಡಿದ್ದಾರೆ. ಕಗ್ಗದ ಕವಿ ಇದನ್ನು ಸೊಗಸಾಗಿ ತಿಳಿಸಿದ್ದಾರೆ, ʻಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? ಮತಿಮನಂಗಳ ಕೃಷಿತಪಃಫಲವುಮಂತು, ಸತತಕೃಷಿ; ಬೀಜಗುಣ; ಕಾಲವರ್ಷಗಳೊದವೆ ಪ್ರತಿಭೆ ವಿಕಸಿತವಹುದೊʼ; ಹೇಗೆ ಪ್ರಕೃತಿಯಲ್ಲಿ ಕಾಲದ ಮತ್ತು ಪರಿಸರದ ಒತ್ತಾಸೆಯಿಂದ ಫಲಗಳು ಬೆಳೆಯುತ್ತವೊ ಹಾಗೆ ʻಮತಿಮನಗಳ ಕೃಷಿʼ ನಡೆದಾಗ ಜೀವನದ ತಪಸ್ಸಿನ ಫಲ ದೊರೆಯುತ್ತದೆ ಎನ್ನುತ್ತಾರೆ ಕವಿ.

ಇಂದಿನ ಕಾಲದಲ್ಲಿ ಮಾಹಿತಿ ಹೆಚ್ಚಾಗಿದೆ, ಆದರೆ ಮನಸ್ಸಿನ ಶಾಂತಿ ಕಡಿಮೆಯಾಗಿದೆ. ಜ್ಞಾನ ಹೆಚ್ಚಾಗಿದೆ, ಆದರೆ ವಿವೇಕ ಕಡಿಮೆಯಾಗಿದೆ. ಆದ್ದರಿಂದ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರೂ ಮನಸ್ಸು ಮತ್ತು ಬುದ್ಧಿಯನ್ನು ಬಲಪಡಿಸಿಕೊಳ್ಳಬೇಕು. ಉತ್ತಮ ಪುಸ್ತಕ ಓದುವುದು, ಧ್ಯಾನ ಮಾಡುವುದು, ಸತ್ಸಂಗ, ಸಕಾರಾತ್ಮಕ ಚಿಂತನೆ, ನಿಯಮಿತ ಜೀವನ—ಇವೆಲ್ಲವೂ ಮನಸ್ಸು ಮತ್ತು ಬುದ್ಧಿಗೆ ಬಲ ನೀಡುತ್ತವೆ.

ನೆನಪಿರಲಿ, ಜೀವನದಲ್ಲಿ ಯಶಸ್ಸು ಪಡೆಯಬೇಕಾದರೂ, ಆಧ್ಯಾತ್ಮಿಕ ಎತ್ತರ ತಲುಪಬೇಕಾದರೂ, ಮನಸ್ಸು ಮತ್ತು ಬುದ್ಧಿ ಎರಡನ್ನೂ ಬೆಳೆಸಬೇಕು. ಒಂದು ರಥದ ಎರಡು ಚಕ್ರಗಳಂತೆ ಇವು. ಎರಡೂ ಸಮತೋಲನದಲ್ಲಿದ್ದಾಗ ಮಾತ್ರ ಜೀವನದ ಪ್ರಯಾಣ ಸುಂದರವಾಗುತ್ತದೆ; ಯಶಸ್ಸು ಅರ್ಥಪೂರ್ಣವಾಗುತ್ತದೆ; ಜೀವನ ಸಾರ್ಥಕವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.