ಪ್ರಶ್ನೆ: ನನಗೆ ಮದುವೆಯಾಗಿ ಎರಡು ವರ್ಷವಾಗಿದ್ದು, ಮಗು ಆಗುತ್ತಿಲ್ಲ. ತಜ್ಞವೈದ್ಯರು ಪಿಸಿಒಡಿ ಸಮಸ್ಯೆ ಇದೆ ಎಂದಿದ್ದಾರೆ ಮತ್ತು ವಿಟಮಿನ್ ‘ಡಿ’ ಕೊರತೆಗೆ ಮಾತ್ರೆ ಕೊಡುತ್ತಿದ್ದಾರೆ. ಸ್ವಲ್ಪ ದಿನ ಆಸ್ಪತ್ರೆಗೆ ಹೋಗಬೇಡ ಎಂದು ಮನೆಯವರು ಹೇಳಿದ್ದರಿಂದ ನಾನೀಗ ಸದ್ಯ ವೈದ್ಯರ ಹತ್ತಿರ ಹೋಗುವುದನ್ನು ನಿಲ್ಲಿಸಿರುವೆ. ರಕ್ತದಲ್ಲಿ ವಿಟಮಿನ್ ‘ಡಿ’ ಪ್ರಮಾಣ ಎಷ್ಟಿದೆ ಎಂದು ನಾನೀಗ ಮತ್ತೆ ಪರೀಕ್ಷೆ ಮಾಡಿಸಬೇಕೆ? ನನಗೆ ಮಕ್ಕಳಾಗುವುದು ಕಷ್ಟವೇ?

–ಸಂಗೀತಾ, ತಿಪಟೂರು

ಉತ್ತರ: ಪಿಸಿಒಡಿ ಸಮಸ್ಯೆ ಅಂದರೆ, ತಿಂಗಳಿಗೊಮ್ಮೆ ಅಂಡಾಶಯದಿಂದ ಸರಿಯಾಗಿ ಅಂಡೋತ್ಪತ್ತಿ ಆಗದಿದ್ದಾಗ ಮುಟ್ಟಿನಲ್ಲಿ ಏರುಪೇರು ಆಗುವುದು. ಜೊತೆಗೆ ಬಂಜೆತನವೂ ಉಂಟಾಗಬಹುದು. ಇದು ದೀರ್ಘಾವಧಿ ಆರೋಗ್ಯ ಸಮಸ್ಯೆಯನ್ನು ಸಹ ಉಂಟು ಮಾಡಬಹುದು. ಆದರೆ ಸಮಸ್ಯೆ ಇರುವವರಿಗೆಲ್ಲ ವಿಟಮಿನ್ ‘ಡಿ’ ಮಟ್ಟವನ್ನು ಪರೀಕ್ಷಿಸಲು ಅನುಮೋದಿಸುವುದಿಲ್ಲ. ಅದರಲ್ಲೂ ಬಹುತೇಕ ಭಾರತೀಯ ಮಹಿಳೆಯರಲ್ಲಿ ವಿಟಮಿನ್ ‘ಡಿ’ ಕೊರತೆ ಕಂಡುಬರುತ್ತಿದೆ. ಪಿಸಿಒಡಿಯಿಂದ ಬಳಲುವ ಶೇ 85ರಷ್ಟು ಮಹಿಳೆಯರಲ್ಲಿ ವಿಟಮಿನ್ ‘ಡಿ’ ಕೊರತೆ ಇದ್ದೇ ಇರುತ್ತದೆ.

ಹಾಗಿದ್ದರೆ ನಮ್ಮ ದೇಹಕ್ಕೆ ವಿಟಮಿನ್ ‘ಡಿ’ ಲಭ್ಯತೆ ಹೇಗೆ ಸಿಗುತ್ತದೆ? ಶೇ 10ರಿಂದ 20ರಷ್ಟು ವಿಟಮಿನ್ ‘ಡಿ’ ಮಾತ್ರ ನಮಗೆ ಆಹಾರದಿಂದ ದೊರಕುತ್ತದೆ. ಅಂತಹ ಆಹಾರಗಳು ಯಾವುವೆಂದರೆ ಮೀನು, ಮೊಟ್ಟೆ, ಅಣಬೆ, ಕೆಂಪು ಮಾಂಸ, ಬಾದಾಮಿ, ಅವಕಾಡೊ, ಇನ್ನಿತರ ಒಣಹಣ್ಣುಗಳು. ಉಳಿದ ಶೇ 80ಕ್ಕಿಂತ ಹೆಚ್ಚು ವಿಟಮಿನ್ ‘ಡಿ’ ಸೂರ್ಯನ ಕಿರಣಗಳಿಗೆ ನಮ್ಮ ಚರ್ಮವನ್ನು ತೆರೆದುಕೊಳ್ಳುವುದರಿಂದ ದೊರಕುತ್ತದೆ. ಅದಕ್ಕೆ ವಿಟಮಿನ್ ‘ಡಿ’ಯನ್ನು ‘ಸನ್ಶೈನ್ ವಿಟಮಿನ್’ ಎನ್ನುತ್ತಾರೆ.

ಬೆಳಿಗ್ಗೆ 11ರಿಂದ 2 ಗಂಟೆಯ ಒಳಗಿನ ಬಿಸಿಲಿಗೆ 15 ನಿಮಿಷ ಕಣ್ಣು, ತಲೆಯ ಭಾಗ, ಗುಪ್ತಾಂಗಗಳ ಹೊರತಾಗಿ ಬೆನ್ನು, ಕೈಕಾಲಿನ ಭಾಗ ತೆರೆದುಕೊಂಡಿದ್ದರೂ ಸಾಕಷ್ಟು ವಿಟಮಿನ್ ‘ಡಿ’ ನಮ್ಮ ಶರೀರದಲ್ಲೇ ಉತ್ಪಾದನೆಯಾಗುತ್ತದೆ.

ವಿಟಮಿನ್ ‘ಡಿ’ಯು ಗ್ಲೂಕೋಸ್ ಮತ್ತು ಇನ್ಸುಲಿನ್ ಚಯಾಪಚಯ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ. ಇನ್ಸುಲಿನ್ ಪ್ರತಿರೋಧ ಇರುವವರಲ್ಲಿ ವಿಟಮಿನ್ ‘ಡಿ’ ಮಟ್ಟವು ಕಡಿಮೆ ಇರುವುದು ಹಲವಾರು ಅಧ್ಯಯನ ಗಳಿಂದ ತಿಳಿದುಬಂದಿದೆ. 2020ರ ಒಂದು ಬೃಹತ್ ಅಧ್ಯಯನದ ಪ್ರಕಾರ, ವಿಟಮಿನ್ ‘ಡಿ’ ಕೊಟ್ಟಾಗ ಪಿಸಿಒಎಸ್ ಇರುವ ಮಹಿಳೆಯರಲ್ಲಿ ಗರ್ಭಧಾರಣೆಯ ದರ ಹೆಚ್ಚಿರುವುದು ಕಂಡುಬಂದಿದೆ.

ಒಟ್ಟಾರೆ, ಪಿಸಿಒಎಸ್ ಅಲ್ಲದೆ ಹಲವಾರು ಚಯಾಪಚಯ ಕ್ರಿಯೆಗಳ ಜೊತೆಗೂ ತಳಕು ಹಾಕಿಕೊಂಡಿರುವ ವಿಟಮಿನ್ ‘ಡಿ’ ಕೊರತೆಯ ಬಗ್ಗೆ ಪ್ರತಿ ಮಹಿಳೆಯೂ ತಿಳಿದಿರಲೇಬೇಕು. ಸೂರ್ಯನ ಬೆಳಕು ಮತ್ತು ಸೂಕ್ತ ಆಹಾರದ ಜೊತೆಗೆ ವೈದ್ಯರ ಸಲಹೆಯಂತೆ ವಿಟಮಿನ್ ‘ಡಿ’ ಮಾತ್ರೆ ಸೇವಿಸುವುದು ಅಗತ್ಯ. ನೀವು ಮಕ್ಕಳಾಗಿಲ್ಲ ಎಂದು ಆತಂಕ ಪಡಬೇಡಿ. ತಜ್ಞರ ಸಲಹೆಯ ಮೇರೆಗೆ ಬಂಜೆತನದ ಚಿಕಿತ್ಸೆಯನ್ನು ಮತ್ತೆ ಮುಂದುವರಿಸಿ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-1515771744

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.