ಗಂಟಲಲ್ಲಿರುವ ಪುಟ್ಟ ಗ್ರಂಥಿಗೆ ಸಮಸ್ಯೆಯಾದರೆ ನಮ್ಮ ಇಡೀ ದೇಹದ ಆರೋಗ್ಯವನ್ನು ಏರುಪೇರು ಮಾಡಬಲ್ಲದು. ಅದುವೇ ಥೈರಾಯ್ಡ್ ಗ್ರಂಥಿ. ಇಂದಿನ ಬದಲಾದ ಜೀವನಶೈಲಿ, ಆಹಾರದ ಕ್ರಮದ ಪರಿಣಾಮ ಅನೇಕರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಇದು ಅನಿಯಮಿತ ಮುಟ್ಟು, ಬೊಜ್ಜು ಸೇರಿದಂತೆ ಇತರೆ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಆಹಾರ, ಜೀವನಶೈಲಿ ಸರಿಪಡಿಸಿಕೊಳ್ಳುವುದರ ಜತೆಗೆ ಒಂದಷ್ಟು ಯೋಗಾಸನ, ವ್ಯಾಯಾಮಗಳೂ ಥೈರಾಯ್ಡ್ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತವೆ. ಯಾವೆಲ್ಲ ಆಸನಗಳು ಥೈರಾಯ್ಡ್ ಸಮಸ್ಯೆಗೆ ಪರಿಹಾರ ನೀಡಬಲ್ಲದು ಎನ್ನುವ ಮಾಹಿತಿ ಇಲ್ಲಿದೆ..
.ಯೋಗದಿಂದ ಥೈರಾಯ್ಡ್ ನಿಯಂತ್ರಿಸುವುದು ಹೇಗೆ? | Yoga Day.
ಸೂರ್ಯನಮಸ್ಕಾರ

12 ಆಸನಗಳ ಸೂರ್ಯ ನಮಸ್ಕಾರ ದೇಹದ ಪ್ರತಿಯೊಂದು ಅಂಗಕ್ಕೆ ವ್ಯಾಯಾಮವನ್ನು ನೀಡುತ್ತದೆ. ಇದರಿಂದಾಗಿ ಅನಿಯಮಿತ ಮುಟ್ಟು ಸರಿಯಾಗುವುದಲ್ಲದೆ, ಥೈರಾಯ್ಡ್ ಸಮಸ್ಯೆಯನ್ನೂ ಸರಿಪಡಿಸಬಹುದಾಗಿದೆ. ನಮಸ್ಕಾರಾಸನ, ಊರ್ದ್ವಾಸನ, ಹಸ್ತಪಾದಾಸನ, ಏಕ ಪಾದ ಪ್ರಸರಣಾಸನ, ದ್ವಿಪಾದ ಪ್ರಸರಣಾಸನ, ಭೂಧರಾಸನ, ಸಾಷ್ಟಾಂಗ ಪ್ರಣಿಪಾದಾಸನ (ದೇಹ ಎಂಟು ಅಂಗಗಳು: ಎರಡು ಪಾದ, ಎರಡು ಮಂಡಿ, ಎರಡು ಅಂಗೈ, ಎದೆ ಮತ್ತು ಹಣೆಯನ್ನು ಭೂಮಿಗೆ ತಾಗಿಸಿ ನಮಸ್ಕರಿಸುವ ವಿಧಾನ), ಭುಜಂಗಾಸನ, ಭೂಧರಾಸನ, ಏಕ ಪಾದ ಪ್ರಸರಣಾಸನ, ಹಸ್ತಪಾದಾಸನ, ನಮಸ್ಕಾರಾಸನ ಅಥವಾ ಸಮಸ್ಥಿತಿ.

ಅರ್ಧಚಕ್ರಾಸನ

ನಿಂತುಕೊಂಡು ಹಿಂದಕ್ಕೆ ಬಾಗುವುದೇ ಅರ್ಧಚಕ್ರಾಸನ. ಇದರಿಂದ ಥೈರಾಯ್ಡ್ನಲ್ಲಿ ಸೆಳೆತ ಉಂಟಾಗುತ್ತದೆ. ಆಗ ಥೈರಾಯ್ಡ್ ಗ್ರಂಥಿ ತೆರೆದುಕೊಳ್ಳುತ್ತೆ. ಇದರಿಂದಾಗಿ ಸಮಸ್ಯೆ ನಿವಾರಣೆಯಾಗುತ್ತದೆ. ನಿಯಮಿತವಾಗಿ ಸರಿಯಾದ ಮಾರ್ಗದರ್ಶನದಲ್ಲಿ ಈ ಆಸನ ಮಾಡಿದರೆ ಪರಿಣಾಮಕಾರಿ ಪ್ರಯೋಜನವನ್ನು ಪಡೆಯಬಹುದು.

ಬದ್ಧಕೋನಾಸನ

ನೇರವಾಗಿ ಕುಳಿತು ಎದೆಯನ್ನು ಹಿಗ್ಗಿಸಿ, ಪಾದಗಳನ್ನು ಒಟ್ಟಿಗೆ ಸೇರಿಸಿ, ತೊಡೆಯ ಕೆಳಭಾಗವನ್ನು ನೆಲಕ್ಕೆ ಸ್ಪರ್ಶಿಸುವ ಆಸನವೇ ಬದ್ಧಕೋನಾಸನ. ಇದನ್ನು ಚಿಟ್ಟೆ ಭಂಗಿ ಎಂತಲೂ ಕರೆಯುತ್ತಾರೆ. ಈ ಆಸನದಿಂದ ಸೊಂಟದ ಭಾಗಕ್ಕೆ ವ್ಯಾಯಾಮ ಸಿಗುತ್ತದೆ. ಇದು ಥೈರಾಯ್ಡ್ ಮತ್ತು ಮುಟ್ಟಿನ ಸಮಸ್ಯೆ ನಿವಾರಣೆಗೂ ಹೆಚ್ಚು ಅನುಕೂಲ. ಗರ್ಭಿಣಿಯರು ಸರಿಯಾದ ತರಬೇತಿಯೊಂದಿಗೆ ಈ ಆಸನ ಮಾಡಿದರೆ ಸಹಜ ಹೆರಿಗೆಗೆ ಅನುಕೂಲ.

ಹಾಲಾಸನ

ನೇರವಾಗಿ ಮಲಗಿ ನಂತರ ಎರಡೂ ಕಾಲುಗಳನ್ನು 30, 60, 90 ಡಿಗ್ರಿಯಂತೆ ಮೇಲಕ್ಕೆ ಎತ್ತಿ ನಂತರ ಹಿಂದಕ್ಕೆ ಚಾಚಬೇಕು. ಇದರಿಂದ ತೊಡೆಗಳು ಬಲಿಷ್ಠವಾಗಿ, ಸೊಂಟದ ಭಾಗ, ಹೊಟ್ಟೆ ಭಾಗಕ್ಕೆ ಒತ್ತಡ ಬೀಳುತ್ತದೆ. ಇದರಿಂದ ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಹೆಚ್ಚು ಅನುಕೂಲಕರವಾಗಲಿದೆ.

ಭುಜಂಗಾಸನ

ಭುಜಂಗಾಸನ ಅಥವಾ ಕೋಬ್ರಾ ಪೋಸ್ ಬೆನ್ನುಮೂಳೆಯನ್ನು ಬಲಪಡಿಸಲು, ಎದೆಯನ್ನು ವಿಸ್ತರಿಸಲು ಮತ್ತು ಉಸಿರಾಟದ ತೊಂದರೆಗಳನ್ನು ನಿವಾರಿಸಲು ಅತ್ಯಂತ ಪರಿಣಾಮಕಾರಿಯಾದ ಅಭ್ಯಾಸವಾಗಿದೆ. ಈ ಆಸನ ಥೈರಾಯ್ಡ್ ಮೇಲೆ ಸರಿಯಾದ ಪ್ರಮಾಣದ ಒತ್ತಡ ಬೀಳುವಂತೆ ಮಾಡುತ್ತದೆ. ಅಲ್ಲದೆ ಹಾರ್ಮೋನು ಉತ್ಪಾದನೆಯಲ್ಲಿ ಸಮತೋಲನ ಕಾಪಾಡುತ್ತದೆ.

ಪ್ರಾಣಾಯಾಮಗಳು

ನಮ್ಮ ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಲು ಕಪಾಲಭಾತಿ, ಭಸ್ತ್ರಿಕಾ ಪ್ರಾಣಾಯಾಮ ಅನುಕೂಲಕರವಾಗಿದೆ. ಆದರೆ ಮುಟ್ಟಿನ ಸಂದರ್ಭದಲ್ಲಿ 3 ರಿಂದ 5 ದಿನಗಳ ಕಾಲ ಕಪಾಲಭಾತಿಯನ್ನು ಮಾಡಬಾರದು. ಪ್ರಾಣಾಯಾಮಗಳು ಥೈರಾಯ್ಡ್ ಗ್ರಂಥಿಯ ಆರೋಗ್ಯಕ್ಕೂ ಒಳ್ಳೆಯದು.

ನಾಡಿ ಶೋಧನ ಪ್ರಾಣಾಯಾಮ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇದು ದೇಹದ ಹೆಚ್ಚು 72 ಸಾವಿರ ನಾಡಿಗಳನ್ನು ಶುದ್ಧಮಾಡುತ್ತದೆ. ಇದರೊಂದಿಗೆ ಧ್ಯಾನ ಮಾಡುವುದು ದೇಹದ ಎಲ್ಲ ಸಮಸ್ಯೆಗಳಿಗೆ ಪ್ರಮುಖ ಅಭ್ಯಾಸವಾಗಿದೆ. ದೇಹಕ್ಕೆ ವಿಶ್ರಾಂತಿ ನೀಡಿ ಚೈತನ್ಯವನ್ನು ನೀಡುತ್ತದೆ. ಜತೆಗೆ ಮಾನಸಿಕವಾಗಿ ಸದೃಢಗೊಳಿಸಲು ಸಹಾಯಕವಾಗಿದೆ.

ಕೊನೆಯಲ್ಲಿ ಶವಾಸನ ಮರೆಯದಿರಿ. ಇದು ದೇಹಕ್ಕೆ ಮರು ಚೈತನ್ಯವನ್ನು ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.