ಇಂದಿನ ಕಾಲದಲ್ಲಿ ಯೋಗವು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದರೂ, ಅದರ ಮೂಲಭೂತ ತತ್ತ್ವಗಳನ್ನು ಮತ್ತು ಗುರಿಗಳನ್ನು ಅನೇಕ ಬಾರಿ ಮರೆಯುತ್ತಿರುತ್ತೇವೆ. ಯೋಗವು ಕೇವಲ ದೇಹಾಭ್ಯಾಸ ಅಥವಾ ವ್ಯಾಯಾಮವಲ್ಲ; ಅದು ಆಂತರಿಕ ಶುದ್ಧಿ ಮತ್ತು ಚೈತನ್ಯವನ್ನು ಸಾಧಿಸುವ ಶ್ರೇಷ್ಠ ಮಾರ್ಗ.

ಈ ಹೊತ್ತಿನ ವೇಗದ ಜೀವನದಲ್ಲಿ ಒತ್ತಡ, ಆತಂಕ ಮತ್ತು ದೈಹಿಕ ಸಮಸ್ಯೆಗಳು ಹೆಚ್ಚುತ್ತಿವೆ. ಅನೇಕ ರೋಗಗಳು ನಮ್ಮ ಜೀವನಶೈಲಿಯಲ್ಲಿರುವ ತಪ್ಪು ಅಭ್ಯಾಸಗಳಿಂದಲೇ ಉಂಟಾಗುತ್ತಿವೆ. ಮಧುಮೇಹ, ರಕ್ತದೊತ್ತಡ, ಹೃದಯರೋಗಗಳನ್ನು ‘ಜೀವನಶೈಲಿ ರೋಗಗಳು’ ಎಂದು ಕರೆಯಲಾಗುತ್ತದೆ. ಈ ರೋಗಗಳು ಉಂಟಾಗುವ ಮುನ್ನವೇ ಅವುಗಳಿಗೆ ಕಾರಣವಾಗುವ ಅಪಾಯಕಾರಿ ಅಂಶಗಳನ್ನು ತಡೆಯುವುದೇ ಆದಿಮ ತಡೆಗಟ್ಟುವಿಕೆ (Primordial Prevention). ಮನಸ್ಸು ಮತ್ತು ದೇಹದ ಸಮತೋಲನವನ್ನು ಕಾಪಾಡುವ ಒಂದು ಪ್ರಾಚೀನ ಭಾರತೀಯ ವಿಧಾನವೇ ಯೋಗ. ಯೋಗವು ಜೀವನವನ್ನು ಆರೋಗ್ಯಕರವಾಗಿ, ಸಮತೋಲನದಿಂದ ನಡೆಸುವ ಒಂದು ಸಂಪೂರ್ಣ ಮಾರ್ಗವಾಗಿದೆ. ಸರಳವಾಗಿ ಹೇಳುವುದಾದರೆ, ರೋಗ ಬರುವುದನ್ನು ಮಾತ್ರವಲ್ಲ, ರೋಗಕ್ಕೆ ಕಾರಣವಾಗುವ ಅಭ್ಯಾಸಗಳು ಮತ್ತು ಪರಿಸ್ಥಿತಿಗಳು ಹುಟ್ಟದಂತೆ ನೋಡಿಕೊಳ್ಳುವುದೇ ಆದಿಮ ತಡೆಗಟ್ಟುವಿಕೆಯ ಉದ್ದೇಶ.

ಆದಿಮ ತಡೆಗಟ್ಟುವಿಕೆಯು ಆರೋಗ್ಯ ರಕ್ಷಣೆಯ ಮೊದಲ ಹಂತ. ಈ ಹಂತದಲ್ಲಿ ನಾವು ಮಕ್ಕಳಿಂದಲೇ ಆರೋಗ್ಯಕರ ಜೀವನಶೈಲಿಯನ್ನು ರೂಪಿಸಿದರೆ, ಮುಂದಿನ ದಿನಗಳಲ್ಲಿ ರೋಗಗಳ ಸಾಧ್ಯತೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ರೋಗ ಬಂದ ನಂತರ ಚಿಕಿತ್ಸೆಗಿಂತ, ರೋಗಕ್ಕೆ ಕಾರಣವಾಗುವ ಪರಿಸ್ಥಿತಿಗಳು ಹುಟ್ಟದಂತೆ ನೋಡಿಕೊಳ್ಳುವುದು ಹೆಚ್ಚು ಪರಿಣಾಮಕಾರಿ. ಕುಟುಂಬ, ಶಾಲೆ ಮತ್ತು ಸಮಾಜವು ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸುವತ್ತ ಗಮನಹರಿಸಬೇಕು. ಇಂದಿನ ಮಕ್ಕಳಿಗೆ ಉತ್ತಮ ಜೀವನಶೈಲಿ ನೀಡಿದರೆ, ನಾಳೆಯ ಸಮಾಜ ಆರೋಗ್ಯಕರವಾಗಿರುತ್ತದೆ.

ಯೋಗವು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವುದಕ್ಕೆ, ಸರಿಯಾದ ಆಹಾರ ಸಂಸ್ಕೃತಿಯನ್ನು ರೂಢಿಸಿಕೊಳ್ಳುವುದಕ್ಕೆ, ದೈಹಿಕ ಚಟುವಟಿಕೆಗೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿ ಸಾಮಾಜಿಕ ಜಾಗೃತಿ ಮೂಡಿಸಲೂ ಪರಿಣಾಮಕಾರಿ.

‘ಯೋಗ’ ಎಂಬ ಪದವು ಸಂಸ್ಕೃತದ ‘ಯುಜ್’ ಧಾತುವಿನಿಂದ ಬಂದಿದ್ದು, ಅದರ ಅರ್ಥ ‘ಸಂಯೋಗ’ ಅಥವಾ ‘ಒಕ್ಕೂಟ’ ಎಂದು ಎಲ್ಲೆಡೆ ಪ್ರಖ್ಯಾತವಾಗಿದ್ದರೂ ಪಾತಂಜಲ ಯೋಗಸೂತ್ರವು ‘ಯುಜ್’ ಎಂಬುದಕ್ಕೆ ‘ಸಮಾಧಿ’ ಎಂಬ ಅರ್ಥವನ್ನು ಕೊಡುತ್ತದೆ. ಸಮಾಧಿಯೆಂದರೆ ಸಮಾಧಾನದ ಸ್ಥಿತಿ. ಈ ಸಮಾಧಾನದ ಸ್ಥಿತಿಯು ಮಾನಸಿಕ ಸ್ಥಿರತೆಯನ್ನು ತೋರಿಸುತ್ತದೆ. ಸರಿಯಾದ ಮಾನಸಿಕ ಸ್ಥಿತಿಯು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿ. ಅಗ ದೇಹ, ಮನಸ್ಸು ಮತ್ತು ಆತ್ಮಗಳೊಂದಾಗಿ ರೋಗ ಬಾರದಂತೆ ತಡೆಗಟ್ಟಿ ಆರೋಗ್ಯವನ್ನು ಹೊಂದಲು ಆದಿಮ ಹಂತದಿಂದಲೇ ಸಹಕಾರಿಯಾಗುತ್ತದೆ. ಇದೇ ಯೋಗದ ಮುಖ್ಯ ಉದ್ದೇಶ.

ಯೋಗದ ಮೂಲತತ್ತ್ವಗಳನ್ನು ವಿವರಿಸುವ ಮಹರ್ಷಿ ಪತಂಜಲಿಯು ‘ಅಷ್ಟಾಂಗ ಯೋಗ’ ಎಂಬ ಎಂಟು ಹಂತಗಳ ಮಾರ್ಗವನ್ನು ತಿಳಿಸಿದ್ದಾನೆ. ಇದು ಕೇವಲ ವ್ಯಾಯಾಮವಲ್ಲ, ಬದುಕನ್ನು ಸಮತೋಲನದಿಂದ ನಡೆಸುವ ಸಮಗ್ರ ವಿಧಾನವಾಗಿದೆ.

‘ಅಷ್ಟ’ ಎಂದರೆ ಎಂಟು, ‘ಅಂಗ’ ಎಂದರೆ ಭಾಗ. ಅಷ್ಟಾಂಗ ಯೋಗವು ಎಂಟು ಹಂತಗಳನ್ನು ಒಳಗೊಂಡಿದೆ. ಈ ಹಂತಗಳನ್ನು ಕ್ರಮಬದ್ಧವಾಗಿ ಅನುಸರಿಸಿದರೆ ದೇಹ, ಮನಸ್ಸು ಮತ್ತು ಆತ್ಮದ ಸಮತೋಲನ ಸಾಧ್ಯವಾಗುತ್ತದೆ. ಇದರಲ್ಲಿ ಯಮ, ನಿಯಮಗಳು ನಮ್ಮ ವರ್ತನೆಗೆ ಸಂಬಂಧಿಸಿದ್ದು ವೈಯಕ್ತಿಕ ಶುದ್ಧತೆ, ನೈತಿಕಹೊಣೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಬೆಳೆಸುವಲ್ಲಿ ಸಹಕಾರಿ. ಆದರೆ ಇಂದಿನ ದಿನದಲ್ಲಿ ಯೋಗವೆಂದರೆ ಕೇವಲ ಶಾರೀರಿಕ ತಿರುಚುವಿಕೆಯನ್ನು ಮಾತ್ರ ಪರಿಗಣಿಸುತ್ತಿರುವುದು ಯೋಗದ ಮೂಲತತ್ತ್ವಗಳಿಗೆ ಕುಠಾರಾಘಾತಕರವಾಗಿದೆ.

ವೈಯಕ್ತಿಕ ಶುದ್ಧತೆ, ನೈತಿಕಹೊಣೆ ಮತ್ತು ಸಾಮಾಜಿಕ ಸೌಹಾರ್ದತೆಯಿರದ ಮನುಷ್ಯ ಮಾನಸಿಕವಾಗಿ ಸ್ಥಿರವಾಗಿರಲು ಹೇಗೆ ಸಾಧ್ಯ? ಆದ್ದರಿಂದ ಯೋಗದ ಆರಂಭಿಕ ಹಂತಗಳು ಮುಂದಿನ ಅಂಗಗಳಷ್ಟೇ ಮುಖ್ಯವಾದವು. ಹಿಂದಿನ ತರಗತಿಯನ್ನು ಪಾಸಾಗದೇ ಮುಂದೆ ಹೋಗುವುದು ಎಷ್ಟರ ಮಟ್ಟಿಗೆ ಸಮಂಜಸ? ಆಸನ, ಪ್ರಾಣಾಯಾಮಗಳು ಶಾರೀರಿಕ ಸ್ಥಿರತೆ ಮತ್ತು ಉಸಿರಾಟದ ನಿಯಂತ್ರಣವನ್ನು ತಂದುಕೊಡುತ್ತವೆ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಹಲವು ರೀತಿಯ ಅಸನ, ಪ್ರಾಣಾಯಾಮಗಳು ಒತ್ತಡ, ಉದ್ವಿಗ್ನತೆ, ಖಿನ್ನತೆಗಳನ್ನು ನಿಯಂತ್ರಿಸಲು ಸಹಕಾರಿ.

ಮುಂದಿನ ಹಂತಗಳಾದ ಧಾರಣ, ಧ್ಯಾನ, ಸಮಾಧಿಗಳಿಗೆ ಅಂತರಂಗ ಯೋಗವೆಂದು ಕರೆಯುತ್ತಾರೆ. ಇದು ಸೂಕ್ಷ್ಮದಲ್ಲಿ ನಡೆಯುವ ಪ್ರಕ್ರಿಯೆಯಾದರೂ ಸ್ಥೂಲಶರೀರದ ಮೇಲೆ ಅತ್ಯಂತ ಹೆಚ್ಚಿನ ಪರಿಣಾಮ ಬೀರುತ್ತದೆ. ಇದರಲ್ಲಿ ಹೊರಗಿನ ವಿಷಯಗಳಿಂದ ಮನಸ್ಸನ್ನು ಹಿಂದಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇದರಿಂದ ಆಂತರಿಕ ಶಾಂತಿ ಮತ್ತು ಸ್ಪಷ್ಟತೆ ದೊರೆಯುತ್ತದೆ. ಆಗ ನಿತ್ಯಾನಿತ್ಯ ವಿವೇಕದಿಂದ, ಸತ್ಯಾಸತ್ಯತೆಗಳನ್ನು ಅರಿತು, ಸಾಮಾಜಿಕವಾಗಿ ಸರಿಯಾಗಿ ನಡೆದುಕೊಳ್ಳುವಂತಹ ಬುದ್ಧಿಯುಂಟಾಗುತ್ತದೆ.

ಯೋಗಾಭ್ಯಾಸವನ್ನು ಸರಿಯಾದ ಮಾರ್ಗದರ್ಶನದಲ್ಲಿ ಆರಂಭಿಸುವುದು ಮುಖ್ಯ. ಆರಂಭದಲ್ಲಿ ಸರಳ ವಿಧಾನಗಳು, ಆಸನಗಳಿಂದ ಶುರುಮಾಡಿ, ನಿಧಾನವಾಗಿ ಕಠಿಣ ಹಂತದ ಆಸನಗಳಿಗೆ ಮುಂದುವರಿಯಬೇಕು. ಅತಿಯಾದ ಒತ್ತಡ ನೀಡದೇ, ದೇಹದ ಸಾಮರ್ಥ್ಯವನ್ನು ಗೌರವಿಸುವುದು ಮುಖ್ಯ.

ಯೋಗವು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಸಾಧಿಸುವ ಒಂದು ವಿಜ್ಞಾನ. ಇನ್ನೊಂದೆಡೆ ಆಯುರ್ವೇದವು ದೇಹದ ದೋಷಗಳ (ವಾತ, ಪಿತ್ತ, ಕಫ) ಸಮತೋಲನದ ಮೂಲಕ ಆರೋಗ್ಯವನ್ನು ಕಾಪಾಡುವ ಚಿಕಿತ್ಸಾ ವಿಧಾನವಾಗಿದೆ. ಈ ಎರಡೂ ಪರಸ್ಪರ ಪೂರಕವಾಗಿದ್ದು, ಒಟ್ಟಾಗಿ ಅನುಸರಿಸಿದಾಗ ಹೆಚ್ಚಿನ ಫಲಿತಾಂಶ ನೀಡುತ್ತವೆ.

ಆಯುರ್ವೇದದ ಪ್ರಕಾರ, ಆರೋಗ್ಯವು ಸಮದೋಷ (ಶರೀರದ ಕ್ರಿಯಾತ್ಮಕ ಘಟಕಗಳಾದ ವಾತ, ಪಿತ್ತ, ಕಫಗಳು), ಸಮಾಗ್ನಿ (ಜೀರ್ಣಕ್ರಿಯೆ ಮತ್ತು ಚಯಾಪಚಯಕ್ರಿಯೆಗಳು), ಸಮಧಾತು (ಶರೀರದ ರಚನಾತ್ಮಕ ಘಟಕಗಳು) ಮತ್ತು ಸಮಮಲ (ವಿಸರ್ಜಿಸಬೇಕಾದ ಅಂಶಗಳು) – ಇವುಗಳ ಸಮತೋಲನದಿಂದ ಉಂಟಾಗುತ್ತದೆ. ದೋಷಗಳ ಅಸಮತೋಲನವೇ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಯೋಗಾಭ್ಯಾಸವು ಈ ದೋಷಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ವಾತದ ಅತಿಯಾದ ಚಲನೆಯನ್ನು ಯೋಗದ ನಿಧಾನವಾದ ಆಸನಗಳು ಮತ್ತು ಪ್ರಾಣಾಯಾಮಗಳು ನಿಯಂತ್ರಿಸುತ್ತವೆ. ಪಿತ್ತದ ಅತಿಯಾದ ಉಷ್ಣತೆಯನ್ನು ಶೀತಲ ಪ್ರಾಣಾಯಾಮಗಳು ಕಡಿಮೆ ಮಾಡುತ್ತವೆ. ಕಫದ ಜಡತ್ವವನ್ನು ಸಕ್ರಿಯ ಆಸನಗಳು ನಿವಾರಿಸುತ್ತವೆ.

ಒಟ್ಟಿನಲ್ಲಿ ಯೋಗ ಮತ್ತು ಆಯುರ್ವೇದಗಳು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅತ್ಯಂತ ಸರಳ ಮತ್ತು ಪರಿಣಾಮಕಾರಿ ಆರೋಗ್ಯ ವಿಧಾನಗಳಾಗಿವೆ. ಆರೋಗ್ಯಕರ ದೇಹ ಮತ್ತು ಶಾಂತ ಮನಸ್ಸಿಗಾಗಿ ಇವುಗಳನ್ನು ದಿನಚರಿಯ ಭಾಗವನ್ನಾಗಿಸೋಣ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-51-375106226

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.