ಮಾಂಸಾಹಾರ ಸೇರಿ ಅನೇಕ ಅಡುಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ನಿಂಬೆ ಹಣ್ಣು ಅಪಾರ ಔಷಧೀಯ ಗುಣಗಳನ್ನು ಹೊಂದಿದೆ.
ಆರೋಗ್ಯ ವೃದ್ದಿಗೆ ಸಹಕಾರಿ
‘ಸಿಟ್ರಸ್ ಆವ್‌ರಾಂಟಿ ಫೋಲಿಯಾ’ ಅಥವಾ ‘ಆಸಿಡ್ ಲೈಮ್’ ಎಂದು ಕರೆಯುವ ನಿಂಬೆ ಹಣ್ಣು ಆರೋಗ್ಯ ವೃದ್ದಿಗೆ ಸಹಕಾರಿಯಾಲಿದೆ.
ADVERTISEMENT
ರೋಗ ನಿರೋಧಕಶಕ್ತಿ ಹೆಚ್ಚಳ
ನಿಂಬೆ ಹಣ್ಣಿನಲ್ಲಿ ಅಧಿಕ ವಿಟಮಿನ್ `ಸಿ' ಹೊಂದಿದೆ. 1 ಲೋಟ ಬಿಸಿ ನೀರಿನ ಜೊತೆ ಅರ್ಧ ಚಮಚ ನಿಂಬೆ ರಸ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯ ವೃದ್ಧಿಗೆ ಸಹಕಾರಿ.
ಮಲಬದ್ಧತೆ ನಿವಾರಣೆ
ಒಂದು ಲೋಟ ನೀರಿಗೆ ಅರ್ಧ ನಿಂಬೆಹಣ್ಣಿನ ರಸ, ಅರ್ಧ ಚಮಚ ಉಪ್ಪು ಅಥವಾ ಸೈಂಧವ ಲವಣ ಸೇರಿಸಿ ಕುಡಿಯುವುದರಿಂದ ಅಜೀರ್ಣ, ಎದೆಯುರಿ ಹಾಗೂ ಮಲಬದ್ಧತೆ ನಿವಾರಣೆಗೆ ಸಹಕಾರಿ
ADVERTISEMENT
ತಲೆ ಹೊಟ್ಟು ನಿವಾರಣೆ
ತಲೆ ಹೊಟ್ಟಿನ ಸಮಸ್ಯೆ ಕಾಡುತ್ತಿದ್ದರೆ, ವಾರಕ್ಕೊಂದು ಬಾರಿ ತಲೆಗೆ ನಿಂಬೆ ರಸ ಹಚ್ಚಿ , 5 ರಿಂದ 10 ನಿಮಿಷ ಬಿಟ್ಟು ತಲೆ ತೊಳೆಯುವುದರಿಂದ ಹೊಟ್ಟು ನಿವಾರಣೆಗೆ ಉಪಯುಕ್ತ.
ನಿಂಬೆ ಶರಬತ್ತು
ಬೇಸಿಗೆ ಸಮಯದಲ್ಲಿ ನಿಂಬೆ ಶರಬತ್ತು ಕುಡಿಯುವುದರಿಂದ ಬಾಯಾರಿಕೆ ನೀಗಿಸಿ, ದೇಹಕ್ಕೆ ತಂಪು ನೀಡಲು ಸಹಕರಿಸುತ್ತದೆ.
ಕಾಂತಿಯುತ ಚರ್ಮಕ್ಕೆ ಸಹಕಾರಿ
ಅರ್ಧ ಚಮಚ ನಿಂಬೆ ರಸದ ಜೊತೆಗೆ ಚಿಟಿಕೆಯಷ್ಟು ಅರಿಶಿಣ ಪುಡಿ ಸೇರಿಸಿ ಮುಖಕ್ಕೆ ಹಚ್ಚಿ 5ರಿಂದ 10 ನಿಮಿಷ ಬಿಟ್ಟು ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚಳಕ್ಕೆ ಸಹಕಾರಿ.