ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ನ್ ಫ್ಲೇಕ್ಸ್‌ನಿಂದ ಬಗೆಬಗೆ ಅಡುಗೆ

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕಾರ್ನ್ ಪ್ಲೇಕ್ಸ್ ಲಾಡು
ಬೇಕಾಗುವ ವಸ್ತುಗಳು : 1 ಕಪ್ ಕಾರ್ನ್ ಫ್ಲೇಕ್ಸ್‌ , ½ ಕಪ್ ಗೋಧಿ ಹಿಟ್ಟು, ½ ಕಪ್ ಕಡಲೆ ಹಿಟ್ಟು, ½ ಕಪ್ ತುಪ್ಪ, ½ ಕೊಬ್ಬರಿ ತುರಿ, 1 ½ ಕಪ್ ಸಕ್ಕರೆ ಪುಡಿ, 8-10 ಗೊಡಂಬಿ, 10-20 ಒಣದ್ರಾಕ್ಷೆ, ¼ ಚಮಚ ಏಲಕ್ಕಿ ಪುಡಿ.
ಮಾಡುವ ವಸ್ತುಗಳು: ಸಕ್ಕರೆ, ಏಲಕ್ಕಿ ಸೇರಿಸಿ ಪುಡಿ ಮಾಡಿ. ಕಾರ್ನ್ ಫ್ಲೇಕ್ಸ್‌ ಸ್ವಲ್ಪ ಹುರಿದು, ತರಿ ತರಿಯಾಗಿ ಪುಡಿ ಮಾಡಿ. ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಕೊಬ್ಬರಿ ತುರಿ, ಗೋಡಂಬಿ, ದ್ರಾಕ್ಷೆ ಇವನ್ನು ಬೇರೆ ಬೇರೆ ಹುರಿದಿಟ್ಟುಕೊಳ್ಳಿ. ನಂತರ ಇದೆ ಬಾಣಲೆಗೆ ತುಪ್ಪ ಹಾಕಿ ಗೋಧಿ ಪುಡಿ, ಕಡಲೆ ಹಿಟ್ಟು ಬೇರೆ ಬೇರೆಯಾಗಿ ಹಸಿ ವಾಸನೆ ಹೋಗವ ತನಕ ಹುರಿದಿಡಿ. ಒಂದು ಪಾತ್ರೆಗೆ ಈ ಎಲ್ಲಾ ಮಿಶ್ರಣ ಹಾಕಿ ಚೆನ್ನಾಗಿ ಬೆರೆಸಿ. ನಂತರ ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಕಲಸಿ ಸ್ವಲ್ಪ ತುಪ್ಪ ಸೇರಿಸಿ ಉಂಡೆ ಕಟ್ಟಿ. ಈಗ ರುಚಿಯಾದ ಲಾಡು ಸವಿಯಲು ಸಿದ್ಧ.

***

ಕಾರ್ನ್ ಫ್ಲೇಕ್ಸ್‌ ಪಕೊಡ
ಬೇಕಾಗುವ ವಸ್ತುಗಳು:1ಕಪ್ ಕಾರ್ನ್ ಫ್ಲೇಕ್ಸ್‌ , ½ ಕಪ್ ಕಡಲೆ ಹಿಟ್ಟು, 1 ಚಮಚ ಅಕ್ಕಿ ಹಿಟ್ಟು, ½ ಚಮಚ ಕಾರ್ನ್ ಫ್ಲೋರ್, 1 ಚಮಚ ಕೆಂಪುಮೆಣಸಿನ ಪುಡಿ, ¼ ಚಮಚ ಅರಸಿನ ಪುಡಿ, 1 ಹಿಡಿ ಪುದೀನ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ.


ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್ ಪ್ಲೋರ್, ಕಾರದ ಪುಡಿ, ಉಪ್ಪು, ಇಂಗು, ಪುದೀನ ಚೂರು, ಕಾರ್ನ್ ಪ್ಲೇಕ್ಸ್ ಹಾಕಿ ಕಲಸಿ ನಂತರ ನೀರು ಚಿಮುಕಿಸಿ ಹಗುರುವಾಗಿ ಕಲಸಿ. ನಂತರ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ತೆಗೆದು ಹಾಕಿ ಎಣ್ಣೆಗೆ ಹಾಕಿ ಹೊಂಬಣ್ಣ ಬರುವ ವರೆಗೆ ಹುರಿದು ತೆಗೆಯಿರಿ. ಚಟ್ನಿ, ಸಾಸ್ ಜೊತೆ ತಿನ್ನಲು ಈ ಪಕೋಡ ರುಚಿಯಾಗಿರುತ್ತದೆ.
***
ಕಾರ್ನ್ ಫ್ಲೇಕ್ಸ್‌ ಪಾಯಸ
ಬೇಕಾಗುವ ವಸ್ತುಗಳು: 1 ಕಪ್ ಕಾರ್ನ್ ಫ್ಲೇಕ್ಸ್‌ , 3-4 ಕಪ್ ಹಾಲು, ¾ ಕಪ್ ಸಕ್ಕರೆ, ½ ಚಮಚ ಏಲಕ್ಕಿ ಪುಡಿ.


ಮಾಡುವ ವಿಧಾನ: ಒಲೆಯ ಮೇಲೆ ಒಂದು ಪಾತ್ರೆಯಿಟ್ಟು ಹಾಲು ಹಾಕಿ 5 ನಿಮಿಷ ಕುದಿಸಿ ನಂತರ ಸಕ್ಕರೆ ಹಾಕಿ. ಸಕ್ಕರೆ ಕರಗಲಿ. ನಂತರ ಪಾತ್ರೆಯನ್ನು ಕೆಳಗಿಳಿಸಿ. ಅದಕ್ಕೆ ಕಾರ್ನ್ ಫ್ಲೇಕ್ಸ್‌ ಹಾಕಿ ಬೆರೆಸಿ. ನಂತರ ಏಲಕ್ಕಿ ಪುಡಿ ಹಾಕಿ ತಿರುವಿ. ಇದನ್ನು ಬಿಸಿಯಿರುವಾಗ ಕುಡಿಯಬಹುವುದು ಅಥವ ಪ್ರಿಜ್ನಲ್ಲಿಟ್ಟು ತಣ್ಣಗಾದ ಮೇಲೂ ಸವಿಯಬಹುದು.
***
ಕಾರ್ನ್ ಫ್ಲೇಕ್ಸ್‌ ಚಾಟ್
ಬೇಕಾಗುವ ವಸ್ತುಗಳು : 1 ಕಾರ್ನ್ ಫ್ಲೇಕ್ಸ್‌ , 1 ಚಮಚ ಕ್ಯಾರೆಟ್ ತುರಿ, ¼ ಕಪ್ ನೀರುಳ್ಳಿ ಚೂರು, ¼ ಚಮಚ ಕಾರದ ಪುಡಿ, ¼ ಚಮಚ ಚಾಟ್ ಮಸಾಲೆ, ¼ ಕಪ್ ಸಿಹಿ ಜೋಳ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ನೆಲಕಡಲೆ ಬೀಜ, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಚಮಚ ನಿಂಬೆರಸ.


ಮಾಡುವ ವಿಧಾನ : ಒಂದು ಪಾತ್ರೆಗೆ ಕಾರ್ನ್ ಫ್ಲೇಕ್ಸ್‌ , ಕ್ಯಾರೆಟ್ ತುರಿ, ನಿರುಳ್ಳಿ ಚೂರು ಹಾಕಿ ಬೆರೆಸಿ. ನಂತರ ಕಾರದ ಪುಡಿ, ಚಾಟ್ ಮಸಾಲೆ, ಸಿಹಿ ಜೋಳ, ಉಪ್ಪು ಹಾಕಿ ಕಲಸಿ. ನಂತರ ನೆಲಕಡಲೆ ಬೀಜ, ಕೊತ್ತಂಬರಿ ಸೊಪ್ಪು, ನಿಂಬೆರಸ ಹಾಕಿ ಸರಿಯಾಗಿ ತೊಳಸಿ. ಈಗ ರುಚಿಯಾದ ಕಾರ್ನ್ ಫ್ಲೇಕ್ಸ್‌ ಚಾಟ್ ಸವಿಯಲು ಸಿದ್ಧ.

ಲಸ್ಸಿ ವಿದ್ ಕಾರ್ನ್ ಫ್ಲೇಕ್ಸ್‌
ಬೇಕಾಗುವ ವಸ್ತುಗಳು: ¼ ಉದ್ದದ ಶುಂಠಿ, 3-4 ಕರಿಮೆಣಸು, 7-8 ಕರಿಬೇವು, 1 ಕಪ್ ಮೊಸರು, 1 ಚಮಚ ಹಾಲಿನ ಕ್ರೀಮ್, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ½ ಕಪ್ ನೀರು, 1 ಚಮಚ ಕಾರ್ನ್ ಫ್ಲೇಕ್ಸ್‌ .


ಮಾಡುವ ವಿಧಾನ : ಶುಂಠಿ, ಕರಿಮೆಣಸು, ಕರಿಬೇವು, ಮೊಸರು ಸೇರೆಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ನಂತರ ರುಬ್ಬಿದ ಮಿಶ್ರಣಕ್ಕೆ ಸ್ವಲ್ಪ ನೀರು, ಉಪ್ಪು, ಹಾಲಿನ ಕ್ರೀಮ್ ಹಾಕಿ ಒಂದು ಸುತ್ತು ತಿರುಗಿಸಿ. ನಂತರ ಗ್ಲಾಸಿಗೆ ಹಾಕಿ. ಕೊತ್ತಂಬರಿ ಸೊಪ್ಪು ಕಾರ್ನ್ ಫ್ಲೇಕ್ಸ್‌ ಹಾಕಿ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT