ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿದೆ. ಆಯಾ ಋತುವಿಗೆ ತಕ್ಕಂತೆ ಆಹಾರದ ರೀತಿ ನೀತಿಗಳನ್ನು ಅರಿತವನು ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಹಾಗೂ ರೋಗಗಳನ್ನು ತಡೆಗಟ್ಟುವುದರಲ್ಲಿ ಸಫಲನಾಗುತ್ತಾನೆ.

ಆಹಾರವು ಕೇವಲ ದೇಹಕ್ಕೆ ಪುಷ್ಠಿ ಕೊಡುವುದಲ್ಲದೇ ಮನಸ್ಸಿಗೂ ಮುದ, ಶಾಂತಿಯನ್ನು ಕೊಡುತ್ತದೆ. ಆಹಾರದಿಂದ ಈ ಉಪಯೋಗವನ್ನು ಬಯಸುವವರು ಆಹಾರವನ್ನು ಸೇವಿಸುವಾಗ ಕೆಲವು ರೀತಿ ನೀತಿಗಳನ್ನು ಪಾಲಿಸಬೇಕು. ಹವಾಮಾನಗಳು ಹೇಗೆ ಬದಲಾಗುತ್ತವೆಯೋ ಹಾಗೆಯೇ ದೇಹದಲ್ಲಿನ ದೈಹಿಕ ಚರ್ಯೆಯಲ್ಲಿ ವ್ಯತ್ಯಾಸವಾಗುತ್ತದೆ. ಆದ್ದರಿಂದ ಆಯಾ ಹವಾಮಾನಗಳಿಗೆ ಅನುಗುಣವಾಗಿ ಆಹಾರ ಸೇವನಾ ವಿಧಿಯೂ ಬದಲಾಗುತ್ತದೆ. ನಾವು ಸೇವಿಸುವ ಆಹಾರವು 6 ರಸಗಳಿಂದ ಕೂಡಿರಬೇಕು. ಆದರೆ ಆಯಾ ಋತುವಿನಲ್ಲಿ ಕಂಡು ಬರುವ ಪರಿಣಾಮಗಳ ಏರಿಳಿತಗಳಿಗೆ ಸರಿಹೊಂದುವಂತೆ ಕೆಲವು ರಸಗಳನ್ನು ಹೆಚ್ಚಾಗಿ ಹಾಗೂ ಕೆಲವನ್ನು ಮಿತವಾಗಿ ಆಹಾರದಲ್ಲಿ ಬಳಸಬೇಕು.

ಬೇಸಿಗೆಯಲ್ಲಿ ಯಾವೆಲ್ಲಾ ಆಹಾರ ಸೇವಿಸಬೇಕು..

ಬೇಸಿಗೆ ಕಾಲದಲ್ಲಿ ಅತಿ ತೀಕ್ಷ್ಣ ಮತ್ತು ಬಲವಾದ ಸೂರ್ಯನ ಕಿರಣಗಳು ಪ್ರಕೃತಿಯಲ್ಲಿನ ತೇವಾಂಶವನ್ನು ಹಾಗೂ ದೇಹದ ಶಕ್ತಿಯನ್ನು ಹೀರಿಕೊಳ್ಳುತ್ತವೆ. ಇದರಿಂದಾಗಿ ದೇಹವು ತುಂಬಾ ದುರ್ಬಲವಾಗುತ್ತದೆ. ಈ ಋತುವಿನಲ್ಲಿ ಕಫವು ಕಡಿಮೆಯಾಗಿ ವಾತವು ದೇಹದಲ್ಲಿ ವೃದ್ಧಿಸುತ್ತದೆ.

ಜೀರ್ಣಶಕ್ತಿಯು ತುಂಬಾ ದುರ್ಬಲವಾಗಿರುತ್ತದೆ. ಆದ್ದರಿಂದ ಜೀರ್ಣಕ್ಕೆ ಸುಲಭವಾದ ಹಾಗೂ ದೇಹಕ್ಕೆ ಶಕ್ತಿಯನ್ನೂ ಕೊಡುವಂತಹ ಆಹಾರವನ್ನೇ ಸೇವಿಸಬೇಕು. ಮಧುರ ರಸ, ಶೀತ ಗುಣ (ತಂಪು), ದ್ರವ (ದ್ರವ ಸ್ವರೂಪಿ) ಮತ್ತು ಸ್ನಿಗ್ಧ ಗುಣಗಳನ್ನು (ಎಣ್ಣೆಯುಕ್ತ) ಹೊಂದಿರುವ ಆಹಾರ ಮತ್ತು ಪಾನೀಯಗಳು ಹಿತಕರವಾಗಿರುತ್ತದೆ. ತುಪ್ಪ ಮತ್ತು ಹಾಲಿನೊಂದಿಗೆ ಅನ್ನವನ್ನು ಸೇವಿಸಬೇಕು. ಹಳೆಯ ಬಿಳಿ ಅಕ್ಕಿಯ ಅನ್ನ, ಗಂಜಿ, ರಾಗಿಯ ಅಂಬಲಿ, ಹೆಸರುಬೇಳೆ ಸಾರು ಮುಂತಾದವುಗಳು ದ್ರವಾಂಶದ ಕೊರತೆಯನ್ನು ನೀಗಿಸುತ್ತವೆ. ಜೊತೆಗೆ ಎಳನೀರು, ಮಜ್ಜಿಗೆಯನ್ನು ಕುಡಿಯಬೇಕು. ಜೇನುತುಪ್ಪ, ಖರ್ಜೂರ, ದ್ರಾಕ್ಷಿ ಮತ್ತು ಸಕ್ಕರೆಯಿಂದ ತಯಾರಿಸಿದ ಶೀತಲ ಪಾನೀಯವನ್ನು ಬಳಸಬಹುದು.

ತಾಜಾ ಹಣ್ಣಿನ ರಸವನ್ನು ಸೇವಿಸಬಹುದು. ಬಾರ್ಲಿ ಅಥವಾ ಧಾನ್ಯಗಳನ್ನು ಪುಡಿ ಮಾಡಿ ತಯಾರಿಸಿದ ಹಿಟ್ಟನ್ನು ನೀರಿನೊಂದಿಗೆ ಬೆರೆಸಿ ಸಕ್ಕರೆಯನ್ನು ಮಿಶ್ರಣ ಮಾಡಿ ಸೇವಿಸಬೇಕು. ತಂಪು ನೀಡುವಂತಹ ಸೌತೆಕಾಯಿ, ಕುಂಬಳಕಾಯಿ, ತೊಂಡೆಕಾಯಿ, ಬಾಳೆಹೂವುಗಳ ಬಳಕೆಯನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸಬೇಕು. ದೇಹದ ಉಷ್ಣತೆಯನ್ನು ನೀಗುವಂತಹ ಪಾನಿಯವನ್ನು ಸೇವಿಸಬೇಕು. ಮಧುರ ಗುಣಗಳನ್ನು ಹೊಂದಿರುವ ಹಣ್ಣುಗಳನ್ನು ಈ ಋತುವಿನಲ್ಲಿ ಸೇವಿಸಬೇಕು.

ದ್ರಾಕ್ಷಿ, ದಾಳಿಂಬೆ, ಖರ್ಜೂರ, ಕಲ್ಲಂಗಡಿ, ಮಾವು, ಮೂಸಂಬಿ, ಕಿತ್ತಳೆ ಹಣ್ಣುಗಳು ದೇಹದ ಆರೋಗ್ಯವನ್ನು ವೃದ್ಧಿಸುತ್ತವೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಮದ್ಯಪಾನವನ್ನು ತ್ಯಜಿಸಬೇಕು. ಅವಶ್ಯಕವಿದ್ದರೆ ಅಲ್ಪ ಪ್ರಮಾಣದಲ್ಲಿ ಮತ್ತು ಹೆಚ್ಚು ನೀರಿನೊಂದಿಗೆ ಮಿಶ್ರಣ ಮಾಡಿ ಸೇವಿಸಬಹುದು. ಉಪ್ಪು, ಹುಳಿ, ಖಾರ ರುಚಿಯ ಪದಾರ್ಥಗಳನ್ನು, ನುಗ್ಗೆಕಾಯಿ, ಅವರೇಕಾಯಿ, ಮೆಣಸಿನಕಾಯಿ, ಹುಣಸೆ, ಸಾಸಿವೆಗಳ ಬಳಕೆ ಸೀಮಿತಗೊಳಿಸಬೇಕು.

ಆಯುರ್ವೇದದ ಮಾರ್ಗದರ್ಶನದಂತೆ ಸರಿಯಾದ ಆಹಾರ ಪದ್ಧತಿ ಅನುಸರಿಸಿದರೆ ಬೇಸಿಗೆಯ ಪರಿಣಾಮಗಳನ್ನು ಕಡಿಮೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

(ಲೇಖಕರು: ಡಾ ಶಮೀಮ್ ಬಾನು, ಅಸಿಸ್ಟೆಂಟ್ ಪ್ರೊಫೆಸರ್, ಎಸ್ಡಿಎಂ ಕಾಲೇಜ್ ಆಫ್ ಆಯುರ್ವೇದ, ಹಾಸನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.