ಕಳೆದ ವರ್ಷಕ್ಕೆ ಹೋಲಿಸಿದರೆ, ಬಿಸಿಲಿನ ಪ್ರಮಾಣ ಈ ವರ್ಷ ಹೆಚ್ಚಾಗಿಯೇ ಇದೆ. ಮಳೆಗಾಲ ಆರಂಭವಾಗುವುದು ಕೂಡ ತಡವಾಗಲಿದೆ ಎಂದು ವರದಿಯಾಗಿದೆ. ಈ ನಡುವೆ ಅತಿಯಾದ ಬಿಸಿಲು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ. ತಾಪಮಾನ ಹೆಚ್ಚಾದಂತೆ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಕೂಡ ಕಾಡುತ್ತಿದೆ. ಅನೇಕರು ನಿರ್ಜಲೀಕರಣ ಮತ್ತು ಉಷ್ಣಾಘಾತ (SunStrock) ಎರಡೂ ಒಂದೇ ಎಂದು ಭಾವಿಸುತ್ತಾರೆ. ಆದರೆ ಈ ಎರಡು ಬೇರೆ ಬೇರೆ.

ಹಾಗಾದರೆ ನಿರ್ಜಲೀಕರಣ ಮತ್ತು ಉಷ್ಣಾಘಾತ ಈ ಎರಡರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಯೋಣ.

ನಿರ್ಜಲೀಕರಣ ಮತ್ತು ಉಷ್ಣಾಘಾತವು ನೀರಿನ ಕೊರತೆ ಹಾಗೂ ಅಧಿಕ ತಾಪಮಾನದಿಂದ ಉಂಟಾಗುತ್ತವೆ. ಧೀರ್ಘಕಾಲದವರೆಗೆ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ದೇಹದ ತಾಪಮಾನ ಹೆಚ್ಚಾಗುತ್ತದೆ. ಇದು ಜೀವಕ್ಕೂ ಕುತ್ತು ತರಬಹುದು.

ದೇಹಕ್ಕೆ ಬೇಕಾದ ಅಗತ್ಯದಷ್ಟು ನೀರನ್ನು ಒದಗಿಸದೆ ಇದ್ದಾಗ ನಿರ್ಜಲೀಕರಣ ಉಂಟಾಗುತ್ತದೆ. ಇದರಿಂದ ಮೂತ್ರಪಿಂಡಗಳು ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಧಣಿವು, ಚರ್ಮ ಒಣಗುವುದು, ತಲೆ ನೋವು ಸೇರಿದಂತೆ ಇತರೆ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಬೇಸಿಗೆಯಲ್ಲಿ ಆಗಾಗ ನೀರು ಕುಡಿಯುತ್ತಿರುವುದು ಉತ್ತಮ.

ನಿರ್ಜಲೀಕರಣದ ಲಕ್ಷಣಗಳು:

ಬಾಯಿ ಮತ್ತು ತುಟಿ ಒಣಗುವುದು

ಮೂತ್ರ ಗಾಢ ಹಳದಿ ಬಣ್ಣದಲ್ಲಿ ಇರುವುದು

ಆಯಾಸ ಅಥವಾ ದುರ್ಬಲತೆ

ತಲೆನೋವು

ಉಷ್ಣಾಘಾತ

ದೇಹದ ಉಷ್ಣಾಂಶ ಅತಿಯಾಗಿ ಏರಿಕೆಯಾಗಿ, ದೇಹವು ತನ್ನಿಂದ ತಾನೇ ಸಹಜ ಸ್ಥಿತಿಗೆ ತಲುಪಲು ಸಾಧ್ಯವಾಗದ ಗಂಭೀರ ಸ್ಥಿತಿಯೇ ಉಷ್ಣಾಘಾತವಾಗಿದೆ.

ಲಕ್ಷಣಗಳು:

ದೇಹದ ಉಷ್ಣಾಂಶ ಅಧಿಕವಾಗುವುದು

ಚರ್ಮ ಒಣಗಿರುವ (ಕೆಲವೊಮ್ಮೆ ಬೆವರು ಬರದಿರುವುದು)

ಅತಿಯಾದ ತಲೆ ತಿರುಗುವಿಕೆ

ವಾಕರಿಕೆ ಅಥವಾ ವಾಂತಿ

ಹೃದಯ ಬಡಿತ ಹೆಚ್ಚಾಗುವುದು

ಮೂರ್ಛೆ ಹೋಗುವುದು

ಬೇಸಿಗೆ ಬಿಸಿಲಿನಲ್ಲಿನ ಸುರಕ್ಷತಾ ಕ್ರಮಗಳು

ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಕುಡಿಯಿರಿ

ಅಧಿಕ ಬಿಸಿಲಿರುವ ವೇಳೆ ಹೊರಗೆ ಹೋಗುವುದನ್ನು ತಪ್ಪಿಸಿ

ಹಗುರ ಮತ್ತು ಗಾಳಿಯಾಡುವ ಬಟ್ಟೆ ಧರಿಸಿ

ನೀರಿನಾಂಶವುಳ್ಳ ಹಣ್ಣುಗಳನ್ನು ಸೇವಿಸಿ

ಲಘುವಾದ ಆಹಾರ ಸೇವಿಸಿ

ಸನ್ಸ್ಕ್ರೀನ್ ಬಳಸಿ

ಕಣ್ಣಿನ ರಕ್ಷಣೆಗೆ ಸನ್ ಗ್ಲಾಸ್ ಬಳಕೆ ಮಾಡಿ

ಒಂದು ವೇಳೆ ನೀರು ಕುಡಿದರೂ ನಿರ್ಜಲೀಕರಣದ ಲಕ್ಷಣಗಳು ಕಡಿಮೆಯಾಗದಿರುವುದು, ಗೊಂದಲ, ಮೂರ್ಛೆ ಅಥವಾ ದೇಹದ ಉಷ್ಣಾಂಶ ಹೆಚ್ಚಾಗುವುದು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಲೇಖಕರು: ಡಾ. ಬಸವರಾಜ್ ಎಸ್ ಕುಂಬಾರ್, ಸಲಹಾ ತಜ್ಞರು, ಆಂತರಿಕ ವೈದ್ಯಕೀಯ ವಿಭಾಗ, ಆಸ್ಟರ್ ವೈಟ್ಫೀಲ್ಡ್ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.