ಬೆಂಗಳೂರು: ಬೇಸಿಗೆಯಲ್ಲಿ ನೀರಿನಂಶ ಅಧಿಕವಾಗಿರುವ ಹಣ್ಣುಗಳನ್ನು ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಮುಂಬೈನಲ್ಲಿ ಕಲ್ಲಂಗಡಿ ಹಣ್ಣು ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆಯೊಂದು ಏಪ್ರಿಲ್ 25ರಂದು ವರದಿಯಾಗಿದೆ. ಈ ಘಟನೆಯ ಬಳಿಕ ಕಲ್ಲಂಗಡಿ ಹಣ್ಣಿನ ಸೇವನೆ ಕುರಿತು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ವಿಶೇಷವಾಗಿ, ಬೇಸಿಗೆಯ ಈ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣಿಗೆ ಹೆಚ್ಚು ಬೇಡಿಕೆ ಇರುತ್ತದೆ. ಜನರು ನೀರಿನಂಶ ಹೆಚ್ಚಿರುವ ಈ ಹಣ್ಣನ್ನು ಸೇವಿಸಲು ಇಷ್ಟಪಡುತ್ತಾರೆ. ಈ ಹಣ್ಣು ದೇಹದಲ್ಲಿನ ಉಷ್ಣಾಂಶ ಕಡಿಮೆ ಮಾಡುವುದರ ಜೊತೆಗೆ ಹೀಟ್ ಸ್ಟ್ರೋಕ್ನಿಂದ ಕಾಪಾಡಿಕೊಳ್ಳಲು ಕೂಡ ನೆರವಾಗುತ್ತದೆ. ಆದರೆ, ಕೃತಕವಾಗಿ ಬಳಸುವ ಬಣ್ಣ ಹಾಗೂ ರಾಸಾಯನಿಕವೂ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ವರದಿಗಳ ಪ್ರಕಾರ, ಕಲ್ಲಂಗಡಿ ಹಣ್ಣನ್ನು ಹೆಚ್ಚು ಸಿಹಿಯಾಗಿಸುವ ಉದ್ದೇಶದಿಂದ ರಾಸಾಯನಿಕ ಬಳಕೆ ಮಾಡುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲ, ಹಣ್ಣಿಗೆ ಕೆಂಪು ಬಣ್ಣ ನೀಡುವ ಉದ್ದೇಶದಿಂದ ಕೆಲವು ರೈತರು, ಕಲ್ಲಂಗಡಿ ಮೇಲೆ ಕೃತಕ ಬಣ್ಣವನ್ನು ಸ್ಪ್ರೇ ಮಾಡುವ ಸಾಧ್ಯತೆ ಇರುತ್ತದೆ. ಆದರೆ, ಎಲ್ಲ ಕಡೆಯೂ ಈ ಬಣ್ಣವನ್ನು ಬಳಕೆ ಮಾಡುವುದಿಲ್ಲ. ಈ ಕೃತಕ ಬಣ್ಣವು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಹಾಗಾಗಿ, ಕಲ್ಲಂಗಡಿ ಹಣ್ಣನ್ನು ಖರೀದಿಸಿದ ಬಳಿಕ ಅದನ್ನು ಸೇವಿಸುವುದಕ್ಕೆ ಮೊದಲು ಮನೆಯಲ್ಲಿಯೇ ಸುಲಭವಾಗಿ ಆ ಹಣ್ಣು ಸೇವಿಸಲು ಯೋಗ್ಯವೇ? ಇಲ್ಲವೇ? ಎಂಬುದನ್ನು ಪರೀಶೀಲಿಸಬಹುದಾಗಿದೆ. ಅವುಗಳನ್ನು ಒಂದೊಂದಾಗಿ ನೋಡೋಣ ಬನ್ನಿ.

ಟಿಶ್ಯೂ ಪೇಪರ್ ಬಳಕೆ

ಕಲ್ಲಂಗಡಿ ಹಣ್ಣಿನ ಒಳ ಪದರವು ಹೆಚ್ಚು ಕೆಂಪಾಗಿರುವಂತೆ ತೋರಿಸಿ, ಜನರನ್ನು ಆಕರ್ಷಿಸಲು ರಾಸಾಯನಿಕ ಬಣ್ಣವನ್ನು ಬಳಸುವ ಸಾಧ್ಯತೆ ಇರುತ್ತದೆ. ಈ ಕೃತಕ ಬಣ್ಣವನ್ನು ಪರಿಶೀಲಿಸಲು ಒಂದು ಟಿಶ್ಯೂ ಪೇಪರ್ ತೆಗೆದುಕೊಂಡು ಕಲ್ಲಂಗಡಿಯ ಕೆಂಪು ಭಾಗವನ್ನು ಒರೆಸಿದರೆ, ನೈಸರ್ಗಿಕ ಬಣ್ಣವೇ? ಅಥವಾ ಕೃತಕ ಬಣ್ಣವೇ? ಎಂಬುದು ತಿಳಿಯುತ್ತದೆ. ಕೃತಕ ಬಣ್ಣವಾದರೆ ಟಿಶ್ಯೂ ಪೇಪರ್ಗೆ ಬಣ್ಣ ಅಂಟಿಕೊಳ್ಳುತ್ತದೆ.

ನೀರಿನಲ್ಲಿ ಹಾಕುವುದು

ಮನೆಗೆ ತಂದ ಕಲ್ಲಂಗಡಿ ಹಣ್ಣಿಗೆ ಒಂದು ಸಣ್ಣ ರಂಧ್ರ ಮಾಡಿ ನೀರಿನಲ್ಲಿ ಹಾಕಿ. ಆಗ ಕಲ್ಲಂಗಡಿ ಹಣ್ಣಿನಿಂದ ಗುಳ್ಳೆಗಳು ಅಥವಾ ನೊರೆ ಬಂದರೆ, ಆ ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಅಥವಾ ರಾಸಾಯನಿಕಗಳನ್ನು ಸೇರಿಸಿರುವುದು ಖಚಿತವಾಗುತ್ತದೆ. ನೈಸರ್ಗಿಕವಾಗಿದ್ದರೆ, ಆ ರೀತಿಯ ನೊರೆ ಅಥವಾ ಗುಳ್ಳೆ ಬರುವುದಿಲ್ಲ.

ಈ ಮಾಹಿತಿಯನ್ನು ತಜ್ಞರ ಸಲಹೆ ಮತ್ತು ಸುದ್ದಿ ಮೂಲಗಳಿಂದ ಪಡೆಯಲಾಗಿದೆ. ಕಲ್ಲಂಗಡಿ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.