ಫೆ. 28 ರಂದು ಪ್ರಧಾನಮಂತ್ರಿಯವರು ಎಚ್ ಪಿ ವಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಸಾರ್ವಜನಿಕ ಆರೋಗ್ಯದ ಪಯಣದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ದೂರದರ್ಶನದಲ್ಲಿ ಈ ಕಾರ್ಯಕ್ರಮವನ್ನು ವೀಕ್ಷಿಸುವಾಗ, ಪ್ರಧಾನಿ ಮೋದಿಯವರು ಹೆಣ್ಣುಮಕ್ಕಳೊಂದಿಗೆ ಸಂವಹನ ನಡೆಸುತ್ತಾ ಈ ಪ್ರಕ್ರಿಯೆಗೆ ಮಾನವೀಯ ಸ್ಪರ್ಶ ನೀಡಿದ ರೀತಿ ನನ್ನನ್ನು ಆಕರ್ಷಿಸಿತು.

ಸುಯೋಜಿತ ಮತ್ತು ವ್ಯವಸ್ಥಿತ ಅಭಿಯಾನಗಳ ಮೂಲಕ ಗಂಭೀರ ಕಾಯಿಲೆಗಳ ಹೊರೆಯನ್ನು ತೊಡೆದುಹಾಕಿದ ಸುದೀರ್ಘ ಇತಿಹಾಸ ಭಾರತಕ್ಕಿದೆ. 1950ರ ದಶಕದ ಸಿಡುಬು ನಿರ್ಮೂಲನೆಯಿಂದ ಹಿಡಿದು ಇತ್ತೀಚಿನ ಪಲ್ಸ್ ಪೋಲಿಯೊ ಅಭಿಯಾನಗಳವರೆಗೆ, ಇವೆಲ್ಲವನ್ನೂ ಯಶಸ್ಸಿನ ಗುರಿಯೊಂದಿಗೆ ರೂಪಿಸಲಾಗಿತ್ತು. ಅದೇ ಶಿಸ್ತು ಮತ್ತು ಸಾರ್ವಜನಿಕ ನಂಬಿಕೆ ಈಗ ಎಚ್ ಪಿ ವಿ ಲಸಿಕಾ ಕಾರ್ಯಕ್ರಮದ ಯಶಸ್ಸನ್ನು ನಿರ್ಧರಿಸಲಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಜೋಡಿಸಿ ಈ ಕಾರ್ಯಕ್ರಮವನ್ನು ಅಭಿಯಾನದ ಮಾದರಿಯಲ್ಲಿ ಮುನ್ನಡೆಸುತ್ತಿರುವುದನ್ನು ನಾನು ಶ್ಲಾಘಿಸುತ್ತೇನೆ.

ಗರ್ಭಕಂಠದ ಕ್ಯಾನ್ಸರ್ನಿಂದ ಉಂಟಾಗುವ ಹಾನಿಯ ಬಗ್ಗೆ ಇಂಡಿಯನ್ ಕ್ಯಾನ್ಸರ್ ಸೊಸೈಟಿ ದೀರ್ಘಕಾಲದಿಂದ ಕಳವಳ ಹೊಂದಿದೆ. ಕಡತಗಳಲ್ಲಿರುವ ಅಂಕಿಅಂಶಗಳು ನಮಗೆ ಕೇವಲ ಸಂಖ್ಯೆಗಳಲ್ಲ, ಅವು ನೈಜ ಮಹಿಳೆಯರ ಬದುಕು. ತಾಯಿಯ ಮರಣದಿಂದ ಕುಟುಂಬಗಳು ಹೇಗೆ ವಿಘಟಿತವಾಗುತ್ತವೆ ಎಂಬುದು ನಮಗೆ ತಿಳಿದಿದೆ. ಮಹಿಳೆಯರು ಮೌನವಾಗಿ ಅನುಭವಿಸುವ ನೋವಿನ ಅರಿವು ನಮಗಿದೆ. ಹೆಚ್ಚಿನ ಮಹಿಳೆಯರು ಚಿಕಿತ್ಸಾ ಕೇಂದ್ರಗಳಿಗೆ ಬರುವಷ್ಟರಲ್ಲಿ ಕಾಯಿಲೆಯು ಗುಣಪಡಿಸಲಾಗದ ಹಂತಕ್ಕೆ ತಲುಪಿರುತ್ತದೆ.

ಮಹಿಳೆಯರು ಯಾವುದನ್ನೂ ಅಬ್ಬರಿಸಿ ಹೇಳುವವರಲ್ಲ. ತಮ್ಮ ಖಾಸಗಿ ಅಂಗಗಳಲ್ಲಿನ ನೋವಿನ ಬಗ್ಗೆ ಅವರು ಸುಲಭವಾಗಿ ಬಾಯಿಬಿಡುವುದಿಲ್ಲ. ಕಡಿಮೆ ವೆಚ್ಚದ್ದೆಂದು ದೃಶ್ಯ ತಪಾಸಣೆಯನ್ನು ಶಿಫಾರಸು ಮಾಡಿದಾಗ, ಅದು ಮಹಿಳೆಯ ಘನತೆಗೆ ಧಕ್ಕೆ ತರುತ್ತದೆ ಎಂದು ನಮಗೆ ಅನ್ನಿಸುತ್ತದೆ. 1950ರ ದಶಕದಿಂದಲೇ ಯುರೋಪ್ ಮತ್ತು ಅಮೆರಿಕಾದಲ್ಲಿ ಸ್ಟೀನಿಂಗ್, ರೋಗನಿರ್ಣಯ ಮತ್ತು ಚಿಕಿತ್ಸಾ ಫಲಿತಾಂಶಗಳನ್ನು ಬದಲಿಸಿದ 'ಪ್ರಾಪ್ ಸ್ಮಿಯರ್' ನಂತಹ ಉತ್ತಮ ಮತ್ತು ವೈಜ್ಞಾನಿಕ ಪರೀಕ್ಷೆಗಳು ಲಭ್ಯವಿರುವಾಗ, ನಾವು ಕೇವಲ ಅಗ್ಗವೆಂಬ ಕಾರಣಕ್ಕೆ ಕಡಿಮೆ ಪರಿಣಾಮಕಾರಿ ವಿಧಾನಗಳನ್ನೇ ಏಕೆ ಅವಲಂಬಿಸಬೇಕು? ಭಾರತೀಯ ಮಹಿಳೆಯರ ಜೀವ ಅಷ್ಟೊಂದು ಅಗ್ಗವೇ? ಇಂಡಿಯನ್ ಕ್ಯಾನ್ಸರ್ ಸೊಸೈಟಿಯು ಪ್ರಾಪ್ ಪರೀಕ್ಷೆ ಮತ್ತು ಈಗಿನ ಎಚ್ ಪಿ ವಿ ಡಿ ಎನ್ ಎ ಸ್ಟೀನಿಂಗ್ ಪರೀಕ್ಷೆಗಳಿಗೆ ಬೆಂಬಲ ನೀಡಲು ಹಣವನ್ನು ಸಂಗ್ರಹಿಸಿದೆ.

ನಾವು 'ಥರ್ಮಲ್ ಅಬ್ರೇಶನ್' ಮೂಲಕ ಗಾಯಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ದ್ವಿತೀಯ ಹಂತದ ತಪಾಸಣೆಯನ್ನು ನಡೆಸುತ್ತೇವೆ. ಕಾಯಿಲೆಯು ಈ ಸರಳ ಕ್ರಮಗಳನ್ನು ಮೀರಿ ಬೆಳೆದಿರುವ ಮಹಿಳೆಯರಿಗೆ ನಾವು ಆರ್ಥಿಕ ನೆರವನ್ನೂ ನೀಡುತ್ತೇವೆ. ಆದರೆ ಗುಣಪಡಿಸಬಹುದಾದ ಸೋಂಕು ಇಂತಹ ಭೀಕರ ಕಾಯಿಲೆಯಾಗಿ ಬೆಳೆಯಲು ನಾವು ಏಕೆ ಅವಕಾಶ ನೀಡಬೇಕು? ಎಚ್ ಪಿ ವಿ ಲಸಿಕೆಯ ಬಗ್ಗೆ 2008ರಿಂದಲೇ ತಿಳಿದಿದ್ದರೂ, ಭಾರತದಲ್ಲಿ ಇದನ್ನು 2010ರಲ್ಲಿ ಪ್ರಾರಂಭಿಸಲಾಯಿತು. ಗುಜರಾತ್ ಮತ್ತು ಆಂಧ್ರಪ್ರದೇಶದಲ್ಲಿ ಅಭಿಯಾನಗಳನ್ನು ಆರಂಭಿಸಿ ಮೂರು ಡೋಸ್ಗಳ ಲಸಿಕೆಯನ್ನು ಪರಿಚಯಿಸಲಾಯಿತು. 9 ರಿಂದ 14 ವರ್ಷದೊಳಗಿನ ಸಾವಿರಾರು ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಯಿತು. ಆದರೆ ಆ ಸಮಯದಲ್ಲಿ ಲಸಿಕೆ ವಿರೋಧಿ ಚಳವಳಿ ಅಡ್ಡಿಪಡಿಸಿತು. ಆತ್ಮಹತ್ಯೆ, ನೀರಿನಲ್ಲಿ ಮುಳುಗುವುದು ಮತ್ತು ರೈಲು ಅಪಘಾತಗಳಂತಹ ಭೀಕರ ಕಥೆಗಳು ಎಲ್ಲೆಡೆ ಹರಡಿದವು. ಈ ದುರಂತ ಘಟನೆಗಳು ಲಸಿಕೆಗೆ ಹೇಗೆ ಸಂಬಂಧಿಸಿವೆ ಎಂಬುದು ನನಗೆ ಇಂದಿಗೂ ನಿಗೂಢವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕಾ ಅಭಿಯಾನವನ್ನು ವ್ಯಾಪಕಗೊಳಿಸುವ ಅವಕಾಶವನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು.

ಆದಾಗ್ಯೂ, ಈ ಕತ್ತಲೆಯಲ್ಲೂ ಒಂದು ಆಶಾದಾಯಕ ಕಿರಣವಿತ್ತು, ಅವರು ಸಂಶೋಧನೆಯನ್ನು ನಿಲ್ಲಿಸಿರಲಿಲ್ಲ. ಅಪೂರ್ಣ ಡೋಸ್ ಗಳನ್ನು ಪಡೆದಿದ್ದ ನೂರಾರು ಹೆಣ್ಣುಮಕ್ಕಳು ಇದ್ದುದರಿಂದ, ಸಂಶೋಧಕರಿಗೆ ಅವರನ್ನು ದೀರ್ಘಕಾಲದವರೆಗೆ ಗಮನಿಸುವ ಅಮೂಲ್ಯ ಅವಕಾಶ ಸಿಕ್ಕಿತು. ಕೇವಲ ಒಂದು ಡೋಸ್ ಪಡೆದ ಹೆಣ್ಣುಮಕ್ಕಳು ಕೂಡ ಎರಡು ಅಥವಾ ಮೂರು ಡೋಸ್ ಪಡೆದವರಷ್ಟೇ ಆರೋಗ್ಯವಂತರಾಗಿ ಬೆಳೆದರು. ಇದೇ ಫಲಿತಾಂಶವು ಇಂದಿನ ಸರಳೀಕೃತ ಲಸಿಕಾ ವೇಳಾಪಟ್ಟಿಗೆ ಗಟ್ಟಿ ಅಡಿಪಾಯ ಹಾಕಿತು.

ಈ ಕಾರ್ಯದಲ್ಲಿ ಹಲವಾರು ದಿಗ್ಗಜರು ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರಾದ ಐ ಎ ಆರ್ ಸಿ ಡಬ್ಲ್ಯೂ ಎಚ್ ಒ ಸಂಸ್ಥೆಯ ಡಾ. ಪಾರ್ಥ ಬಸು ಅವರು, ಭಾರತದಲ್ಲಿ ಎಚ್ ಪಿ ವಿ ಲಸಿಕೆಯನ್ನು ಜಾರಿಗೆ ತರುವುದರಿಂದ ಭವಿಷ್ಯದಲ್ಲಿ ಸುಮಾರು ಹತ್ತು ಲಕ್ಷ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಬಹುದು ಎಂದು ಒತ್ತಿ ಹೇಳಿದ್ದಾರೆ. 15 ವರ್ಷಗಳಿಗೂ ಹೆಚ್ಚು ಕಾಲ 17,729 ಹೆಣ್ಣುಮಕ್ಕಳನ್ನು ಅನುಸರಿಸಿದ ಭಾರತೀಯ ಸಂಶೋಧನೆಯು ಈ ಲಸಿಕೆ ಅತ್ಯಂತ ಸುರಕ್ಷಿತವೆಂದು ತೋರಿಸಿಕೊಟ್ಟಿದೆ. ಕೇವಲ ಒಂದು ಡೋಸ್ ಕೂಡ ಬಲವಾದ ರಕ್ಷಣೆಯನ್ನು ನೀಡುತ್ತದೆ. ಲಸಿಕೆ ವಿತರಣೆಯನ್ನು ಸರಳಗೊಳಿಸಿ ಹೆಚ್ಚಿನ ಜನರಿಗೆ ತಲುಪಿಸುವುದರಿಂದ, ಭಾರತವು ಭವಿಷ್ಯದ ಕ್ಯಾನ್ಸರ್ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಅವರು ಗಮನಿಸಿದ್ದಾರೆ.

ಸದ್ದಿಲ್ಲದೆ ವರ್ಷಗಳ ಕಾಲ ಸಂಶೋಧನೆ ನಡೆಸಿ ಅದರ ಫಲ ಸಿಗುವಂತೆ ಮಾಡಿದ ದಿವಂಗತ ಡಾ. ಶಂಕರ್ ನಾರಾಯಣ್ ಅವರಿಗೆ ಮತ್ತು ಈ ದೀರ್ಘಕಾಲದ ಅಧ್ಯಯನಗಳನ್ನು ಮುಂದುವರಿಸಿದ ಡಾ. ಬಸು ಅವರಿಗೆ ನನ್ನ ನಮನಗಳು. ಪಾಥ್ (PATH), ಅಂತರರಾಷ್ಟ್ರೀಯ ಸಹಯೋಗಿಗಳು ಮತ್ತು ರಾಷ್ಟ್ರೀಯ

ಸಂಶೋಧಕರ ಸಹಯೋಗದೊಂದಿಗೆ ಈ ಲಸಿಕೆಯ ದಕ್ಷತೆ ಮತ್ತು ಸುರಕ್ಷತೆಯ ಮೇಲಿನ ಅವರ ಕೆಲಸಗಳು ವಿಶ್ವಾಸವನ್ನು ಬಲಪಡಿಸಿವೆ.

ಜಾಗತಿಕ ಅನುಭವವು ಈ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆಸ್ಟ್ರೇಲಿಯಾದಲ್ಲಿ 2007ರಲ್ಲಿ ಶಾಲೆ ಆಧಾರಿತ ಎಚ್ ಪಿ ವಿ ಲಸಿಕಾಕರಣ ಆರಂಭವಾಯಿತು, ನಂತರ ಇದನ್ನು ಬಾಲಕರಿಗೂ ವಿಸ್ತರಿಸಲಾಯಿತು ಮತ್ತು 2023ರಲ್ಲಿ ಒಂದೇ ಡೋಸ್ ವೇಳಾಪಟ್ಟಿಗೆ ಬದಲಾಯಿಸಲಾಯಿತು. ಪ್ರೊಫೆಸರ್ ಡೆಬೊರಾ ಬೇಟ್ಸನ್ ಅವರು ಹೇಳುವಂತೆ, 2021ರಲ್ಲಿ ದಾಖಲೆಗಳು ಆರಂಭವಾದ ನಂತರ ಮೊದಲ ಬಾರಿಗೆ 25 ವರ್ಷದೊಳಗಿನ ಮಹಿಳೆಯರಲ್ಲಿ ಯಾವುದೇ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿಲ್ಲ ಇದು ನಿರಂತರ ಲಸಿಕಾಕರಣದ ಯಶಸ್ಸಾಗಿದೆ.

ಹಾಂಗ್ ಕಾಂಗ್ ಮತ್ತೊಂದು ಉದಾಹರಣೆಯನ್ನು ನೀಡುತ್ತದೆ. ಶಾಲೆ ಆಧಾರಿತ ಲಸಿಕೆ ಮತ್ತು ನವೀನ ತಪಾಸಣಾ ಉಪಕ್ರಮಗಳ ಮೂಲಕ ಅಲ್ಲಿ ವ್ಯಾಪ್ತಿಯನ್ನು ಸುಧಾರಿಸಲಾಗಿದೆ. ಕ್ಯಾಥರಿನಾ ರೀಮರ್ ಮತ್ತು ಡಾ. ಕರೆನ್ ಚಾನ್ ಅವರು ವಿವರಿಸಿದಂತೆ, ಪ್ರಾಥಮಿಕ ಶಾಲಾ ಹುಡುಗಿಯರಿಗೆ ಉಚಿತ ಲಸಿಕೆ ಮತ್ತು ಹೆಚ್ಚಿನ ಸೈನಿಂಗ್ ಸೌಲಭ್ಯಗಳು ಹಾಂಗ್ ಕಾಂಗ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯ ನಿರ್ಮೂಲನಾ ಗುರಿಗಳತ್ತ ಕೊಂಡೊಯ್ದಿವೆ.

ನಾವು ಕೂಡ ಅವರ ಯಶಸ್ಸಿನ ಕಥೆಗಳಿಗೆ ಸೇರ್ಪಡೆಯಾಗೋಣ. ನಮ್ಮ ಹೆಣ್ಣುಮಕ್ಕಳಿಗೆ ಲಸಿಕೆ ಹಾಕಿಸೋಣ ಮತ್ತು ತಾಯಂದಿರಿಗೆ ಪರೀಕ್ಷೆ ಮಾಡಿಸೋಣ. ಯೋಜಿತ ಅಭಿಯಾನ ಮತ್ತು ಸಾರ್ವಜನಿಕ ವಿಶ್ವಾಸದೊಂದಿಗೆ, ಸಾರ್ಜನಿಕ ಆರೋಗ್ಯಕ್ಕೆ ದೊಡ್ಡ ಭೀತಿಯಾಗಿರುವ ಗರ್ಭಕಂಠದ ಕ್ಯಾನ್ಸರ್ ಅನ್ನು ನಿರ್ಮೂಲನೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ ಕರೆಗೆ ನಾವು ಸ್ಪಂದಿಸೋಣ.

ಭಾರತದ ರಾಷ್ಟ್ರೀಯ ಲಸಿಕಾ ವ್ಯವಸ್ಥೆಯಲ್ಲಿ ಹೊಸ ಲಸಿಕೆಗಳನ್ನು ಪರಿಚಯಿಸುವುದು ವೈಜ್ಞಾನಿಕ ಪರಿಶೀಲನೆ ಮತ್ತು ಪೂರೈಕೆಯ ಖಾತರಿಯ ಕಾರಣದಿಂದಾಗಿ ಸಮಯ ತೆಗೆದುಕೊಳ್ಳುತ್ತದೆ. ಆದಾಗ್ಯೂ, ಅಡಿಪಾಯಗಳನ್ನು ಈಗ ಚೆನ್ನಾಗಿ ಯೋಚಿಸಿ ರೂಪಿಸಲಾಗಿದೆ, ಒಮ್ಮೆ ಲಸಿಕೆ ವಿತರಣೆ ಆರಂಭವಾದರೆ ಅದು ವಿಫಲವಾಗುವುದಿಲ್ಲ ಎಂಬ ಬಲವಾದ ಭರವಸೆ ಇದೆ.

ಕ್ಯಾನ್ಸರ್ ಆರಂಭವಾಗುವ ಮೊದಲೇ ಅದನ್ನು ತಡೆಯುವುದು ಸರ್ಕಾರದ ಅಸಾಮಾನ್ಯ ದೂರದೃಷ್ಟಿಯಾಗಿದೆ. ಭಾರತ ಸರ್ಕಾರದ ಈ ನೈತಿಕ ಸ್ಪಷ್ಟತೆಯನ್ನು ಅಭಿನಂದಿಸಲೇಬೇಕು. ನಾವು ಮುಂದೆ ಸಾಗುತ್ತಿರುವಾಗ, ಲಸಿಕಾಕರಣವು ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಪೂರಕವಾಗಿರಲಿ. ಪೋಲಿಯೊ ಮತ್ತು ಸಿಡುಬು ನಿರ್ಮೂಲನೆಯಲ್ಲಿ ಭಾರತ ಹೇಗೆ ಜಗತ್ತಿಗೇ ಮಾದರಿಯಾಯಿತೋ, ಹಾಗೆಯೇ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ನಾವು ಯಶಸ್ಸಿನ ಕಥೆಯಾಗೋಣ. ಭಾರತವು 'ತಡೆಗಟ್ಟುವಿಕೆ'ಯ ಹಾದಿಯನ್ನು ಆಯ್ದುಕೊಂಡ ಮಹತ್ವದ ಕ್ಷಣವನ್ನು ಭವಿಷ್ಯದ ಪೀಳಿಗೆಗಳು ಹೆಮ್ಮೆಯಿಂದ ನೆನೆಯುವಂತಾಗಲಿ.

ಲೇಖಕರು – ಅಧ್ಯಕ್ಷರು, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ದೆಹಲಿ ಶಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.