ಸಣ್ಣ ವಯಸ್ಸಿನಲ್ಲೇ ನೆರಿಗೆ ಸಮಸ್ಯೆಯೇ?

7

ಸಣ್ಣ ವಯಸ್ಸಿನಲ್ಲೇ ನೆರಿಗೆ ಸಮಸ್ಯೆಯೇ?

Published:
Updated:

ಹುಟ್ಟಿದ ಮನುಷ್ಯನಿಗೆ ವಯಸ್ಸಾಗಲೇಬೇಕು. ಮನುಷ್ಯ ಒಂದೊಂದು ಹಂತಕ್ಕೆ ಏರಿದಂತೆ ಅವನಿಗೆ ವಯಸ್ಸಾಗಿದೆ ಎಂಬುದನ್ನು ಅವನ ಮುಖದಲ್ಲಿ ಬೀಳುವ ನೆರಿಗೆಗಳೇ ತಿಳಿಸುತ್ತವೆ. ಆದರೆ ಇತ್ತೀಚೆಗೆ ಸಣ್ಣ ವಯಸ್ಸಿನಲ್ಲೇ ಮುಖದಲ್ಲಿ ನೆರಿಗೆಗಳು ಬೀಳಲಾರಂಭಿಸುತ್ತವೆ. ಮುಖದ ಚರ್ಮ ಜೋತು ಬೀಳುತ್ತದೆ. ತ್ವಚೆ ಒಣಗಿದಂತಾಗಿ ಕಾಂತಿಹೀನವಾಗಿರುತ್ತದೆ. ಈ ರೀತಿ ಸಣ್ಣ ಪ್ರಾಯಕ್ಕೆ ಈ ರೀತಿ ಚರ್ಮ ಕಳಾಹೀನವಾಗುವುದು ಒಳ್ಳೆಯ ಲಕ್ಷಣವಲ್ಲ. ಅದಕ್ಕೆ ಈಗಿನ ಕೆಲವೊಂದು ಲೈಫ್‌ ಸ್ಟೈಲ್‌ ಕಾರಣ. ಅದಕಲ್ಕೆ ಕಾರಣ ಏನೆಂದು ಇಲ್ಲಿ ನೋಡೋಣ

ಸೂರ್ಯನ ಬೆಳಕಿನಲ್ಲಿ ಯಾವುದೇ ರಕ್ಷಣೆಯಿಲ್ಲದೇ ಅತಿ ಹೆಚ್ಚು ಕಾಲ ಕೆಲಸ ಮಾಡುವುದು: ದಿನಕ್ಕೆ ಕೆಲ ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ನಡೆದಾಡಿದರೆ ದೇಹಕ್ಕೆ ವಿಟಮಿನ್‌ ಡಿ ಸಿಗುತ್ತದೆ. ಆದರೆ ಅತಿ ಹೆಚ್ಚು ಕಾಲ ಬಿಸಿಲಿಗೆ ನಿಲ್ಲುವುದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯುವಿ ಕಿರಣಗಳು ಚರ್ಮದ ಜೀವಕಣಗಳನ್ನು ದುರ್ಬಲಗೊಳಿಸುತ್ತದೆ. ವಯಸ್ಸಿಗೇ ಮೊದಲೇ ನೆರಿಗೆಗಳು ಬೀಳಲಾರಂಭಿಸುತ್ತವೆ. ಹಾಗಾಗಿ ಯಾವಾಗಲೂ ಬಿಸಿಲಿಗೆ ಹೋಗುವಾಗ ಉತ್ತಮ ಗುಣಮಟ್ಟದ ಸನ್‌ಸ್ಕ್ರೀನ್‌ ಬಳಸಿ. 

ಅತಿ ಹೆಚ್ಚು ಜಂಕ್‌ಫುಡ್‌ ಸೇವನೆ: ನಿಯಮಿತವಾಗಿ ಕರಿದ, ಸಂಸ್ಕರಿಸಿದ ಹಾಗೂ ಸಿಹಿ ಪದಾರ್ಥಗಳು ಸೇವಿಸುವುದು ದೇಹದ ತೂಕ ಹೆಚ್ಚಳ ಹಾಗೂ ಕೆಲ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಇದೂ ಸಹ ಚರ್ಮದ ಆರೋಗ್ಯದ ಮೇಲೆ, ಮುಖದಲ್ಲಿ ನೆರಿಗೆ ಬೀಳುವಂತೆ ಮಾಡಬಹುದು. ಅತಿಯಾದ ಜಂಕ್‌ಫುಡ್‌ ಸೇವನೆ ಚರ್ಮದಲ್ಲಿ ಕಲೆ ಮೂಡಿಸಿ, ವಯಸ್ಸಾದಂತೆ ಕಾಣಿಸುತ್ತದೆ. ಹಾಗಾಗಿ ಯಾವಾಗಲೂ ಆರೋಗ್ಯಯುತ ಆಹಾರ ಸೇವಿಸಬೇಕು. 

ಬಿಸಿ ಬಿಸಿ ನೀರು ಸ್ನಾನ: ಕೆಲವರಿಗೆ ಬಿಸಿ ನೀರು ಸ್ನಾನ ಮಾಡುವುದರಿಂದ ಮನಸು, ದೇಹ ಎರಡೂ ಚೈತನ್ಯದಿಂದ ಕೂಡಿರುತ್ತದೆ. ಆದರೆ ನಿಯಮಿತವಾಗಿ ಬಿಸಿನೀರು ಸ್ನಾನ ಚರ್ಮವನ್ನು ಒಣತತ್ವಚೆಯನ್ನಾಗಿ ಮಾಡುತ್ತದೆ. ಚರ್ಮದಲ್ಲಿ ತುರಿಕೆಯನ್ನೂ ತರಬಹುದು. ಬಿಸಿ ನೀರು ಚರ್ಮದಲ್ಲಿ ಅಗತ್ಯವಾಗಿರುವ ಎಣ್ಣೆಯಂಶವನ್ನು ಹೊರತೆಗೆಯುತ್ತದೆ. ಇದು ಚರ್ಮವನ್ನು ಒಡೆದಂತೆ ಮಾಡುತ್ತದೆ. ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಒಳಿತು. 

ಅತಿಯಾದ ಡಯೆಟ್‌: ದೇಹದಲ್ಲಿ ಅನಗತ್ಯವಾಗಿ ಕೊಬ್ಬನ್ನು ಕರಗಿಸಿಕೊಳ್ಳುವುದು ಉತ್ತಮ. ಆದರೆ ದೇಹದಲ್ಲಿನ ಕೆಲವು ಕೊಬ್ಬು ಚರ್ಮವನ್ನು ದುಂಡುದುಂಡು ಹಾಗೂ ಹೊಳಪಾಗಿರಿಸುತ್ತದೆ. ಆದರೆ ಅತಿಯಾದ ಡಯೆಟ್‌ನಿಂದ ಈ ಕೊಬ್ಬು ದೇಹಕ್ಕೆ ಸಿಗದೇ ಮುಖ ಕಳೆಹೀನವಾಗಬಹುದು. ಇದು ಮುಖದಲ್ಲಿ ಸ್ಟ್ರೆಚ್‌ ಮಾರ್ಕ್ಸ್‌ ಅನ್ನು ತರಬಹುದು. 

ದಿಂಬಿಗೆ ಮುಖ ಮಾಡಿ ಮಲಗುವುದು: ತಲೆದಿಂಬಿಗೆ ಮುಖ ಮಾಡಿ ಮಲಗುವುದು ಮುಖದ ಚರ್ಮವನ್ನು ಹಾಳು ಮಾಡುತ್ತದೆ. ಇದು ಮುಖಕ್ಕೆ ರಕ್ತದ ಹರಿಯುವಿಕೆಯನ್ನು ಕಡಿಮೆ ಮಾಡಿ, ಕಳಾಹೀನವಾಗಿಸುತ್ತದೆ

ನಿರ್ಜಲೀಕರಣ: ಅತಿ ಹೆಚ್ಚು ನೀರು ಕುಡಿಯುವುದರಿಂದ ಚರ್ಮದ ತೇವಾಂಶ ಹಾಗೂ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ದಿನದಲ್ಲಿ 8 ಗ್ಲಾಸ್‌ ನೀರನ್ನಾದರೂ ಕುಡಿಯಬೇಕು. 

ಕಡಿಮೆ ನಿದ್ದೆ: ದಿನಕ್ಕೆ ಎಂಟು ಗಂಟೆ ಕಾಲ ನಿದ್ದೆ ಮಾಡುವುದರಿಂದ ಚರ್ಮವು ನಿರ್ಜೀವ ಜೀವಕಣಗಳನ್ನು ಹೊರ ಹಾಕುತ್ತದೆ. ಹಾಗೇ ಉತ್ತಮ ನಿದ್ದೆ ಚರ್ಮದ ತೇವಾಂಶವನ್ನು ಕಾಪಾಡುತ್ತದೆ. 

ವ್ಯಾಯಾಮ ಮಾಡದೇ ಇರುವುದು: ಪ್ರತಿದಿನದ ವ್ಯಾಯಾಮಚರ್ಮದ ಕಣಗಳನ್ನು ಪೋಷಣೆ ಮಾಡುತ್ತದೆ. ಹಾಗೇ ವ್ಯಾಯಾಮ ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಇದು ಕಲೆ ಹಾಗೂ ನೆರಿಗೆಯನ್ನು ಕಡಿಮೆ ಮಾಡುತ್ತದೆ

ಅತಿ ಮೇಕಪ್‌: ಅತಿಯಾದ ಮೇಕಪ್‌ ಮುಖದ ಚರ್ಮದ ಜೀವಕಣಗಳನ್ನು ದುರ್ಬಲ ಮಾಡುತ್ತದೆ. ಮುಖದ ಹೊಳಪನ್ನೂ ಕಡಿಮೆ ಮಾಡುತ್ತದೆ. ಇದಕ್ಕೆ ಸೌಂದರ್ಯ ಪ್ರಸಾದನಗಳಲ್ಲಿ ಬಳಸಿರುವ ರಾಸಾಯನಿಕಗಳು ಕಾರಣ. ದಿನಾ ಮೇಕಪ್‌ ಮಾಡುವುದರಿಂದ ಮುಖದ ಚರ್ಮ ಕಳೆಗುಂದಿ ವಯಸ್ಸಾದಂತೆ ಕಾಣಿಸುತ್ತದೆ

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !