ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಅನುಮಾನಕ್ಕೆ ಎಡೆಯಿರದಿರಲಿ

Last Updated 21 ಜುಲೈ 2020, 19:30 IST
ಅಕ್ಷರ ಗಾತ್ರ

ಲಾಕ್‌ಡೌನ್‌ ಅಭದ್ರತೆ ಮೂಡಿಸುವಂತೆ ಮಾಡಿದೆ. ಸಂಗಾತಿಯ ಅನುಪಸ್ಥಿತಿ ಸಂಬಂಧದಲ್ಲಿ ಅಭದ್ರತೆ ಕಾಡುವಂತೆ ಮಾಡಬಹುದು. ಆದರೆ, ಹೆದರಬೇಕಿಲ್ಲ. ದೂರವಿದ್ದರೂ ಸಂಗಾತಿಯನ್ನು ಒಲಿಸಿಕೊಳ್ಳಬಹುದು.

ಈ ಲಾಕ್‌ಡೌನ್ ಅವಧಿಯು ಅನೇಕರಿಗೆ ಅನೇಕ ರೀತಿಯ ಸಮಸ್ಯೆಗಳನ್ನು ತಂದೊಡ್ಡಿದೆ. ಕೆಲವರಿಗೆ ಕೆಲಸ ಕಳೆದುಕೊಳ್ಳುವ ಭಯ, ಇನ್ನೂ ಕೆಲವರಿಗೆ ಕಾಡುವ ಆರೋಗ್ಯ ಸಮಸ್ಯೆ, ಮಕ್ಕಳಿಗೆ ಶಾಲೆಗೆ ಹೋಗಲು ಆಗುತ್ತಿಲ್ಲ ಎಂಬ ಬೇಸರ.. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿ. ಈ ನಡುವೆ ಪ್ರೇಮಿಗಳ ನಡುವಿನ ಸಂಬಂಧದಲ್ಲೂ ಈ ಲಾಕ್‌ಡೌನ್‌ ಅಭದ್ರತೆ ಮೂಡಿಸುವಂತೆ ಮಾಡಿದೆ. ಲಾಕ್‌ಡೌನ್‌ ಆರಂಭವಾದಾಗಿನಿಂದ ಒಬ್ಬರೊನ್ನಬ್ಬರು ಅಗಲಿ ದೂರವಾಗಿದ್ದಾರೆ. ಅಲ್ಲದೇ ಕಳೆದ ಕೆಲ ತಿಂಗಳಿನಿಂದ ಭೇಟಿಯಾಗಲೂ ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕೆ ಸಂಗಾತಿ ಏನು ಮಾಡುತ್ತಿದ್ದಾರೋ, ಈ ಸಮಯದಲ್ಲಿ ಬೇರೆಯವರನ್ನು ಇಷ್ಟಪಟ್ಟರೆ ಎಂಬೆಲ್ಲಾ ಸಂದೇಹ ನಿಮ್ಮನ್ನು ಕಾಡಬಹುದು. ಸಂಗಾತಿಯ ಅನುಪಸ್ಥಿತಿ ಸಂಬಂಧದಲ್ಲಿ ಅಭದ್ರತೆ ಕಾಡುವಂತೆ ಮಾಡಬಹುದು. ಆದರೆ ಹೆದರಬೇಕಿಲ್ಲ. ದೂರವಿದ್ದರೂ ಸಂಗಾತಿಯನ್ನು ಒಲಿಸಿಕೊಳ್ಳಬಹುದು. ಆ ಮೂಲಕ ಮತ್ತೆ ಸಂಬಂಧದ ಕೊಂಡಿಯನ್ನು ಭದ್ರಪಡಿಸಿಕೊಳ್ಳಬಹುದು. ಸಂಬಂಧವನ್ನು ಹಾಳು ಮಾಡುವ ಅನುಮಾನವನ್ನು ದೂರ ಮಾಡಲು ಇಲ್ಲಿವೆ ಕೆಲವು ಉಪಾಯ.

ನಿಮ್ಮ ಆತಂಕವನ್ನು ಅವರ ಮುಂದೆ ಬಿಚ್ಚಿಡಿ: ಲಾಕ್‌ಡೌನ್‌, ಐಸೋಲೇಷನ್‌ ಕಾರಣದಿಂದ ಕಳೆದ ಕೆಲ ತಿಂಗಳಿನಿಂದ ನೀವು ಸಂಗಾತಿಯನ್ನು ಭೇಟಿ ಮಾಡಲು ಸಾಧ್ಯವಾಗದೇ ಇರಬಹುದು. ಆ ಕಾರಣಕ್ಕೆ ಸಂಗಾತಿ ನಿಮ್ಮಿಂದ ದೂರವಾಗಬಹುದು ಎಂಬ ಭಯ ಪದೇ ಪದೇ ಕಾಡಬಹುದು. ಆ ಕಾರಣಕ್ಕೆ ನಿಮ್ಮ ಮನದ ಆತಂಕವನ್ನು ಸಂಗಾತಿ ಮುಂದೆ ಯಾವುದೇ ಮುಚ್ಚು ಮರೆಯಿಲ್ಲದೆ ಹೇಳಿಕೊಳ್ಳಿ. ಅನೇಕ ಜೋಡಿಗಳು ಇಂತಹ ವಿಷಯದಲ್ಲಿ ತೆರೆದ ಮನಸ್ಸಿನಿಂದ ಮಾತನಾಡಲು ಹಿಂಜರಿಯುತ್ತಾರೆ. ಆ ಕಾರಣಕ್ಕೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಯಾವುದೇ ವಿಷಯವನ್ನಾಗಲಿ ಮನಸ್ಸು ಬಿಚ್ಚಿ ಮಾತನಾಡುವುದರಿಂದ ಪರಿಸ್ಥಿತಿಯನ್ನು ತಿಳಿಗೊಳಿಸಬಹುದು. ಅಲ್ಲದೇ ಮನಸ್ಸಿನ ಭಯವನ್ನು ದೂರ ಮಾಡಿಕೊಳ್ಳಬಹುದು.

ನಂಬಿಕೆ ಹೆಚ್ಚಿಸಿಕೊಳ್ಳಿ: ಈ ಸಮಯದಲ್ಲಿ ಇಬ್ಬರು ಒಬ್ಬರನ್ನೊಬ್ಬರು ನೇರವಾಗಿ ಭೇಟಿ ಮಾಡುವುದು ಸಾಧ್ಯವಾಗದ ಮಾತು. ಆ ಕಾರಣಕ್ಕೆ ನಿಮ್ಮ ನಡುವಿನ ಭಾವನಾತ್ಮಕ ಸಂಪರ್ಕವನ್ನು ಬಲಪಡಿಸಿಕೊಳ್ಳಬೇಕು. ಇಬ್ಬರ ನಡುವಿನ ಸಂಬಂಧದಲ್ಲಿ ನಂಬಿಕೆ ದೃಢವಾಗಬೇಕು. ದಿನದಲ್ಲಿ ಕೆಲವು ಗಂಟೆಗಳ ಕಾಲ ವರ್ಚುವಲ್‌ ವಿಧಾನದಿಂದ ಸಂಧಿಸಲು ಪ್ರಯತ್ನಿಸಿ. ವಿಡಿಯೊ ಕರೆ ಮಾಡಿ ಮಾತನಾಡುವುದು ಮುಂತಾದುವನ್ನು ಮಾಡಿ. ಇದರಿಂದ ನಂಬಿಕೆ ಹೆಚ್ಚುತ್ತದೆ.

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ: ಮನಸ್ಸಿನಲ್ಲಿ ಮೂಡುವ ಅನುಮಾನಗಳಿಗೆ ಕಡಿವಾಣ ಹಾಕಿಕೊಳ್ಳಿ, ನಿಮ್ಮ ಸಂಗಾತಿ ನಡುರಾತ್ರಿವರೆಗೆ ಅನ್‌ಲೈನ್‌ನಲ್ಲಿ ಇದ್ದರೆ ಅನುಮಾನದಿಂದ ನೋಡುವುದನ್ನು ಬಿಡಿ. ಅನ್‌ಲೈನ್‌ ಇದ್ದರು ಎಂದ ಮಾತ್ರಕ್ಕೆ ಹೊಸ ಸಂಗಾತಿಯನ್ನು ಹುಡುಕಿಕೊಂಡಿದ್ದಾರೆ ಎಂದರ್ಥವಲ್ಲ. ಸಂಗಾತಿ ನಿಜವಾಗಿಯೂ ನಿಮ್ಮ ಸಂಬಂಧಕ್ಕೆ ನಿಷ್ಠರಾಗಿದ್ದರೆ ಅವರು ಖಂಡಿತ ಸಂಬಂಧದ ನಡುವೆ ಬಿರುಕು ಮೂಡುವುದನ್ನು ಸಹಿಸುದಿಲ್ಲ. ಆ ಕಾರಣಕ್ಕೆ ಸುಮ್ಮಸುಮ್ಮನೆ ಇಲ್ಲಸಲ್ಲದನ್ನೆಲ್ಲಾ ಯೋಚಿಸಿ ಜೀವನ ಹಾಳು ಮಾಡಿಕೊಳ್ಳಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT