‘ದೇಹ’ ಮತ್ತು ‘ಮನಸ್ಸು’ ಎನ್ನುವುದು ಎರಡು ವಿಭಿನ್ನ ‘ಪದಾರ್ಥ’ಗಳು ಎಂದು ನೋಡುವ ಬದಲಾಗಿ ‘ದೇಹ-ಮನಸ್ಸು ’ ಎರಡೂ ಒಂದೇ ಸಂಕೀರ್ಣ ವ್ಯವಸ್ಥೆ ಎಂದು ನೋಡುವುದು ಸೂಕ್ತ. ಹಾಗಾದರೆ ಆರೋಗ್ಯ ಎನ್ನುವುದು ದೈಹಿಕ ತೊಂದರೆಗಳು ಇಲ್ಲದಿರುವುದಷ್ಟೇ ಅಲ್ಲ ಅಥವಾ ಆರೋಗ್ಯ ಪರೀಕ್ಷೆಗಳಲ್ಲಿ ‘ನಾರ್ಮಲ್’ ಆಗಿರುವ ಅಂಕಿ-ಸಂಖ್ಯೆಗಳನ್ನು ಪಡೆಯುವುದಷ್ಟೇ ಅಲ್ಲವೆಂದಾಯಿತಲ್ಲವೇ? ಸದ್ಯಕ್ಕೆ ದೈಹಿಕವಾಗಿ ಸದೃಢವಾಗಿದ್ದರೂ ಯಾವ ಅರ್ಥಪೂರ್ಣ ಕೆಲಸವನ್ನೂ ಮಾಡದೇ, ಜೀವನದ ಸೌಂದರ್ಯವನ್ನು ಕಾಣದೇ ಒಂದು ಬಗೆಯ ವಿಕೃತಿಯಲ್ಲೇ ಮಗ್ನನಾಗಿ ತನಗೂ ಇತರರಿಗೂ ಸಮಸ್ಯೆಯಾಗಿ ಬಾಳುವ ವ್ಯಕ್ತಿ ನಿಜಕ್ಕೂ ಆರೋಗ್ಯವಾಗಿ ನಿರಂತರ ಬಾಳುವುದು ಸಾಧ್ಯವೇ?

ಮನಸ್ಸು ಎಷ್ಟು ಪ್ರಶಾಂತವಾಗಿದೆ ಎನ್ನುವುದರ ಮೇಲೇ ದೇಹದ ನಿಜವಾದ ಆರೋಗ್ಯ ನಿರ್ಧರಿತವಾಗುತ್ತದೆ. ಮನಸ್ಸು ಪ್ರಸನ್ನವಾಗಿದ್ದಾಗ ದೇಹದ ಕಾರ್ಯಚಟುವಟಿಕೆಗಳು ಸರಾಗವಾಗಿ, ನಡೆಯುತ್ತಿರುತ್ತವೆ. ಆತಂಕ, ಚಿಂತೆ, ದುಃಖಗಳಿದ್ದಾಗ ಆಹಾರ ಸೇವನೆಯೂ ಪಚನಕ್ರಿಯೆಯೂ ಉಸಿರಾಟವೂ ನಡಿಗೆಯೂ ಎಷ್ಟು ಅಸ್ತವ್ಯಸ್ತವಾಗಿರುತ್ತದೆ ಎನ್ನುವುದನ್ನು ಎಲ್ಲರೂ ಅನುಭವಿಸಿಯೇ ಇರುತ್ತೇವೆ. ಮಾನಸಿಕ ಆರೋಗ್ಯವೆಂದರೆ ಮನಸ್ಸು ಪ್ರಶಾಂತವಾಗಿ, ಪ್ರಸನ್ನವಾಗಿ ಇರುವುದು ಎಂದರ್ಥವೇ? ಎಂದು ಕೇಳುವ ಮುಂಚೆ ‘ಮನಸ್ಸಿನ ಪ್ರಸನ್ನತೆ’ ಎನ್ನುವುದನ್ನು ಹೇಗೆ ಅರ್ಥೈಸುತ್ತೇವೆ ಎಂದು ಕೇಳುವುದು ಉತ್ತಮ. ಸದಾ ಸಂತೋಷವಾಗಿ, ಖುಷಿಖುಷಿಯಾಗಿ ನಗುತ್ತಾ ಇರುವುದು ಯಾರಿಗೂ ಸಾಧ್ಯವಿಲ್ಲ, ಹಾಗೆಂದು ಸಣ್ಣಪುಟ್ಟ ಕಷ್ಟನಷ್ಟಗಳಿಗೂ ಮನಸ್ಸು ತೀರ ಪ್ರಕ್ಷುಬ್ಧಗೊಂಡು ಬದುಕಿನ ಎಲ್ಲವನ್ನೂ ಅಲ್ಲೋಲಕಲ್ಲೋಲವಾಗುವಷ್ಟು ಗಾಸಿಗೊಳ್ಳುವುದೂ ಸಹಜ ನಡವಳಿಕೆಯಲ್ಲ; ಹಾಗೆಯೇ ದಿನನಿತ್ಯದ ಚಿಂತೆ, ಬೇಸರ, ಒಂಟಿತನಗಳಿದ್ದ ಮಾತ್ರಕ್ಕೆ ಮನಸ್ಸಿನ ಪ್ರಸನ್ನತೆ ನಾಶವಾಗಿದೆಯೆಂದೇನೂ ಅಲ್ಲ. ಬಿಳಿಪರದೆಯೊಂದರ ಮೇಲೆ ಬಣ್ಣಬಣ್ಣದ ಚಿತ್ರಗಳು ಬರುತ್ತವೆ, ಕುಣಿಯುತ್ತವೆ, ಹೋಗುತ್ತವೆ; ಆದರೆ ಪರದೆ ಮಾತ್ರ ತಾನಿದ್ದಂತೆಯೇ ಇರುತ್ತದೆಯಲ್ಲವೇ? ಹಾಗೆ ಬಂದುಹೋಗುವ ಏರಿಳಿತಗಳ ಹಿನ್ನೆಲೆಯಾಗಿದ್ದಾಗ ಮನಸ್ಸು ಪ್ರಸನ್ನವಾಗಿದೆಯೆಂದರ್ಥ, ಬಂದು ಹೋಗುವ ಏರಿಳಿತಗಳ ಜೊತೆಗೇ ತಾನೂ ಪೈಪೋಟಿಗಿಳಿದಂತೆ ವರ್ತಿಸುವ ಮನಸ್ಸು ತನ್ನ ನೈಜಸ್ಥಿತಿಯಿಂದ ಪಲ್ಲಟಗೊಂಡಿದೆಯೆಂದರ್ಥ.

ಮನಸ್ಸಿಗೆ ‘ಸ್ಥಿತಿಸ್ಥಾಪಕತ್ವ’ದ (resilience) ಗುಣವಿದೆ, ಅಂದರೆ ಕಷ್ಟ, ನೋವಿನ ನಂತರವೂ ಚೇತರಿಸಿಕೊಂಡು ಮತ್ತೆ ಮೊದಲ ಪ್ರಸನ್ನ ಸ್ಥಿತಿಗೆ ತಲುಪುವ ಶಕ್ತಿಯಿದೆ ಮನಸ್ಸಿಗೆ. ಮನಸ್ಸು ಪ್ರಸನ್ನವಾಗಿರುವುದೆಂದರೆ ನೋವು ಚಿಂತೆಗಳೊಂದೂ ಇರದ ಸ್ಥಿತಿಯಲ್ಲ, ಬದಲಾಗಿ ಒದಗುವ ಎಲ್ಲ ಸಂಕಟಗಳನ್ನೂ ಸಂಸ್ಕರಿಸಿ, ಹದಗೊಳಿಸಿ ಅಂತರಂಗ ವಿಕಾಸಕ್ಕೆ ಬೇಕಾದ ಸತ್ವವನ್ನು ಹೀರಿದ ನಂತರ ಇನ್ನೂ ಸಂಕಟದ ಹಿಡಿತಲ್ಲಿರದೆ ನೋವು ಬೇಸರಗಳನ್ನು ‘ಬಿಟ್ಟುಕೊಟ್ಟುಬಿಡುವ’ (let go) ಗುಣ ಎಂದರ್ಥ.

ನೋವು, ನಲಿವು, ಸಂತೋಷ, ದುಃಖ, ಬೇಸರ, ಕೋಪ, ಭಯ ಎಲ್ಲವೂ ನೀರಿನಂತೆ ಚಲನಶೀಲವಾಗಿರಬೇಕು; ಅವು ಮನಸ್ಸನ್ನು ಕೆಲಕಾಲ ಆವರಿಸಿಕೊಂಡು, ದೇಹದಲ್ಲಿ ಸಂವೇದನೆ ಗಳನ್ನುಂಟುಮಾಡಿ ನಾವದನ್ನು ಸಂಪೂರ್ಣವಾಗಿ ಅನುಭವಿಸಿದ ನಂತರ ನಮ್ಮ ಮೇಲಿನ ತನ್ನ ಹಿಡಿತವನ್ನು ಸಡಿಲಗೊಳಿಸಬೇಕು; ಹಾಗಿಲ್ಲದೆ ಭಾವನೆಗಳು, ಚಿಂತೆಗಳು ಹರಿದುಹೋಗದೇ ತಾನೇ ಒಂದು ಕತ್ತಲ ಆವರಣವಾಗಿ ಆ ಕತ್ತಲಿನ ಗೂಡಿನೊಳಗೆ ವ್ಯಕ್ತಿಯನ್ನು ಬಂಧಿಸಿಡುವುದಾದರೆ ಮನಸ್ಸು ತನ್ನ ಕಾರ್ಯಕ್ಷಮತೆಯನ್ನು ಕುಗ್ಗಿಸಿಕೊಂಡು ತನ್ನ ಸಹಜ ಪ್ರಸನ್ನತೆಯನ್ನು ಕಳೆದುಕೊಂಡಿರುತ್ತದೆ .

ಪ್ರಶಾಂತತೆಯನ್ನು ಕಳೆದುಕೊಂಡಿರುವ ಮನಸ್ಸು ಸ್ನೇಹಪರ ಸ್ಪಂದನೆಯನ್ನು ಮರೆತು ಪ್ರತೀಕಾರದ ಧಾಟಿಯಲ್ಲಿನ ಪ್ರತಿಕ್ರಿಯೆ ನೀಡುವುದಕ್ಕೆ ಒಗ್ಗಿಕೊಂಡುಬಿಟ್ಟಿರುತ್ತದೆ. ತಾನೇನಾದರೂ ಹೊಸದಾಗಿ ಸೃಜಿಸಬಲ್ಲೆ, ರಚಿಸಬಲ್ಲೆ ಎನ್ನುವ ಕ್ರಿಯಾತ್ಮಕ ನೆಲೆಯಿಂದ ಪದಚ್ಯುತಗೊಂಡ ಮನಸ್ಸು ಸದಾ ಎಲ್ಲವನ್ನೂ ತನ್ನ ಅಸ್ತಿತ್ವಕ್ಕೇ ಮಾರಕ ಎಂಬಂತೆ ಹೋರಾಡತೊಡಗುತ್ತದೆ. ಪ್ರಕ್ಷುಬ್ಧ ಮನಸ್ಸು ತನ್ನನ್ನು ಆವರಿಸಿಕೊಂಡಿರುವ ಚಿಂತೆಯ ಪರದೆಯ ಮೂಲಕವೇ ಜೀವನವನ್ನು ಕಾಣುತ್ತಾ, ಕಂಡದ್ದೆಲ್ಲವನ್ನೂ ಅಪಾರ್ಥಮಾಡಿಕೊಳ್ಳುತ್ತಾ, ತನ್ನ ಪೂರ್ವಗ್ರಹಗಳನ್ನೇ ಮತ್ತೂ ಊರ್ಜಿತ ಗೊಳಿಸುವಂತಹ ಅರ್ಥಗಳನ್ನೇ ಪಡೆಯುತ್ತಾ ಹೋಗುತ್ತದೆ. ಉದಾಹರಣೆಗೆ , ‘ತಾನು ಆತ್ಮೀಯತೆಗೆ ಅರ್ಹನಲ್ಲ’ ಎಂಬ ನಂಬಿಕೆಗೇ ಜೋತುಬಿದ್ದಿರುವ ಮನಸ್ಸು ಎಲ್ಲೆಲ್ಲೂ ಎಲ್ಲರೂ ತನ್ನನ್ನು ಉಪೇಕ್ಷಿಸುತ್ತಿರುವ ಸನ್ನಿವೇಶವನ್ನೇ ಎದುರುಗೊಳ್ಳುತ್ತಿರುತ್ತದೆ, ಏಕೆಂದರೆ ತನ್ನ ನಂಬಿಕೆಯನ್ನು ಪ್ರಶ್ನಿಸಿ ಆತ್ಮೀಯತೆ ಸಾಧಿಸಿಕೊಳ್ಳುವ ಸಾಧ್ಯತೆಗಳನ್ನು ಅನೇಕ ಕಾರಣಗಳಿಗಾಗಿ ಮನಸ್ಸು ನಿರಾಕರಿಸುತ್ತಿರುತ್ತದೆ.

ಹೀಗೆ ಮನಸ್ಸು ತಾನೇ ಹೋಗಿಬಿದ್ದಿರುವ ಕೆಸರಿನಕೂಪದಿಂದ ಮೇಲೇಳಲು ಸಾಧ್ಯವಾಗದೇ ಅದೇ ಕೆಸರಿನಲ್ಲಿ ಉಸಿರುಗಟ್ಟಿ ಸುವಷ್ಟು ಮುಳುಗುತ್ತಲೇ ಇರುತ್ತದೆ. ಮನಸ್ಸು ತನ್ನ ಸಹಜ ಕಾರ್ಯಶೀಲತೆಯಿಂದ ವಿಮುಖವಾಗಿ ಪತನಗೊಂಡು ಮತ್ತೆ ಮೇಲೇಳಲಾರದಂತೆ ಅದೇ ಪಾತಾಳದಿಂದ ಜೀವನವನ್ನು ಅರೆಬರೆಯಾಗಿ ಕಾಣುವುದನ್ನೇ ಮನಸ್ಸಿನ ‘ಅಸಮರ್ಪಕ ಕಾರ್ಯನಿರ್ವಹಣೆ’(dysfunctionality) (ಅಥವಾ ನರಮಂಡಲದ ಪರಿಭಾಷೆಯಲ್ಲಿ ‘unregulated nervous system ) ಎನ್ನಬಹುದು. ಇಂತಹ ಸ್ಥಿತಿಯನ್ನು ಮನಸ್ಸು ಪ್ರಸನ್ನವಾಗಿಲ್ಲದಿರುವ ಸ್ಥಿತಿ, ತನ್ನ ಸಹಜ ಲವಲವಿಕೆ, ಚಲನಶೀಲತೆ, ಸೃಜನಶೀಲತೆ, ಸಂದರ್ಭಕ್ಕೆ ಅನುಗುಣವಾಗಿ ತನ್ನ ನಂಬಿಕೆಗಳನ್ನು ಮಾರ್ಪಾಡುಗೊಳಿಸಿಕೊಳ್ಳಬಲ್ಲ ಸಾಮರ್ಥ್ಯಗಳನ್ನು ಕಳೆದುಕೊಂಡಿರುವ ಸ್ಥಿತಿ ಎನ್ನಬಹುದು. ಹೀಗೆ ಪ್ರಸನ್ನವಾಗಿಲ್ಲದ ಮನಸ್ಸು ದೈಹಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಪ್ರಕ್ಷುಬ್ಧಗೊಂಡು ತನ್ನ ಸ್ಥಿತಿಸ್ಥಾಪಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿರುವ ಮನಸ್ಸಿಗೆ ರುಚಿಸಬಹುದಾದ ಕೆಲಮಾತುಗಳು ಇಲ್ಲಿವೆ:

l ಮನಸ್ಸು ಯಾವ ಸನ್ನಿವೇಶಗಳಲ್ಲಿ ತನ್ನ ಪ್ರಶಾಂತತೆಯನ್ನು ಕಳೆದುಕೊಂಡು ಅಸೌಖ್ಯಕ್ಕೊಳಪಡುತ್ತಿದೆ ಎನ್ನುವುದನ್ನು ಗುರುತಿಸುವುದು ಮುಖ್ಯವಾದ ಹಂತ. ಸಂದರ್ಭದ ಅರಿವು ಸಂದರ್ಭದ ಮೇಲೆ ನಾವೊಂದು ನಿಯಂತ್ರಣ ಸಾಧಿಸಲು ಅನುಕೂಲ ಮಾಡಿಕೊಡುತ್ತದೆ.

l ಪ್ರತಿಯೊಂದು ಘಟನೆಯ ಸುತ್ತಲೂ ನಾವೊಂದು ಕಥೆ ಹೆಣೆದುಕೊಳ್ಳುತ್ತೇವೆ. ಈ ಕಥನದಿಂದಲೇ ಒಮ್ಮೊಮ್ಮೆ ವಾಸ್ತವಕ್ಕೆ ಏನೂ ಸರಿಹೊಂದದ ಆಲೋಚನೆಗಳು ಹೊಮ್ಮುತ್ತವೆ. ಪ್ರತಿಯೊಂದು ನೈಜಭಾವವೂ ಒಂದು ದೈಹಿಕ ಸಂವೇದನೆಯೊಟ್ಟಿಗೇ ಉಂಟಾಗುತ್ತದೆ. ದೇಹದ ಸಂವೇದನೆಯಾಗಿ ನಮ್ಮ ಅನುಭವಕ್ಕೆ ಬರದ ಕಲ್ಪಿತ ಕಥೆಗಳಿಂದ ಉಂಟಾದ ಆಲೋಚನೆಗಳು ಕಡಿಮೆಯಾಗಬೇಕಾದರೆ ನಾವು ಅತಿಯಾಗಿ ನೆಚ್ಚಿಕೊಂಡಿರುವ ‘ಕಥನ’ಗಳನ್ನು ಕೈಬಿಡಬೇಕು. ಅಂದರೆ ಅತಿಯಾದ ಊಹಾಪೋಹಗಳಿಗೆ ಪ್ರಜ್ಞಾಪೂರ್ವಕವಾಗಿ ಪೂರ್ಣವಿರಾಮವನ್ನು ಕೊಡಬೇಕು.

l ನಮ್ಮ ದೇಹದ ಬಗೆಗೆ ಧನಾತ್ಮಕ ರೀತಿಯಲ್ಲಿ ನಮ್ಮ ಮಾತಕತೆಯಿರಬೇಕು. ನಮ್ಮ ದೇಹವನ್ನು ಅದಿರುವಂತೆಯೇ ಸ್ವೀಕರಿಸಿ, ಪ್ರೀತಿಸಿ, ಗೌರವಿಸುವುದು, ದೈಹಿಕ ಅಗತ್ಯಗಳನ್ನು ನಿರ್ಲಕ್ಷಿಸದೇ, ದ್ವೇಷಿಸದೇ ಇರುವುದು ನಮ್ಮ ಮನಸ್ಸಿಗೆ ನಾವು ಕೊಡಬಹುದಾದ ದೊಡ್ಡ ಉಡುಗೊರೆ.

l ಮನಸ್ಸಿಗೆ ತಾನು ನಿರ್ವಹಿಸಲಾರದಷ್ಟು ಕಠಿಣ ಪರಿಸ್ಥಿತಿಗಳು ಉಂಟಾದಾಗ ದೀರ್ಘವಾಗಿ ಉಸಿರಾಡುವುದು, ಮನಸ್ಸು ಗೊಂದಲದಲ್ಲಿ ಚಡಪಡಿಸುತ್ತಿರುವಾಗ ವೇಗದ ಕಾಲ್ನಡಿಗೆಯಲ್ಲಿ ತೊಡಗುವುದು, ನಿತ್ಯದ ಕೆಲಸಗಳನ್ನು ಗಮನವಿಟ್ಟು ಮಾಡು ವುದು ನಾವು ಊಹೆ ಮಾಡುವುದಕ್ಕಿಂತಲೂ ಹೆಚ್ಚು ಉಪಶಮನ ನೀಡುತ್ತದೆ.

l ನಾವು ಸದಾ ನಮ್ಮ ಈ ದೇಹದಲ್ಲಿಯೇ ಇರಬೇಕು, ದೇಹದ ಹೊರತಾದ ಅಸ್ತಿತ್ವವಿದೆಯೋ ಇಲ್ಲವೋ ಗೊತ್ತಿಲ್ಲ, ಅದರ ಅನುಭವವೂ ನಮಗಿಲ್ಲ; ಈ ದೇಹವನ್ನು ನಾವು ಹೇಗೆ, ಯಾವ ರೀತಿಯಲ್ಲಿ ವಾಸಯೋಗ್ಯ ಮಾಡಿಕೊಳ್ಳುತ್ತೇವೆ ಎನ್ನುವುದು ನಮ್ಮ ಕೈಯಲ್ಲೇ ಇದೆ. ನಮ್ಮದೇ ಮನೆಯಲ್ಲಿ ಆರಾಮವಾಗಿ ಕೈಕಾಲು ಚಾಚಿಕೊಂಡು ನಿರಾಳವಾಗಿ ವಿಶ್ರಾಂತಿ ತೆಗೆದುಕೊಳ್ಳುವಷ್ಟು ನೆಮ್ಮದಿಯಾಗಿ ನಮ್ಮ ದೇಹದಲ್ಲಿ ನಾವು ನೆಲಸಬೇಕು. ದೇಹವನ್ನು ಉಪೇಕ್ಷಿಸಿ ಸದಾ ಯೋಚನೆಗಳಲ್ಲೇ ಕಳೆದುಹೋಗಿ, ಭ್ರಮೆಯ ಅರಮನೆ ಕಟ್ಟಿಕೊಂಡು ಅದರಲ್ಲಿ ಒಂಟಿಯಾಗಿ ಬದುಕುವಂತಾಗಬಾರದು. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-51-962887817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.