ಪ್ರಸ್ತುತ ದಿನಗಳಲ್ಲಿ ದೇಹದ ತೂಕ ನಿಯಂತ್ರಣ ತಪ್ಪಲು ಹಲವು ಕಾರಣಗಳಿವೆ. ಜಂಕ್ ಫುಡ್ ಸೇವನೆ, ಆಹಾರದದಲ್ಲಿ ಶಿಸ್ತು ಇಲ್ಲದಿರುವುದು. ವ್ಯಾಯಾಮ ಮಾಡದಿರುವುದು ಹೀಗೆ ತೂಕ ಹೆಚ್ಚಳಕ್ಕೆ ನಾನಾ ಕಾರಣಗಳಿವೆ. ಆದರೆ ಕಠಿಣ ಪರಿಶ್ರಮ ಹಾಗೂ ಆಹಾರ ಪದ್ಧತಿಯ ಮೂಲಕ ತೂಕ ಇಳಿಸಬಹುದಾಗಿದೆ.

ಚೆನ್ನೈ ಮೂಲದ ನೂಪುರ್ ಕಲ್ರಾ ಎಂಬ ಮಹಿಳೆ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೊದಲ್ಲಿ 82 ಕೆ.ಜಿ ಇದ್ದ ಅವರು ಒಂದು ವರ್ಷದಲ್ಲಿ ಬರೋಬ್ಬರಿ 22 ಕೆ.ಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಅವರು ತೂಕವನ್ನು ಇಳಿಸಿಕೊಳ್ಳಲು ಅನುಸರಿಸಿದ ಕ್ರಮಗಳ ಕುರಿತ ಸಲಹೆ ನೀಡಿದ್ದಾರೆ.

ನೂಪುರ್ ಕಲ್ರಾ ಅವರು ಹೇಳುವಂತೆ ‘ನೀವು ತೂಕವನ್ನು ಇಳಿಸಲು ಬಯಸಿದರೆ, ಸಾಮಾಜಿಕ ಜಾಲತಾಣದಲ್ಲಿ ಸಿಗುವಂತಹ ಸಲಹೆಗಳನ್ನು ಎಂದಿಗೂ ಪಾಲಿಸಬೇಡಿ. ಅದಕ್ಕಾಗಿಯೆ ಇರುವ ವೃತ್ತಿಪರರಿಂದ ಸಲಹೆ ಪಡೆಯುವುದು ಉತ್ತಮ. ಹಾಗಾಗಿ ನಾನು ವೃತ್ತಿಪರರಿಂದ ಪಡೆದ ಕೆಲವು ಸಲಹೆಗಳನ್ನು ನಿಮಗೆ ಹೇಳುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಪ್ರತಿನಿತ್ಯದ ಆಹಾರದಲ್ಲಿ ಪ್ರೋಟೀನ್ಗಳನ್ನು ಸೇರಿಸಿದ್ದಕ್ಕಾಗಿ ನನಗೆ ಉತ್ತಮ ಫಲಿತಾಂಶ ಸಿಕ್ಕಿದೆ. ಆದ್ದರಿಂದ ಪೋಷಕಾಂಶಗಳ ಸೇವನೆಗೆ ಕುರಿತ ಮಾಹಿತಿಯನ್ನು ಪೌಷ್ಠಿಕ ತಜ್ಞರಿಂದ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.

ನಾನು ಅವರ ಸಲಹೆಯಂತೆ ದಿನಕ್ಕೆ 6 ಬಾರಿ ಲಘುವಾಗಿ ಆಹಾರವನ್ನು ಸೇವಿಸುತ್ತಿದೆ. ತೂಕವನ್ನು ಇಳಿಸಿಕೊಳ್ಳಲು ಊಟ ಬಿಡಬಾರದು. ಬದಲಿಗೆ ಹೆಚ್ಚಾಗಿಯೇ ತಿನ್ನಬೇಕು ಎಂದು ಸಲಹೆ ನೀಡಿದ್ದಾರೆ.

ಸ್ವಿಗ್ಗಿ, ಜೊಮಾಟೊದಂತಹ ಆಹಾರ ವಿತರಣಾ ವೇದಿಕೆಗಳಿಂದ ಆರ್ಡರ್ ಮಾಡಿದ ಊಟಕ್ಕಿಂತ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ. ಹಾಗಂತ ಸಂಪೂರ್ಣವಾಗಿ ಹೊರಗಿನ ಆಹಾರ ತ್ಯಜಿಸಿ ಎಂದಲ್ಲ. ಆಗಾಗ ಸೇವಿಸಿ. ಜತೆಗೆ ಸಾಕಷ್ಟು ನೀರು ಸಹ ಕುಡಿಯಬೇಕು. ಇದರ ಜೊತೆಗೆ ಸಿಹಿ ಹಾಗೂ ಎಣ್ಣೆಯಿಂದ ಕರಿದ ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡಿ.

ತೂಕ ಇಳಿಸುವುದು ಒಂದು ದಿನದ ಕೆಲಸವಲ್ಲ. ಬದಲಾಗಿ ಅದು ಹೆಚ್ಚು ಸಮಯ ತಗೆದುಕೊಳ್ಳುತ್ತದೆ. ಈ ನಡುವೆ ಶಿಸ್ತು, ಕ್ರಮಬದ್ಧತೆ, ತಾಳ್ಮೆ ಮತ್ತು ಸರಿಯಾದ ಮಾರ್ಗದರ್ಶನ ಮುಖ್ಯ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.