ತಾಯ್ತನ ಹೆಣ್ಣುಮಕ್ಕಳಿಗೆ ದೊರಕುವ ಒಂದು ಅಮೂಲ್ಯ ಭಾಗ್ಯ. ಭಾರತೀಯ ಕುಟುಂಬಗಳಲ್ಲಿ ಗರ್ಭಾವಸ್ಥೆ ಮತ್ತು ಹೆರಿಗೆಯ ಸಮಯ ಹಬ್ಬದ ವಾತಾವರಣವನ್ನೇ ಸೃಷ್ಟಿಸುತ್ತದೆ. ಅದರಲ್ಲೂ ಪ್ರಥಮಬಾರಿಗೆ ಗರ್ಭಿಣಿಯಾದಾಗ ಸಂತೋಷ, ಸಡಗರ ಮತ್ತು ಆತಂಕಗಳು ಕೊಂಚ ಹೆಚ್ಚೇ ಅನ್ನಿಸುವಷ್ಟು ಬಿಂಬಿತವಾಗುತ್ತವೆ. ಹೌದು, ಹೆರಿಗೆ ಸಂದರ್ಭದಲ್ಲಿ ಹಲವು ಆತಂಕಗಳೂ ಕಾಡುತ್ತವೆ. ಗರ್ಭಾವಸ್ಥೆಯ ನವಮಾಸಗಳು ಕಳೆದು ಹೆರಿಗೆಯ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಹೆರಿಗೆಯನ್ನು ಸುಸೂತ್ರವಾಗಿ ಮುಗಿಸಿಕೊಳ್ಳಬಹುದು.

ಸಾಮಾನ್ಯವಾಗಿ ಒಂಬತ್ತು ತಿಂಗಳು ಅಥವಾ 38 ವಾರಗಳು ತುಂಬಿದ ನಂತರವೇ ಹೆರಿಗೆಯಾಗುವುದು. ಸುಮಾರು ಶೇ 5-15ರಷ್ಟು ಸ್ತ್ರೀಯರಲ್ಲಿ 37 ವಾರಗಳಿಗಿಂತ ಮೊದಲೇ ಹೆರಿಗೆಯಾಗುವ ಸಂಭವವಿರುತ್ತದೆ. ಶೇ 5ರಷ್ಟು ಸಂದರ್ಭಗಳಲ್ಲಿ 40 ವಾರಗಳ ನಂತರ ಹೆರಿಗೆಯಾಗಬಹುದು. ಇವೆಲ್ಲವೂ ಶಿಶುವಿನ ಬೆಳವಣಿಗೆ, ಜರಾಯುವಿನ (ಪ್ಲಾಸೆಂಟಾ) ಪರಿಪಕ್ವತೆ ಮತ್ತು ತಾಯಿಯ ಆರೋಗ್ಯದ ಮೇಲೆ ಅವಲಂಬಿಸಿರುತ್ತವೆ.

ಮುಟ್ಟು ನಿಂತ ದಿನಾಂಕದಿಂದ ಹೆರಿಗೆಯ ಅಂದಾಜು ದಿನಾಂಕವನ್ನು ಊಹಿಸಬಹುದಾದರೂ ಒಂದು ವಾರ ಆಚೀಚೆಯಾಗುವ ಸಂಭವಗಳೇ ಹೆಚ್ಚು. ಹಾಗಾಗಿ ಹೆರಿಗೆಯು ಕೆಲವಾರಗಳಿದ್ದಾಗಲೇ ತಯಾರಿಯನ್ನು ಮಾಡಿಕೊಂಡು ಸಿದ್ಧರಾಗಿರುವುದು ಒಳ್ಳೆಯದೇ. ಹಾಗೆಯೇ ಬಹುತೇಕ ಹೆರಿಗೆಗಳು ಯೋನಿಯ ಮೂಲಕ ಸಹಜವಾಗಿಯೆ ಆಗುತ್ತವಾದರೂ ಕೆಲವು ಸಂದರ್ಭಗಳಲ್ಲಿ ಹೊಟ್ಟೆಯನ್ನು ಕೊಯ್ದು ‘ಸಿಸೇರಿಯನ್’ ಹೆರಿಗೆ ಮಾಡಬೇಕಾಗುತ್ತದೆ.

ತಾಯಿಯ ಗರ್ಭದ್ವಾರದ ತೊಂದರೆಗಳು, ಶಿಶುವಿನ ಹೃದಯಬಡಿತದಲ್ಲಿ ಹಠಾತ್ ಏರಿಳಿಕೆ, ಶಿಶು ಗರ್ಭದಲ್ಲೇ ಮಲ ವಿಸರ್ಜಿಸುವುದು ಅಥವಾ ದಿನಗಳು ತುಂಬಿ ನೋವೇ ಬರದಿದ್ದರೆ ಕೆಲವೊಮ್ಮೆ ಸಿಸೇರಿಯನ್ ಮಾಡಬೇಕಾಗಿ ಬರಬಹುದು. ಹಿಂದಿನ ಬಾರಿ ಸಿಸೇರಿಯನ್ ಆಗಿದ್ದರೆ ಅದರ ಕಾರಣ ತಿಳಿದುಕೊಂಡು ಪ್ರಸೂತಿವೈದ್ಯರು ಮುಂದಿನ ಮಾರ್ಗವನ್ನು ಸೂಚಿಸುತ್ತಾರೆ.

ಗರ್ಭಾವಸ್ಥೆಯಲ್ಲಿ ತಾಯಿ ತನ್ನೊಡಲಲ್ಲಿ ಬೆಳೆಯುತ್ತಿರುವ ಪುಟ್ಟ ಜೀವದ ಬಗ್ಗೆಯೂ ಕಾಳಜಿ ವಹಿಸಬೇಕು. ಆಹಾರದಲ್ಲಿ ಪೌಷ್ಟಿಕಾಂಶಗಳು ಯಥೇಚ್ಛವಾಗಿರಬೇಕು. ವಾಕಿಂಗ್ ಅಥವಾ ಸರಳವಾದ ವ್ಯಾಯಾಮಗಳನ್ನು ಮಾಡುತ್ತ ಚಟುವಟಿಕೆಯಿಂದ ಇರುವುದು ಬಹುಮುಖ್ಯ. ವಿಶೇಷವಾಗಿ ಕಿಬ್ಬೊಟ್ಟೆಯ ಮಾಂಸಖಂಡಗಳ ವ್ಯಾಯಾಮದಿಂದ ಸಹಜಹೆರಿಗೆಗೆ ಬಹಳ ಅನುಕೂಲವಾಗುತ್ತದೆ. ಅನೇಕ ಕಡೆ ಗರ್ಭಿಣಿಯರಿಗಾಗೇ ತಿಳಿವಳಿಕೆ ಮೂಡಿಸುವಂಥ ವಿಶೇಷ ತರಗತಿಗಳನ್ನು ನಡೆಸುತ್ತಾರೆ. ಇದರಲ್ಲಿ ಸಂಗಾತಿಯೂ ಪಾಲ್ಗೊಳ್ಳಬಹುದು.

ಗಂಡಂದಿರು ಹೆರಿಗೆನೋವನ್ನು ಸ್ವತಃ ಅನುಭವಿಸುವುದಿಲ್ಲ ವಾದರೂ ಇಂಥ ತರಬೇತಿಗಳು ಗರ್ಭಿಣಿಯ ದೇಹಸ್ಥಿತಿಯನ್ನು ಅರಿತುಕೊಳ್ಳಲು ಮತ್ತು ಹೆರಿಗೆನೋವಿನ ಲಕ್ಷಣಗಳನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತವೆ. ಗರ್ಭಿಣಿಗೆ ಸೂಕ್ತ ವ್ಯಾಯಾಮ ಮಾಡಿಸುವುದರಿಂದ ಹಿಡಿದು ಹೆರಿಗೆ ಸಮಯದಲ್ಲಿ ಏನೇನು ಪ್ಯಾಕ್ ಮಾಡಿಕೊಳ್ಳಬೇಕು ಎಂಬುದರವರೆಗೂ ಇಲ್ಲಿ ತರಬೇತಿಯನ್ನು ನೀಡುತ್ತಾರೆ.

ಸಾಮಾನ್ಯವಾಗಿ ಎಲ್ಲ ಗರ್ಭಿಣಿಯರು ಗರ್ಭಧಾರಣೆ ಸಮಯದಿಂದಲೇ ಪ್ರಸೂತಿವೈದ್ಯರ ನಿಗಾದಲ್ಲಿರುತ್ತಾರೆ. ಹೆರಿಗೆಯ ದಿನಗಳು ಹತ್ತಿರವಾಗುತ್ತಿದ್ದಂತೆ ಗರ್ಭದಲ್ಲಿನ ಶಿಶುವಿನ ಭಂಗಿ, ಜರಾಯು/ಮಾಸದ ಸ್ಥಳ ಹಾಗೂ ಗರ್ಭಾಶಯದಲ್ಲಿನ ನೀರಿನ (ಲೈಕರ್) ಅಳತೆಯ ಬಗ್ಗೆ ಹೆಚ್ಚು ನಿಗಾ ವಹಿಸಬೇಕಾಗುತ್ತದೆ. ಗರ್ಭಾವಸ್ಥೆಯ ಮಧುಮೇಹ (ಜೆಸ್ಟೇಷನಲ್ ಡಯಾಬಿಟಿಸ್) ಕೂಡ ಕೆಲವರಲ್ಲಿ ಕಂಡುಬರುತ್ತದೆ. ಅಲ್ಲದೆ ಹೆಚ್ಚಿನ ಬಿ.ಪಿ., ಕಾಲುಬಾವು ಮತ್ತು ಮೂತ್ರದಲ್ಲಿನ ಪ್ರೋಟೀನ್ ಸೋರಿಕೆಗಳೆಂಬ ತ್ರಿವಳಿ ಲಕ್ಷಣಗಳು ಪ್ರೀ-ಎಕ್ಲಾಂಪ್ಸಿಯಾ ಮತ್ತು ಎಕ್ಲಾಂಪ್ಸಿಯಾ (ಪ್ರಸವಾಪಸ್ಮಾರ) ದಂತಹ ರೋಗಕ್ಕೆ ಮುನ್ನುಡಿಯಾಗಬಲ್ಲವು. ಸೂಕ್ತ ಆಹಾರ ಮತ್ತು ಔಷಧಗಳ ಮೂಲಕ ಇವುಗಳನ್ನು ತಡೆಗಟ್ಟಬಹುದು.

ಸಾಮಾನ್ಯವಾಗಿ ಹೆರಿಗೆನೋವು ಪ್ರಾರಂಭವಾದ ನಂತರವೇ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಕೆಲವೊಮ್ಮೆ ಗರ್ಭಾಶಯದಿಂದ ನೀರು ಹರಿದು ಹೋದಾಗ ಅಥವಾ ಗರ್ಭಿಣಿಯ ರಕ್ತದೊತ್ತಡ ಏರುತ್ತಿದ್ದಾಗ ತಕ್ಷಣವೇ ದಾಖಲಾಗಬೇಕಾಗುತ್ತದೆ. ಹೆರಿಗೆ ವಾರ್ಡಿಗೆ ಅಡ್ಮಿಟ್ ಆದಮೇಲೆ ವೈದ್ಯರು ಹೆರಿಗೆನೋವು ಎಷ್ಟು ತೀವ್ರವಾಗಿದೆ, ಗರ್ಭಕೊರಳು ಹಿಗ್ಗುತ್ತಿದೆಯೋ ಹೇಗೆ, ಶಿಶುವಿನ ಹೃದಯಬಡಿತ (NST ಯಂತ್ರದ ಮೂಲಕ) ಸಾಮಾನ್ಯಸ್ಥಿತಿಯಲ್ಲಿದೆಯೋ ಹೇಗೆ ಎಂಬುದನ್ನು ಪರೀಕ್ಷಿಸುತ್ತಾರೆ. ಕೆಲಬಾರಿ ‘ಸಲೈನ್’ ಮೂಲಕ ಔಷಧವನ್ನು ನೀಡುತ್ತಾ ತಾಯಿ ಮತ್ತು ಶಿಶುವಿನ ಆರೋಗ್ಯದ ಮೇಲೆ ನಿಗಾ ವಹಿಸುತ್ತಾರೆ.

ಸಹಜಹೆರಿಗೆಯನ್ನು ಒಟ್ಟು ಮೂರು ಹಂತಗಳಲ್ಲಿ ವಿಂಗಡಿಸಬಹುದು. ಮೊದಲನೆಯ ಹಂತದಲ್ಲಿ ನೋವು ತೀವ್ರಗೊಳ್ಳುತ್ತಾ ಗರ್ಭಕೊರಳು ಸುಮಾರು ಹತ್ತು ಸೆಂಟಿ ಮೀಟರ್ ಗಳಷ್ಟು ಅಗಲವಾಗುತ್ತೆ. ಇದರ ಅವಧಿ ಸುಮಾರು 8-20 ಗಂಟೆಗಳು. ಎರಡನೆಯ ಹಂತದಲ್ಲಿ ಶಿಶು ಯೋನಿದ್ವಾರದಿಂದ ಹೊರಬರಲು ಪ್ರಾರಂಭಿಸುತ್ತದೆ. ಈ ಹಂತ ಸುಮಾರು ಮೂವತ್ತು ನಿಮಿಷದಿಂದ ಒಂದು ಗಂಟೆಯವರೆಗೂ ಇರುತ್ತದೆ.

ಶಿಶು ಹೊರಬಂದ ತಕ್ಷಣ ಮಗುವನ್ನು ತಾಯಿಯ ಎದೆಮೇಲೆ ಮಲಗಿಸಿ ಹಾಲೂಡಿಸಲು ಪ್ರೋತ್ಸಾಹಿಸಬೇಕು. ಇದು ತಾಯಿ-ಮಗುವಿನ ಬಾಂಧವ್ಯದ ಮುಖ್ಯ ಬುನಾದಿ. ಕೊನೆಯ ಹಂತದಲ್ಲಿ ಜರಾಯು ಹೊರಬರುತ್ತದೆ. ಇದಕ್ಕೆ ಸಾಮಾನ್ಯವಾಗಿ ಕೆಲನಿಮಿಷಗಳು ಸಾಕು. ನಂತರದ ಹೆರಿಗೆಗಳಲ್ಲಿ ಇಷ್ಟೊಂದು ನೋವೂ ಇರುವುದಿಲ್ಲ ಮತ್ತು ತೀರಾ ಕಡಿಮೆ ಸಮಯದಲ್ಲೇ ಮುಗಿದುಹೋಗುತ್ತದೆ.

ಹೆರಿಗೆನೋವನ್ನು ಕಡಿಮೆ ಮಾಡಲು ಈಗ ಹಲವಾರು ಅಸ್ತ್ರಗಳಿವೆ. ಅನೇಕ ಆಸ್ಪತ್ರೆಗಳಲ್ಲಿ ಅರಿವಳಿಕೆತಜ್ಞರು ‘ಎಪಿಡುರಲ್’ ಇಂಜೆಕ್ಷನ್ಗಳನ್ನು ನೀಡುತ್ತಾರೆ. ಇದರಿಂದ ನೋವಿಲ್ಲದೇ ಸುಸೂತ್ರವಾಗಿ ಹೆರಿಗೆ ಆಗುತ್ತದೆ. ಕೆಲವೆಡೆ ವಿಶೇಷ ಬಾತ್ಟಬ್ನಲ್ಲಿ ಗರ್ಭಿಣಿಯನ್ನು ಇರಿಸಿ ಪ್ರಥಮಹಂತವನ್ನು ನಿರ್ವಹಿಸುತ್ತಾರೆ. ಕೆಲವು ನೋವುನಿವಾರಕ ಔಷಧಗಳೂ ಹೆರಿಗೆನೋವಿನ ತೀವ್ರತೆಯನ್ನು ಕಡಿಮೆ ಮಾಡುತ್ತವೆ.

ಹೆಚ್ಚೂಕಡಿಮೆ ಒಂದು ದಿನದವರೆಗೂ ನಡೆಯುವ ಈ ಚೊಚ್ಚಲ ಹೆರಿಗೆ ಪ್ರಕ್ರಿಯೆ ಗರ್ಭಿಣಿಗೆ, ಶಿಶುವಿಗೆ ಮತ್ತು ಕುಟುಂಬದವರಿಗೆ ಸಾಕಷ್ಟು ಒತ್ತಡವನ್ನು ಉಂಟು ಮಾಡುತ್ತೆ. ಹೆರಿಗೆವಾರ್ಡಿನಲ್ಲಿ ತಜ್ಞವೈದ್ಯರು, ಸಹಾಯಕ ವೈದ್ಯರು, ಅನುಭವಿ ಸೂಲಗಿತ್ತಿ ದಾದಿಯರು ಮತ್ತು ಸಹಾಯಕರಿದ್ದು ಎಲ್ಲರೂ ಗರ್ಭಿಣಿಗೆ ಸಾಂತ್ವನ ನೀಡುತ್ತ ಅವಳ ನೋವು-ದಣಿವನ್ನು ಹಂಚಿಕೊಳ್ಳುತ್ತಾರೆ. ಮೊದಲು ಗರ್ಭಿಣಿಯ, ನಂತರ ಮಗು ಮತ್ತು ಬಾಣಂತಿಯ ಆರೈಕೆಯಲ್ಲಿ ಸೂಕ್ತ ಎಚ್ಚರಿಕೆಯನ್ನು ವಹಿಸಿ ಪ್ರಸೂತಿವೈದ್ಯರ ಸಲಹೆ ಮೇರೆಗೆ ಯೋಜನೆ ಮಾಡಿಕೊಂಡರೆ ಹೆರಿಗೆಯೆಂಬ ದೊಡ್ಡ ಜವಾಬ್ದಾರಿಯನ್ನು ಸಂತೋಷದಿಂದ ನಿರ್ವಹಿಸಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-1580079985

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.