ಮಳೆಗಾಲದ ವಿಶೇಷ ಅಡುಗೆಗಳಲ್ಲಿ ಉಪ್ಪಿನಕಾಯಿ ಕೂಡ ಒಂದು. ಊಟದ ಜೊತೆಗೆ ಉಪ್ಪಿನಕಾಯಿ ಇದ್ದರೆ ಆ ಊಟದ ರುಚಿ ಇನ್ನಷ್ಟು ಹೆಚ್ಚಿಸುತ್ತದೆ. ನಿಂಬೆಕಾಯಿ, ಕಂಚಿಕಾಯಿಂದ ಉಪ್ಪಿನಕಾಯಿ ತಯಾರಿಸಬಹುದು. ಕೆಲವೇ ಪದಾರ್ಥಗಳನ್ನು ಉಪಯೋಗಿಸಿ ಮಲೆನಾಡ ಶೈಲಿಯ ಮಾವಿನಕಾಯಿ ಉಪ್ಪಿನಕಾಯಿ ತಯಾರಿಸುವ ವಿಧಾನ ಇಲ್ಲಿದೆ.

ಮಾವಿನಕಾಯಿ ಉಪ್ಪಿನ ಕಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಹುಳಿ ಇರುವ ಮಾವಿನ ಕಾಯಿ – 5 ರಿಂದ 6
ಸಾಸಿವೆ – 1 ಕಪ್
ಮಂತ್ಯ– 2 ರಿಂದ3 ಚಮಚ

ಕಲ್ಲು ಉಪ್ಪು– 1 ರಿಂದ 2 ಕಪ್
ಖಾರದ ಪುಡಿ– 1 ರಿಂದ 2 ಕಪ್
ಅರಿಶಿಣ ಪುಡಿ– 2 ರಿಂದ 3 ಚಮಚ
ಸೊಂಪಿನ ಕಾಳು– ಅರ್ಧ ಚಮಚ
ಇಂಗು – ಅರ್ಧ ಚಮಚ

ಅಡುಗೆ ಎಣ್ಣೆ– 2 ರಿಂದ 3 ಕಪ್
ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿ – ಅರ್ಧ ಕಪ್

ಉಪ್ಪಿನಕಾಯಿ ತಯಾರಿಸುವ ಹಂತಗಳು

ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಿ. ಬಳಿಕ ಅದನ್ನು ಶುಭ್ರವಾಗಿರುವ ಒಂದು ಕಾಟನ್ ಬಟ್ಟೆಯ ಮೇಲೆ ಹಾಕಿ ಅರ್ಧ ಅಥವಾ 1 ಗಂಟೆ ನೀರು ಹೀರಿಕೊಳ್ಳಲು ಬಿಡಿ.

ಒಂದು ಬಾಣಲೆಯಲ್ಲಿ ಕಲ್ಲು ಉಪ್ಪು ಹಾಕಿ ಬಿಸಿ ಮಾಡಿಕೊಳ್ಳಿ.

ಒಂದು ಪಾತ್ರೆಗೆ ಕತ್ತರಿಸಿ ಒಣಗಿಸಿದ ಮಾವಿನಕಾಯಿ ಜೊತೆಗೆ ಅದಕ್ಕೆ ಬಿಸಿ ಮಾಡಿಕೊಂಡ ಉಪ್ಪು ಹಾಗೂ ಬೆಳ್ಳುಳ್ಳಿ ಹಾಕಿ ಮಿಶ್ರಣ ಮಾಡಿಕೊಳ್ಳಿ.

ನಂತರ ಒಂದು ಬಾಣಲೆಯಲ್ಲಿ ಸಾಸಿವೆ, ಮಂತ್ಯೆ, ಸೊಂಪಿನ ಕಾಳು ಸೇರಿಸಿ ಬಿಸಿ ಮಾಡಿಕೊಳ್ಳಬೇಕು. ಬಿಸಿ ಆರಿದ ಬಳಿಕ ಅದನ್ನು ನೀರು ಸೇರಿಸದೆ ಪುಡಿ ಮಾಡಿಕೊಳ್ಳಿ.

ಉಪ್ಪು ಮಿಶ್ರಣದಲ್ಲಿರುವ ಮಾವಿನ ಕಾಯಿಗೆ ರುಬ್ಬಿಕೊಂಡ ಸಾಸಿವೆ ಪುಡಿ, ಖಾರದ ಪುಡಿ, ಅರಿಶಿಣ ಪುಡಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ.

ಬಳಿಕ ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿಕೊಳ್ಳಿ. ಅದಕ್ಕೆ ಸಾಸಿವೆ ಹಾಗೂ ಇಂಗು ಸೇರಿಸಿ ಬಿಸಿ ಮಾಡಿಕೊಳ್ಳಿ.

ಎಣ್ಣೆ ಸ್ಪಲ್ಪ ಬಿಸಿ ಆರಿದ ಬಳಿಕ ಅದನ್ನು ಮಾವಿನ ಕಾಯಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಈ ವೇಳೆ ಖಾರದ ಪುಡಿ ಕಡಿಮೆ ಅನಿಸಿದರೆ ಅರ್ಧ ಕಪ್ ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಬಳಿಕ ಮಾವಿನಕಾಯಿ ಮಿಶ್ರಣವನ್ನು ಗಾಜಿನ ಡಬ್ಬಿಯಲ್ಲಿ ಅಥವಾ ಭರಣಿಯಲ್ಲಿ ಹಾಕಿ ಗಾಳಿ ಹೋಗದಂತೆ ಮುಚ್ಚು ಹಾಕಿ ಇಡಿ.

3 ಅಥವಾ 5 ದಿನ ಬಳಿಕ ಆ ಡಬ್ಬಿಯ ಮುಚ್ಚು ತೆಗೆದು ಮಿಶ್ರಣ ಮಾಡಿ. ಈಗ ಸಿದ್ಧ ಘಮ ಘಮಿಸುವ ಉಪ್ಪಿನ ಕಾಯಿ.

ಆದರೆ, ಉಪ್ಪಿನಕಾಯಿ ಹಾಕುವಾಗ ಯಾವುದೇ ವಸ್ತುವಿನಲ್ಲೂ ನೀರಿನಾಂಶ ಇರಬಾರದು. ಜೊತೆಗೆ ಉಪ್ಪಿನಕಾಯಿಗೆ ಗಾಳಿ ತಗುಲದಂತೆ ಎಚ್ಚರ ವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.