ಅನೇಕರ ನೆಚ್ಚಿನ ಹಣ್ಣುಗಳಲ್ಲಿ ಮಾವಿನ ಹಣ್ಣು ಕೂಡ ಒಂದು. ಏಪ್ರಿಲ್– ಮೇ ಬಂತೆಂದರೆ ಮಾವಿನ ಹಣ್ಣುಗಳದ್ದೇ ರಾಜ್ಯಭಾರ. ಮಾರುಕಟ್ಟೆಯಲ್ಲಿ ಸಿಗುವ ಮಾವಿನ ಹಣ್ಣಿಗಿಂತಲೂ ಮಲೆನಾಡು ಭಾಗದಲ್ಲಿ ನೈಸರ್ಗಿಕವಾಗಿ ಸಿಗುವ, ಪರಿಮಳಭರಿತ ಕಾಡು ಮಾವಿನ ಹಣ್ಣು ಹೆಚ್ಚು ರುಚಿಯನ್ನು ಹೊಂದಿರುತ್ತದೆ. ಈ ಹಣ್ಣನ್ನು ಸಿಪ್ಪೆ ಸಮೇತ ತಿನ್ನಬಹುದು ಅಥವಾ ಇದರಿಂದ ಗೊಜ್ಜು ತಯಾರಿಸಿ ಊಟದ ಜೊತೆಯೂ ಸೇವನೆ ಮಾಡಬಹುದು.

ಈ ಹಣ್ಣಿನ ಗೊಜ್ಜು ಮಾಡಲು ಬೇಕಾಗುವ ಸಾಮಗ್ರಿಗಳು
ಮಾವಿನ ಹಣ್ಣು– 5 ರಿಂದ 6
ಖಾರದ ಪುಡಿ– 1 ಚಮಚ
ಅಡುಗೆ ಎಣ್ಣೆ–2 ಚಮಚ
ಸಾಸಿವೆ– ಕಾಲು ಚಮಚ
ಕತ್ತರಿಸಿಕೊಂಡ ಈರುಳ್ಳಿ– ಅರ್ಧ ಕಪ್
ಉಪ್ಪು ಬೇಕಿದ್ದರೆ– ರುಚಿಗೆ ತಕ್ಕಷ್ಟು
ಕರಿ ಬೇವು– 5ರಿಂದ6 ಎಲೆ

ಮಾಡುವ ವಿಧಾನ: ಮೊದಲು ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಮಾವಿನ ಹಣ್ಣಿನ ಸಿಪ್ಪೆ ಬೇರ್ಪಡಿಸಿಕೊಳ್ಳಿ.

ನಂತರ ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿಕೊಳ್ಳಿ. ಅದಕ್ಕೆ ಸಾಸಿವೆ, ಕರಿಬೇವು, ಕತ್ತರಿಸಿಕೊಂಡ ಈರುಳ್ಳಿ, ಖಾರದ ಪುಡಿ ಸೇರಿಸಿ ಫ್ರೈ ಮಾಡಿಕೊಳ್ಳಿ. ಬಳಿಕ ಅದನ್ನು ಒಲೆಯಿಂದ ಇಳಿಸಿ ಸ್ವಲ್ಪ ತಣ್ಣಗಾದ ಬಳಿಕ ಅದಕ್ಕೆ ಮಾವಿನ ಹಣ್ಣು ಹಾಕಿ ಮಿಶ್ರಣ ಮಾಡಿಕೊಳ್ಳಿ. ಈಗ ಸವಿಯಿರಿ ಪರಿಮಳ ಭರಿತ ಮಾವಿನ ಹಣ್ಣಿನ ಗೊಜ್ಜು.

ಆದರೆ, ಒಗ್ಗರಣೆ ಬಿಸಿ ಇರುವಾಗ ಮಾವಿನ ಹಣ್ಣು ಹಾಕಿ ಫ್ರೈ ಮಾಡುವುದರಿಂದ ಹುಳಿಯಾಗುವ ಸಾಧ್ಯತೆ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.