‘ಅಮ್ಮ , ಮಧ್ಯಾಹ್ನಕ್ಕೆ ಏನ್ ಅಡುಗೆ ಮಾಡ್ತೀಯ’, ‘ಸಂಜೆಗೆ ಏನಾದ್ರೂ ಸ್ಪೆಷಲ್ ಮಾಡಮ್ಮ’, ‘ಹಸಿವಾಗ್ತಿದೆ, ತಿನ್ನೋಕೆ ಏನಾದ್ರೂ ಕೊಡಮ್ಮ...’ ಬೇಸಿಗೆ ರಜೆ ಬಂತೆಂದರೆ, ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಇಂತಹ ‘ವಾಣಿ’ಗಳು ಕಿವಿಗೆ ಬಿಳುತ್ತಲೇ ಇರುತ್ತವೆ. ರಜೆಯ ಮಜಾದಲ್ಲಿರುವ ಮಕ್ಕಳಿಗೆ ದಿನವೂ ಹೊಸತೇನನ್ನಾದರೂ ಮೆಲ್ಲುವ ಕಾತರ. ಅಡುಗೆ ಮನೆಯತ್ತಲೇ ಅವರ ದೃಷ್ಟಿ ನೆಟ್ಟಿರುತ್ತದೆ. ಇಲ್ಲವೇ ಹೊರಗೆ ಸಿಗುವ ಐಸ್ಕ್ರೀಮ್, ಜಂಕ್ಫುಡ್ಗಳತ್ತ ಮನಸ್ಸು ಎಳೆಯುತ್ತಿರುತ್ತದೆ. ಈ ಬಯಕೆ ಪೂರೈಸುತ್ತಲೇ, ಪ್ರಖರ ಬಿಸಿಲು ಮಕ್ಕಳ ದೇಹ ಸೋಕದಂತೆ ಆರೋಗ್ಯಕರ ಖಾದ್ಯಗಳನ್ನು ತಯಾರಿಸುವುದು ಅಮ್ಮಂದಿರ ನಿತ್ಯದ ಸವಾಲು.

ದೇಹದ ನೀರಿನಂಶವನ್ನು ಕಾಪಿಟ್ಟುಕೊಳ್ಳುವ, ಆಕರ್ಷಕವಾಗಿ ಕಾಣುವ, ಆರೋಗ್ಯಕ್ಕೆ ಪೌಷ್ಟಿಕಾಂಶ ಒದಗಿಸುವ ಖಾದ್ಯಗಳ ತಯಾರಿ ಬೇಸಿಗೆ ದಿನಗಳಲ್ಲಿ ಅತಿ ಅಗತ್ಯ. ರಜೆ ಬಂದರೆ ಸಾಕು ಮಕ್ಕಳಿಗೆ ಬೇಸಿಗೆ ಶಿಬಿರ, ಕ್ರೀಡಾ ತರಬೇತಿ, ಸಂಗೀತ, ನೃತ್ಯ ಪಾಠ ಹೀಗೆ ಅವರ ಪಠ್ಯೇತರ ಚಟುವಟಿಕೆಯತ್ತ ಗಮನಹರಿಸುವ ಧಾವಂತದಲ್ಲಿ , ಮಕ್ಕಳ ಆರೋಗ್ಯದ ಸಂಗತಿ ಹಿನ್ನೆಲೆಗೆ ಸರಿಯುತ್ತದೆ. ಹೀಗಾದಾಗ ಅವರ ಆರೋಗ್ಯದಲ್ಲಿ ಏರುಪೇರು ಆಗುವ ಸಂಭವವೇ ಹೆಚ್ಚು. ಅದಕ್ಕೆ ದಾರಿ ಮಾಡಿಕೊಡದೆ ನಿತ್ಯದ ಆಹಾರದ ಮೆನುವನ್ನು ಬದಲಿಸಿಕೊಳ್ಳುವುದು ಒಳಿತು.

ದೇಹಕ್ಕೆ ಆದಷ್ಟೂ ತಂಪು ನೀಡುವ ಚಿಯಾ ಸೀಡ್ಸ್, ಪುದೀನ, ಸೌತೆಕಾಯಿ, ಹೆಚ್ಚು ನೀರಿನಂಶ ಇರುವ ಹಣ್ಣುಗಳು, ಗುಲ್ಕನ್, ಲೆಮನ್ ಗ್ರಾಸ್, ಅಕ್ಕಿ ಗಂಜಿ, ಸೋಂಪು, ನಿಂಬೆಹಣ್ಣು, ತರಕಾರಿ, ಮೊಸರು, ಮಜ್ಜಿಗೆ, ಯೋಗರ್ಟ್, ರಾಗಿ... ಹೀಗೆ ನಿತ್ಯದ ಅಡುಗೆಯಲ್ಲಿ ಇವು ಪ್ರಾಧಾನ್ಯ ಪಡೆದರೆ ದೇಹವನ್ನು ಹೈಡ್ರೇಟ್ ಆಗಿ ಇಡಬಹುದು. ಇವುಗಳನ್ನು ನೇರವಾಗಿ ಕೊಟ್ಟರೆ ಮುಖ ಸಿಂಡರಿಸಿಕೊಳ್ಳುವ ಮಕ್ಕಳೇ ಹೆಚ್ಚು. ಆಕರ್ಷಕವಾದ ರೀತಿಯಲ್ಲಿ ತಯಾರಿಸಿ ಕೊಟ್ಟರೆ ಮಕ್ಕಳಿಗೂ ಖುಷಿ, ಅಮ್ಮಂದಿರಿಗೂ ತೃಪ್ತಿ. ಅಂತಹ ಕೆಲವು ರೆಸಿಪಿಗಳು ನಿಮಗಾಗಿ...

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-38173774

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.