ಸೋಮವಾರ, ಮೇ 16, 2022
25 °C

ಸೂಕ್ಷ್ಮಾಣುಗಳಿಂದ ರಕ್ಷಣೆಗೆ ಕಾರ್ಬನ್‌ ಫೇಸ್‌ಮಾಸ್ಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಬನ್‌ ಫೇಸ್‌ಮಾಸ್ಕ್‌–ಸಾಂದರ್ಭಿಕ ಚಿತ್ರ

ಕೊರೊನಾ ದಿನಗಳು ಆರಂಭವಾದಾಗಿನಿಂದ ಸ್ಯಾನಿಟೈಸರ್‌, ಮಾಸ್ಕ್‌ ನಮ್ಮ ಜೀವನದ ಅವಿಭಾಜ್ಯದ ಅಂಗವಾಗಿದೆ. ಕೊರೊನಾ ಪ್ರಮಾಣ ಇಳಿಮುಖವಾಗಿದ್ದರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಮಾಸ್ಕ್‌ಗಳು ಲಭ್ಯವಿವೆ. ಕೋವಿಡ್ ಲಸಿಕೆ ಬಂದಿದ್ದರೂ ಮಾಸ್ಕ್‌ ಧರಿಸದೇ ಹೊರಗಡೆ ಓಡಾಡುವುದು ಸುರಕ್ಷಿತವಲ್ಲ. ಆ ಕಾರಣಕ್ಕೆ ವಿನೂತನವಾದ ಸ್ವಯಂ ಸ್ಯಾನಿಟೈಸಿಂಗ್ ಕಾರ್ಬನ್‌ ಫೇಸ್‌ಮಾಸ್ಕ್ ಮಾರುಕಟ್ಟೆಗೆ ಬಂದಿದೆ. ನೆಲ್ಸನ್‌ ಲ್ಯಾಬ್‌ನಿಂದ ಪ್ರಮಾಣೀಕೃತಗೊಂಡ ಈ ಮಾಸ್ಕ್ 3 ಪದರಗಳನ್ನು ಹೊಂದಿದೆ.

ಈ ಕಾರ್ಬನ್‌ ಮಾಸ್ಕ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದ್ದು ಇದಕ್ಕೆ ಯುರೋಪ್ ಹಾಗೂ ಯುಎಸ್‌ಎ ಮೂಲದ ಪ್ರೀಮಿಯಂ ಕಚ್ಚಾವಸ್ತುಗಳನ್ನು ಬಳಸಲಾಗಿದೆ. ಜೈವಿಕ ತಂತ್ರಜ್ಞಾನ ಆಧಾರಿತ ಪೇಟೆಂಟ್ ಫ್ಯಾಬ್ರಿಕ್‌ನಿಂದ ತಯಾರಿಸಲಾದ ಈ ಮಾಸ್ಕ್ ಅನ್ನು ವಿವಿಧ ಪರಿಸ್ಥಿತಿಗಳಲ್ಲಿ ಧರಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಜೊತೆಗೆ, ಗಾಳಿಯಿಂದ ಹರಡುವ ಸೂಕ್ಷ್ಮಾಣುಗಳು ಹಾಗೂ ಮಾರಕ ವೈರಸ್‌ ಅನ್ನು ತಡೆಗಟ್ಟುವಲ್ಲಿ ಸುರಕ್ಷಿತವಾಗಿದೆ ಎಂದು ದೃಢಪಡಿಸಲಾಗಿದೆ.

ಕಾರ್ಬನ್‌ ಫೇಸ್‌ಮಾಸ್ಕ್‌ನ ವೈಶಿಷ್ಟ್ಯಗಳು

ಸ್ವಯಂ- ಸ್ಯಾನಿಟೈಸಿಂಗ್

ಅತ್ಯುತ್ತಮ ದರ್ಜೆಯ ಯಾರ್ನ್ ಫ್ಯಾಬ್ರಿಕ್‌ನಿಂದ ತಯಾರಿಸಲಾಗಿರುವ ಇದರ ಒಳಭಾಗದ ಪದರವು ವಿನೂತನವಾದ ರೀತಿಯಲ್ಲಿ ಸೆಲ್ಫ್-ಸ್ಯಾನಿಟೈಸಿಂಗ್ ಮಾಡಿಕೊಳ್ಳುತ್ತದೆ. ತಾನೇ ಸ್ಯಾನಿಟೈಸ್ ಮಾಡಿಕೊಳ್ಳುವ ಜೊತೆಗೆ ಸಂಪರ್ಕಕ್ಕೆ ಬರುವ ವೈರಸ್‌ಗಳನ್ನು ಕೊಲ್ಲುತ್ತದೆ. ಈ ಮೂಲಕ ನಿಮಗೆ ಮತ್ತು ಇತರರಿಗೆ ಸಮರ್ಪಕವಾದ ರಕ್ಷಣೆಯನ್ನು ನೀಡುತ್ತದೆ.

ಪರೀಕ್ಷಿತ ಮತ್ತು ಪೇಟೆಂಟ್ ಪಡೆದ ಫ್ಯಾಬ್ರಿಕ್‌

ಗಾಳಿ ಮೂಲಕ ಹರಡುವ ಸೂಕ್ಷ್ಮಾಣುಗಳು ಮತ್ತು ರೋಗಗಳಿಂದ ರಕ್ಷಣೆ ನೀಡುವ ಮತ್ತು ದೀರ್ಘಕಾಲದವರೆಗೆ ಆರಾಮ ನೀಡುತ್ತದೆ. ಇದು ತ್ವಚೆ ಸ್ನೇಹಿಯಾಗಿದೆ ಮತ್ತು ದೀರ್ಘಕಾಲದವರೆಗೆ ಧರಿಸಿದರೂ ಕಿರಿಕಿರಿ ಎನ್ನಿಸುವುದಿಲ್ಲ. ‘ಈ ಕಾರ್ಬನ್ ಫೇಸ್‌ ಮಾಸ್ಕ್‌ ಮೈಕ್ರೋಬಯಲ್ ಸೂಕ್ಷ್ಣಾಣು ನಿರೋಧಕ ಶಕ್ತಿಯನ್ನು ಹೊಂದಿದ್ದು, ವೈರಸ್‌ಗಳು ಮತ್ತು ಇನ್ನಿತರೆ ಸೂಕ್ಷ್ಮಾಣುಗಳನ್ನು ನಿಷ್ಕ್ರೀಯಗೊಳಿಸುವ ಶಕ್ತಿಯನ್ನು ಹೊಂದಿರುತ್ತದೆ. ಇದರ ಪರಿಣಾಮ ಕಾರ್ಬನ್ ಫೇಸ್‌ಮಾಸ್ಕ್ ಧರಿಸುವ ವ್ಯಕ್ತಿಯು ಆರಂಭಿಕ ಹಂತದಲ್ಲಿಯೇ ಮಾರಕ ವೈರಸ್ ಸೋಂಕಿನಿಂದ ರಕ್ಷಣೆ ಪಡೆಯುತ್ತಾನೆ ಮತ್ತು ಸೋಂಕು ಹರಡುವ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ’ ಎನ್ನುತ್ತಾರೆ ಮಾಸ್ಕ್‌ ತಯಾರಿಕಾ ಕಂಪನಿ ಬ್ರೀದ್‌ಈಸಿ ಕನ್ಸ್‌ಲ್ಟೆಂಟ್‌ನ ಸಿಇಒ ಬರುನ್ ಅಗರ್‌ವಾಲ್.


ಬರುನ್ ಅಗರ್‌ವಾಲ್

ತೊಳೆಯಬಹುದು, ಮರುಬಳಕೆ, ದೀರ್ಘ ಬಾಳಿಕೆ

ಯೂರೋಪ್ ಮತ್ತು ಯುಎಸ್‌ಎಯಿಂದ ಆಮದು ಮಾಡಿಕೊಳ್ಳಲಾಗಿರುವ ಅತ್ಯುತ್ತಮ ದರ್ಜೆಯ ಫೈಬರ್ ಅನ್ನು ಈ ಮಾಸ್ಕ್ ತಯಾರಿಕೆಗೆ ಬಳಸಲಾಗಿದೆ. ಇದರಲ್ಲಿ ನಾನ್-ಮೆಲ್ಟ್ ಬ್ಲೋನ್ ತಾಂತ್ರಿಕತೆಯನ್ನು ಬಳಸಿಕೊಳ್ಳಲಾಗಿದೆ. ಇದರಿಂದಾಗಿ ಇದನ್ನು 50 ಬಾರಿ ತೊಳೆಯಬಹುದು ಮತ್ತು ಮರುಬಳಕೆ ಮಾಡಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು