ಸೋಮವಾರ, ಮೇ 23, 2022
21 °C

ಸ್ಲೀಪ್ ವೆಕೇಷನ್‌ಗೆ ಮಾರು ಹೋಗಿರುವ ಯುವ ಜನತೆ!

ಡಾ. ಸ್ಮಿತಾ ಜೆ.ಡಿ. Updated:

ಅಕ್ಷರ ಗಾತ್ರ : | |

ಬದಲಾದ ಜೀವನ ಶೈಲಿ, ಬದಲಾದ ಕೆಲಸದ ಸಮಯ, ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವುದು, ಕೆಲಸದ ಒತ್ತಡ, ನೈಟ್ ಪಾರ್ಟಿಸ್, ಮಾನಸಿಕ ಆತಂಕಗಳ ನಡುವೆ ಯುವ ಸಮುದಾಯದಲ್ಲಿ ಸ್ಲೀಪ್ ವೆಕೇಷನ್‌ ಎಂಬ ಪರಿಕಲ್ಪನೆ ಹುಟ್ಟಿಕೊಂಡಿದೆ. ಅದರ ಕುರಿತ ವಿವರಣೆ ಇಲ್ಲಿದೆ. 

ಏನಿದು ಸ್ಲೀಪ್ ವೆಕೇಷನ್?

ಹಿಂದೆಲ್ಲಾ ವೆಕೇಷನ್ ಎಂದರೆ ಪ್ರಪಂಚ ಪರ್ಯಟನೆ, ವಿದೇಶ ಪ್ರವಾಸ, ಅಲ್ಲಿನ ಜನಜೀವನ, ಆಹಾರ ಪದ್ಧತಿ, ಸಂಸ್ಕೃತಿ, ಸ್ಮಾರಕಗಳ ವೀಕ್ಷಣೆ ಮುಂತಾದವುಗಳ ಬಗ್ಗೆ ಮಾಹಿತಿ ಪಡೆಯುವುದಾಗಿತ್ತು. ಆದರೆ ಈಗಿನ ಬದಲಾದ ಜೀವನ ಶೈಲಿ, ಬದಲಾದ ಕೆಲಸದ ಸಮಯ, ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವುದು, ಕೆಲಸದ ಒತ್ತಡ, ನೈಟ್ ಪಾರ್ಟಿಸ್, ಮಾನಸಿಕ ಆತಂಕಗಳ ನಡುವೆ ಗುಣಮಟ್ಟದ ನಿದ್ರೆ ದೂರದ ಮಾತಾಗಿದೆ. ಕೈ ತುಂಬ ಸಂಪಾದನೆ ಇದ್ದರೂ ನೆಮ್ಮದಿಯ ನಿದ್ರೆ ದೂರವಾಗಿದೆ. ಇಂತಹ ನಿದ್ರೆಯ ಕೊರತೆಯನ್ನು ನೀಗಿಸಲು ಯುವ ಜನತೆ ಮಾರು ಹೋಗಿರುವುದು ಸ್ಲೀಪ್ ವೆಕೇಷನ್‌ಗೆ. ಸ್ಲೀಪ್ ವೆಕೇಷನ್ ಎಂದರೆ ಸುಂದರವಾದ ದೇಶ, ಸುಂದರವಾದ ಸ್ಥಳ, ಸುಂದರವಾದ ರೆಸ್ಟೋರೆಂಟ್‌ಗಳನ್ನು ಬುಕ್ ಮಾಡಿಕೊಂಡು ನಾಲ್ಕು ಗೋಡೆಯ ಒಳಗೆ ನಿದ್ರಿಸುವುದು. ವಿದೇಶಗಳಲ್ಲಿ 70% ಹೆಚ್ಚು ಜನ ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಸ್ಲೀಪ್ ವೆಕೇಷನ್ ತೆಗೆದುಕೊಳ್ಳುವುದು ಪ್ರಚಲಿತವಾಗಿದೆ. ಅನೇಕ ಹೋಟೆಲ್‌ಗಳು ವಿವಿಧ ಪ್ಯಾಕೇಜ್‌ಗಳೊಂದಿಗೆ ಯುವ ಜನತೆಯನ್ನು ಆಕರ್ಷಿಸುತ್ತಿವೆ.

ವಿಶ್ರಾಂತಿ ಹಾಗೂ ನವೀಕರಣ ಪ್ಯಾಕೇಜ್‌ಗಳಲ್ಲಿ

ಹೋಟೆಲ್ ರೂಮ್‌ಗಳಲ್ಲಿ ನೀರಿನಿಂದ ತುಂಬಿದ ದಿಂಬುಗಳು, ಹೊರ ವಲಯಗಳಿಂದ ಶಬ್ಧಬಾರದಂತೆ ನಾಯಿಸ್‌ಪ್ರೂಫ್ ಕೊಠಡಿಗಳು, ಸ್ಲೀಪ್ ಮಾಸ್ಕ್ಗಳು, ಕಪ್ಪು ಕರ್ಟನ್‌ಗಳು, ಮುಂತಾದವುಗಳನ್ನು ಒದಗಿಸುತ್ತವೆ. ಇದರಿಂದ ಆರಾಮದಾಯಕ ಆತಂಕರಹಿತ ವಿಶ್ರಾಂತಿಯನ್ನು ಪಡೆಯಬಹುದಾಗಿದೆ.

ಡಿಜಿಟಲ್ ಡಿಟಾಕ್ಸ್ ( Digital Dextox)

ಈ ಪ್ಯಾಕೇಜ್‌ನಲ್ಲಿ ಪ್ರವಾಸಿಗರು ಬಳಸುವ ಎಲ್ಲಾ ಎಲೆಕ್ಟಾçನಿಕ್ ಗ್ಯಾಜೆಟ್‌ಗಳನ್ನು ಒಂದು ಸುರಕ್ಷಿತ ಜಾಗದಲ್ಲಿ ಇರಿಸಲಾಗುವುದು. ಇದರಿಂದ ಮಲಗುವ ಕೋಣೆಯು ಗ್ಯಾಜೆಟ್ ಫ್ರೀ ಆಗುವುದಲ್ಲದೆ ನಿದ್ರೆಗೆ ದಾರಿ ಮಾಡಿಕೊಡುತ್ತವೆ. ಕೆಲವು ಮಾಗಸೀನ್‌ಗಳನ್ನು ಒದಗಿಸುತ್ತವೆ. ಇದರಿಂದ ಪುಸ್ತಕ ಓದುವ ಆಹ್ಲಾದವನ್ನು ಪಡೆಯಬಹುದಾಗಿದೆ.

ಸ್ಪಾ ಹಾಗೂ ಮಸಾಜ್ ಪ್ಯಾಕೇಜ್‌ಗಳಲ್ಲಿ ದೇಹವನ್ನು ಆರಾಮದಾಯಕವಾಗಿಸಲು ನವಿರಾದ ಮಸಾಜ್‌ಗಳನ್ನು ಸಹ ಒದಗಿಸುತ್ತವೆ. ದೇಹವು ಆರಾಮದಾಯಕವಾದಾಗ ನಿದ್ರೆಯ ಗುಣಮಟ್ಟವು ಹೆಚ್ಚುತ್ತದೆ.

ಆರೋಮ ಥೆರಪಿ

ವಿವಿಧ ಸುವಾಸನೆಯುಳ್ಳ ಎಣ್ಣೆಗಳಾದ, ಲ್ಯಾವೆಂಡರ್, ರೋಸ್, ಸ್ಯಾಂಡಲ್ ಮುಂತಾದ ಎಣ್ಣೆಗಳನ್ನು ಉಪಯೋಗಿಸುವುದರಿಂದ ಮನಸ್ಸಿಗೆ ಆಹ್ಲಾದಕರ ಅನುಭವ ಉಂಟಾಹುವುದಲ್ಲದೆ ಆಹ್ಲಾದಕರ ನಿದ್ರೆಯನ್ನು ಪಡೆಯಬಹುದಾಗಿದೆ.

ಆಹಾರ

ಹಗುರವಾದ ಆಹಾರ, ಸಾಲಡ್‌ಗಳು, ಹಣ್ಣುಗಳು, ಟೋಫು, ಸೋಯ, ಅವಕಾಡೋ ( Avacado) , ಡಾರ್ಕ್ ಚಾಕಲೇಟ್, ರೆಡ್ ವೈನ್, ಸೇಬು, ರೋಸ್‌ಮೆರಿ, ಬಾಳೆಹಣ್ಣು, ಚರ‍್ರಿ, ಮೀನು, ನಟ್ಸ್ ಮುಂತಾದ ನಿದ್ರೆಯನ್ನು ಪ್ರಚೋದಿಸುವ ಆಹಾರ ಪದಾರ್ಥಗಳನ್ನು ಒದಗಿಸಲಾಗುವುದು.
ವಿದೇಶಿ ಹೋಟೆಲ್‌ಗಳು , ಐಶಾರಾಮಿ ರೂಮುಗಳು, ವಿವಿಧ ಪ್ಯಾಕೇಗ್‌ಗಳ ನಡುವೆ ಯುವ ಜನತೆ ನಿದ್ರೆಗೆ ಮಾರು ಹೋಗಿದೆಯಾದರೂ ಹೊಸ ಜಾಗ, ವಾತಾವರಣದಲ್ಲಿ ನೆಮ್ಮದಿಯ ನಿದ್ರೆ ಕಷ್ಟಕರ ಎಂಬುದು ತಜ್ಞನವಾದ. ಆರೋಗ್ಯಕರ ಗುಣಮಟ್ಟದ ನಿದ್ರೆಗೆ ಬೇಕಾಗಿರುವುದು ಸಮತೋಲನ ಆಹಾರ, ಉತ್ತಮ ಜೀವನಶೈಲಿ, ಸಕಾರಾತ್ಮಕ ಚಿಂತನೆ ಹಾಗೂ ಒತ್ತಡ ರಹಿತ ಬದುಕು ಎನ್ನಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು