7

ವಿಶೇಷ ಯೋಗಿಕ ತಂತ್ರಗಳ ‘ಷಟ್‌ಕ್ರಿಯೆ’

Published:
Updated:

ಷಟ್‌ಕ್ರಿಯೆಗಳು ಸ್ಥೂಲ ಶರೀರವನ್ನು ಶುದ್ಧಗೊಳಿಸುತ್ತ ಸೂಕ್ಷ್ಮ ಶರೀರವನ್ನು ಶುದ್ಧೀಕರಣ ಮಾಡುವುದರಲ್ಲಿ ಅತ್ಯಂತ ಸಹಾಯಕವಾಗಿವೆ. ಈ ಕ್ರಿಯೆಗಳ ಅಭ್ಯಾಸದಿಂದ ಕಫರೋಗಗಳು, ಎಲ್ಲ ವಾತರೋಗಗಳು, ಪಿತ್ತರೋಗಗಳು, ಕುಷ್ಠರೋಗ, ಉದರರೋಗ, ಶ್ವಾಸಕೋಶಗಳ ವಿಕಾರ, ಹೃದಯ ಹಾಗೂ ಮೂತ್ರಪಿಂಡಗಳ ವಿಕೃತಿಗಳು ದೂರವಾಗುತ್ತವೆ. ಆದುದರಿಂದ ಸರ್ವಜನ ಹಿತಾಯ ಈ ಋಷಿಪ್ರೋಕ್ತ ಷಟ್ಕರ್ಮಗಳ ಸಂಕ್ಷಿಪ್ತ ವರ್ಣನೆ ಹೀಗಿದೆ.

ಮಾಲಿನ್ಯವನ್ನು ದೇಹದಿಂದ ಹೊರ ಹಾಕಲು ಇರುವ ವಿಧಾನವೇ ಷಟ್‌ಕ್ರಿಯ ಆಗಿದೆ. ಅವು ಮುಖ್ಯವಾಗಿ ಆರು ವಿಧವಾಗಿರುವುದರಿಂದ ಷಟಕ್ರಿಯೆಗಳು ಎಂದು ಪ್ರಚಲಿತವಾಗಿವೆ.

* ನೇತಿ: ಮೂಗಿನ ಹೊರಳೆಗಳಿಂದ ಗಂಟಲಿನವರೆಗಿನ ಶ್ವಾಸಮಾರ್ಗವನ್ನು ಶುಚಿಗೊಳಿಸುವುದು.

ನೇತಿಯ ಪ್ರಕಾರಗಳು: ಜಲನೇತಿ, ಸೂತ್ರನೇತಿ, ಘೃತನೇತಿ, ತೈಲನೇತಿ, ದುಗ್ಧನೇತಿ.ಜಲನೇತಿ: ಒಂದು ಲೀಟರ್ ನೀರಿನಲ್ಲಿ ಸುಮಾರು 10 ಗ್ರಾಂನಷ್ಟು ಸೈಂಧವ ಲವಣವನ್ನು ಹಾಕಿ ಉಗುರು ಬೆಚ್ಚಗೆ ಮಾಡಿ. ನೇತಿ ಮಾಡುವ ಪಾತ್ರೆಯಲ್ಲಿ ತುಂಬಿಸಿ. ಪಾತ್ರಃಕಾಲದ ಸಮಯದಲ್ಲಿ ಮಾಡಬೇಕು.

* ಧೌತಿ: ಬಾಯಿ, ಅನ್ನನಾಳ ಮತ್ತು ಜಠರದವರೆಗಿನ ಜೀರ್ಣವ್ಯವಸ್ಥೆಯ ಅಂಗಗಳನ್ನು ಶುಚಿಗೊಳಿಸುವುದು. ಧೌತಿ ಎಂದರೆ ತೊಳೆಯುವುದು ಎಂದರ್ಥ, ಇದರಲ್ಲಿ ವಮನಧೌತಿ, ಗಜಕರಣಿ, ವಸ್ತ್ರಧೌತಿ ಮತ್ತು ದಂಡಧೌತಿ.

* ಕಪಾಲಭಾತಿ: ಶ್ವಾಸ ಮಾರ್ಗವನ್ನು ಸ್ವಚ್ಛಗೊಳಿಸಿ (ಮೂಗಿನಿಂದ ಶ್ವಾಸಕೋಶಗಳವರೆಗೆ) ಮಿದುಳಿನ ಜೀವಕೋಶಗಳನ್ನು ಉಸಿರಾಟದ ಕೇಂದ್ರಗಳನ್ನು ಪ್ರಚೋದಿಸುವುದು ಮತ್ತು ನರಮಂಡಲಕ್ಕೆ ಪ್ರಚೋದನೆ ನೀಡುತ್ತದೆ.

* ನೌಲಿ: ಉದರದ ಸ್ನಾಯುಗಳನ್ನು ಬಲಗೊಳಿಸಿ ಒಳ ಆವರಣ ಶುಚಿಗೊಳಿಸುವುದು. ನೌಲಿಯಲ್ಲಿ ವಾಮ ನೌಲಿ, ದಕ್ಷಿಣ ನೌಲಿ, ಮಧ್ಯಮ ನೌಲಿ ಎಂದು ಪ್ರಕಾರಗಳಿವೆ. ಇದರಿಂದ ಮಂದಾಗ್ನಿ, ಮಲಬದ್ಧತೆ, ಗ್ಯಾಸ್, ಅತಿಸಾರ, ಸಂಗ್ರಹಣೆ, ಉದರದ ಬೊಜ್ಜು ಇತ್ಯಾದಿ ಸಮಸ್ತ ಉದರ ರೋಗಗಳನ್ನು ನಿಶ್ಚಿತರೂಪದಿಂದ ದೂರಮಾಡುತ್ತದೆ.

ತ್ರಾಟಕ: ಕಣ್ಣಿನ ದೋಷಗಳನ್ನು ಹೋಗಲಾಡಿಸಿ ನೇತ್ರಗಳನ್ನು ಶುಚಿಗೊಳಿಸುವುದು. ಮನಸನ್ನು ನಿಗ್ರಹಿಸಲು ಉಸಿರಾಟದೊಂದಿಗೆ ಕಣ್ಣಿನ ದೃಶ್ಯ ನಿಗ್ರಹ ಹಾಗೂ ದೃಶ್ಯ ಸ್ಥಿರತೆಗಾಗಿ ಸಾಧಿಸುವ, ಕ್ರಮಿಸುವ ವಿಧಾನವೇ ತ್ರಾಟಕ. ನಿರಂತರವಾಗಿ ದೃಷ್ಟಿಯನ್ನು ಒಂದು ಸ್ಥಿರವಾದ ಕೇಂದ್ರದ ಮೇಲೆ ನಿಲ್ಲಿಸುವುದೇ ತ್ರಾಟಕ. 

(ಸೂಚನೆ: ಸೂಕ್ತ, ನುರಿತ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಕ್ರಿಯೆಗಳ ಸಾಧನೆ ಮಾಡಬೇಕು.)

* ಬಸ್ತಿ: ಜಠರದ ಕೊನೆಯ ಭಾಗದಿಂದ ಪ್ರಾರಂಭಿಸಿ ಕರಳುಗಳನ್ನು ಮತ್ತು ವಿಶೇಷವಾಗಿ ಗುದಪ್ರದೇಶ ಭಾಗವನ್ನು ಶುಚಿಗೊಳಿಸುತ್ತದೆ.

ಜಲಬಸ್ತಿ ಮತ್ತು ಪವನಬಸ್ತಿ: ಈ ಸಾಧನೆಯಿಂದ ಮಲಬದ್ಧತೆ ಮತ್ತು ಕರುಳಿಗೆ ಸಂಬಂಧಿಸಿದ ರೋಗಗಳು ದೂರವಾಗುತ್ತವೆ. ಹೊಟ್ಟೆಯ ಉಷ್ಣತೆ ದೂರವಾಗುತ್ತದೆ. ಈ ಕ್ರಿಯೆ ಎನಿಮಾಕ್ಕಿಂತ ಹೆಚ್ಚು ಲಾಭಕಾರಿಯಾಗಿದೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !