7

ತಾರೆಯರ ಯೋಗ

Published:
Updated:

ಖಿನ್ನತೆಯಿಂದಾಗಿ ಬದುಕು ಮುಗಿದೇಹೋಯಿತು ಎಂಬ ಸಂದರ್ಭದಲ್ಲಿ ಯೋಗ ಕೈ ಹಿಡಿಯಿತು. ಇದೀಗ ಯೋಗವೇ ನನ್ನ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯದ ಮೂಲ ಸಾಧನವಾಗಿದೆ

– ಬಿಪಾಶಾ ಬಸು

ಮಗ ಹುಟ್ಟಿದ ನಂತರ ಸಿನಿಮಾ ಕಡಿಮೆ ಮಾಡಿದೆ. ನನ್ನ ಫಿಟ್ನೆಸ್‌ ಮಂತ್ರವಾಗಿದ್ದ ಯೋಗವನ್ನು ಜನರತ್ತ ಸೆಳೆದೊಯ್ಯಬೇಕು ಎನಿಸಿತು. ಅದೇ ಕಾರಣಕ್ಕೇ ಯೋಗ ಸಿಡಿ, ಡಿವಿಡಿಗಳನ್ನು ನಿರ್ಮಿಸತೊಡಗಿದೆ. ಅಂಕಣಗಳನ್ನು ಬರೆದೆ. ಯೋಗ ಪಟುವಾಗಿದ್ದು, ವಯಸ್ಸು ಕೇವಲ ಅಂಕಿಗಳಲ್ಲಿ ಹೆಚ್ಚುವಂತೆ ಮಾಡಿದೆ. ಆರೋಗ್ಯ ಅಥವಾ ನೋಟದಲ್ಲಿ ಅಲ್ಲ

ಶಿಲ್ಪಾ ಶೆಟ್ಟಿ

**

ಯೋಗಕ್ಕೆ ಯಾವುದೇ ಪರ್ಯಾಯವಿಲ್ಲ’

ನಾನು ತುಂಬಾ ವರ್ಷಗಳಿಂದ ಯೋಗ ಮಾಡುತ್ತಿದ್ದೆ. ಸದ್ಯಕ್ಕೆ ಯೋಗಾಭ್ಯಾಸ ಕಡಿಮೆಯಾಗಿದೆಯೇ ಹೊರತು ಸಂಪೂರ್ಣ ನಿಲ್ಲಿಸಿಲ್ಲ. ಸಮಯ ಸಿಕ್ಕಾಗಲೆಲ್ಲಾ ಮನೆಯಲ್ಲೇ ಯೋಗಾಭ್ಯಾಸ ಮಾಡುತ್ತೇನೆ.ಜೊತೆಗೆ ಬ್ಯಾಡ್ಮಿಂಟನ್ ಆಡುವುದು ಸದ್ಯಕ್ಕೆ ನನ್ನ ಪ್ರಾಶಸ್ತ್ಯವಾಗಿದೆ. ಯೋಗದ ನಿರಂತರ ಅಭ್ಯಾಸ ನಾವು ಸದಾ ಪಾಸಿಟಿವ್ ಆಗಿರಲು ಸಹಾಯಕ.

ಅಮೂಲ್ಯ, ನಟಿ

**

ಯಾವತ್ತೂ ಯೋಗ ಬಿಟ್ಟಿಲ್ಲ...

ನಾನು ಸುಮಾರು 12 ವರ್ಷಗಳಿಂದ ಯೋಗ ಮಾಡುತ್ತಾ ಬಂದಿದ್ದೇನೆ.  ಮಾನಸಿಕವಾಗಿ ಸದೃಢರಾಗಲು, ನಮ್ಮ ದೇಹದ ಆಂತರಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬ ಯೋಗ ಸಹಕಾರಿಯಾಗಿದೆ. ಯೋಗ ಗುರು ಅಥವಾ ಸಹಾಯಕರಿಲ್ಲದೇ ಇದ್ದಾಗ ಯಾವುದೇ ಕ್ಲಿಷ್ಟಕರ ಯೋಗಾಭ್ಯಾಸ ಮಾಡಬೇಕಿಲ್ಲ. ಸತತವಾಗಿ ನಿಮಗೆ ಗೊತ್ತಿರುವ ಯೋಗ, ಪ್ರಾಣಾಯಾಮಗಳನ್ನು ಮಾಡುವುದರಿಂದ ದೇಹಕ್ಕೆ ಹೊಸ ಚೈತನ್ಯ ಸಿಕ್ಕು, ದಿನ ಪೂರ್ತಿ ಕ್ರಿಯಾಶೀಲರಾಗಿರಲು ಸಹಾಯ ಮಾಡುತ್ತದೆ.

 ಶುಭಾ ಪೂಂಜಾ, ನಟಿ

**

ದಿನಚರಿಯಲ್ಲಿ ಯೋಗ ಕಡ್ಡಾಯವಾಗಬೇಕು’

ಮೊದಲು ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿದ್ದೆ. ನಂತರ ಕುದುರೆ ಓಡಿಸುವುದು, ಸೈಕ್ಲಿಂಗ್, ಡಾನ್ಸಿಂಗ್, ಬ್ಯಾಡ್ಮಿಂಟನ್ ಪ್ರಾಕ್ಟಿಸ್ ಇವುಗಳಿಗೆ ನಾನು ಪ್ರಾಮುಖ್ಯತೆ ಕೊಡುತ್ತೇನೆ. ಅದರ ಜೊತೆ ಪ್ರತಿದಿನ ಸೂರ್ಯ ನಮಸ್ಕಾರ ಮತ್ತು ಕೆಲವೊಂದು ಆಸನಗಳನ್ನು ಮಾಡಲು ಮರೆಯುವುದಿಲ್ಲ.

ಯೋಗ ಮಾಡುವಾಗಲೇ ಮನಸ್ಸು ಮತ್ತು ದೇಹಕ್ಕೆ ಆಹ್ಲಾದಕರ ಅನುಭವವಾಗುತ್ತದೆ. ಯೋಗ ನಮ್ಮ ಪ್ರತಿದಿನದ ದಿನಚರಿಯಲ್ಲಿ ಕಡ್ಡಾಯವಾದಾಗ ಮಾತ್ರ ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರಲು ಸಾಧ್ಯ.

 ಹರಿಪ್ರಿಯಾ, ನಟಿ


 

**

ಶಾಂತಿ, ನೆಮ್ಮದಿ ಸಿಗುತ್ತಿದೆ

ಸದ್ಯಕ್ಕೆ ಯೋಗ ಒಂದು ಬಿಟ್ಟರೆ ಮತ್ತೇನೂ ಗೊತ್ತಿಲ್ಲ. ಮನೆಯಲ್ಲೇ ಕುಳಿತು ಪ್ರಾಣಾಯಾಮ ಮತ್ತು ಆಸನಗಳನ್ನು ಮಾಡುತ್ತಿರುತ್ತೇನೆ. ಮನಸ್ಸಿಗೆ ಶಾಂತಿ, ನೆಮ್ಮದಿ ಎರಡೂ ಸಿಗುತ್ತದೆ. ಹೀಗಾಗಿ ಪ್ರತಿನಿತ್ಯ ಸ್ವಲ್ಪ ಸಮಯವನ್ನು ಯೋಗ ಮಾಡುವುದಕ್ಕೆ ಮೀಸಲಿಡುತ್ತೇನೆ.

 ಧನ್ವಿನ್ ಜೋಶಿ, ಕಿರುತೆರೆ ನಟ

**

ಯೋಗಾಭ್ಯಾಸ ಅನಿವಾರ್ಯ

ಮನುಷ್ಯನಿಗೆ ದೈಹಿಕ ಆರೋಗ್ಯ ಮತ್ತು ಸೌಂದರ್ಯದ ಜೊತೆಗೆ ಅವಶ್ಯವಾಗಿ ಬೇಕಾಗಿರುವುದು ಮಾನಸಿಕ ಸಮತೋಲನ. ಯೋಗದ ಮಹತ್ವವನ್ನು ಅರಿಯಲು ನಿರಂತರವಾಗಿ ಯೋಗ ಮಾಡುತ್ತಿರಬೇಕು. ನಾನು ಯೋಗದ ಜೊತೆಗೆ ವರ್ಕ್ ಔಟ್ ಕೂಡ ಮಾಡುತ್ತೇನೆ. ಸದಾಕಾಲ ಹಸನ್ಮುಖಿಯಾಗಿರಲು ಯೋಗವೂ ಮಹತ್ವ ಪಾತ್ರ ವಹಿಸುತ್ತಿದೆ.

ಸುಕೃತಾ ದೇಶಪಾಂಡೆ,  ನಟಿ

Tags: 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !