ಬೇಸಿಗೆ ಕಾಲವು ಮಕ್ಕಳ ಆರೋಗ್ಯದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಆಯುರ್ವೇದದಲ್ಲಿ ಈ ಕಾಲವನ್ನು ಗ್ರೀಷ್ಮ ಋತು ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ತಾಪಮಾನ ಹೆಚ್ಚಾಗುವುದರಿಂದ ದೇಹದ ದ್ರವಾಂಶ ಕಡಿಮೆಯಾಗುತ್ತದೆ ಮತ್ತು ಪಿತ್ತ ದೋಷ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳಿಗೆ ಸರಿಯಾದ ಆಹಾರ ಪದ್ಧತಿ ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ.

ಋತು ಪ್ರಭಾವ ಮತ್ತು ಮಕ್ಕಳ ಆರೋಗ್ಯ

ಬೇಸಿಗೆಯಲ್ಲಿ ದೇಹದ ಶಕ್ತಿ ನಿಧಾನವಾಗಿ ಕುಗ್ಗುತ್ತದೆ. ಹೆಚ್ಚು ಬಿಸಿಲು, ಬೆವರು ಮತ್ತು ನೀರಿನ ಕೊರತೆಯಿಂದ ಮಕ್ಕಳು ದೌರ್ಬಲ್ಯ, ದಾಹ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ಅನುಭವಿಸಬಹುದು.

ಮಕ್ಕಳಿಗೆ ಯಾವ ರೀತಿಯ ಆಹಾರ ಕೊಡಬೇಕು?

ದ್ರವ ಪದಾರ್ಥಗಳು: ತೆಂಗಿನಕಾಯಿ ನೀರು, ಮಜ್ಜಿಗೆ, ಹಣ್ಣಿನ ರಸ, ರಾಗಿ ಅಂಬಲಿ. ಇವುಗಳು ಮಕ್ಕಳ ದೇಹವನ್ನು ತಂಪಾಗಿಸುತ್ತವೆ.

ಹಣ್ಣುಗಳು: ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ, ದಾಳಿಂಬೆ, ಕಿತ್ತಳೆ, ಪಪ್ಪಾಯಿ, ಬಾಳೆಹಣ್ಣು. ಇವುಗಳು ದೇಹಕ್ಕೆ ತಂಪು ನೀಡುತ್ತವೆ ಮತ್ತು ಪಿತ್ತ ಶಮನ ಮಾಡುತ್ತವೆ.

ತರಕಾರಿಗಳು: ಸೌತೆಕಾಯಿ, ಸೋರೆಕಾಯಿ, ಕುಂಬಳಕಾಯಿ. ಇವು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ದೇಹವನ್ನು ತಂಪಾಗಿಸುತ್ತವೆ.

ಹಗುರ ಆಹಾರ: ಅನ್ನ, ಇಡ್ಲಿ, ಉಪ್ಪಿಟ್ಟು, ಮೊಸರನ್ನ. ಇವು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ದೇಹಕ್ಕೆ ಅಗತ್ಯವಾದ ಶಕ್ತಿ ನೀಡುತ್ತವೆ.

ಧಾನ್ಯಗಳು: ಅಕ್ಕಿ, ಗೋಧಿ, ರಾಗಿ ಸುಲಭವಾಗಿ ಜೀರ್ಣವಾಗುವ ಆಹಾರಗಳಾಗಿವೆ.

ಹಾಲು ಉತ್ಪನ್ನಗಳು: ಹಾಲು, ಮಜ್ಜಿಗೆ, ತುಪ್ಪ. ಇವುಗಳು ದೇಹಕ್ಕೆ ಪೋಷಣೆ ಮತ್ತು ಶೀತಲತೆ ನೀಡುತ್ತವೆ.

ಸಾತ್ವಿಕ ಆಹಾರ: ಕಿಚಡಿ, ಕಡಿಮೆ ಮಸಾಲೆಯುಕ್ತ ಆಹಾರ, ತರಕಾರಿ ಪದಾರ್ಥಗಳು ಮಕ್ಕಳಿಗೆ ಸೂಕ್ತ.

ಪ್ರೋಟೀನ್ ಆಹಾರ: ಹಾಲು, ಮೊಸರು, ಮೊಟ್ಟೆ, ಹೆಸರಕಾಳು, ಕಡಲೆಕಾಳು. ಇವುಗಳು ದೇಹದ ಬೆಳವಣಿಗೆಗೆ ಸಹಕಾರಿ.

ಯಾವ ಆಹಾರ ತಪ್ಪಿಸಬೇಕು?

ಹೆಚ್ಚು ಕಾರ, ಮಸಾಲೆ, ಎಣ್ಣೆಯುಕ್ತ ಆಹಾರ, ಪಾನೀಯಗಳಿಂದ ದೂರವಿಡಬೇಕು. ಇವು ಪಿತ್ತವನ್ನು ಹೆಚ್ಚಿಸಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಪೋಷಕರಿಗೆ ಸಲಹೆಗಳು

• ಮಧ್ಯಾಹ್ನದ ಬಿಸಿಲಿನಲ್ಲಿ ಹೊರಗೆ ಹೆಚ್ಚು ಹೊತ್ತು ಆಟವಾಡಲು ಬಿಡಬೇಡಿ

• ಬೆಳಗ್ಗೆ ಮತ್ತು ಸಂಜೆ ಆಟವಾಡಲು ಪ್ರೋತ್ಸಾಹಿಸಿ

• ದಿನಪೂರ್ತಿ ಸಾಕಷ್ಟು ನೀರು ಕುಡಿಯುವಂತೆ ನೋಡಿಕೊಳ್ಳಿ

• ದಿನಕ್ಕೆ 3–4 ಬಾರಿ ಲಘು ಆಹಾರ ನೀಡಿರಿ

ಒಟ್ಟಾರೆಯಾಗಿ ಸರಿಯಾದ ಆಹಾರ ಮತ್ತು ಜೀವನ ಶೈಲಿಯಿಂದ ಬೇಸಿಗೆಯಲ್ಲಿ ಮಕ್ಕಳ ಆರೋಗ್ಯವನ್ನು ಸುಲಭವಾಗಿ ಕಾಪಾಡಬಹುದು. ಆಯುರ್ವೇದದ ಸರಳ ನಿಯಮಗಳನ್ನು ಅನುಸರಿಸುವುದು ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಕಾರಿ. ಆರೋಗ್ಯವೇ ಸಂಪತ್ತು. ಮಕ್ಕಳಿಗೆ ಸೂಕ್ತ ಆಹಾರ ನೀಡುವುದು ಪೋಷಕರ ಜವಾಬ್ದಾರಿ.

(ಲೇಖಕರು: ಡಾ. ವಿಜಯಲಕ್ಷ್ಮಿ ಎಸ್. ಮಲ್ಲಣ್ಣವರ, ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರು, ಆಯುರ್ವೇದ ಮಕ್ಕಳ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.