ಬೇಸಿಗೆ ಕಾಲದ ಸಭೆ– ಸಮಾರಂಭಗಳು, ಭೋಜನಕೂಟಗಳು, ಜಾತ್ರೆ, ಸಂತೆಯಲ್ಲಿ ‘ಅಯ್ಯೋ ಇದೆಂಥ ಸೆಕೆ! ಎಷ್ಟೊಂದು ಬೆವರು!’ ಯಾಕಾದ್ರೂ ಇಷ್ಟು ಬೆವರುತ್ತಿದೆಯೋ’ ಎನ್ನುವ ಗೊಣಗಾಟ ಎಲ್ಲೆಲ್ಲೂ ಕೇಳಿ ಬರುತ್ತಿರುತ್ತದೆ. ಪ್ರಖರ ಬಿಸಿಲಿನಲ್ಲಿ ಕೆಲಸ ಮಾಡುವ ಎಷ್ಟೋ ಶ್ರಮಿಕರು, ಹೊಲದಲ್ಲಿ ಕೆಲಸ ಮಾಡುವ ರೈತರು ಬೆವರಿನಿಂದ ತೊಯ್ದು ತೊಪ್ಪೆಯಾಗಿ ಇರುವುದನ್ನು ನೋಡುತ್ತಿರುತ್ತೇವೆ. ಜ್ವರ ಬಂದು ಜ್ವರ ಇಳಿಯುವ ಹೊತ್ತಿನಲ್ಲಿ, ಭಯ, ಆತಂಕಗಳು ಉಂಟಾದಾಗ, ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾದಾಗ, ಋತುಬಂಧದ ಸಮಯದಲ್ಲಿಯೂ ತುಂಬಾ ಬೆವರು ಬರುತ್ತದೆ.

ಹಾಗಾದರೆ ಈ ಬೆವರು ಎಂದರೇನು? ಎಲ್ಲಿಂದ ಮತ್ತು ಏಕೆ ಉತ್ಪತ್ತಿಯಾಗುತ್ತದೆ, ಅದರಿಂದ ಆಗುವ ಸಹಾಯಗಳೇನು? ತೊಂದರೆಗಳೇನು ಎಂಬುದನ್ನು ನೋಡೋಣ.

ನಮ್ಮ ದೇಹದ ಅತ್ಯಂತ ದೊಡ್ಡ ಅಂಗವೆಂದರೆ ಅದು ಚರ್ಮ.

ದೇಹಕ್ಕೆ ರಕ್ಷಣೆ ಕೊಡುವುದರ ಜೊತೆಗೆ ದೇಹದ ತಾಪಮಾನವನ್ನು ಕಾಪಾಡುವ ಜವಾಬ್ದಾರಿಯನ್ನು ಚರ್ಮ ಹೊಂದಿದೆ. ಅದು ಸಾಧ್ಯವಾಗುವುದು ಸ್ವೇದ ಗ್ರಂಥಿಗಳಿಂದ ಉತ್ಪತ್ತಿಯಾಗುವ ಬೆವರಿನ ಮೂಲಕ.

ಬೆವರು ಎಂದರೇನು?: ಸ್ವೇದ ಗ್ರಂಥಿಗಳಿಂದ ಉತ್ಪತ್ತಿಯಾದ ನೀರು ಮತ್ತು ಲವಣಗಳ ಮಿಶ್ರಣ (ಸೋಡಿಯಂ, ಕ್ಲೋರೈಡ್, ಪೊಟ್ಯಾಷಿಯಂ, ಯೂರಿಯಾ, ಲ್ಯಾಕ್ಟಿಕ್ ಆಮ್ಲ, ಸಾರಜನಕ). ನಮ್ಮ ದೇಹದಲ್ಲಿ ಮುಖ್ಯವಾಗಿ ಎರಡು ರೀತಿಯ ಬೆವರು ಗ್ರಂಥಿಗಳಿವೆ. ದೇಹದ ಎಲ್ಲಾ ಭಾಗಗಳಲ್ಲಿ ಗ್ರಂಥಿಗಳಿದ್ದು, ಅಂಗೈ , ಪಾದಗಳು ಮತ್ತು ಹಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಸುರುಳಿಯಾಕಾರದ ಭಾಗ- ಬೆವರನ್ನುಉತ್ಪತ್ತಿ ಮಾಡಿದರೆ, ಕೊಳವೆಯಾಕಾರದ ಭಾಗ– ಬೆವರನ್ನು ಚರ್ಮದ ಮೇಲ್ಭಾಗಕ್ಕೆ ಸಾಗಿಸಿ, ಅಲ್ಲಿ ತೆರೆದುಕೊಳ್ಳುತ್ತದೆ. ವಾತಾವರಣದಲ್ಲಿ ಉಷ್ಣತೆ ಜಾಸ್ತಿಯಾದಾಗ ಸಕ್ರಿಯವಾಗಿ ಭಾಗವಹಿಸುವುದು ಈ ಗ್ರಂಥಿಗಳ ಕೆಲಸ.

ಎರಡನೆಯ ವಿಧವಾದ ಸ್ವೇದ ಗ್ರಂಥಿ ಕಾಣಿಸಿಕೊಳ್ಳುವುದು ಕಂಕುಳು, ಜನನೇಂದ್ರಿಯದ ಸುತ್ತ. ಈ ಗ್ರಂಥಿಗಳು ಸಕ್ರಿಯವಾಗುವುದು ಪ್ರೌಢಾವಸ್ಥೆಯಲ್ಲಿ. ಈ ಗ್ರಂಥಿಗಳಲ್ಲಿ ಉತ್ಪತ್ತಿಯಾದ ಬೆವರು ಸ್ವಲ್ಪ ಹೆಚ್ಚು ಜಿಗುಟಾಗಿರುತ್ತದೆ ಮತ್ತು ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಬೆರೆತಿರುತ್ತವೆ. ಈ ಗ್ರಂಥಿಯ ಇನ್ನೊಂದು ವಿಶೇಷ, ಬೆವರು ನೇರವಾಗಿ ಚರ್ಮಕ್ಕೆ ತೆರೆದುಕೊಳ್ಳದೆ ಕೂದಲಿನ ಕೋಶದ ದ್ವಾರಕ್ಕೆ ತೆರೆದುಕೊಳ್ಳುತ್ತದೆ.

ಒತ್ತಡ, ಭಯ, ಆತಂಕ, ಲೈಂಗಿಕ ಚಟುವಟಿಕೆಗಳ ಸಮಯದಲ್ಲಿ ಕಾರ್ಯನಿರ್ವಹಿಸುವುದು ಈ ಗ್ರಂಥಿಗಳು. ದೇಹಕ್ಕೆ ತನ್ನದೇ ಆದ ಒಂದು ಘಮಲನ್ನು ಕೊಡುವುದು ಈ ಗ್ರಂಥಿಗಳಿಂದ ಉತ್ಪತ್ತಿಯಾಗುವ ಬೆವರು.

ಚರ್ಮದ ಮೇಲ್ಭಾಗಕ್ಕೆ ಬಂದ ಬೆವರು ಆವಿಯಾಗುವ ಮೂಲಕ ದೇಹದ ಉಷ್ಣತೆಯನ್ನು ಪರಿಣಾಮಕಾರಿಯಾಗಿ ತಂಪಾಗಿಸುತ್ತದೆ. ಅಷ್ಟೇ ಅಲ್ಲದೆ ಶರೀರದಲ್ಲಿ ಉಪ್ಪು ಮತ್ತು ನೀರಿನ ಸಮತೋಲನವನ್ನು ಕಾಪಾಡುತ್ತದೆ. ಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ. ಸೋಂಕಿನಿಂದ ಕಾಪಾಡುತ್ತದೆ.

ಬೆವರಿನ ಪ್ರಮಾಣ: ಬೆವರಿನ ಪ್ರಮಾಣವು ನಮ್ಮ ದೈನಂದಿನ ಚಟುವಟಿಕೆ, ತಾಪಮಾನ, ಭಾವನಾತ್ಮಕ ಸ್ಥಿತಿಯನ್ನು ಅವಲಂಬಿಸಿದೆ. ಸುಮಾರು 300 ರಿಂದ 700 ಎಂ.ಎಲ್ನಷ್ಟು ನೀರು ನಮ್ಮ ಶರೀರದಿಂದ ಬೆವರಿನ ಮೂಲಕ ಹೊರ ಹೋಗಬಹುದು.

ಬೆವರು ಉತ್ಪತ್ತಿಯಾದ ಸಮಯದಲ್ಲಿ ಅದು ಯಾವುದೇ ವಾಸನೆಯನ್ನು ಹೊಂದಿರುವುದಿಲ್ಲ, ಆ ಬಳಿಕ ಚರ್ಮದಲ್ಲಿ ಇರುವ ಬ್ಯಾಕ್ಟೀರಿಯಾಗಳಿಂದ ವಾಸನೆ ಉಂಟಾಗುತ್ತದೆ.

ಬೆವರುವಿಕೆಗೆ ಕಾರಣಗಳು: ದೇಹವು ಇರಬೇಕಾದದ್ದಕಿಂತ ಹೆಚ್ಚು ಬೆಚ್ಚಗಾಗಿರುವುದನ್ನು ಮಿದುಳಿನಲ್ಲಿರುವ ಹೈಪಥಲಾಮಸ್ ಗುರುತಿಸಿ ಸ್ವೇದ ಗ್ರಂಥಿಗಳಿಗೆ , ದೇಹವನ್ನು ತಂಪಾಗಿಸಲು ಸೂಚನೆ ನೀಡುವುದರಿಂದ ಬೆವರಿನ ಉತ್ಪತ್ತಿಯಾಗುತ್ತದೆ. ಉದಾಹರಣೆಗೆ ವಾತಾವರಣದಲ್ಲಿ ಉಷ್ಣತೆ ಹೆಚ್ಚಿದಾಗ, ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದಾಗ, ವ್ಯಾಯಾಮ ಮಾಡುವಾಗ ಬೆವರು ಉತ್ಪತ್ತಿ ಆಗುತ್ತದೆ. ಭಯ, ಆತಂಕ, ಒತ್ತಡ , ಕೋಪ ಬಂದಾಗ, ಹೃದಯಬಡಿತ ಏರಿದಾಗ , ಸೆರೆಬ್ರಲ್ ಕಾರ್ಟೆಕ್ಸ್ನ ಸೂಚನೆಗೆ ಅನುಸಾರವಾಗಿ ಉತ್ಪತ್ತಿಯಾಗುತ್ತದೆ. ಬಿಸಿ ಆಹಾರ , ಸಿಹಿ ಪದಾರ್ಥ, ಮಸಾಲೆ ಬೆರೆಸಿದ ಆಹಾರ ಸೇವನೆ ಮಾಡಿದ ಬಳಿಕ, ಕಾಫಿ, ಟೀ ಕುಡಿದ ತಕ್ಷಣ ಹೆಚ್ಚು ಬೆವರುವುದು.

ಮಲೇರಿಯಾ, ಟೈಫಾಯಿಡ್, ಮಿದುಳು ಜ್ವರ ಕಡಿಮೆಯಾಗುವ ಸಮಯದಲ್ಲಿ ಅಥವಾ ಜ್ವರ ಕಡಿಮೆ ಮಾಡುವ ಮಾತ್ರೆಯನ್ನು ತೆಗೆದುಕೊಂಡು, ದೇಹದ ಉಷ್ಣತೆ ಕಮ್ಮಿಯಾಗುವ ಸಂದರ್ಭದಲ್ಲಿ ಬೆವರುವಿಕೆ ಕಾಣಿಸಿಕೊಳ್ಳುತ್ತದೆ.

ಬೆವರುವಿಕೆ ಕಾಯಿಲೆಯ ಸೂಚನೆ?!

ಮಧುಮೇಹ ಇದ್ದವರಲ್ಲಿ ಸಕ್ಕರೆ ಅಂಶ ಕಡಿಮೆಯಾದ ಸಂದರ್ಭ ದೇಹವೆಲ್ಲಾ ಬೆವರುವುದು ಒಂದು ಸೂಚನೆ. ಶರೀರದಲ್ಲಿ ಥೈರಾಯಿಡ್ ಜೀವರಸಧಾತುಗಳು ಹೆಚ್ಚಾಗಿದ್ದಾಗ ಶರೀರದ ಚಯಾಪಚಯ ಕ್ರಿಯೆ ಕ್ಷಿಪ್ರವಾಗಿ ನಡೆಯುತ್ತಿರುತ್ತದೆ. ದೇಹದ ಉಷ್ಣತೆ ಹೆಚ್ಚುವುದರಿಂದ ಅದನ್ನು ಸರಿಪಡಿಸಲು ದೇಹದಲ್ಲಿ ಬೆವರಿನ ಉತ್ಪತ್ತಿ ಹೆಚ್ಚಾಗುತ್ತದೆ. ಹೃದಯಾಘಾತ ಉಂಟಾದಾಗ, ನೋವಿನ ಜೊತೆಗೆ ಶರೀರದಲ್ಲಿ ಪೂರ್ತಿ ಬೆವರುವಿಕೆ ಕಾಣಿಸಿಕೊಳ್ಳಬಹುದು. ಋತುಬಂಧದ ಸಮಯದಲ್ಲಿ ವಾತಾವರಣದ ಉಷ್ಣತೆ ಸಹಜವಾಗಿದ್ದಾಗಲೂ ರಾತ್ರಿ ಬೆವರುವಿಕೆ ಕಾಣಿಸಿಕೊಳ್ಳುತ್ತದೆ. ಸ್ಥೂಲಕಾಯ ಇರುವವರಲ್ಲಿ, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರಲ್ಲಿ, ಖಿನ್ನತೆಗೆ ತೆಗೆದುಕೊಳ್ಳುವ ಔಷಧಗಳಿಂದ, ಕೆಲವು ರಕ್ತದೊತ್ತಡ ಕಡಿಮೆ ಮಾಡುವ ಔಷಧ ಹೆಚ್ಚು ಬೆವರುವಂತೆ ಮಾಡಬಹುದು. ಹೈಪರ್ ಹೈಡ್ರೋಸಿಸ್ ಇರುವವರಲ್ಲಿ ಯಾವುದೇ ಕಾರಣವಿಲ್ಲದೆ ಅತಿಯಾಗಿ ಬೆವರುತ್ತದೆ. ಈ ಸಮಸ್ಯೆ ಇರುವವರಲ್ಲಿ, ಅಂಗೈ , ಪಾದ ಮತ್ತು ಕಂಕುಳು ಕೆಳಗೆ ವಿಪರೀತವಾಗಿ ಬೆವರು ಉತ್ಪತ್ತಿ ಯಾಗುತ್ತದೆ. ದೇಹದ ಸಿಂಪೆಥೆಟಿಕ್ ನರಗಳು ವಿಪರೀತವಾಗಿ ಸ್ಪಂದಿಸುವುದೇ ಇದಕ್ಕೆ ಕಾರಣ.

ಅನನುಕೂಲಗಳು: ಬೆವರು ಸಾಲೆ (ಹೀಟ್ ರ್ಯಾಷ್): ಬೆವರಿನಗ್ರಂಥಿಗಳು ಮುಚ್ಚಿ ಹೋಗಿ ಬೆವರು ಚರ್ಮದ ಅಡಿಯಲ್ಲಿ ಸಿಕ್ಕಿಹಾಕಿಕೊಂಡಾಗ ಕೆಂಪು ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ . ವಿಪರೀತ ತುರಿಕೆಯನ್ನು ಉಂಟುಮಾಡುತ್ತವೆ. ಮತ್ತೆ ತುರಿಸಿಕೊಳ್ಳುವುದರಿಂದ ನೋವು, ಕಿರಿಕಿರಿಯು ಉಂಟಾಗುವ ಸಾಧ್ಯತೆ ಇದೆ. ಶರೀರದ ತೇವಾಂಶ ಹೆಚ್ಚುವುದರಿಂದ ಬ್ಯಾಕ್ಟೀರಿಯಾ/ ವೈರಸ್ ಬೆಳೆದು ಚರ್ಮದ ಸೋಂಕುಗಳನ್ನು ಉಂಟುಮಾಡಬಹುದು. ದೇಹದಲ್ಲಿ ತೇವಾಂಶ ಹೆಚ್ಚುವುದರಿಂದ ಫಂಗಸ್ ಬೆಳೆದು, ತೊಡೆ ಸಂದುಗಳಲ್ಲಿ, ಕಂಕುಳು ಕೆಳಗೆ ರಿಂಗ್ ವರ್ಮ್ ಉಂಟಾಗಬಹುದು. ಶರೀರದಲ್ಲಿ ನೀರು ಮತ್ತು ಲವಣದ ಅಂಶ ಕಡಿಮೆಯಾಗಿ ವಿಪರೀತ ಸುಸ್ತು, ತಲೆ ನೋವು, ಮೈಕೈ ನೋವು ಕಾಣಿಸಿ ಕೊಳ್ಳಬಹುದು.

ಹೀಗೆ ಕಾಪಾಡಿಕೊಳ್ಳಿ

ಪ್ರತಿದಿನ ಎರಡು ಹೊತ್ತು ತಣ್ಣೀರಿನಲ್ಲಿ ಸ್ನಾನ ಮಾಡಿ. ಇದರಿಂದ ದೇಹದಲ್ಲಿರುವ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆಯಾಗುತ್ತದೆ.

ಸಡಿಲವಾದ, ತೆಳು ಬಣ್ಣದ ಹತ್ತಿ, ರೇಷ್ಮೆಯಂಥ ನೈಸರ್ಗಿಕ ಬಟ್ಟೆಗಳನ್ನು ಬಳಸಿ. ಇದರಿಂದ ಚರ್ಮ ಸಹಜವಾಗಿ ಉಸಿರಾಡುತ್ತದೆ.

ವ್ಯಾಯಾಮ ಮಾಡುವಾಗ ತೇವಾಂಶ ಹೊರಹಾಕಲು ಸಹಾಯವಾಗುವಂಥ ವಿನ್ಯಾಸವಿರುವ ಬಟ್ಟೆಗಳನ್ನು ಬಳಸಿ.

ಸಾಕಷ್ಟು ನೀರು ಕುಡಿಯಿರಿ.

ನೀರಿನ ಅಂಶ ಹೆಚ್ಚಿರುವ ತರಕಾರಿ, ಹಣ್ಣು –ಹಂಪಲುಗಳನ್ನು ಬಳಸಿ, ಕಾಫಿ, ಟೀ, ಮಸಾಲೆಯುಕ್ತ ಆಹಾರವನ್ನು ಕಡಿಮೆ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.