ಬುಧವಾರ, ಜುಲೈ 28, 2021
21 °C
ನಾಳೆ ವಿಶ್ವ ರಕ್ತದಾನಿಗಳ ದಿನ

ಸುರಕ್ಷಿತ ರಕ್ತದಾನಕ್ಕೆ ಸೂತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19 ಶುರುವಾದಾಗಿನಿಂದ ಇತರ ವೈದ್ಯಕೀಯ ಸೌಲಭ್ಯಗಳಲ್ಲೂ ಬದಲಾವಣೆಗಳಾಗಿವೆ. ಲಾಕ್‌ಡೌನ್‌ನಿಂದಾಗಿ ರಕ್ತದಾನಿಗಳ ಸಂಖ್ಯೆಯೂ ಗಣನೀಯವಾಗಿ ಕುಸಿದಿದೆ. ರಕ್ತ ಸಂಗ್ರಹಾಗಾರಗಳು ರಕ್ತದ ಸಂಗ್ರಹದಲ್ಲಿ ಕೊರತೆ ಎದುರಿಸುತ್ತಿವೆ. ಕೆಲವು ಕಡೆ ಶೇ 70ರಷ್ಟು ಕೊರತೆ ಕಂಡುಬಂದಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಿ.ಡಿ.ಸಿ. ಕೂಡ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸೂಚಿಸಿದೆ. ರಕ್ತದ ಹಾಗೂ ಪ್ಲಾಸ್ಮಾ ಸಂಗ್ರಹ ಕುರಿತಂತೆ ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಹೇಳಿದೆ.

ರಕ್ತ ಸಂಗ್ರಹಾಗಾರಗಳಲ್ಲಿ ಸ್ವಚ್ಛತೆ ಬಗ್ಗೆ ಹಾಗೂ ಅಲ್ಲಿ ಕಾರ್ಯ ನಿರ್ವಹಿಸುವವರು ಆರೋಗ್ಯದ ಕಡೆ ಗಮನ ನೀಡಬೇಕು. ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ರಜಾ ನೀಡಬೇಕು. ಕೈಗಳನ್ನು ಶುದ್ಧಗೊಳಿಸಿಕೊಳ್ಳುವುದಲ್ಲದೇ, ಅಲ್ಲಿ ಆಗಾಗ ಸೋಂಕು ನಿವಾರಕಗಳಿಂದ ಶುದ್ಧಗೊಳಿಸಬೇಕು. ರಕ್ತದಾನಿಗಳು ಬಂದಾಗ ಅಂತರ ಕಾಪಾಡಬೇಕು. ಎಲ್ಲಾ ಸಿಬ್ಬಂದಿಗೂ ಕೋವಿಡ್‌ –19 ಕುರಿತಂತೆ ಸುರಕ್ಷತಾ ಕ್ರಮಗಳ ಅರಿವಿರಬೇಕು.

ರಕ್ತದಾನಿಗಳೂ ಅಷ್ಟೆ. ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲದವರು, ಇತ್ತೀಚೆಗೆ ಯಾವುದೇ ರೀತಿಯ ಕಾಯಿಲೆಗೆ ಒಳಗಾಗದೆ ಆರೋಗ್ಯವಾಗಿರುವವರು ರಕ್ತದಾನ ಮಾಡಬಹುದು. ಅವರು ಕೂಡ ರಕ್ತದಾನ ಮಾಡಲು ಹೋದಾಗ ಕೈಗಳಿಗೆ ಸ್ಯಾನಿಟೈಜ್‌ ಮಾಡಿಕೊಳ್ಳುವುದು, ಮುಖ ಮುಟ್ಟದೇ ಇರುವುದು, ಮುಖಗವಸು ಹಾಕಿಕೊಳ್ಳುವುದು ಮೊದಲಾದ ಸುರಕ್ಷತಾ ಸೂತ್ರಗಳನ್ನು ಅನುಸರಿಸಬೇಕು. ರಕ್ತದಾನ ಮಾಡಿ ಮನೆಗೆ ಮರಳಿದ ನಂತರ ತೊಟ್ಟ ಉಡುಪು ತೊಳೆದು ಹಾಕಿ ಸ್ನಾನ ಮಾಡುವುದು ಒಳಿತು. ಮುಖ ಹಾಗೂ ಮೂಗಿಗೆ ಹಬೆ ತೆಗೆದುಕೊಳ್ಳುವುದರಿಂದ ಸೋಂಕನ್ನು ತಡೆಗಟ್ಟಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು