ಸೋಮವಾರ, ಜನವರಿ 17, 2022
27 °C

ಆರೋಗ್ಯ ರಕ್ಷಣೆಗೆ ಲಸಿಕೀಕರಣ, ಹೆಚ್ಚು ಜಲಾಂಶ ಸಹಾಯಕಾರಿ: ನಾರಾಯಣ ಹೆಲ್ತ್ ಸಿಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಋತುವಿನಲ್ಲಿ ಆರೋಗ್ಯ ರಕ್ಷಣೆಗೆ ಲಸಿಕೀಕರಣ ಮತ್ತು ಹೆಚ್ಚು ಜಲಾಂಶ ನೆರವಾಗುತ್ತದೆ: ನಾರಾಯಣ ಹೆಲ್ತ್ ಸಿಟಿ ಸಲಹೆ

ಭಾರೀ ಮಳೆಯ ಜೊತೆಗೆ ನಗರದಲ್ಲಿ ತಾಪಮಾನದ ಕುಸಿತವು ಜನರ ಆರೋಗ್ಯದ ಮೇಲೆ ಏರಿಳಿತವನ್ನು ಉಂಟುಮಾಡುತ್ತಿದೆ.  ನಾರಾಯಣ ಹೆಲ್ತ್ ಸಿಟಿಯ ವೈದ್ಯರ ಪ್ರಕಾರ, ನಗರದಲ್ಲಿ ಕಂಡುಬರುತ್ತಿರುವ ಶೀತ ಹವಾಮಾನವು ವೈರಲ್ ಪುನರಾವರ್ತನೆಗಳಿಗೆ ಅನುಕೂಲಕರವಾಗಿದೆ. ಆಸ್ತಮಾ ರೋಗದ ಪ್ರಮಾಣ ಮತ್ತು ತೀವ್ರತೆಯಲ್ಲಿ ಹೆಚ್ಚಳ ಕಂಡುಬಂದಿದೆ. ಅಕಾಲಿಕ ಮಳೆಯಿಂದಾಗಿ ನಗರ ಪ್ರದೇಶಗಳಲ್ಲಿ ನೀರು ನಿಲ್ಲುವುದರಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ.
 
 ಕಳೆದ 2 ವಾರಗಳಿಂದ ಅಸ್ತಮಾ ಸಂಭವವು ಶೇಕಡ 20 ರಿಂದ 30 ರಷ್ಟು ಏರಿಕೆಯಾಗಿದೆ

ಬೆಂಗಳೂರಿನ ಜನರ ಆರೋಗ್ಯದ ಮೇಲೆ ಹವಾಮಾನದ ಪ್ರಭಾವದ ಬಗ್ಗೆ ವಿವರಿಸಿದ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಆಂತರಿಕ ಔಷಧಿ ಸಲಹೆಗಾರ ಡಾ.ಮಹೇಶ್ ಕುಮಾರ್ ಹೇಳುವಂತೆ 'ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ ಕಳೆದ 2 ವಾರಗಳಲ್ಲಿ ಆಸ್ತಮಾ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಶೇಕಡ 15 ರಿಂದ ಶೇಕಡ 20ರಷ್ಟು ಏರಿಕೆಯಾಗಿದೆ. ಡೆಂಘಿ ಮತ್ತು ಚಿಕುನ್‍ ಗುನ್ಯಾ ಪ್ರಕರಣಗಳ ಸಂಖ್ಯೆಯಲ್ಲಿ ಕೂಡಾ ಗಣನೀಯ ಹೆಚ್ಚಳವಾಗಿದೆ. ಆದರೆ, ಆತಂಕಕಾರಿ ವಿಷಯವೆಂದರೆ ಸೋಂಕಿನ ತೀವ್ರತೆ ಅಧಿಕವಾಗಿದ್ದು, ವಿಶೇಷವಾಗಿ ಡೆಂಗ್ಯೂ ಸಂದರ್ಭದಲ್ಲಿ ಕೋವಿಡ್ ಸೋಂಕಿನ ಇತಿಹಾಸ ಹೊಂದಿರುವವರಲ್ಲಿ ಈ ಬಾರಿ ಸೋಂಕಿನ ಪರಿಣಾಮ ತುಲನಾತ್ಮಕವಾಗಿ ಹೆಚ್ಚಿರುವುದು ಕಂಡುಬಂದಿದೆ. ಕೋವಿಡ್‍ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಜೀವಕೋಶದ ಪ್ರತಿರಕ್ಷೆ ಕಡಿಮೆಯಾಗಿರುವ ಕಾರಣದಿಂದಾಗಿ, ಸೋಂಕು ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ದೀರ್ಘಕಾಲದ ಅನಾರೋಗ್ಯ ಮತ್ತು ಕೆಲವೊಮ್ಮೆ ಪ್ಲೇಟ್‍ಲೆಟ್ ಎಣಿಕೆಗಳಲ್ಲಿ 20,000 ಕ್ಕಿಂತ ಕಡಿಮೆ ಮತ್ತು ಅದಕ್ಕಿಂತ ಕಡಿಮೆಯಾಗುವ ಅಪಾಯವನ್ನು ಉಂಟುಮಾಡುತ್ತದೆ. ಹೀಗಾಗಿ, ಹೆಚ್ಚಿನ ಕಾಳಜಿ ಹಾಗೂ ತಡೆಗಟ್ಟುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಿದೆ. 

ಕೆಮ್ಮು, ಉಸಿರಾಟದ ತೊಂದರೆ ಮತ್ತು ಕಡಿಮೆ ಪ್ರಮಾಣದ ಜ್ವರವು ಆಸ್ತಮಾ ರೋಗದ ಆರಂಭಿಕ ಲಕ್ಷಣಗಳಾಗಿವೆ. ಮೌಖಿಕ ಪ್ಯಾರಸಿಟಮಾಲ್ ಮತ್ತು ಮನೆಮದ್ದುಗಳೊಂದಿಗೆ ಕಡಿಮೆಯಾಗದ ತೀವ್ರ ಜ್ವರ, ತೀವ್ರವಾದ ತಲೆನೋವು ಮತ್ತು ಕೀಲು ನೋವುಗಳು ಡೆಂಗ್ಯೂ ಮತ್ತು ಚಿಕೂನ್‍ಗುನ್ಯಾದ ಲಕ್ಷಣಗಳಾಗಿವೆ.

ನಿಯಮಿತವಾಗಿ ಕೈ ತೊಳೆಯುವುದು, ಸಾಮಾಜಿಕ ಅಂತರ, ವೈದ್ಯರ ಜತೆ ಸಂಪರ್ಕದಲ್ಲಿ ಇರುವುದು ಮತ್ತು ವೈದ್ಯರ ಸಲಹೆಯನ್ನು ಅನುಸರಿಸುವುದು ಅಸ್ತಮಾ ರೋಗದ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಮುಂಗಾರು ಋತುವಿನ ಆರಂಭದಲ್ಲಿ ನೀಡಲಾದ ಇಂಫ್ಲುಯೆಂಜಾ ಮತ್ತು ನ್ಯುಮೋಕೊಕಲ್ ಲಸಿಕೆಗಳು ಆಸ್ತಮಾ ಉಲ್ಬಣಗಳನ್ನು ಗಣನೀಯವಾಗಿ ಕಡಿಮೆಗೊಳಿಸುತ್ತವೆ ಎಂದು ದೃಢಪಟ್ಟಿದೆ. ಆದ ಕಾರಣ, ಆಸ್ತಮಾದ ಇತಿಹಾಸವನ್ನು ಹೊಂದಿರುವ ಜನರು ರೋಗನಿರೋಧಕ ಲಸಿಕೆಯನ್ನು ಪರಿಗಣಿಸಬಹುದಾಗಿದೆ.

ಉದ್ದ ತೋಳಿನ ಅಂಗಿ, ಉದ್ದನೆಯ ಪ್ಯಾಂಟ್ ಮತ್ತು ಚಪ್ಪಲಿಗಳ ಬದಲಿಗೆ ಶೂಗಳನ್ನು ಧರಿಸುವುದು, ಸೊಳ್ಳೆ ನಿವಾರಕಗಳನ್ನು ಬಳಸುವುದು, ಸಂಜೆಯ ಸಮಯದಲ್ಲಿ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚುವುದು, ಡೆಂಘಿ ವೈರಸ್‍ಗಳನ್ನು ಹೊತ್ತೊಯ್ಯುವ ಸೊಳ್ಳೆಗಳು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಹೆಚ್ಚು ಸಕ್ರಿಯವಾಗಿರುತ್ತವೆ ಮತ್ತು ಸಾಕಷ್ಟು ನೀರು ಹಾಗೂ ತಾಜಾ ಹಣ್ಣಿನ ರಸವನ್ನು ಕುಡಿಯುವ ಮೂಲಕ ಜಲಾಂಶವನ್ನು ನಮ್ಮಲ್ಲಿ ಹೆಚ್ಚಿಸಿಕೊಳ್ಳುವುದರ ಜತೆಗೆ ತಾಜಾ ಹಣ್ಣುಗಳ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ. 

ವ್ಯಾಯಾಮ ಮತ್ತು ಯೋಗವನ್ನು ಅಭ್ಯಾಸ ಮಾಡುವ ಮೂಲಕ ನಿಮ್ಮನ್ನು ಸದೃಢ ಮತ್ತು ಸಕ್ರಿಯವಾಗಿರಿಸಿಕೊಳ್ಳುವುದು ಉತ್ತಮ ಅಭ್ಯಾಸವಾಗಿದ್ದು ಅದು ಸೋಂಕುಗಳನ್ನು ದೂರ ಇಡಲು ಸಹಾಯ ಮಾಡುತ್ತದೆ. ವೈಯಕ್ತಿಕ ಯೋಗಕ್ಷೇಮದ ಹೊರತಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳವಾದ ನೀರು ಸಂಗ್ರಹಿಸಲು ಬಳಸುವ ಬಕೆಟ್‍ಗಳು ಮತ್ತು ಡ್ರಮ್‍ಗಳನ್ನು ಯಾವಾಗಲೂ ಮುಚ್ಚಿ ಇಡುವುದು, ಎಲ್ಲಾ ಖಾಲಿ ಹೂವಿನ ಕುಂಡಗಳನ್ನು ಸ್ವಚ್ಛಗೊಳಿಸುವುದು ಅಗತ್ಯ. ಇದು  ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಸಾಕುಪ್ರಾಣಿಗಳನ್ನು ಹೊಂದಿದ್ದರೆ, ಈ ಋತುವಿನಲ್ಲಿ ನೀರಿನ ಬಟ್ಟಲುಗಳು ಸ್ವಚ್ಛವಾಗಿವೆ ಮತ್ತು ಖಾಲಿಯಾಗಿವೆ ಎಂದು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ, ನಿಂತಿರುವ ನೀರಿನಲ್ಲಿ ಡೆಂಘಿ ಸೊಳ್ಳೆಗಳ ಸಂತಾನೋತ್ಪತ್ತಿ ನಡೆಯುತ್ತದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು