ವಿಟಮಿನ್ ಡಿ ಒಂದು ವಿಶಿಷ್ಟ ಪೋಷಕಾಂಶವಾಗಿದ್ದು, ಇದು ಹಾರ್ಮೋನ್ನಂತೆ ಕಾರ್ಯನಿರ್ವಹಿಸುತ್ತದೆ. ಇದು ನೂರಕ್ಕೂ ಹೆಚ್ಚು ಶಾರೀರಿಕ ಕ್ರಿಯೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮುಖ್ಯವಾಗಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಹಾಗೂ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.

ವಿಟಮಿನ್ ಡಿ ಅನ್ನು ಆಹಾರ ಸೇವನೆಯಿಂದ ಮಾತ್ರ ಸಮರ್ಪಕವಾಗಿ ಪಡೆಯುವುದು ಕಷ್ಟ. ಏಕೆಂದರೆ ಬಹಳ ಕಡಿಮೆ ಆಹಾರಗಳಲ್ಲಿ ಇದು ಸಹಜವಾಗಿ ಲಭ್ಯವಿರುತ್ತದೆ. ವಿಟಮಿನ್ ಡಿ ಎರಡು ರೂಪಗಳಲ್ಲಿ ದೊರೆಯುತ್ತದೆ.
.ಚಳಿಗಾಲದಲ್ಲಿ ‘ವಿಟಮಿನ್ ಡಿ’ ಕೊರತೆಗೆ ಕಾರಣವೇನು? ಹೆಚ್ಚಿಸಲು ಇಲ್ಲಿದೆ ಸಲಹೆ.‘ವಿಟಮಿನ್ ಡಿ’ ಕೊರತೆಯಿದ್ದಲ್ಲಿ ಕಣ್ಣುಬೇನೆ ತೀವ್ರ: ಡಾ. ರೋಹಿತ್ ಶೆಟ್ಟಿ.
ವಿಟಮಿನ್ ಡಿ2 (ಎರ್ಗೋಕ್ಯಾಲ್ಸಿಫೆರಾಲ್): ಸಸ್ಯಗಳು, ಅಣಬೆಗಳು ಮತ್ತು ಯೀಸ್ಟ್ನಿಂದ ಪಡೆಯಲಾದ ವಿಟಮಿನ್ ಡಿಯ ಒಂದು ರೂಪವಾಗಿದೆ. ಇದು ಸಸ್ಯಾಹಾರಿಗಳಿಗೆ ಉತ್ತಮ ಮೂಲವಾಗಿದೆ.

ವಿಟಮಿನ್ ಡಿ3 (ಕೊಲೆಕ್ಯಾಲ್ಸಿಫೆರಾಲ್): ಮೀನು, ಮೊಟ್ಟೆ ಸೇವನೆಯಿಂದ ಹಾಗೂ ಸೂರ್ಯಕಿರಣಗಳು ಚರ್ಮದ ಮೇಲೆ ಬೀಳುವುದರಿಂದ ದೇಹದಲ್ಲಿ ಸ್ವಾಭಾವಿಕವಾಗಿ ಉತ್ಪತ್ತಿಯಾಗುತ್ತದೆ

ವಿಟಮಿನ್ ಡಿ ಪಡೆಯಲು ಸಾಮಾನ್ಯವಾಗಿ ವಾರದಲ್ಲಿ ಕೆಲವು ದಿನಗಳು ಮಧ್ಯಾಹ್ನದ ಸೂರ್ಯನ ಬೆಳಕಿನಲ್ಲಿ 10 ರಿಂದ 30 ನಿಮಿಷ ಕಳೆಯುವುದು ಬಹುತೇಕರಿಗೆ ಸಾಕಾಗುತ್ತದೆ. ಆದರೆ ಇದು ಚರ್ಮದ ಬಣ್ಣ, ಹವಾಮಾನವನ್ನು ಅವಲಂಬಿಸಿದೆ. ವಿಟಮಿನ್ ಡಿ ಕೊರತೆಯಿಂದ ಎಲುಬು ನೋವು, ಸ್ನಾಯು ದುರ್ಬಲತೆ ಮತ್ತು ಮುರಿತದ ಅಪಾಯ ಹೆಚ್ಚಾಗಬಹುದು.

ವಿಟಮಿನ್ ಡಿ ಕೊರತೆಯಿಂದ ಎಲುಬು ನೋವು, ಸ್ನಾಯು ದುರ್ಬಲತೆ ಮತ್ತು ಮುರಿತದ ಅಪಾಯ ಹೆಚ್ಚಾಗಬಹುದು. ಅದೇ ರೀತಿ, ವಿಟಮಿನ್ ಡಿ ಅತಿಯಾದರರೂ ಸಮಸ್ಯೆ ಕಟ್ಟಿಟ್ಟಬುತ್ತಿ. ವಿಟಮಿನ್ ಡಿ ಕೊಬ್ಬಿನಲ್ಲಿ ಕರಗುವ ಗುಣವನ್ನು ಹೊಂದಿದೆ. ಇದು ವಿಟಮಿನ್ ಸಿ ನಂತೆ ಮೂತ್ರದ ಮೂಲಕ ದೇಹದಿಂದ ಹೊರಹೋಗುವುದಿಲ್ಲ. ಬದಲಾಗಿ ಯಕೃತ್ತು ಮತ್ತು ಕೊಬ್ಬಿನ ಅಂಗಾಂಶಗಳಲ್ಲಿ ಸಂಗ್ರಹವಾಗುತ್ತದೆ. ಸೂರ್ಯನ ಬೆಳಕು ಅಥವಾ ಆಹಾರದಿಂದ ಮಾತ್ರ ಹೆಚ್ಚು ಪ್ರಮಾಣದಲ್ಲಿ ವಿಟಮಿನ್ ಡಿ ದೊರೆಯುವುದು ಅಪರೂಪ.

ಏಕೆಂದರೆ ದೇಹಕ್ಕೆ ಸಾಕಷ್ಟು ದೊರೆತ ಬಳಿಕ ಅದರ ಉತ್ಪಾದನೆ ಸ್ವಯಂ ನಿಲ್ಲುತ್ತದೆ. ಆದರೆ ದೀರ್ಘಕಾಲ ಹೆಚ್ಚಿನ ಪ್ರಮಾಣದ ವಿಟಮಿನ್ ಪೂರಕ (ಸಪ್ಲಿಮೆಂಟ್)ಗಳನ್ನು ತೆಗೆದುಕೊಳ್ಳುವುದರಿಂದ ಸಮಸ್ಯೆಗಳು ಉಂಟಾಗುತ್ತವೆ. ಇದು ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸಿ ವಾಂತಿ, ಅಸ್ವಸ್ಥತೆ, ಹೆಚ್ಚಿದ ಮೂತ್ರವಿಸರ್ಜನೆ, ದಾಹ, ಮೂತ್ರಪಿಂಡ ಕಲ್ಲುಗಳು ಅಥವಾ ಮೂತ್ರಪಿಂಡ ಹಾನಿಗೆ ಕಾರಣವಾಗಬಹುದು.

ಗಮನಿಸಬೇಕಾದ ಮುನ್ನೆಚ್ಚರಿಕೆಗಳು

ವಿಟಮಿನ್ ಡಿ ಮಟ್ಟ ತಿಳಿದುಕೊಳ್ಳಲು ರಕ್ತಪರೀಕ್ಷೆ ಮಾಡಿಸಿಕೊಳ್ಳಿ.

ಹೆಚ್ಚಿನ ಪ್ರಮಾಣದ ಔಷಧಿ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ

ದಿನಕ್ಕೆ 10 ಸಾವಿರ ಐಯು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣವನ್ನು ಹಲವು ತಿಂಗಳು ತೆಗೆದುಕೊಳ್ಳುವುದರಿಂದ ವಿಷಕಾರಿ ಪರಿಣಾಮದ ಅಪಾಯ ಹೆಚ್ಚಾಗುತ್ತದೆ.

ಮಲ್ಟಿವಿಟಮಿನ್, ಕ್ಯಾಲ್ಸಿಯಂ ಪೂರಕಗಳು ಮತ್ತು ಫೋರ್ಟಿಫೈಡ್ ಆಹಾರಗಳಲ್ಲಿ ವಿಟಮಿನ್ ಡಿ ಇರಬಹುದು. ಇವುಗಳನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿದ್ದರೆ ವೈದ್ಯರಿಗೆ ತಿಳಿಸಿ.

ಕೊರತೆ ಚಿಕಿತ್ಸೆಗೆ 50,000-60,000 ಐಯು ಪ್ರಮಾಣದ ಡೋಸ್ ನೀಡುವ ಸಂದರ್ಭಗಳಲ್ಲಿ ವೈದ್ಯರ ಮೇಲ್ವಿಚಾರಣೆ ಅಗತ್ಯ. ನಿಯಮಿತವಾಗಿ ರಕ್ತಪರೀಕ್ಷೆ ಮಾಡಿಸಿ ಮಟ್ಟ ಸಾಮಾನ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಿ.

ವೈದ್ಯರು ಸೂಚಿಸಿದ ಪ್ರಮಾಣ ಮತ್ತು ಅವಧಿಯಷ್ಟೇ ಪೂರಕಗಳನ್ನು ಬಳಸಬೇಕು.

(ಲೇಖಕರು: ಡಾ. ಅರುಣ್ ಕುಮಾರ್ ಎಂ. ಅಸೋಸಿಯೇಟ್ ಪ್ರೊಫೆಸರ್. ಎಸ್ಡಿಎಂ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉಡುಪಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.