ಯುವಪೀಳಿಗೆಯಲ್ಲಿ ಆತ್ಮಹತ್ಯಾ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಆಧುನಿಕ ಜಗತ್ತಿನಲ್ಲಿ ಒತ್ತಡಮಯ ಬದುಕಿನಲ್ಲಿ ಆತ್ಮಹತ್ಯಾ ಪ್ರವೃತ್ತಿ ಹೆಚ್ಚುತ್ತಿರುವುದರ ಹಿಂದೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಕಾರಣಗಳಿವೆ. ದೈಹಿಕವಾಗಿಯೂ ಕೆಲವು ಹಾರ್ಮೋನ್‌ಗಳ ಬದಲಾವಣೆಯೂ ಈ ಪ್ರವೃತ್ತಿ ಉಲ್ಬಣಗೊಳ್ಳುವುದಕ್ಕೆ ಕಾರಣವಾಗಿದೆ.
ಆತ್ಮಹತ್ಯಾ ಪವೃತ್ತಿಗೆ ಕಾರಣವಾಗುವ ಈ ವೇದನೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಟ್ರೈಜಿಮಿನಲ್ ನ್ಯೂರಾಲ್ಜಿಯಾ (TN) ಎಂದೂ ಕರೆಯಲಾಗುತ್ತದೆ. ಟ್ರೈಜಿಮಿನಲ್ ನರದ ಮೇಲೆ ಒತ್ತಡ ಉಂಟಾದಾಗ ವ್ಯಕ್ತಿಯಲ್ಲಿ ಖಿನ್ನತೆ, ದುಃಖ, ಆತಂಕ, ಭಯ ಹೆಚ್ಚುತ್ತದೆ. ಇದರಿಂದ ಆತ್ಮಹತ್ಯಾ ಪ್ರವೃತ್ತಿ ಉಂಟಾಗುತ್ತದೆ. ಈ ಒತ್ತಡವು ಕೈ ಕಾಲು ಕತ್ತರಿಸುವ ವೇಳೆ ಅಥವಾ ಹೆರಿಗೆ ವೇಳೆ ಆಗುವ ನೋವಿಗೆ ಸಮನಾದದ್ದು.
ವಿಪರೀತ ಮಾನಸಿಕ ನೋವು ಹೊಂದಿರುವ ವ್ಯಕ್ತಿಗಳ ನರಗಳಲ್ಲಿ ಈ ನೋವಿನ ಒತ್ತಡ ಕಾಣಿಸಿಕೊಳ್ಳಬಹುದು. ಇಂಥ ವ್ಯಕ್ತಿಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತವೆ. ಇದರಿಂದ ಇನ್ನಷ್ಟು ಮಾನಸಿಕ ಒತ್ತಡ ಉಂಟಾಗಬಹುದು.
ಈ ನರದ ಒತ್ತಡ ಅನುಭವಿಸುವವರ ಮುಖ ಹಾಗೂ ಕತ್ತಿನ ಕೆಳಗೆ ಹೆಚ್ಚು ನೋವು ಇರುತ್ತದೆ. ಸಣ್ಣದೊಂದು ಸ್ಪರ್ಶ ಅಥವಾ ಚಳಿಯಿಂದಲೂ ಅವರು ಉದ್ವೇಗಕ್ಕೆ ಒಳಗಾಗುತ್ತಾರೆ. ಕೆಲವೊಮ್ಮೆ ಮೈಗ್ರೇನ್ ಅಥವಾ ಮುಖಕ್ಕೆ ಸಂಬಂಧಿಸಿದ ನೋವುಗಳೂ ಕಂಡುಬರುತ್ತವೆ.
ಏನಿದು ಟ್ರೈಜಿಮಿನಲ್ ನ್ಯೂರಾಲ್ಜಿಯಾ?
ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎನ್ನುವುದು ಟ್ರೈಜಿಮಿನಲ್ ನರದ ಮೇಲೆ ಬೀಳುವ ಒತ್ತಡದ ಸಮಸ್ಯೆ. ಕಿವಿ, ಮುಖ, ಗಲ್ಲ, ದವಡೆ, ತುಟಿ ಮತ್ತು ಮೂಗಿನ ಸುತ್ತ ಈ ನರವು ಹಬ್ಬಿರುತ್ತದೆ. ವ್ಯಕ್ತಿಯು ಸಂಕಟಕ್ಕೆ ಒಳಗಾದಾಗ ಟ್ರೈಜಿಮಿನಲ್ ನರದ ಮೇಲೆ ಒತ್ತಡ ಬೀಳುತ್ತದೆ. ಆಗ ವ್ಯಕ್ತಿಯ ಮುಖದ ಕೆಳಗೆ, ಮೇಲೆ ಅಥವಾ ಮುಂಭಾಗ ನೋವು ಕಾಣಿಸಿಕೊಳ್ಳಬಹುದು ಅಥವಾ ಮುಖದ ಎರಡೂ ಬದಿಯಲ್ಲೂ ನೋವು ಉಂಟಾಗಬಹುದು. ಈ ರೀತಿಯ ನೋವು ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತದೆ. ಅಮೇರಿಕನ್ ಅಸೋಸಿಯೇಷನ್ ಆಫ್ ನ್ಯೂರೋಲಾಜಿಕಲ್ ಸರ್ಜನ್ಸ್ ಹೇಳುವ ಪ್ರಕಾರ ಯುಎಸ್ ನಲ್ಲಿ ವಾರ್ಷಿಕವಾಗಿ 1,50,000 ಮಂದಿ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
ದೈನಂದಿನ ಜೀವನದ ಮೇಲೆ ದುಷ್ಪರಿಣಾಮ
ಸಾಮಾಜಿಕವಾಗಿ ಬೆರೆಯುವುದು ಮತ್ತು ಇತರರೊಂದಿಗೆ ಊಟ ಮಾಡುವುದು ಅಥವಾ ಮಾತನಾಡುವುದಕ್ಕೆ ಹಿಂದೇಟು ಹಾಕುವಂತೆ ಮಾಡುತ್ತದೆ. ಜತೆಗೆ ವೃತ್ತಿಯಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಾಂಸಾರಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ಸಂಕ್ಷಿಪ್ತ, ತೀವ್ರವಾದ ನೋವಿನಿಂದ (TN1) ಹಿಡಿದು ದೀರ್ಘಕಾಲದ ನೋವಿನವರೆಗೆ (TN2) ತಲುಪಬಹುದು. ಈ ಸಮಸ್ಯೆಯಿಂದ ಬಳಲುತ್ತಿರುವವರು ಆಗಾಗ್ಗೆ ಬೆಳಕು, ಧ್ವನಿ ಕೇಳಿದಾಗ ಕಿರಿಕಿರಿಯಾಗುವುದು ಮತ್ತು ವಾಕರಿಕೆ ಹಾಗೂ ವಾಂತಿಯಂಥ ಸೂಕ್ಷ್ಮತೆಗಳಿಂದಲೂ ಬಳಲುತ್ತಾರೆ. ಹೀಗಾಗಿ ಟ್ರೈಜಿಮಿನಲ್ ನರಶೂಲೆಯ ರೋಗನಿರ್ಣಯವು ನಿರ್ಮೂಲನ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಕೇವಲ ಒಂದು ಪರೀಕ್ಷೆಯ ಮೂಲಕ ಟ್ರೈಜಿಮಿನಲ್ ನ್ಯೂರಾಲ್ಜಿಯಾ ಸಮಸ್ಯೆಯನ್ನು ಪತ್ತೆಹಚ್ಚಲು ಸಾಧ್ಯವಿಲ್ಲ.
ದೈಹಿಕ ಮತ್ತು ನರವೈಜ್ಞಾನಿಕ ಪರೀಕ್ಷೆಗಳ ಜೊತೆಗೆ ಎಂಆರ್‌ಐ ಸ್ಕ್ಯಾನಿಂಗ್ ಮೂಲಕ ಟ್ರೈಜಿಮಿನಲ್ ನರಗಳ ಮೇಲೆ ಒತ್ತಡ ಬೀರುವ ಟ್ಯೂಮರ್‌ಗಳನ್ನು ಪತ್ತೆಹಚ್ಚಲಾಗುತ್ತದೆ. ರೋಗಗ್ರಸ್ಥ ಔಷಧಿಗಳು ಅಥವಾ ಟ್ರೈಸೈಕ್ಲಿಕ್ ಖಿನ್ನತೆ ಶಮನಕಾರಿಗಳ ಮೂಲಕವೂ ಟ್ರೈಜಿಮಿನಲ್ ನ್ಯೂರಾಲ್ಜಿಯಾ ಅನ್ನು ಪರೀಕ್ಷಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.