ಸಂಸ್ಕೃತದಲ್ಲಿ ನೀರಿಗೆ ಸಮಾನಾರ್ಥವಾದ ಒಂದು ಪದ ‘ಜೀವನ’. ಅಂತೆಯೇ ನೀರು ಜೀವಕ್ಕೂ ಜೀವನಕ್ಕೂ ಅತ್ಯಂತ ಅಗತ್ಯವಾದ ಪದಾರ್ಥ. ಹಾಗೆಯೇ ಜೀವಕ್ಕೆ ಮೂಲಾಧಾರವೂ ಹೌದು. ದೇಹದಲ್ಲಿರುವ ವಿವಿಧ ಅಂಗಾಂಗಗಳ ಎಲ್ಲಾ ಕಾರ್ಯಚಟುವಟಿಕೆಗಳಿಗೆ ನೀರು ಬೇಕೇ ಬೇಕು. ದೇಹದ ಪ್ರತಿ ಜೀವಕೋಶಗಳಿಗೂ ನೀರಿನ ಅಗತ್ಯವಿದೆ.

ಭೂಮಿಯ ಮೇಲ್ಮೈಯ ಮೇಲೆ ಶೇ 70ರಷ್ಟು ಭಾಗ ನೀರು ಇದ್ದರೂ ಕೇವಲ ಶೇ 3ರಷ್ಟು ಮಾತ್ರ ಶುದ್ಧ ಕುಡಿಯುವ ನೀರು ಲಭ್ಯ. ಮಾನವನ ದೇಹ ಕೂಡ ಶೇ 70ರಷ್ಟು ಭಾಗ ನೀರಿನಂಶದಿಂದ ಕೂಡಿದೆ. ದೇಹದಲ್ಲಿ ಉತ್ಪತ್ತಿಯಾಗುವ ಲಾಲಾರಸ, ಗ್ಯಾಸ್ಟ್ರಿಕ್ ಜ್ಯೂಸ್, ಪಿತ್ತರಸ, ಮೇದೋಜೀರಕದಿಂದ ಉತ್ಪತ್ತಿಯಾಗುವ ರಸ ,ಸಣ್ಣ ಕರುಳಿನ ರಸ , ರಕ್ತ, ಕಣ್ಣೀರು, ಬೆವರು, ಮೂತ್ರ – ಇವೆಲ್ಲವೂ ದ್ರವರೂಪದಲ್ಲಿಯೇ ಇವೆ. ರಕ್ತದಲ್ಲಿರುವ ಪ್ಲಾಸ್ಮಾ ದ ಶೇ 90ರಷ್ಟು ಭಾಗ ನೀರು ಇರುತ್ತದೆ.

ದೇಹಕ್ಕೆ ನೀರು ಏಕೆ ಬೇಕು?

lನಾವು ತೆಗೆದುಕೊಂಡ ಆಹಾರ ಜೀರ್ಣವಾಗಲು, ಜೀರ್ಣವಾದ ಪೋಷಕಾಂಶಗಳು ಜೀವಕೋಶವನ್ನು ಸೇರಲು

lದೇಹದ ಕಲ್ಮಶಗಳನ್ನು ಬೆವರು, ಮೂತ್ರ, ಉಸಿರಾಟದ ಮೂಲಕ ಹೊರಹಾಕಲು

lಚರ್ಮದ ಆರೋಗ್ಯ ಮತ್ತು ಕಾಂತಿಯನ್ನು ಉಳಿಸಿಕೊಳ್ಳಲು

lಬೆನ್ನುಹುರಿಯನ್ನು ರಕ್ಷಿಸಲು ಮತ್ತು ಕೀಲುಗಳಲ್ಲಿ ಚಲನೆಗೆ ಸಹಕರಿಸಲು ನೀರು ಬೇಕು.

ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿಯದೇ ಇದ್ದರೆ

lಗಂಟಲು ಒಣಗುವುದು, ತಲೆನೋವು, ಆಯಾಸ, ಕಿರಿಕಿರಿ, ಗಲಿಬಿಲಿ, ತಲೆ ಸುತ್ತುವುದು ಉಂಟಾಗಬಹುದು.

lಮೂತ್ರಕೋಶದಲ್ಲಿ ಸೋಂಕು , ಮೂತ್ರಪಿಂಡದಲ್ಲಿ ಕಲ್ಲು, ಮಲಬದ್ಧತೆ ಉಂಟಾಗಬಹುದು. ಹಾಗಾಗಿ, ಸಮತೋಲಿತ ಆಹಾರದ ಅತ್ಯಗತ್ಯ ಭಾಗ ನೀರು . ಅಷ್ಟೇ ಅಲ್ಲದೆ ನೀರು ಉತ್ತಮ ದ್ರವ ಆಹಾರವೂ ಆಗಿರುವುದರಿಂದ , ನಾವು ಕುಡಿಯುವ ನೀರು ಸುರಕ್ಷಿತವಾಗಿರುವುದು ಅತ್ಯಂತ ಅಗತ್ಯ.

ಆರೋಗ್ಯವಂತ ದೇಹಕ್ಕೆ ಎಷ್ಟು ನೀರು ಬೇಕು?

ಇದು ವಯಸ್ಸು, ದೈಹಿಕ ಚಟುವಟಿಕೆ, ತಾಪಮಾನ, ದೇಹದ ಆರೋಗ್ಯ ಇವುಗಳನ್ನು ಅವಲಂಬಿಸಿರುತ್ತದೆ. ಪುರುಷರು ಸುಮಾರು ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕಾಗಬಹುದು. ಮಹಿಳೆಯರು ಎರಡರಿಂದ ಎರಡೂವರೆ ಲೀಟರ್ನಷ್ಟು ನೀರು ಕುಡಿಯಬೇಕು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಹೆಚ್ಚುವರಿ ನೀರಿನ ಅಗತ್ಯವಿದೆ.

ನೀರು ಕಲುಷಿತಗೊಳ್ಳಲು ಕಾರಣಗಳೇನು?

ತ್ಯಾಜ್ಯ ವಸ್ತುಗಳ ಅಸಮರ್ಪಕ ನಿರ್ವಹಣೆಯೇ ನೀರು ಕಲುಷಿತ ಕೊಳ್ಳಲು ಕಾರಣ. ಜೀವಂತ ತ್ಯಾಜ್ಯಗಳು, ಪ್ಲಾಸ್ಟಿಕ್ ಕಸಗಳು, ಕಾರ್ಖಾನೆ /ಗಣಿ ಕೈಗಾರಿಕೆಯ ತ್ಯಾಜ್ಯಗಳು, ವಿಷಕಾರಿ ತ್ಯಾಜ್ಯಗಳು ಅಡುಗೆ ಆಹಾರದ ತ್ಯಾಜ್ಯಗಳು, ತೈಲ ಸೋರಿಕೆ, ಅಸಮರ್ಪಕ ಕಸದ ನಿರ್ವಹಣೆ – ಇವೆಲ್ಲವೂ ನಾವು ಕುಡಿಯುವ ನೀರನ್ನು ಕಲುಷಿತಗೊಳಿಸುತ್ತಲೇ ಇರುತ್ತವೆ.

ನೀರಿನಿಂದ ಹರಡುವ ಕಾಯಿಲೆಗಳು

ಬ್ಯಾಕ್ಟೀರಿಯಾ, ವೈರಸ್, ಪರಾವಲಂಬಿ ಕ್ರಿಮಿಗಳಿಂದ ಹರಡುವ ಟೈಫಾಯಿಡ್, ಕಾಲರಾ, ಅತಿಸಾರ, ಹೆಪಟೈಟಿಸ್, ಪೋಲಿಯೋ, ಅಮೆಬಿಯಾಸಿಸ್, ದುಂಡು ಹುಳ ನೇರವಾಗಿ ಕಾಯಿಲೆಯನ್ನು ತಂದರೆ, ನಿಂತ ನೀರಿನಲ್ಲಿ ಸಂತಾನವೃದ್ಧಿ ಮಾಡುವ ಕ್ರಿಮಿಗಳಿಂದ ಹರಡುವ ಕಾಯಿಲೆಗಳಾದ ಮಲೇರಿಯಾ, ಪೈಲೇರಿಯಾ, ಡೆಂಗಿ, ಚಿಕುನ್ಗುನ್ಯಾ ಕಾಯಿಲೆಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ನೀರು ಪ್ರಮುಖ ಕಾರಣವಾಗಿರುತ್ತದೆ.

ಬೇಸಿಗೆಯಲ್ಲಿ ವಾತಾವರಣದಲ್ಲಿ ಉಂಟಾದ ತಾಪಮಾನದ ವ್ಯತ್ಯಾಸದಿಂದ ದೇಹದ ಉಷ್ಣತೆಯನ್ನು ಕಾಪಾಡಲು ದೇಹ ಬೆವರುವುದು ಅತ್ಯಂತ ಸಹಜ.

ಹಾಗೆಯೇ ದೇಹವನ್ನು ತಂಪಾಗಿ ಇಡಬೇಕೆಂದು ತಣ್ಣನೆಯ ನೀರು ಕುಡಿಯಲು ಬಯಸುವುದು ಸಾಮಾನ್ಯ. ಬಾಯಾರಿಕೆಯಾದಾಗ ಸಿಕ್ಕಸಿಕ್ಕಲ್ಲಿ ಕಂಡ ಕಂಡ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ತಂಪು ನೀರು ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳು

lಗಂಟಲಿನಲ್ಲಿ ತನ್ನ ಪಾಡಿಗೆ ಸುಮ್ಮನೆ ಇದ್ದ ಬ್ಯಾಕ್ಟೀರಿಯಾಗಳು, ಉಷ್ಣತೆ ವ್ಯತ್ಯಾಸವಾದ ತಕ್ಷಣ, ಸಾವಿರಾರು ಸಂಖ್ಯೆಯಲ್ಲಿ ಹೆಚ್ಚಾಗುತ್ತವೆ; ಗಂಟಲಿನ ಸೋಂಕು, ಗಂಟಲು ನೋವು, ಶೀತ , ನೆಗಡಿ, ಕೆಮ್ಮಿಗೆ ಕಾರಣವಾಗುತ್ತವೆ.

lತಲೆನೋವು, ಸೈನಸೈಟಿಸ್ ಉಂಟುಮಾಡುತ್ತವೆ.

lಹಲ್ಲುಗಳಲ್ಲಿ ನೋವು, ‘ಜುಮ್ ’ ಎನ್ನುವ ತೊಂದರೆಯನ್ನು ಉಂಟುಮಾಡುತ್ತವೆ.

lಜೀರ್ಣಕ್ರಿಯೆಯು ನಿಧಾನವಾಗುವುದರಿಂದ ಹೊಟ್ಟೆ ನೋವು ಉಂಟಾಗಬಹುದು .

ಪಾನೀಯಗಳನ್ನು ತಂಪು ಮಾಡಲು ಯಾವ ಐಸ್ಕ್ಯೂಬ್ ಗಳನ್ನು ಬಳಸುತ್ತಾರೆ ಎಂಬುದರ ಬಗ್ಗೆ ಗಮನಹರಿಸುವುದು ಒಳ್ಳೆಯದು. ಕಲುಷಿತ ನೀರಿನಿಂದ ಮಾಡಿದ ಐಸ್ಕ್ಯೂಬ್ಗಳಲ್ಲಿ ಖಂಡಿತವಾಗಿಯೂ ಬ್ಯಾಕ್ಟೀರಿಯಾ, ವೈರಸ್ಗಳು ಇರುತ್ತವೆ. ಶುದ್ಧ ನೀರಿನಲ್ಲಿ ತಯಾರಿಸಿದ ಐಸ್ಕ್ಯೂಬ್ಗಳು ಮಾತ್ರ ಬಳಕೆಗೆ ಯೋಗ್ಯ. ಮನೆಯಲ್ಲಿ ಐಸ್ಕ್ಯೂಬ್ ಗಳನ್ನು ತಯಾರಿಸಿಕೊಳ್ಳಬಹುದು.

ಮಳೆಗಾಲದಲ್ಲಿ, ಹೆಚ್ಚು ನೀರನ್ನು ಕುಡಿಯಲು ದೇಹ ಸೂಚಿಸುವುದಿಲ್ಲವಾದರೂ ದೇಹದ ಆರೋಗ್ಯಕ್ಕೆ ಅಗತ್ಯದಷ್ಟು ನೀರು ಕುಡಿಯಬೇಕು. ಮಳೆಗಾಲದಲ್ಲಿ ನೀರಿನ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ತ್ಯಾಜ್ಯ ವಸ್ತುಗಳು ಸೋರಿ ಹೋಗಿ ನೀರನ್ನು ಕಲುಷಿತ ಮಾಡುವ ಸಾಧ್ಯತೆಗಳು ಹೆಚ್ಚು. ಮಳೆ ನೀರನ್ನು ನೇರವಾಗಿ ಕುಡಿಯುವುದು ಸೂಕ್ತವಲ್ಲ.

ಮಳೆ ನೀರು ವಾಯುಮಂಡಲವನ್ನು ಪ್ರವೇಶಿಸಿದಾಗ ಅದರಲ್ಲಿ ಇರುವ ರಾಸಾಯನಿಕ ವಸ್ತುಗಳು, ಕ್ರಿಮಿಗಳಿಂದ ಮಳೆ ನೀರು ಕಲುಷಿತಗೊಳ್ಳುತ್ತದೆ.

ಹಾಗಾಗಿ ಕಾಲ ಯಾವುದೇ ಇರಲಿ; ಶುದ್ಧ ಕುಡಿಯುವ ನೀರಿನ ಸೇವನೆಗೆ ಮೊದಲ ಆದ್ಯತೆ ಸಿಗಲಿ.

ಎಲ್ಲ ಕಾಲದಲ್ಲಿಯೂ

l ಕುದಿಸಿ, ಆರಿಸಿದ ನೀರನ್ನು ಅಥವಾ ಬಿಸಿ ನೀರನ್ನು ಬಳಸುವುದು ಉತ್ತಮ .

l ಸೋಸಿದ/ ಫಿಲ್ಟರ್ ಮಾಡಿದ ನೀರನ್ನು ಮಾತ್ರ ಬಳಸಿ.

l ಆಹಾರ ತಯಾರಿಸುವ ಸಮಯದಲ್ಲಿಯೂ ಶುದ್ಧ ನೀರಿನ ಬಳಕೆಯನ್ನು ಮಾಡುವುದು ಅಗತ್ಯ.

l ತರಕಾರಿ ಹಣ್ಣುಗಳನ್ನು ತೊಳೆಯುವಾಗಲು ಶುದ್ಧ ನೀರಿನಲ್ಲಿಯೇ ತೊಳೆಯಬೇಕು .

l ಕೆರೆ, ನದಿ, ಹೊಳೆ, ಹರಿಯುವ ಕಾಲುವೆಗಳ ನೀರನ್ನು ನೇರವಾಗಿ ಕುಡಿಯಲು, ಆಹಾರ ತಯಾರಿಸಲು ಬಳಸಬೇಡಿ.

l ನೀರು ಸಂಗ್ರಹಿಸುವ ಪಾತ್ರೆಯನ್ನು ದಿನ ತೊಳೆಯಿರಿ. ನಂತರವಷ್ಟೆ ಶುದ್ಧವಾದ ನೀರನ್ನು ಸಂಗ್ರಹಿಸಿ.

l ಸಿಮೆಂಟ್ ಟ್ಯಾಂಕ್, ಹೂದಾನಿಗಳಲ್ಲಿ ಇಟ್ಟಿರುವ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿದ ನಂತರ ನೀರನ್ನು ತುಂಬಿಸಿ.

l ಬಾವಿಗಳಲ್ಲಿ, ಕಾರಂಜಿಗಳಲ್ಲಿ, ಸಿಮೆಂಟ್ ಟ್ಯಾಂಕಿಗಳಲ್ಲಿ ಲಾರ್ವಾ ಮೀನುಗಳನ್ನು ಬೆಳೆಸಿ.

l ರಸ್ತೆ ಬದಿಯಲ್ಲಿ ಕಬ್ಬಿನ ಹಾಲು, ಜ್ಯೂಸ್ಗಳನ್ನು ಆದಷ್ಟು ಕುಡಿಯದಿರಿ. ಮಲಮೂತ್ರ ವಿಸರ್ಜನೆಗಾಗಿ ಶೌಚಾಲಯವನ್ನೇ ಬಳಸಿ. ಶೌಚಾಲಯವನ್ನು ಬಳಸಿದ ನಂತರ ಕೈ ಕಾಲುಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಿರಿ

l ಆಹಾರ ಸೇವನೆಯ ಮುನ್ನ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳಿ . ಕೈ ಬೆರಳುಗಳ ಉಗುರುಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-51-737017774

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.