ಹಣ್ಣುಗಳು ದೇಹಕ್ಕೆ ಒಳ್ಳೆಯದು ಎನ್ನುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಆದರೆ, ಎಲ್ಲ ಹಣ್ಣಗಳನ್ನೂ ಎಲ್ಲರೂ, ಎಲ್ಲ ಸಂದರ್ಭದಲ್ಲೂ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ವಿಹಿತ ಅಲ್ಲ. ಏಕೆಂದರೆ ಹಣ್ಣುಗಳಲ್ಲಿ ಸಹಜವಾಗಿ ಕ್ಯಾಲೋರಿ (ಸಕ್ಕರೆ) ಹಾಗೂ ಕೊಬ್ಬಿನ ಅಂಶ ಜಾಸ್ತಿಯೇ ಇರುತ್ತದೆ. ಹಾಗೆಂದು, ನಮ್ಮಲ್ಲಿ ಬಹುತೇಕರಿಗೆ ಹಣ್ಣಿನ ಸೇವನೆಯ ಬಗ್ಗೆ ಹಲವಾರು ತಪ್ಪು ಕಲ್ಪನೆಗಳು ಮನೆ ಮಾಡಿವೆ.

ಉದಾಹರಣೆಗೆ ಹೇಳುವುದಾದರೆ...

ಮಕ್ಕಳಿಗೆ ತುಂಬ ಹಣ್ಣು ಕೊಡಬಾರದು, ಶೀತವಾಗುತ್ತೆ. ಜ್ವರ ಬರುತ್ತೆ. ಊಟ ಮಾಡೋದೇ ಇಲ್ಲ. ಬರೀ ಹಣ್ಣು ತಿಂದ್ಕೊಂಡು ಊಟ –ತಿಂಡಿ ಮಾಡದೇ ತೆಳ್ಳಗಾಗಿ ಬಿಡ್ತಾರೆ.

ಶುಗರ್ ಇದ್ದವರು ಹಣ್ಣು ತಿನ್ನಬಾರದು. ಹಣ್ಣು ಸಿಹಿ ಇರೋದ್ರಿಂದ ಶುಗರ್ ಜಾಸ್ತಿ ಆಗಿಬಿಡುತ್ತೆ.

ಊಟ ಆದ ಮೇಲೆ ಹಣ್ಣು ತಿನ್ನೋದು ಆರೋಗ್ಯಕ್ಕೆ ಒಳ್ಳೇದು. ಅದರಲ್ಲೂ ರಾತ್ರಿ ಒಂದು ಕಪ್ ಹಾಲು ಕುಡಿದು, ಒಂದು ಬಾಳೆ ಹಣ್ಣಾದ್ರೂ ತಿಂದು ಮಲಕ್ಕೊಳ್ಳೋ ಅಭ್ಯಾಸ ಉತ್ತಮ.

ಬೆಳಗ್ಗೆ ಬೆಳಗ್ಗೆ ಹಣ್ಣು ತಿನ್ನಬಾರದು. ಹಸಿದ ಹೊಟ್ಟೆಗೆ ಹಣ್ಣು ತಿಂದರೆ ಹೊಟ್ಟೆ ಕಟ್ಕೊಳ್ಳುತ್ತೆ. ಗ್ಯಾಸ್ತ್ರಿಕ್ ಆಗುತ್ತೆ.

ಹೀಗೆ ಹಣ್ಣುಗಳ ಬಗ್ಗೆ ಥರಹೇವಾರಿ ಕಲ್ಪನೆಗಳು ನಮ್ಮಲ್ಲಿ ಮನೆ ಮಾಡಿವೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಎಲ್ಲವೂ ಇದರಲ್ಲಿ ಸುಳ್ಳೂ ಅಲ್ಲ, ಸತ್ಯವೂ ಅಲ್ಲ. ಕೆಲವೊಮ್ಮೆ ಕೆಲ ಸಂದರ್ಭದಲ್ಲಿ ವ್ಯಕ್ತಿಗತವಾಗಿ ಎದುರಿಸಿದ ಸಮಸ್ಯೆಗಳಿಂದಾಗಿ ಇಂಥ ನಂಬಿಕೆಗಹಳು ಬೆಳೆದು ಬಂದು ಬಿಟ್ಟಿವೆ. ಸೀಬೆ ಅಥವಾ ಪೇರಲೆ ಹಣ್ಣು ಕೆಲವರಲ್ಲಿ ಗಂಟಲು ನೋವಿಗೆ ಕಾರಣವಾಗಬಹುದು. ಏಕೆಂದರೆ ಇದರಲ್ಲಿನ ಆಮ್ಲೀಯ ಗುಣ ಅಲರ್ಜಿಯನ್ನು ಉದ್ದೀಪಿಸುತ್ತದೆ. ಹಾಗೆಂದು ಮಕ್ಕಳಿಗೆ ಸೀಬೆ ಹಣ್ಣನ್ನು ಕೊಡಲೇಬಾರದು ಎಂದು ನಿರ್ಬಂಧಿಸಿದರೆ ಸುಲಭದಲ್ಲಿ ಸಿಗುವ ಅತ್ಯಮೂಲ್ಯ ಪೂಷಕಾಂಶಗಳಿಂದ ಮಕ್ಕಳನ್ನು ವಂಚಿಸಿದಂತಾಗುತ್ತದೆ.

ಒಂದನ್ನು ನೆನಪಿಟ್ಟುಕೊಳ್ಳಿ, ಮಕ್ಕಳಿಗೆ ಯಾವುದೇ ಸಂದರ್ಭದಲ್ಲಿ ಯಾವುದೇ ಹಣ್ಣನ್ನು ನಿರಾತಂಕವಾಗಿ ನೀಡಬಹುದು. ಶೀತ–ಜ್ವರ ಇತ್ಯಾದಿಗಳಿಂದ ಬಳಲುತ್ತಿದ್ದರೆ ಅಂಥ ಮಕ್ಕಳಿಗೆ ಸಿಟ್ರಸ್ ಅಂಶ ಹೆಚ್ಚಿರುವ ಕಿತ್ತಳೆ, ಪೇರಲೆ, ಹಸಿ ದ್ರಾಕ್ಷಿ, ಇತ್ಯಾದಿಗಳನ್ನು ಆ ಸಂದರ್ಭದ ಪತ್ಯಾಹಾರದ ಭಾಗವಾಗಿ ಕೊಡಬಾರದಷ್ಟೆ. ಹಾಗೆಯೇ ಅಜೀರ್ಣ, ಅತಿಸಾರ ಇತ್ಯಾದಿಗಳಿಂದ ಮಕ್ಕಳು ಬಳಲುತ್ತಿರುವಾಗ ಪೈಬರ್ ಅಂದರೆ ನಾರಿನಂಶ ಹೆಚ್ಚಿರುವ ಬಾಳೆ, ಮಾವು, ಹಲಸಿನಂಥ ಹಣ್ಣುಗಳನ್ನು ನೀಡುವುದು ಒಳಿತಲ್ಲ. ಅದನ್ನು ಹೊರತುಪಡಿಸಿ ಮಕ್ಕಳಿಗೆ ಕೊಡಬಾರದು ಎಂಬಂಥ ಹಣ್ಣೇ ಇಲ್ಲ. ಊಟ–ತಿಂಡಿಯ ಮೊದಲು, ಕೊನೆಗೆ ಅಥವಾ ಊಟ–ತಿಂಡಿಯ ಬದಲಾಗಿಯೂ ಮಕ್ಕಳಿಗೆ ಹಣ್ಣು ಕೊಡಿ.

ಇದನ್ನು ಹೊರತು ಪಡಿಸಿ, ಈಗಾಗಲೇ ಹಿಂದಿನ ಲೇಖನದಲ್ಲಿ ನಾನು ಹೇಳಿದಂತೆ ವಯಸ್ಕರು ಹಸಿದ ಹೊಟ್ಟೆಯಲ್ಲಿ ಯಾವುದೇ ಹಣ್ಣನ್ನೂ ಸೇವಿಸಬಹುದು. ಆದರೆ, ಯಾವುದೇ ಕಾರಣಕ್ಕೂ ಊಟದ ಬಳಿಕ ಹಾಗೂ ರಾತ್ರಿಯ ವೇಳೆ ಹಣ್ಣು ತಿನ್ನುವುದು ಬೇಡವೇ ಬೇಡ. ರಾತ್ರಿ ಹಣ್ಣು ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆಯಾಗುತ್ತದಲ್ಲದೇ, ದೇಹದಲ್ಲಿ ಕೊಬ್ಬು ಇನ್ನಷ್ಟು ಶೇಖರಣೆಯಾಗುವ ಅಪಾಯವಿದೆ.

ಇನ್ನು ಮಧುಮೇಹಿಗಳು ಹಾಗೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಕೆಲವು ಹಣ್ಣು ತಿನ್ನಬಾರದು ಎನ್ನುವುದು ಸತ್ಯ. ಆದರೆ ಇಂಥವರು ಹಣ್ಣನ್ನೇ ತಿನ್ನಬಾರದು ಎಂಬುದು ಸುಳ್ಳು. ಗ್ಲೈಸೆಮಿಕ್ ಇಂಡೆಕ್ಸ್ (GI) ಕಡಿಮೆ ಇರುವ ಅಂದರೆ ಬೇಗ ಗ್ಲೂಕೋಸ್ ಅನ್ನು ಬಿಡುಗಡೆ ಮಾಡುವ, ಹೆಚ್ಚಿನ ಕ್ಯಾಲೋರಿಯ ಹಣ್ಣುಗಳು ಇಂಥವರಿಗೆ ಬೇಡ. ನೀವು ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿದ್ದರೆ, ಅಥವಾ ಹೆಚ್ಚಿನ ಶುಗರ್ನಿಂದ ಬಳಲುತ್ತಿದ್ದರೆ, ನಿವು ಬಾಳೆಹಣ್ಣು, ಮಾವು, ಹಲಸು, ಬೆಣ್ಣೆ ಹಣ್ಣು, ಸಪೋಟಾದಂಥ ಹಣ್ಣುಗಳಿಂದ ದೂರವಿರಿ. ಸೀಸನಲ್ ಹಣ್ಣುಗಳನ್ನು ಎಂಜಾಯ್ ಮಾಡಲೇಬೇಕೆನಿಸಿದರೆ, ಮಿತ ಪ್ರಮಾಣದಲ್ಲಿ ಒಮ್ಮೆ ಈ ಹಣ್ಣನ್ನು ತಿಂದು ಮನಸನ್ನು ತೃಪ್ತಿಪಡಿಸಿಬಿಡಿ, ಆದರೆ ನೆನಪಿಡಿ, ಆ ಬಳಿಕ ಯಾವುದೇ ಕಾರಣಕ್ಕೂ ಮತ್ತೆ ಕಾರ್ಬೋ ಹೈಡ್ರೇಡ್ ಸೇವನೆ ಮಾಡಬಾರದು. ಸೇಬು, ಪೇರಳೆ, ಕಿತ್ತಳೆ, ಕಿವಿ, ಪಪ್ಪಾಯಿ, ದಾಳಿಂಬೆ ಇಂಥ ಹಣ್ಣುಗಳು ಈ ಎರಡೂ ರೀತಿಯ ವ್ಯಕ್ತಿಗಳಿಗೆ ಹೇಳಿ ಮಾಡಿಸಿದ್ದು. ಅಲ್ಲದೇ ಕಲ್ಲಂಗಡಿ, ಕರಬೂಜದಂಥ ಹಣ್ಣನ್ನೂ ತಿನ್ನಬಹುದು. ಇವುಗಳಲ್ಲಿ ಸಕ್ಕರೆ ರಕ್ತಕ್ಕೆ ನಿಧಾನವಾಗಿ ಸೇರುತ್ತದೆ ಹಾಗೂ ನೀರಿನಂಶ ಜಾಸ್ತಿ ಇರುತ್ತದೆ.

ಯಾರಿಗೆ ಯಾವ ಹಣ್ಣು?

ಎಚ್ಚರಿಕೆ: ಮಾವು, ಬಾಳೆಹಣ್ಣು, ಸಪೋಟ ಮತ್ತು ದ್ರಾಕ್ಷಿಯಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಇವುಗಳನ್ನು ಮಿತವಾಗಿ, ವೈದ್ಯರ ಸಲಹೆಯಂತೆ ಸೇವಿಸುವುದು ಉತ್ತಮ.

ಮಕ್ಕಳಿಗೆ: ಬೆಳೆಯುವ ಮಕ್ಕಳಿಗೆ ಬಾಳೆಹಣ್ಣು, ದಾಳಿಂಬೆ ಮತ್ತು ಮಾವು ಅತ್ಯುತ್ತಮ. ಇವು ಮೂಳೆಗಳ ಬೆಳವಣಿಗೆಗೆ ಮತ್ತು ಮೆದುಳಿನ ಚುರುಕುತನಕ್ಕೆ ಸಹಕಾರಿ.

ಹಿರಿಯರಿಗೆ: ವಯಸ್ಸಾದಂತೆ ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಅಂತಹವರು ಮೆತ್ತಗಿರುವ ಪಪ್ಪಾಯಿ, ಕಲ್ಲಂಗಡಿ ಅಥವಾ ಬೇಯಿಸಿದ ಸೇಬು ಸೇವಿಸುವುದು ಒಳ್ಳೆಯದು. ಇದು ಮಲಬದ್ಧತೆಯನ್ನು ತಡೆಯುತ್ತದೆ.

ಬೊಜ್ಜು ಇರುವವರು: ಕಲ್ಲಂಗಡಿ, ಕರಬೂಜ, ಸ್ಟ್ರಾಬೆರಿ ಮತ್ತು ನಿಂಬೆ ಜಾತಿಯ ಸಿಟ್ರಸ್ ಹೆಚ್ಚಿರುವ ಹಣ್ಣುಗಳನ್ನು ಸೇವಿಸುವುದರಿಂದ ಕ್ಯಾಲೊರಿ ಕಡಿಮೆಯಾಗಿ ತೂಕ ನಿಯಂತ್ರಣಕ್ಕೆ ಬರುತ್ತದೆ.

ನೆನಪಿರಲಿ: ಹಣ್ಣಿನ ಸೇವನೆಗೆ ಕೆಲವು ಪ್ರಮುಖ ಸಲಹೆಗಳು

ಜ್ಯೂಸ್ ಬೇಡ, ಹಣ್ಣೇ ಇರಲಿ: ಹಣ್ಣನ್ನು ಜ್ಯೂಸ್ ಮಾಡಿ ಕುಡಿಯುವುದಕ್ಕಿಂತ ಹಣ್ಣನ್ನೇ ಕಚ್ಚಿ ತಿನ್ನುವುದು ಉತ್ತಮ. ಜ್ಯೂಸ್ ಮಾಡುವುದರಿಂದ ಅದರ ನಾರಿನಂಶ ನಾಶವಾಗಿ ಕೇವಲ ಸಕ್ಕರೆ ಮಾತ್ರ ಉಳಿಯುತ್ತದೆ. ಹಾಗೆಯೇ ಯಾವುದೇ ಜ್ಯೂಸ್ಗೆ ಸಕ್ಕರೆ ಬೆರೆಸಬೇಡಿ. ಹಾಗೆಯೇ ಹಣ್ಣಿನ ರಸ ಸೇವಿಸಿ.

ರಾತ್ರಿ ವೇಳೆ ಬೇಡ: ಮಲಗುವ ಮುನ್ನ ಹಣ್ಣು ತಿನ್ನುವುದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸಿ ನಿದ್ರೆಗೆ ಭಂಗ ತರಬಹುದು. ಹೀಗಾಗಿ ಸಾಮಾನ್ಯರೂ ಸಹ ರಾತ್ರಿಯ ವೇಳೆ ಹಣ್ಣನ್ನಾಗಲೀ, ಹಣ್ಣಿನ ಜ್ಯೂಸನ್ನಾಗಲೀ ಸೇವಿಸುವುದು ಆರೋಗ್ಯಕಾರಿ ಅಲ್ಲ.

ರಾತ್ರಿ ಶುಗರ್ಹೆಚ್ಚಿಸುತ್ತೆ: ಈಗಾಗಲೇ ಹೇಳಿದಂತೆ ಹಣ್ಣಿನಲ್ಲಿ ಸಕ್ಕರೆ ಅಂಶ ಜಾಸ್ತಿ ಇದ್ದು, ಬೇಗ ಗ್ಲೂಕೋಸ್ಬಿಡುಗಡೆ ಮಾಡುತ್ತದೆ. ಹೀಗಾಗಿ ಮಧುಮೇಹಿಗಳು ಹಾಘೂ ಬೊಜ್ಜಿನ ಸಮಸ್ಯೆ ಇರುವುವರು ರಾತ್ರಿ ಹಣ್ಣನ್ನು ತಿನ್ನಲೇಬಾರದು. ಡಯಟಿಂಗ್ಹೆಸರಿನಲ್ಲಿ ಕೆಲವರು ರಾತ್ರಿ ಸ್ವಲ್ಪ ಹಣ್ಣು ತಿಂದು ಹಾಲು ಕುಡಿದು ಮಲಗುತ್ತಾರೆ. ಅಂದು ಖಂಡಿತಾ ನಿಮ್ಮ ಉದ್ದೇಶಕ್ಕೆ ಸರಿಯಾಗಿ ವಿರುದ್ಧವಾಗಿ ತೂಕ ಹೆಚ್ಚಿಸುತ್ತದೆ.

ನೈಸರ್ಗಿಕವಾಗಿರಲಿ: ಹಣ್ಣುಗಳಿಗೆ ಸಕ್ಕರೆ ಅಥವಾ ಉಪ್ಪು ಸೇರಿಸಿ ತಿನ್ನುವ ಬದಲು ಅವುಗಳ ನೈಸರ್ಗಿಕ ರುಚಿಯನ್ನೇ ಸವಿಯಿರಿ. ಜ್ಯೂಸ್ ಅನ್ನೂ ಸಹ ಸಕ್ಕರೆ ಮತ್ತು ಹಾಲು ರಹಿತವಾಗಿ ಕುಡಿಯುವುದನ್ನು ರೂಢಿಸಿಕೊಳ್ಳಿ.

ಮಿಕ್ಸ್ಫ್ರೂಟ್ಸ್ ಹಾಗೂ ಜ್ಯೂಸ್ ಬೇಡ: ಸಾಮಾನ್ಯವಾಗಿ ಪ್ರೂಟ್ಬೌಲ್ ಅಂದಾಕ್ಷಣ ಬೇರೆಬೇರೆ ರೀತಿಯ ಹಣ್ಣುಗಳನ್ನು ಕತ್ತರಿಸಿ, ಎಲ್ಲವನ್ನೂ ಮಿಕ್ಸ್ ಮಾಡಿ ಕೊಡುತ್ತಾರೆ. ಬೇರೆ ಬೇರೆ ಹಣ್ಣುಗಳ ಗ್ಲೈಸಮಿಕ್ ಇಂಡೆಕ್ಸ್ ಬೇರೆಯಾಗಿರುತ್ತದೆ. ಹಾಘಾಗಿ ಒಮ್ಮೆಗೆ ಒಂದೇ ರೀತಿಯ ಹಣ್ಣು ತಿನ್ನಿ.

ಹಣ್ಣಿನ ಜತೆಗೆ ಹಾಲು ಬೇಡ: ಸಾಮಾನ್ಯವಾಗಿ ಬಾಳೆ ಹಣ್ಣು, ಮಾವಿನ ಹಣ್ಣು ಇತ್ಯಾದಿಗಳಿಗೆ ಹಾಲು ಸಕ್ಕರೆ ಸೇರಿಸಿ ರಸಾಯನ ಮಾಡಿಕೊಂಡು ತಿನ್ನವ ಅಭ್ಯಾಸವಿದೆ. ಹಬ್ಬ ಹರಿದಿನಗಳಲ್ಲಿ ಹಣ್ಣಿನ ರಸಾಯನ ಮಾಡಲಾಗುತ್ತದೆ. ಹಣ್ಣಿನ ಜತೆಗೆ ಹಾಲು–ಸಕ್ಕರೆ ಆರೋಗ್ಯಕಾರಿಯಲ್ಲ. ಜತೆಗೆ ಕ್ಯಾಲರಿ ಇನ್ನಷ್ಟು ಹೆಚ್ಚಿ ಕೊಬ್ಬು ಸಂಗ್ರಹ ಜಾಸ್ತ ಮಾಡುತ್ತದೆ.

ಮಿಲ್ಕ್ ಶೇಕ್, ಐಸ್ಕ್ರೀಮ್ ಸಲಾಡ್ ಬೇಡ: ಯಾವುದೇ ಹಣ್ಣಿನ ಜತೆ ಹಾಲು ಸೇರಿಸಿ, ಅಥವಾ ಹಾಲಿನಿಂದ ತಯಾರಿಸಿದ ಐಸ್ಕ್ರೀಮ್ ಹಾಕಿ ಮಾಡುವ ಮಿಲ್ಕ್ಶೇಕ್, ಪ್ರೂಟ್ಸ್ ಸಲಾಡ್ ಭಾರೀ ಜನಪ್ರಿಯ. ಆದರೆ ಇವು ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಹಾಗೆಯೇ ಕೆಲವು ಹಣ್ಣುಗಳ ಜತೆ ಹಾಲು ಸೇರಿದರೆ ವಿಷಕಾರಿಯಾದೀತು. ಉದಾಹರಣೆಗೆ ಮಾವಿನ ಜತೆ ಹಾಲು ಬೇಡವೇ ಬೇಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.