‘ಅಯ್ಯೋ, ಈ ರಾತ್ರಿ ಮಾತ್ರ ಯಾಕಾದ್ರೂ ಆಗುತ್ತೋ!’ ಇದು ಆಧುನಿಕ ಜಗತ್ತಿನ ಬಹುತೇಕರ ಸಮಸ್ಯೆ ವಯಸ್ಸಿನ ನಿರ್ಬಂಧವಿಲ್ಲದೇ, ದೊಡ್ಡವರು ಚಿಕ್ಕವರು, ವಯಸ್ಸಾದವರು ಎಂಬ ಭೇದವಿಲ್ಲದೇ ಹೆಚ್ಚಿನವರು ನಿದ್ದೆಯ ಸಮಸ್ಯೆಯಿಂದ ಬಳಲುತ್ತ ಇದ್ದಾರೆ. ನಿದ್ದೇ ಬಾರದೇ ಇರೋದರಿಂದ ಟಿವಿ– ಮೊಬೈಲ್ ನೋಡ್ತೀವೋ, ಮೊಬೈಲ್–ಟಿವಿ ನೋಡೋದ್ರಿಂದಾಗಿ ನಿದ್ದೇ ಬರ್ತಿಲ್ಲವೋ, ಅಂತೂ ಇಂದಿನ ಯಾಂತ್ರಿಕ ಜೀವನಶೈಲಿಯಲ್ಲಿ ನಿದ್ದೆಯ ಕೊರತೆ (Insomnia) ಮತ್ತು ಗೊರಕೆ (Snoring) ಎರಡು ಫೆಡಂಭೂತವಾಗಿ ಜನರನ್ನು ಕಾಡುತ್ತಿವೆ. ಬೆಳಗಿನಿಂದ ದುಡಿದು ದಣಿದು ಬಂದರೆ, ರಾತ್ರಿ ನೆಮ್ಮದಿಯಾಗಿ ನಿದ್ದೆಯೂ ಬರುತ್ತಿಲ್ಲ, ನಿದ್ದೆ ಇಲ್ಲದ ರಾತ್ರಿಗಳಿಂದಾಗಿ ಮತ್ತೆ ದಿನವಿಡೀ ಕೆಲಸ ಮಾಡುವ ಉತ್ಸಾಹವೇ ಕಳೆದು ಹೋಗುತ್ತಿದೆ. ಹಾಗಾದರೆ ಏನಿದು ನಿದ್ದೆಯ ಸಮಸ್ಯೆ? ಇದಕ್ಕೆ ಕಾರಣಗಳೇನು? ನಿದ್ದೆಗೆ ಪೂರಕವಾಗುವ ಪೋಷಕಾಂಶಗಳಾವುವು? ನಮ್ಮ ಅಡುಗೆಮನೆಯಲ್ಲಿಯೇ ಸಿಗುವ ಯಾವ ಆಹಾರ ತಿಂದರೆ ನಮಗೆ ಈ ಪೋಷಕಾಂಶಗಳು ಸಿಕ್ಕು ನಿದ್ರಾಹೀನತೆಗೆ ಪರಿಹಾರ ನೀಡಬಲ್ಲವು ಎಂಬಿತ್ಯಾದಿ ಒಂದಷ್ಟು ವಿವರ ಇಲ್ಲಿದೆ.
.ತಿಂದುಂಡು ಸುಖವಾಗಿ: ನಿಜಕ್ಕೂ ಬಿಸಿ ನೀರು ಕುಡಿದರೆ ತೂಕ ಕಡಿಮೆ ಆಗುತ್ತದೆಯೇ?.
ನಿಮಗೆ ಗೊತ್ತಿರಲಿ, ನಮ್ಮ ದೇಹದಲ್ಲಿ ಉತ್ಪತ್ತಿ ಆಗುವ ಮೆಲಟೋನಿನ್ ಎಂಬ ಹಾರ್ಮೋನು ನಮಗೆ ನಿದ್ದೆ ಬರಲು ಕಾರಣ, ಹಾಗೊಮ್ಮೆ ನಿಮಗೆ ನಿದ್ದೆಯೇ ಬರುತ್ತಿಲ್ಲ ಎಂದಾದರೆ ಒಂದೋ ನಿಮ್ಮ ಹಾರ್ಮೋನುಗಳ ಬಿಡುಗಡೆಯಲ್ಲಿ ವ್ಯತ್ಯಯವಾಗಿರಬಹುದು. ಇಲ್ಲವೇ ನಮ್ಮ ದಿನಚರಿಯ ಶಿಸ್ತು ಪಾಲನೆಯಾಗುತ್ತಿಲ್ಲ ಎಂದಿರಬೇಕು. ಆರೋಗ್ಯಕರ ಆಹಾರ ಪದ್ಧತಿ ಮತ್ತು ನಿಯಮಿತ ನಿದ್ದೆಯ ಸಮಯವನ್ನು ಪಾಲಿಸುವ ಮೂಲಕ ನಿದ್ದೆಯ ಸಮಸ್ಯೆಗೆ ಸುಲಭವಾಗಿ ಗುಡ್ ಬೈ ಹೇಳಬಹುದು.

ಅಷ್ಟಕ್ಕೂ ನಿದ್ದೆ ಬಾರದೇ ಇರುವುದು, ನಿದ್ರಾ ಹೀನತೆಗೆ ಕಾರಣಗಳಾದರೂ ಏನು? ಒಂದೇ ಸಾಲಿನ ಉತ್ತರ ಕೊಡುವುದರಿದ್ದರೆ ನಮ್ಮ ಜೀವನ ಶೈಲಿಯಲ್ಲಿನ ಅಶಿಸ್ತು. ತುಂಬ ಜನ ಇದೊಂದು ಕಾಯಿಲೆ ಎಂದು ಭಾವಿಸಿದ್ದಾರೆ. ಸೋಕಾಲ್ಡ್ ಮೆಡಿಸಿನ್ ಜಗತ್ತು ಸಹ ಇದನ್ನು ಕಾಯಿಲೆಯೆಂದೇ ಬಿಂಬಿಸಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಹವಣಿಸಿದೆ. ಕೆಲವರಂತೂ ಇದಕ್ಕಾಗಿ ನಿದ್ರೆ ಗುಳಿಗೆಯಂಥವುಗಳ ದಾಸರಾಗಿ, ಇನ್ನಿಲ್ಲದ ಅಪಾಯಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದಾರೆ. ಇಷ್ಟನ್ನು ತಿಳಿದುಕೊಳ್ಳಿ, ನಿದ್ದೆ ನಮ್ಮ ದೇಹದ ಪ್ರಾಥಮಿಕ ಅಗತ್ಯಗಳಲ್ಲೊಂದು. ದೇಹಕ್ಕೆ ನಿದ್ದೆ ಬೇಕೇಬೇಕು. ಅಗತ್ಯವಿರುವಷ್ಟು ವಿಶ್ರಾಂತಿಯನ್ನು ದೇಹ ತನ್ನಿಂದತಾನೆಯೇ ಯಾವಾಗಲೋ ದಕ್ಕಿಸಿಕೊಂಡು ಬಿಡುತ್ತದೆ. ಇದನ್ನು ಅರಿಯದೇ ನಾವು ವೃಥಾ ಚಿಂತೆಗೆ ಒಳಪಡುತ್ತಿದ್ದೇವೆ.

ನಿದ್ರಾಹೀನತೆಗೆ ಮೊಟ್ಟ ಮೊದಲ ಕಾರಣ ಒತ್ತಡ ಮತ್ತು ಆತಂಕ. ದಿನನಿತ್ಯದ ಕೆಲಸದ ಒತ್ತಡ, ಅತಿಯಾದ ಆಲೋಚನೆಗಳು ನಮ್ಮ ಮೆದುಳನ್ನು ವಿಶ್ರಾಂತಿಗೆ ಜಾರದಂತೆ, ತಡೆದು, ಸದಾ ಜಾಗೃತವಾಗಿಡುತ್ತವೆ. ಇದರಿಂದ ನಿದ್ದೆ ಬರುವುದು ಕಷ್ಟವಾಗುತ್ತದೆ. ಇನ್ನೊಂದು ಪ್ರಮುಖ ಕಾರಣ ನಮ್ಮ ಅಸಮರ್ಪಕ ಜೀವನಶೈಲಿ ಹಾಗೂ ವ್ಯಸನಗಳು. ತಡರಾತ್ರಿಯವರೆಗೆ ಮೊಬೈಲ್, ಲ್ಯಾಪ್ಟಾಪ್, ಟೀವಿಗಳನ್ನು ವೀಕ್ಷಿಸುವುದರಿಂದ ನಿದ್ದೆ ನಮ್ಮಿಂದ ದೂರಾಗುತ್ತಿದೆ. ಗೆಜೆಟ್ಗಳ ಸ್ಕ್ರೀನ್ನಿಂದ ಹೊರಹೊಮ್ಮುವ 'ನೀಲಿ ಬೆಳಕು' ನಿದ್ದೆಯ ಹಾರ್ಮೋನ್ ಆದ ಮೆಲಟೋನಿನ್ ಉತ್ಪತ್ತಿಯನ್ನ ಕುಂಠಿತಗೊಳಿಸುತ್ತದೆ.
.ತಿಂದುಂಡು ಸುಖವಾಗಿ: ನೀವು ಈ ಸಮಯದಲ್ಲಿ ನಿದ್ದೆ ಮಾಡಿದ್ರೆ ಬೊಜ್ಜು ಹೆಚ್ಚಾಗೋದಿಲ್ಲ.
ಇದಲ್ಲದೇ ದೇಹದ ತೂಕ ಹೆಚ್ಚಾಗುವುದು ಸಹ ನಿದ್ದೆಯ ಸಮಸ್ಯೆಗೆ ಇನ್ನೊಂದು ಪ್ರಮುಖ ಕಾರಣ. ದೇಹದಲ್ಲಿ ಕೊಬ್ಬು ಸಂಗ್ರಹ ಹೆಚ್ಚಾದಂತೆ ನಮಗೆ ಉಸಿರಾಟದ ಸಮಸ್ಯೆ ತೀವ್ರಗೊಳ್ಳುತ್ತದೆ. ಮೂಗಿನ ಹೊಳ್ಳೆಗಳ ಬ್ಲಾಕ್ ಆಗುತ್ತವೆ ಅಥವಾ ಗಂಟಲಿನ ಸ್ನಾಯುಗಳು ಸಡಿಲಗೊಳ್ಳುತ್ತವೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗಿ ಗೊರಕೆ ಸದ್ದಾಗುತ್ತದೆ. ಇದು ಗಾಢ ನಿದ್ದೆಗೆ ಅಡ್ಡಿಪಡಿಸುತ್ತದೆ. ನಮ್ಮ ಗೊರಕೆ ಶಬ್ದ ನಮಗೇ ಡಿಸ್ಟರ್ಬ್ ಮಾಡಿ, ನಿದ್ದೆಯನ್ನು ದೂರ ತಳ್ಳುತ್ತದೆ.

ಇನ್ನು ಕೆಲವರಿಗೆ ಮಲಗುವ ಮುನ್ನ ಅತಿಯಾಗಿ ಚಹಾ, ಕಾಫಿ (ಕೆಫೀನ್) ಸೇವಿಸುವ, ತಂಬಾಕು ಅಗಿಯುವ, ಧೂಮಪಾನ ಮಾಡುವ, ಮಧ್ಯಪಾನ ಮಾಡುವ ಚಟ ಅಂಟಿಕೊಂಡಿರುತ್ತವೆ. ಇವೆಲ್ಲವೂ ಮೆಲಟೀನಿನ್ ಬಿಡುಗಡೆಗೆ ಅಡ್ಡಿ. ಅಲ್ಲದೇ ರಾತ್ರಿಯ ಹೊತ್ತು ಹೆಚ್ಚಿನ ಆಹಾರ ಸೇವನೆ, ತಡ ರಾತ್ರಿಯ ನಂತರ ಆಹಾರ ಸೇವನೆಯಿಂದಲೂ ನಿದ್ದೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ನೆನಪಿಡಿ, ನಮ್ಮ ನಿದ್ದೆಗೆ ಪೂರಕವಾಗುವ ಮುಖ್ಯ ಪೋಷಕಾಂಶಗಳೆಂದರೆ ಟ್ರಿಪ್ಟೊಫಾನ್ (Tryptophan) ಎಂಬ ಅಮೈನೋ ಆಮ್ಲ, ಮೆಗ್ನೀಷಿಯಮ್, ವಿಟಮಿನ್ ಬಿ6 ಹಾಗೂ ಕ್ಯಾಲ್ಸಿಯಂ (Calcium). ಇವೆಲ್ಲವೂ ನಮ್ಮ ನಿತ್ಯದ ಆಹಾರದಲ್ಲೇ ಲಭ್ಯ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಈ ಆಹಾರದ ಸೇವನೆಯನ್ನು ಜಾಸ್ತಿ ಮಾಡಿದರೆ, ಸಹಜವಾಗಿ ಸಮಸ್ಯೆ ಪರಿಹಾಋವಾಗುತ್ತದೆ.
.ತಿಂದುಂಡು ಸುಖವಾಗಿ: ನಿಮ್ಮ ಮೂತ್ರದ ಬಣ್ಣ ಹೀಗಿದೆಯಾ? ಎಚ್ಚೆತ್ತುಕೊಳ್ಳಲಿದು ಸಕಾಲ!.
1. ಟ್ರಿಪ್ಟೊಫಾನ್ (Tryptophan): ಇದೊಂದು ಅಮೈನೋ ಆಮ್ಲವಾಗಿದ್ದು, ದೇಹದಲ್ಲಿ 'ಸೆರೊಟೋನಿನ್' ಮತ್ತು 'ಮೆಲಟೋನಿನ್' (ನಿದ್ದೆಯ ಹಾರ್ಮೋನ್) ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ. ಬಿಸಿ ಹಾಲು, ಮೊಸರು, ಬಾಳೆಹಣ್ಣು, ಪನೀರ್ ಮತ್ತು ಓಟ್ಸ್ಗಳಲ್ಲಿ ಟ್ರಿಪ್ಟೊಫಾನ್ ಅಂಶ ಹೆಚ್ಚಿರುತ್ತದೆ.

2. ಮೆಗ್ನೀಸಿಯಮ್ (Magnesium): ಇದು ಸ್ನಾಯುಗಳನ್ನು ಸಡಿಲಗೊಳಿಸಿ, ನರಮಂಡಲವನ್ನು ಶಾಂತಗೊಳಿಸುವ ಮೂಲಕ ಗಾಢ ನಿದ್ದೆಗೆ ಜಾರಲು ನೆರವಾಗುತ್ತದೆ. ಬಾದಾಮಿ, ಗೋಡಂಬಿ, ಕುಂಬಳಕಾಯಿ ಬೀಜಗಳು, ಪಾಲಕ್ ಸೊಪ್ಪು ಮತ್ತು ಡಾರ್ಕ್ ಚಾಕೊಲೇಟ್ನಲ್ಲಿ ಮೆಗ್ನೀಸಿಯಂ ಅಂಶ ಶ್ರೀಮಂತವಾಗಿರುತ್ತದೆ.

3. ವಿಟಮಿನ್ ಬಿ6 (Vitamin B6): ಮೆಲಟೋನಿನ್ ಹಾರ್ಮೋನ್ ಸರಿಯಾಗಿ ಕೆಲಸ ಮಾಡಲು ಈ ವಿಟಮಿನ್ ಅತ್ಯಗತ್ಯ. ಕಡಲೆಕಾಳು (Chana), ಮೀನು, ಆಲೂಗಡ್ಡೆ ಮತ್ತು ಬಾಳೆಹಣ್ಣಿನಲ್ಲಿ ನಮಗೆ ಬಿ6 ಹೇರಳವಾಗಿ ಲಭ್ಯವಿದೆ.

4. ಕ್ಯಾಲ್ಸಿಯಂ (Calcium): ಮೆದುಳು ಟ್ರಿಪ್ಟೊಫಾನ್ ಬಳಸಿ ಮೆಲಟೋನಿನ್ ತಯಾರಿಸಲು ಕ್ಯಾಲ್ಸಿಯಂ ನೆರವಾಗುತ್ತದೆ. ಇದಂತೂ ನಮಗೆ ಗೊತ್ತೇ ಇದೆ; ಹಾಲು ಮತ್ತು ಹಾಲಿನ ಉತ್ಪನ್ನಗಳು, ರಾಗಿ, ಸೊಪ್ಪು–ತರಕಾರಿಗಳು ಹಾಗೂ ಎಳ್ಳಿನಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ಸಿಗುತ್ತದೆ.

ಇವುಗಳನ್ನು ಜಾಸ್ತಿ ಪ್ರಮಾಣದಲ್ಲಿ ಸೇವಿಸುವುದರ ಜತೆಗೆ ಈ ಕಳೆಗೆ ಕೊಟ್ಟ ಸುಲಭದ ಟಿಪ್ಸ್ಗಳನ್ನು ಪಾಲಿಸಿದರೆ ನಿದ್ರಾಹೀನತೆ ನಿಮ್ಮಿಂದ ದೂರವಾಗಿ ಸವಿ ನಿದ್ದೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಆರೋಗ್ಯಕರ, ನೆಮ್ಮದಿಯ ಜೀವನವೂ ಸಿಗುತ್ತದೆ.

ನೆಮ್ಮದಿಯ ನಿದ್ದೆಗಾಗಿ ಸರಳ ಸಲಹೆ:

• ಮಲಗುವ ಕನಿಷ್ಠ ಒಂದು ಗಂಟೆ ಮುನ್ನ ಮೊಬೈಲ್, ಟಿವಿ, ಲ್ಯಾಪ್ಟಾಪ್, ಕಂಪ್ಯೂಟರ್ಗಳಿಂದ ದೂರವಿರಿ.

• ಮಲಗುವ ಮುನ್ನ ಒಂದು ಲೋಟ ಉಗುರುಬೆಚ್ಚಗಿನ ಹಾಲಿಗೆ ಚಿಟಿಕೆ ಜಾಯಿಕಾಯಿ (Nutmeg) ಪುಡಿ ಅಥವಾ ಅರಿಶಿನ ಬೆರೆಸಿ ಕುಡಿಯಿರಿ.

• ದೇಹದ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ, ನಿಯಮಿತ ವ್ಯಾಯಾಮ, ಸಮತೂಲಿತ ಆಹಾರ ಸೇವನೆ ಮಾಡಿ.

• ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದನ್ನು ರೂಢಿಸಿಕೊಳ್ಳಿ. ರಾತ್ರಿ 9.30–10.30ರ ನಡುವೆ ಮಲಗುವುದು ಉತ್ತಮ.

• ಹಗಲು ಹೊತ್ತಿನಲ್ಲಿ ಯಾವುದೇ ಕಾರಣಕ್ಕೂ ನಿದ್ದೆ ಮಾಡಬೇಡಿ. ಅದರಲ್ಲೂ ಸಂಜೆ 4 ರ ನಂತರ ನಿದ್ದೆ ಬೇಡವೇ ಬೇಡ.

• ಮಲಗುವ ವೇಳೆಗೂ ಕನಿಷ್ಠ 2–3 ಗಂಟೆ ಮೊದಲು ಆಹಾರ ಸೇವಿಸಿ. ರಾತ್ರಿಯ ಊಟ ಲಘುವಾಗಿರಲಿ.

• ಮಲಗುವ ಮುನ್ನ 30 ನಿಮಿಷ ಲಘು ನಡಿಗೆ ರೂಢಿಸಿಕೊಳ್ಳಿ, ಮಲಗುವ ಕೋಣೆಯಲ್ಲಿ ಕತ್ತಲು, ನಿಶ್ಶಬ್ದ, ಶಾಂತಿ ಇರಲಿ, ಚಿಂತೆ ಯೋಚನೆಗಳನ್ನು ಹೊರಗೆ ಬಿಟ್ಟು ಬೆಡ್ ರೂಮ್ಗೆ ಹೋಗಿ.

• ಹಾಸಿಗೆಗೆ ತಲೆಕೊಟ್ಟ 5–10 ನಿಮಿಷದಲ್ಲಿ ನಿದ್ದೆಗೆ ಜಾರುತ್ತಿಲ್ಲ ಎಂದರೆ ನಿಮ್ಮಿಷ್ಟದ ಹಾಡು, ಸ್ತೋತ್ರ ಇತ್ಯಾದಿಗಳನ್ನು ಬಿಡದೇ ಪಠಿಸುತ್ತಿರಿ. ಇದ್ಯಾವುವೂ ಬೇಡವೆಂದರೆ 1 ರಿಂದ 100 ವರೆಗಿನ ಸಂಖ್ಯೆಯನ್ನು ತಿರುಗು ಮುರುಗಾಗಿ (100 ರಿಂದ 1) ಎಣಿಸುತ್ತಾ ಬನ್ನಿ.

• ಕಾಲಿನ ಹೆಬ್ಬೆರಳನ್ನು ಗಮನಿಸಿತ್ತ, ಅಪ್ರದಕ್ಷಿಣಾಕಾರದಲ್ಲಿ ಸುತ್ತಿಸಲು ಪ್ರಯತ್ನಿಸುತ್ತ ಇರಿ. ಕಣ್ಣುಬಿಟ್ಟು ಕೊಂಡು ಫ್ಯಾನ್ ನೋಡುತ್ತ ಯೋಚಿಸುವುದನ್ನು ನಿಲ್ಲಿಸಿ.

• ಹಿತವಾದ, ಲಘು ಸಂಗೀತ, ಭಜನ್ ಇತ್ಯಾದಿಗಳನ್ನು ಮೆಲುದನಿಯಲ್ಲಿ ಕೇಳುತ್ತಿರಿ.

ಗುಡ್ನೈಟ್. ಹ್ಯಾವ್ ಸ್ವೀಟ್ ಡ್ರೀಮ್ಸ್!
.ತಿಂದುಂಡು ಸುಖವಾಗಿ : ಊಟ 40:30:30 ಅನುಪಾತದಲ್ಲೇ ಏಕಿರಬೇಕು? ಇಲ್ಲಿದೆ ಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.