ಹಿಂದಿನ ಲೇಖನದಲ್ಲಿ ಡಯಾಬಿಟೀಸ್ ಇದ್ದವರು ಸಹ ಖಂಡಿತಾ ಸ್ವೀಟ್ ತಿನ್ನಬಹುದು. ಸಿಹಿ ತಿಂಡಿಗಳನ್ನು ತಿಂದು ಸಹ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಿದ್ದೆ. ಬಹುತೇಕರು ಇದರಿಂದ ಹೌಹಾರಿದ್ದರು! ಹಾಗಾದರೆ ಡಯಾಬಿಟೀಸ್ ಬಾರ್ಡರ್ನಲ್ಲಿದ್ದರೂ ಡಾಕ್ಟರ್ಗಳು ಸ್ವೀಟ್ ತಿನ್ನಬೇಡಿ, ಕಾಫಿ, ಟೀಗೆ ಸಕ್ಕರೆ ಹಾಕಿಕೊಳ್ಳಬೇಡಿ, ಅನ್ನ ಕಡಿಮೆ ಮಾಡಿ ಎಂದು ಹೇಳುವುದೇಕೆ? ಹಾಗಾದರೆ ವೈದ್ಯರು ಹೇಳುವುದು ಸುಮ್ಮನೇ ಹೆದರಿಸಲಾ.... ಹೀಗೆ ಓದುಗರಿಂದ ಪ್ರಶ್ನೆಗಳ ಸುರಿಮಳೆಯೇ ಆಗಿದೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ನೀವು ಎಲ್ಲದರಲ್ಲೂ ಹೀಗೆಯೇ. ಸಾಮಾನ್ಯವಾಗಿ ವೈದ್ಯರು ಏನೆಲ್ಲ ಪಾಲಿಸಬೇಕೆಂದು ಹೇಳುತ್ತಾರೋ, ನಾವು ಹಿಂದಿನಿಂದಲೂ ಏನೆಲ್ಲವನ್ನೂ ನಂಬಿಕೊಂಡು ಬಂದಿದ್ದೇವೋ ಅದೆಲ್ಲಕ್ಕೂ ವಿರುದ್ಧವಾಗಿಯೇ ಹೇಳುತ್ತೀರಿ. ಹಾಗಾದರೆ, ನೀವು ಡಾಕ್ಟರ್ಗಳಿಂತಲೂ ಹೆಚ್ಚಾ?’ ಎಂದೆಲ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೊದಲ ಬಾರಿಗೆ, ನನ್ನ ಲೇಖನ ಓದುವವರಿಗೆ, ನಾನು ಹೇಳುವುದನ್ನು ಕೇಳುವವರಿಗೆ ಇದೆಲ್ಲ ವಿಚಿತ್ರ ಅಂತಲೇ ಅನ್ನಿಸುವುದು ಸಹಜ. ಹೀಗೆ ಸವಾಲೆಸೆಯುವವರು, ನಾನು ಹೇಳುವ ಮಾತಿನ ಹಿಂದಿನ ಕಾರಣಗಳು ಮತ್ತು ಸತ್ಯವನ್ನು ವಿಮರ್ಶಿಸುವುದೇ ಇಲ್ಲ. ಹಾಗೊಮ್ಮೆ ಬೊಜ್ಜು, ಬಿಪಿ, ಶುಗರ್, ಥೈರಾಯ್ಡ್...ಇಂಥವೆಲ್ಲ ನಮಗೆ ಹೇಗೆ ಬಂತು ಎಂಬುದನ್ನು ಅರಿತುಕೊಂಡರೆ, ನಾನು ಹೇಳುವುದು ಯಾರಿಗೂ ಅಚ್ಚರಿ ಎನಿಸುವುದಿಲ್ಲ. ಅಸಲಿಗೆ ನಮ್ಮಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿ ಇಂಥವನ್ನೆಲ್ಲ ‘ಕಾಯಿಲೆ‘ಗಳು ಎಂದೇ ಅಂದುಕೊಂಡುಬಿಟ್ಟಿದ್ದಾರೆ. ಸೋಕಾಲ್ಡ್ ಡಾಕ್ಟರ್ಗಳ ಸಮೂಹ, ಮೆಡಿಕಲ್ ಲಾಬಿ ಸಹ ಇದನ್ನು ಜನರ ಮನಸಿನಲ್ಲಿ ಮತ್ತಷ್ಟು ಬಲವಾಗಿ ಬೇರೂರುವಂತೆ ಮಾಡಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಆದರೆ ನಿಜವಾದ ವೈದ್ಯರಾರೂ ಇದನ್ನು ಕಾಯಿಲೆ ಎನ್ನವುದೇ ಇಲ್ಲ. ಹಾಗಾದರೆ ಇವೆಲ್ಲವೂ ಏನು ಎಂದರೆ ನಮ್ಮ ಜೀವನ ಶೈಲಿಯಲ್ಲಿನ ಆಶಿಸ್ತಿನಿಂದ ಕಾಣಿಸಿಕೊಳ್ಳುವ ಸಮಸ್ಯೆಗಳಷ್ಟೇ. ಜೀವನಶೈಲಿಯಿಂದ ಬಂದ ಸಮಸ್ಯೆಗಳಿಗೆ ಪರಿಹಾರ ಜೀವನಶೈಲಿಯನ್ನು ಬದಲಿಸಿಕೊಳ್ಳುವುದು; ಅಷ್ಟೇ. ವೆರಿಸಿಂಪಲ್!

ನಿಮಗೆ ಒಮ್ಮೆ ಬಿಪಿ ಕಾಣಿಸಿಕೊಂಡರೆ ಮುಗಿಯಿತು, ಜೀವನವಿಡೀ ಹೈ ಬ್ಲಡ್ ಪ್ಲಷರ್ ಅನ್ನು ನಿಯಂತ್ರಿಸುವ ಮಾತ್ರೆಗಳನ್ನು ತೆಗೆದುಕೊಳ್ಳುತ್ತಲೇ ಇರಬೇಕು ಎಂಬುದು ನಿಮಗೆ ತಿಳಿದಿರುವ ಮಾಹಿತಿ; ಅಲ್ಲವೇ? ವೈದ್ಯರು ಸಹ ಹಾಗೆಯೇ ಹೇಳುತ್ತಾರೆ. ಮಾತ್ರವಲ್ಲ, ವರ್ಷದಿಂದ ವರ್ಷಕ್ಕೆ ಬಿಪಿ ಮಾತ್ರೆಯ ಡೋಸೇಜ್ ಜಾಸ್ತಿಯಾಗುತ್ತದೆಯೇ ಹೊರತು, ಮತ್ತೆಂದೂ ಮಾತ್ರೆ ನುಂಗುವುದರಿಂದ ನಿಮಗೆ ಮುಕ್ತಿಯೇ ಸಿಗುವುದಿಲ್ಲ. ಹಾಗೆಯೇ ಡಯಾಬಿಟೀಸ್ಗೆ ಸಹ; ಥೈರಾಯ್ಡ್ಗೆ ಕೂಡ. ಅಷ್ಟೇಕೆ ಕ್ಯಾನ್ಸರ್ನಂಥ ಕ್ಯಾನ್ಸರ್ ಸಹ ಒಂದು ಕಾಯಿಲೆಯಲ್ಲ; ಅದು ಬರುವುದು ಸಹ ನಮ್ಮ ಜೀವನಶೈಲಿಯಲ್ಲಿನ ಅಶಿಸ್ತು, ಏರುಪೇರು, ಚಟಗಳಿಂದಾಗಿಯೇ. ನಿಜವಾಗಿ ಏನು ಗೊತ್ತಾ? ನಿಮಗೆ ಬೇರೆ ದಾರಿ ಗೊತ್ತಿಲ್ಲವಾದ್ದರಿಂದ (ನಮ್ಮ ವೈದ್ಯರಿಗೆ ಗೊತ್ತಿರುತ್ತದಾದರೂ ಬಹುತೇಕ ಹೇಳಿಕೊಡುವುದಿಲ್ಲ) ಅನಿವಾರ್ಯವಾಗಿ ಇವೆಲ್ಲಕ್ಕೂ ಮೆಡಿಕೇಷನ್ಗಳಿಗೇ ಅಡಿಕ್ಟ್ ಆಗಿ ಬಿಡ್ತೇವೆ. ಬಹುಶಃ ಇದು ಸುಲಭದ ದಾರಿ ಅನ್ನಿಸುತ್ತದೆಯೋ ಏನೋ!

ಹಾಗಾದರೆ, ವೈದ್ಯರು ಹೇಳುವುದೆಲ್ಲ ಸುಳ್ಳೇ? ಖಂಡಿತವಾಗಿಯೂ ಸುಳ್ಳಲ್ಲ. ಅವರಿರುವುದೇ ಕಾಯಿಲೆಗಳಿಗೆ ಮದ್ದು, ಚಿಕಿತ್ಸೆ ಕೊಡುವುದಕ್ಕಾಗಿ. ನೀವು ಬಿಪಿಯನ್ನು ನಾರ್ಮಲ್ಗಿಂತ ಹೆಚ್ಚು ಅಥವಾ ಕಡಿಮೆ ಮಾಡಿಕೊಂಡು ಅವರ ಬಳಿ ಹೋಗುತ್ತೀರಿ. ಸಹಜವಾಗಿ ಅವರು ಮಾತ್ರೆಗಳನ್ನು ಬರೆದುಕೊಡ್ತಾರೆ. ಶೂಗರ್ ಲೆವೆಲ್ 200 ದಾಟಿದಾಗಲೇ ಬಹುತೇಕರಿಗೆ ಕಾಲಿನಲ್ಲಿ ಉರಿಯೂತ, ನಮ್ನೆಸ್, ಸಿಕ್ಕಾಪಟ್ಟೆ ಬಾಯಾರಿಕೆ, ತಲೆ ಸುತ್ತುವುದು, ಪದೇಪದೇ ಮೂತ್ರ ವಿಸರ್ಜನೆಗೆ ಹೋಗುವಂತಾಗುವುದು...ಇತ್ಯಾದಿಗಳೆಲ್ಲ ಕಾಣಿಸಿಕೊಳ್ಳುವುದು. ಆವಾಗ ವೈದ್ಯರ ಬಳಿ ಹೋದರೆ ಸಹಜವಾಗಿ ಅವರು ಶುಗರ್ ಕಂಟ್ರೋಲಿಂಗ್ ಅಥವಾ ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸುವ ಮದ್ದನ್ನು ಕೊಡುತ್ತಾರೆ. ಅಸಲಿಗೆ ನಿಮಗೆ ಇಂಥ ಪರಿಸ್ಥಿತಿ ಏಕೆ ಬಂತು ಎಂಬುದನ್ನು ಯೋಚಿಸುವುದೇ ಇಲ್ಲ. ಒಂದೊಮ್ಮೆ ಯೋಚಿಸಿದರೆ, ಅದನ್ನು ಸರಿಪಡಿಸಿಕೊಳ್ಳುವುದು ಅಥವಾ ಅದು ಬರದಂತೆ ನೋಡಿಕೊಳ್ಳುವುದು ನಿಮಗೇ ಗೊತ್ತಾಗಿಬಿಡುತ್ತದೆ.

ಹೀಗೆ ಹೇಳಿದರೆ ನಿಮಗೆ ಅರ್ಥವಾದೀತು. ನಿಮಗೆ ಬೆಳಗ್ಗೆ ಏಳುವಾಗ ಇದ್ದಕ್ಕಿದ್ದಂತೆ ಗಂಟಲು ಕೆರೆತ, ನೋವು ಆರಂಭವಾಗಿರುತ್ತದೆ. ತಕ್ಷಣ ನೀವು ಮಾಡುವುದೇನು? ನಿನ್ನೆಯ ದಿನ ಏಲ್ಲಿ–ಏನು ಕುಡಿದೆ, ಯಾವ ನೀರು ಸಮಸ್ಯೆ ಆಗಿರಬಹುದು? ಕೋಲ್ಡ್ ಐಟಂಗಳನ್ನು ಏನಾದರೂ ತಿಂದೆನಾ? ಐಸ್ಕ್ರೀಂ, ಜ್ಯೂಸ್, ಮಾವಿನ ಹಣ್ಣು, ಕಲ್ಲಂಗಡಿ, ದ್ರಾಕ್ಷಿ ಅಥವಾ ಕಿತ್ತಳೆಯನ್ನು ತಿಂದಿದ್ದೆನಾ… ಎಂಬುದನ್ನೆಲ್ಲಾ ಯೋಚಿಸುತ್ತೀರಿ ಅಲ್ಲವೇ? ಅದು ನೆನಪಾಗುತ್ತಿದ್ದಂತೆಯೇ ಓ ಅದಕ್ಕೇ, ಇವತ್ತು ಗಂಟಲು ನೋಯುತ್ತಿದೆ ಎಂಬ ತೀರ್ಮಾನಕ್ಕೆ ಬಂದು, ಬಿಸಿ ನೀರು, ಕಷಾಯ...ಎಂದೆಲ್ಲ ಪ್ರಯತ್ನ ಮಾಡಿ, ಅದಕ್ಕೂ ಬಗ್ಗದೇ ಹೋದಾಗ ವೈದ್ಯರ ಬಳಿ ಹೋಗುತ್ತೀರಿ. ಹಾಗೆಯೇ ಬಿಪಿ, ಶುಗರ್(ಡಯಾಬಿಟೀಸ್) ಇತ್ಯಾದಿಗಳ ಬಗ್ಗೆಯೂ ಯೋಚಿಸುವುದನ್ನು ಕಲಿಯಬೇಕು.

ಹಾಗೆ ಕಲಿಯುವುದು ಸ್ವಲ್ಪ ಕಷ್ಟ ಏಕೆಂದರೆ, ಗಂಟಲು ನೋವು, ಶೀತ, ನೆಗಡಿ, ಜ್ವರ, ಕೆಮ್ಮು, ವಾಂತಿ, ಭೇದಿ, ಗ್ಯಾಸ್ಟ್ರಿಕ್ ಟ್ರಬಲ್...ಇವೆಲ್ಲ ಹೇಗೆ ಬರುತ್ತದೆ, ಯಾವುದರಿಂದ (ಏನನ್ನು ತಿಂದರೆ ಅಥವಾ ಕುಡಿದರೆ) ಬರುತ್ತದೆ ಎಂಬುದು ಗೊತ್ತಿದೆ; ಅಥವಾ ಈಗ ಗೊತ್ತಾಗಿದೆ. ಹೀಗಾಗಿ ಅಂಥವನ್ನು ಅವಾಯ್ಡ್ ಮಾಡುವುದನ್ನು ಕಲಿತುಬಿಟ್ಟಿದ್ದೀರಿ. ಆದರೆ ಬಿಪಿ (ಹೈಪರ್ ಟೆನ್ಷನ್–ಅಧಿಕ ರಕ್ತದೊತ್ತಡ), ಶುಗರ್ (ಡಯಾಬಿಟೀಸ್–ಮಧುಮೇಹ) ಅಥವಾ ಥೈರಾಯ್ಡ್ (ಗಳಗಂಡ ಸಮಸ್ಯೆ) ಗಳಂಥವು ಹೇಗೆ, ಯಾವುದರಿಂದ ಬರುತ್ತದೆ ಎಂಬುದು ಗೊತ್ತೇ ಆಗಿಲ್ಲ, ಅಥವಾ ಅದನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ನಾವು ಮಾಡುತ್ತಿಲ್ಲ. ಗೊತ್ತಿರುವ ಬಹುತೇಕರು ಮೆಡಿಕಲ್ ಕ್ಷೇತ್ರದ ಲಾಭಿಗೆ ಮಣಿದು ಇದನ್ನು ‘ಆಧುನಿಕ ಜಮಾನದ ಕಾಯಿಲೆ’ ಎಂದು ಬಿಂಬಿಸಿ, ಮೆಡಿಕೇಷನ್ ಕಡ್ಡಾಯ, ಅದಿಲ್ಲದಿದ್ದರೆ ಹಾಗಾಗಿಬಿಡುತ್ತದೆ, ಹೀಗಾಗಿ ಬಿಡುತ್ತದೆ ಎಂಬ ಭಯವನ್ನು ಬಿತ್ತಿಬಿಟ್ಟಿದ್ದಾರೆ. ನಿಜಕ್ಕೂ ಬಿಪಿ–ಶುಗರ್ಗಳಂಥವನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳದಿದ್ದರೆ(ನಿಗದಿತ ಸಂಖ್ಯೆಯ ಪರಿಮಾಣದ ಒಳಗೆ) ಖಂಡಿತಾ ಎಲ್ಲ ಅಪಾಯಗಳೂ ಇದ್ದೇ ಇವೆ. ಆದರೆ, ಮಾತ್ರೆ, ಔಷಧಗಳಿಲ್ಲದೆಯೂ ಅವನ್ನು ನಾವು ಕಡಿಮೆ ಮಾಡಿಕೊಳ್ಳಬಹುದು ಎಂಬ ಸತ್ಯ ನಮಗೆ–ನಿಮಗೆ ಗೊತ್ತಿಲ್ಲ.

ಈಗ ಇಂಥ ಸಮಸ್ಯೆಗಳು ಬರುವುದು ಯಾವುದರಿಂದ ಎಂದರೆ, ನೆಗಡಿ, ಕೆಮ್ಮು, ಶೀತ, ಜ್ವರ, ವಾಂತಿ–ಭೇದಿಗಳಂತೆಯೇ ಬಿಪಿ–ಶೂಗರ್ ಸಹ ಬರುವುದೂ ನಾವು ತಿನ್ನುವ ಆಹಾರದಿಂದಲೇ, ಒಂದೇ ವ್ಯತ್ಯಾಸವೆಂದರೆ ಅವೆಲ್ಲ ನಾವು ತಿನ್ನುವ ಆಹಾರ, ಕುಡಿಯುವ ಪಾನೀಯಗಳಲ್ಲಿ ಏನು ಇರಬಾರದೋ ಅವು (ಬ್ಯಾಕ್ಟೀರಿಯಾ, ವೈರಸ್) ಇರುವುದರಿಂದ ಬರುತ್ತವೆ. ಆದರೆ ಬಿಪಿ, ಶುಗರ್ಗಳಂಥವು ನಾವು ತಿನ್ನುವ ಆಹಾರದಲ್ಲಿ ಏನಿರಬೇಕೋ ಅವು (ಪೌಷ್ಟಿಕಾಂಶ–ಖನಿಜಗಳು, ವಿಟಮಿನ್ಗಳು) ಇಲ್ಲದೆಯೇ ಬರುತ್ತವೆ ಎಂಬುದು ಒಂದು ಕಾರಣವಾದರೆ, ಇನ್ನೊಂದು ಕಾರಣ, ನಾವು ತಿಂದಿದ್ದು, ಕುಡಿದದ್ದು ಅಗತ್ಯಕ್ಕಿಂತ ಜಾಸ್ತಿ (ಕ್ಯಾಲರಿ) ಆದದ್ದರಿಂದ ಬರುತ್ತದೆ. ಹಾಗಾದರೆ ಏನು ಮಾಡಬೇಕು ಎಂದರೆ ಸಿಂಪಲ್, ನಾವು ನಿತ್ಯ ನಮಗೆ(ದೇಹಕ್ಕೆ) ಎಷ್ಟು ಬೇಕೋ ಅಷ್ಟೇ ತಿನ್ನಬೇಕು. ತಿಂದದ್ದು (ಕ್ಯಾಲರಿ) ಕರಗುವವರೆಗೆ ಮತ್ತೆ ತಿನ್ನಬಾರದು. ಅಗತ್ಯಕ್ಕಿಂತ ಹೆಚ್ಚು ಹಾಗೂ ಒಮ್ಮೆ ತಿಂದದ್ದು ಕರಗದೇ (ಹಸಿವಾಗದೇ) ಮತ್ತೆ ಮತ್ತೆ ತಿನ್ನವುದರಿಂದಲೇ ದೇಹದಲ್ಲಿ ಸಕ್ಕರೆ ಅಂಶ ಜಾಸ್ತಿ ಆಗಿ ಬಿಪಿ, ಶುಗರ್, ಕೊನೆಗೆ ಹೃದ್ರೋಗದವರೆಗೆ ಎಲ್ಲವೂ ಬರುತ್ತದೆ. ಇದನ್ನು ಕಡಿಮೆ ಮಾಡಿಬಿಟ್ಟರೆ ಸಹಜವಾಗಿ ತಿಂದದ್ದು ಜಾಸ್ತಿ ಆಗಿದ್ದರಿಂದ ಜಾಸ್ತಿ ಆಗಿದ್ದ ಬಿಪಿ, ಶುಗರ್ ಪ್ರಮಾಣ ಕಡಿಮೆ ಆಗುತ್ತದೆ. ಇದನ್ನೇ ಕ್ಯಾಲರಿ ಮ್ಯಾನೇಜ್ಮೆಂಟ್ ಎಂದು ಕರೆಯುವುದು.

ಹಾಗೆ ತಿಂದೂ ನಂತರ ಕ್ಯಾಲರಿ ಮ್ಯಾನೇಜ್ ಮಾಡಕ್ಕೆ ಗೊತ್ತಿರಬೇಕು. ಅದು ಗೊತ್ತಿಲ್ಲ ಅನ್ನೋ ಕಾರಣಕ್ಕೆ ಡಾಕ್ಟರ್ಗಳು ಸ್ವೀಟ್ ತಿನ್ನಬೇಡಿ ಅನ್ನೋದು. ಯಾವುದೇ ಸಿಹಿ ತಿಂಡಿಗಳು ಸಹಜವಾಗಿ ಹೆಚ್ಚಿನ ಕ್ಯಾಲರಿ ಹೊಂದಿರುತ್ತವೆ. ನಾವು ಮಾಡುವ ತಪ್ಪೇನೆಂದರೆ, ಸಿಹಿಯನ್ನು ತಿಂದ ಬಳಿಕವೂ ಮತ್ತೆ ಎಂದಿನಂತೆ ಊಟವನ್ನೂ ಮಾಡುತ್ತೇವೆ. ಆಗ ಕ್ಯಾಲರಿ ಡಬಲ್ ಆಗುತ್ತದೆ. ನಾವು ಬುದ್ಧಿವಂತರಾದರೆ, ನಿಮಗೆ ಡಯಾಬಿಟೀಸ್ ಇದ್ದರೂ ತೊಂದರೆ ಇಲ್ಲ, ಸಿಹಿ ತಿನ್ನಬೇಕೆನಿಸಿದರೆ, ಒಮ್ಮೆ ಯಾವಾಗಲೋ, ಹಬ್ಬದಲ್ಲೋ, ಅಪರೂಪದ ಸಮಾರಂಭಗಳಲ್ಲೋ ತಿಂದುಬಿಡಿ. ಆದರೆ ಮತ್ತೆ ಊಟ ಮಾಡುವ ಬದಲು, ಒಂದಷ್ಟು ತರಕಾರಿಯನ್ನೋ, ಸೈಡ್ ಡಿಶ್ಗಳನ್ನೋ ತಿಂದು ಎದ್ದುಬಿಡಿ. ಮಾತ್ರವಲ್ಲ, ಸಿಹಿಯನ್ನು ಡೈಲ್ಯೂಟ್ ಮಾಡುವುದು ನೀರು ಮಾತ್ರ, ದೇಹಕ್ಕೂ ಇದೇ ಅನ್ವಯ. ಸಿಹಿ (ಹೆಚ್ಚಿನ ಕ್ಯಾಲರಿ) ತಿಂದಾಗ ಅದನ್ನು ಡೈಲ್ಯೂಟ್ ಮಾಡಲು ಹೆಚ್ಚು ನೀರುಕುಡಿಯಿರಿ, ಹೆಚ್ಚಿನ ಶ್ರಮದ ಕೆಲಸ, ಹೆಚ್ಚಿನ ವಾಕಿಂಗ್ ಮಾಡಿ, ಇದನ್ನು ಸಾಮಾನ್ಯರು ಅರಿತುಕೊಳ್ಳುವುದಿಲ್ಲ. ಹೀಗೆ ಕ್ಯಾಲರಿ ಮ್ಯಾನೇಜ್ ಮಾಡಲು ಎಲ್ಲರಿಗೂ ಗೊತ್ತಿಲ್ಲ, ಗೊತ್ತಿದ್ದರೂ ಕ್ಯಾಲರಿ ಶಿಸ್ತನ್ನು ಪಾಲಿಸುವುದಿಲ್ಲ ಅನ್ನೋ ಕಾರಣಕ್ಕೆ ಡಾಕ್ಟರ್ಗಳು ಸ್ವೀಟ್ ತಿನ್ನಬೇಡಿ ಅನ್ನೋದು. ಮತ್ತು ಮಾತ್ರೆಗಳನ್ನು ಕೊಟ್ಟು ಕೈತೊಳೆದುಕೊಳ್ಳೋದು.

ಬೊಜ್ಜಿದ್ದವರು, ಶುಗರ್ ಇದ್ದವರು ಹಬ್ಬದೂಟ ಹೇಗೆ ಮಾಡಬೇಕು? ಒಂದೊಮ್ಮೆ ಸ್ವೀಟ್ ತಿಂದರೂ ತೊಂದರೆ ಆಗದಂತೆ ಹೇಗೆ ಕಾಪಾಡಿಕೊಳ್ಳಬೇಕು? ಬಿಪಿ, ಶುಗರ್ ಮಾತ್ರೆಗಳಿಂದ ಹೇಗೆ ಪಾರಾಗಬೇಕು ಎಂಬುದನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.