ಇವತ್ತು ‘ವೆಲ್ನೆಸ್’ ಬಗ್ಗೆ ಬರೆಯಬೇಕು ಎಂದು ಕುಳಿತಾಗ ಹಿರಿಯರೊಬ್ಬರು ಹೇಳಿದ ಮಾತು ಥಟ್ಟನೆ ನೆನಪಿಗೆ ಬಂತು–‘ಬದುಕು ಬದಲಾಗೋದು ಹಣದಿಂದ ಅಲ್ಲ, ವಿದ್ಯೆಯಿಂದಲೂ ಅಲ್ಲ. ಹಣ–ಮತ್ತು ವಿದ್ಯೆಯನ್ನು ಹೇಗೆ ಉಪಯೋಗಿಸಬೇಕು ಎಂಬ ಜಾಣ್ಮೆಯಿಂದ!’

ಒಮ್ಮೆ ಯೋಚಿಸಿ ನೋಡಿ, ಹೌದಲ್ವಾ? ನಮ್ಮಲ್ಲಿ ಬೇಕಷ್ಟು, ಹಣ, ಅಧಿಕಾರ, ವಿದ್ಯೆ ಎಲ್ಲವೂ ಇದ್ದು ಅದನ್ನು ನಮಗಾಗಿ ಬಳಸಿಕೊಳ್ಳುವ ಜಾಣ್ಮೆ ಇಲ್ಲದಿದ್ದರೆ ಏನು ಪ್ರಯೋಜನ? ಜೀವನದಲ್ಲಿ ನಾವು ಬಹಳಷ್ಟು ಮಂದಿ ಹಣ ಇದ್ದುಬಿಟ್ಟರೆ ಸುಖವಾಗಿ ಇರುತ್ತೇವೆ ಎಂದುಕೊಳ್ಳುತ್ತೇವೆ. ಹಾಗೆಯೇ ಒಳ್ಳೆಯ ವಿದ್ಯಾಭ್ಯಾಸ ಮಾಡಿಬಿಟ್ಟರೆ ಅತ್ಯುತ್ತಮ ಬದುಕು ನಮ್ಮದಾಗಬಹುದು ಎಂದುಕೊಳ್ಳುತ್ತೇವೆ. ದೊಡ್ಡ–ದೊಡ್ಡ ಹುದ್ದೆ, ಅಧಿಕಾರ ಸಿಕ್ಕರೆ ಏನನ್ನಾದರೂ ಸಾಧಿಸಬಹುದು ಎಂದುಕೊಳ್ಳುತ್ತೇವೆ. ಇವೆಲ್ಲವೂ ಅರ್ಧ ಸತ್ಯ ಮಾತ್ರ. ಇವೆಲ್ಲವೂ ಇದ್ದೂ ಅವನ್ನು ಅನುಭವಿಸುವ ಅವಕಾಶ ಇಲ್ಲದಂತಾಗಿಬಿಟ್ಟರೆ?! ಅಂಥ ಅವಕಾಶ ಸಿಕ್ಕುವುದು ನಾವು ಸದೃಢವಾಗಿ–ಆರೋಗ್ಯವಂತರಾಗಿ ಇದ್ದಾಗ ಮಾತ್ರವೇ. ಅಂಥ ಆರೋಗ್ಯ ನಮ್ಮದಾಗಬೇಕೆಂದರೆ ಮೊಟ್ಟ ಮೊದಲಿಗೆ ನಮ್ಮ ಜೀವನ ಶೈಲಿ ಹಾಗೂ ಆಹಾರ ಕ್ರಮ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ನಮ್ಮಲ್ಲಿ ಹಣ–ಅಧಿಕಾರ–ವಿದ್ಯೆ ಎಲ್ಲವೂ ಇದ್ದು ನಮ್ಮ ದೇಹ ಚೆನ್ನಾಗಿರದಿದ್ದರೆ ಇಡೀ ಜೀವನ ಬೇರೆಯವರ ಹಂಗಿನಲ್ಲಿ, ಅವರ ಮಾತುಗಳನ್ನು ಪಾಲಿಸುತ್ತಾ, ನಮ್ಮನ್ನು ನಾವು ಚಿಕ್ಕವರನ್ನಾಗಿಸಿಕೊಂಡು ಇದ್ದು ಬಿಡುತ್ತೇವೆ. ಏಕೆಂದರೆ ನಮ್ಮ ದೇಹವೇ ನಮ್ಮ ಮಾತನ್ನು ಕೇಳುವುದಿಲ್ಲವಲ್ಲಾ? ಒಂದೊಮ್ಮೆ ನಮ್ಮ ದೇಹ ನಾವು ಹೇಳಿದಂತೆ ಕೇಳುತ್ತಿದ್ದರೆ, ಮತ್ತೆ ಬೇರೆಯವರ ಮಾತನ್ನು ಕೇಳುವ ಪ್ರಮೇಯವೇ ಇರುವುದಿಲ್ಲ.

ಹಾಗಾಗಲು ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಬೇಕು. ಅದು ಮಾತ್ರವೇ ನಮ್ಮನ್ನು ಆರೋಗ್ಯವಂತರಾಗಿ ಉಳಿಸಲು ಸಾಧ್ಯ. ಎಲ್ಲೆಡೆ, ಎಲ್ಲದರಲ್ಲೂ ಕಲಬೆರೆಕೆ, ರಾಸಾಯನಿಕಗಳೇ ವಿಜೃಂಭಿಸುತ್ತಿರುವ ಇವತ್ತಿನ ಸನ್ನಿವೇಶದಲ್ಲಂತೂ ಉತ್ತಮ ನ್ಯೂಟ್ರೀಷನ್ಯುಕ್ತ ಆಹಾರ ಎಂಬುದೇ ಮರೀಚಿಕೆಯಾಗಿ ಹೋಗಿದೆ. ಇಂಥ ಅವಕಾಶದ ದುರ್ಲಾಭ ಪಡೆಯುತ್ತಿರುವುದು ಮೆಡಿಸಿನ್ ಕಂಪನಿಗಳು ಹಾಗೂ ವೆಲ್ನೆಸ್ ಇಂಡಸ್ಟ್ರೀ. ನ್ಯೂಟ್ರೀಷನ್ ಎಂದಾಕ್ಷಣ ನಮಗೆ ಸಪ್ಲಿಮೆಂಟ್ಗಳೇ ನೆನಪಿಗೆ ಬರುವುದು ಯಾಕೋ? ಇತ್ತೀಚಿನ ದಿನಗಳಲ್ಲಂತೂ ದಿನಕ್ಕೊಂದು ಹೆಸರಿನ ಪ್ರೋಟೀನ್ ಶೇಕ್ಗಳು ಮಾರುಕಟ್ಟೆಗೆ ಕಾಲಿಡುತ್ತಿದ್ದು, ದುಬಾರಿ ವೆಚ್ಚದಲ್ಲಿ ಜನ ಸಾಮಾನ್ಯರ ಜೇಬಿಗೆ ಕೊಳ್ಳೆ ಇಡುವುದರೊಂದಿಗೆ ಅವುಗಳ ಅವೈಜ್ಞಾನಿಕ ಬಳಕೆಯಿಂದಾಗಿ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತಿರುವುದು ಸುಳ್ಳಲ್ಲ.
.ತಿಂದುಂಡು ಸುಖವಾಗಿ: ನಿಜಕ್ಕೂ ಬಿಸಿ ನೀರು ಕುಡಿದರೆ ತೂಕ ಕಡಿಮೆ ಆಗುತ್ತದೆಯೇ?.ತಿಂದುಂಡು ಸುಖವಾಗಿ: ನಿಮಗೆ ನಿದ್ರಾಹೀನತೆಯ ಸಮಸ್ಯೆಯೇ? ಇಲ್ಲಿದ ಸುಲಭದ ಪರಿಹಾರ.ತಿಂದುಂಡು ಸುಖವಾಗಿ: ದೇಹದ ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭದ ಸಪ್ತ ಸೂತ್ರ !.ತಿಂದುಂಡು ಸುಖವಾಗಿ: ನಿತ್ಯ ಹೊಟ್ಟೆ ನೋಡಿಕೊಂಡರೆ ಸಾಕು; ಬಿಪಿ, ಶುಗರ್ ಮಾಯ!.
ಪೋಷಕಾಂಶಗಳು ಎಂದರೇ ಪ್ರೋಟೀನ್ ಮಾತ್ರವೇ ಎಂಬಷ್ಟರಮಟ್ಟಿಗೆ ಭ್ರಮೆಯನ್ನು ಈ ಸೋಕಾಲ್ಡ್ ವೆಲ್ನೆಸ್ ಕಂಪನಿಗಳು ಜನರ ಮನಸಿನಲ್ಲಿ ಬಿತ್ತಿಬಿಟ್ಟಿವೆ. ಮಾತೆತ್ತಿದರೆ ‘ನೀವು ದಪ್ಪ, ಇಲ್ಲವೇ ತೆಳ್ಳಗಾಗಬೇಕೇ ನಮ್ಮ ಪ್ರೋಟೀನ್ ಶೇಕ್ ತೆಗೆದುಕೊಳ್ಳಿ. ಕೇವಲ 42 ದಿನಗಳಲ್ಲಿ ರಿಸಲ್ಟ್ ಖಚಿತ...’ ಎಂಬಂತೆಲ್ಲ ಜಾಹೀರಾತುಗಳನ್ನು ಎಲ್ಲೆಡೆ ತೇಲಿ ಬಿಡುತ್ತಿದ್ದಾರೆ. ಒಂದು ಮಾತನ್ನ ನೆನಪಿಡಿ, ವೆಲ್ನೆಸ್ ಎಂಬುದು ಒಂದು ತಪಸ್ಸು. ಅದು 30–40 ದಿನಗಳಲ್ಲಿ ಥಟ್ಟಂತ ಬದಲಾವಣೆ ಮಾಡಿ ಬಿಡುವ ಮ್ಯಾಜಿಕ್ ಅಲ್ಲ. ಅದು ಇಡೀ ನಮ್ಮ ಜೀವನದ ಶಿಸ್ತು. ಯಾವುದೇ ಕಾರಣಕ್ಕೂ ಇಂಥ ಅಗ್ಗದ ಪ್ರಚಾರಕ್ಕೆ ಮರುಳಾಗಿ ಬದುಕನ್ನು ಹಾಳು ಮಾಡಿಕೊಳ್ಳಬೇಡಿ.

ಮತ್ತೆ ಪುನಃ ಪೋಷಕಾಂಶಗಳ ವಿಚಾರಕ್ಕೆ ಬರುವುದಾದರೆ, ಯಾಕೆ ಈ ಕಂಪನಿಗಳು ಪ್ರೋಟೀನ್ ಅನ್ನೇ ಹೆಚ್ಚು ಪ್ರಚಾರ ಮಾಡುತ್ತವೆ? ಎಲ್ಲ ಶೇಕ್ಗಳು, ಸಪ್ಲಿಮೆಂಟ್ಗಳೂ ಹೆಚ್ಚಿನ ಪಾಲು ಪ್ರೋಟೀನ್ ಅಂಶವನ್ನೇ ಹೊಂದಿರುತ್ತವೆ? ಇದನ್ನು ಮೊಟ್ಟಮೊದಲಿಗೆ ನಾವು ತಿಳಿದುಕೊಳ್ಳಬೇಕು. ಹೌದು, ನಮ್ಮ ದೇಹದ ತೂಕ ಸೇರಿದಂತೆ ಒಟ್ಟಾರೆ ಆರೋಗ್ಯ, ಬೆಳವಣಿಗೆ ಮತ್ತು ದೈನಂದಿನ ದೇಹಕ್ರಿಯೆಗಳ ಮೂಲವೇ ಪ್ರೋಟೀನ್. ನಾವು ಬಹುತೇಕ ಭಾರತೀಯರು ಇತ್ತೀಚಿನ ದಿನಗಳಲ್ಲಿ ಪ್ರೋಟೀನ್ ಕೊರತೆಯಿಂದಲೇ ಬಳಲುತ್ತಿದ್ದೇವೆ. ಮಾತ್ರವಲ್ಲ, ನಮ್ಮ ಆಹಾರ–ಪದ್ಧತಿ ಕೂಡ ಕಾರ್ಬೋಹೈಡ್ರೇಡ್ ಪ್ರಧಾನವಾಗಿರುತ್ತದೆಯೇ ಹೊರತೂ, ಪ್ರೋಟೀನ್ ಅಥವಾ ಫೈಬರ್ ಪ್ರಧಾನ ಅಲ್ಲ. ಹೀಗಾಗಿಯೇ ಬಹುತೇಕ ಶೇ 63ರಷ್ಟು ಭಾರತೀಯರು ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆಯಿಂದ ಬಳಲುತ್ತಿರುವುದು.

ತುಂಬ ಜನರಿಗೆ ಗೊತ್ತಿಲ್ಲ, ಪ್ರೋಟಿನ್ ಎಂಬುದು ನಮ್ಮ ದೇಹದ ಪ್ರಪ್ರಥಮ ಅವಶ್ಯಕತೆ ಎಂಬುದು. ನಾವು ಬಹುತೇಕ ತಿಳಿದುಕೊಂಡಿರುವುದೇನೆಂದರೆ, ‘ಮಕ್ಕಳಿಗೆ, ಯುವಕರಿಗೆ, ಜಿಮ್–ವ್ಯಾಯಾಮ ಮಾಡುವವರಿಗಷ್ಟೇ ಪ್ರೋಟಿನ್ ಅಗತ್ಯ. ಅವರಾದರೆ ಮಸಲ್ (ಸ್ನಾಯುಗಳು) ಬಿಲ್ಡ್ ಮಾಡಬೇಕು, ಕಟ್ಸ್, ಸಿಕ್ಸ್ಪ್ಯಾಕ್ ಹೀಗೆಲ್ಲ ಮಾಡಿಕೊಳ್ಳಲು ಪ್ರೋಟೀನ್ ಬೇಕೇಬೇಕು. ನಾವು ಅದೆಲ್ಲ ಸರ್ಕಸ್ ಮಾಡೋದಿಲ್ಲ, ಹೀಗಾಗಿ ನಮಗೇನೂ ಪ್ರೋಟಿನ್ ಬೇಡ...’ ಆದರೆ ತಿಳಿದಿರಲಿ ಪ್ರೋಟಿನ ಪ್ರತಿಯೊಬ್ಬರ ಜೀವನದ ಅತ್ಯಂತ ಅಗತ್ಯ ಪೋಷಕಾಂಶ. ಲ್ಯಾಟಿನ್ನಲ್ಲಿ ‘ಪ್ರೋ’ ಎಂದರೆ ಮೊದಲ ಎಂದರ್ಥ. ‘ಟಿನ್’ ಎಂದರೆ ನ್ಯೂಟ್ರೀಷನ್. ಒಟ್ಟಾರೆ ಪ್ರೋಟಿನ್ ಎಂದರೆ ನಮ್ಮ ದೇಹಕ್ಕೆ ಪ್ರತಿದಿನ ಮೊದಲಿಗೆ ಕೊಡಬೇಕಾದ ಪೋಷಕಾಂಶವೆಂದರೆ ಅದು ಪ್ರೋಟಿನ್. ನಮ್ಮ ಜೀವಕೋಶಗಳ ಬೆಳವಣಿಗೆಗೆ ಪ್ರೋಟೀನ್ ಬೇಕೇಬೇಕು. ಜೀವ ಕೋಶದ ಒಳಗಡೆ ಮೈಟೋಕಾಂಡ್ರಿಯಾ ಎಂಬ ‘ಪವರ್ ಜನರೇಷನ್ ಸೆಂಟರ್’ ಇದೆ. ಇಂಥ ದೇಹದ ಶಕ್ತಿಕೇಂದ್ರ ಬಲಗೊಳ್ಳುವುದು ಪ್ರೋಟೀನ್ನಿಂದಲೇ. ಹಾಗೆಯೇ ನಮ್ಮ ಕೂದಲು, ಕಣ್ಣು, ಮೃದ್ವಸ್ಥಿ, ಚರ್ಮ ಹೀಗೆ ಎಲ್ಲದಕ್ಕೂ ಪ್ರೋಟೀನ್ ಬೇಕೇ ಬೇಕು. ಅಷ್ಟೆಲ್ಲ ಏಕೆ, ನಾವು ಉಸಿರಾಡುತ್ತೇವಲ್ಲ, ಅಂಥ ಉಸಿರಾಟದಿಂದ ಒಳಹೊಕ್ಕ ಗಾಳಿ (ಆಮ್ಲಜನಕ)ಯನ್ನು ಹೀರಿಕೊಂಡು ದೇಹಕ್ಕೆ ಒದಗಿಸುವುದು ಸಹ ಪ್ರೋಟೀನೇ.

ಇನ್ನೂ ಒಂದು ಪ್ರಮುಖ ಅಂಶವನ್ನು ಹೇಳುತ್ತೇನೆ ಕೇಳಿ, ನಮ್ಮ ದೇಹದ ಪ್ರತಿಯೊಂದೂ ಚಟುವಟಿಕೆಗಳೂ ನಡೆಯುವುದು ಒಂದೋ ಹಾರ್ಮೋನುಗಳು ಬಿಡುಗಡೆಯಾಗುವುದರಿಂದ ಇಲ್ಲವೇ ಎಂಜೈಮ್( ಜೀರ್ಣಾಂಗ ಚಟುವಟಿಕೆಗಳಿಗೆ)ಗಳು ರಿಲೀಸ್ ಆದ ನಂತರ. ಇಂಥ ಹಾರ್ಮೋನ್ ಮತ್ತು ಎಂಜೈಮ್ಗಳು ಬಿಡುಗಡೆ ಆಗಬೇಕು ಎಂದರೆ ಪ್ರೋಟೀನ್ ಬೇಕೇಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪ್ರೋಟೀನ್ ಒಂದು ಮ್ಯಾಕ್ರೋ ನ್ಯೂಟ್ರಿಯಂಟ್. ನಮಗೆ ಹೊಟ್ಟೆ ತುಂಬುವುದೇ ಪ್ರೋಟಿನ್ನಿಂದಲೇ. ನಮ್ಮ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಪ್ರೋಟಿನ್ ಇಲ್ಲವೆಂದರೆ ಒಂದು ಸಲಕ್ಕೆ ಹೊಟ್ಟೆ ತುಂಬಿದಂತೆ ಅನ್ನಿಸಿದರೂ, ಬಲು ಬೇಗ ಹಸಿವಾಗಿ ಬಿಡುತ್ತದೆ. ಅದಕ್ಕಾಗಿಯೇ ಕಾರ್ಬ್ಸ್ ಹೆಚ್ಚಿರುವ ಆಹಾರ ತಿನ್ನವ ನಮಗೆ ಪದೇ ಪದೇ ತಿನ್ನಬೇಕೆನಿಸುವುದು. ಅಥವಾ ಹಬ್ಬದೂಟವನ್ನು ಮಾಡಿದ ದಿನಗಳಲ್ಲಿ ಹಸಿವೇ ಇಲ್ಲ ಎಂಬಂಥ ಫೀಲ್ ಆಗುವುದು. ಏಕೆಂದರೆ ಹಬ್ಬದೂಟದಲ್ಲಿ ಕೋಸಂಬರಿ ಇತ್ಯಾದಿಗಳಿರುತ್ತವೆ. ಸಹಜವಾಗಿ ಇಂಥ ಸಂದರ್ಭದಲ್ಲಿ ಬೇಳೆಯ ಬಳಕೆ ಜಾಸ್ತಿ ಇರುತ್ತದೆ. ಹೀಗಾಗಿ ನಮಗೆ ಹಸಿವಾಗುವುದಿಲ್ಲ.

ಅದಕ್ಕಾಗಿಯೇ ಗ್ರೀಕ್ನಲ್ಲಿ ಇದನ್ನು ಪ್ರೋಟಿಯಸ್ ಎಂದು ಕರೆದರು. ಅದೇ ಇಂಗ್ಲಿಷ್ನಲ್ಲಿ ಪ್ರೀಷಿಯಸ್ ಆಯಿತು. ಅಂದರೆ ಮೊದಲ ಆದ್ಯತೆ, ಪ್ರಾಶಸ್ತ್ಯ ಎಂದರ್ಥ. ಮುಲ್ಡರ್ ಎಂಬ ಪುರಾತನ ವಿಜ್ಞಾನಿ 1878ರಲ್ಲಿ ಈ ಪೋಶಕಾಂಶಕ್ಕೆ ‘ಪ್ರೋಟೀನ್’ ಎಂದು ನಾಮಕರಣ ಮಾಡಿದ. ನಾವು ನಮ್ಮ ಆಹಾರದಲ್ಲಿ ಪ್ರೋಟಿನ್ಗೆ ಮೊದಲ ಪ್ರಾಶಸ್ತ್ಯವನ್ನು ಕೊಡಲೇಬೇಕು. ಹಾಗೆಂದು ಪ್ರೋಟೀನ್ ಅನ್ನು ಯದ್ವಾತದ್ವಾ ಸೇವಿಸುವುದು ಸಹ ಸಮಸ್ಯೆಯನ್ನು ತಂದು ಒಡ್ಡುತ್ತದೆ. ಇದರ ಕೊರತೆಯೂ ನಮಗೆ ಸಮಸ್ಯೆಯೇ. ಹಾಗಾದರೆ ಎಷ್ಟು ಪ್ರೋಟೀನ್ ದೇಹಕ್ಕೆ ಬೇಕು? ಇದನ್ನು ಮುಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.