ಅನುಮಾನವೇ ಇಲ್ಲ, ಹೇಗೆ ಊಟ–ತಿಂಡಿಯನ್ನು ಬಿಟ್ಟರೆ ತೂಕ ಹೆಚ್ಚಳವಾಗುತ್ತದೆಯೋ ಹಾಗೆಯೇ ನಿದ್ದೆ ಕಡಿಮೆ ಆದರೂ ದೇಹದ ತೂಕ ಹೆಚ್ಚಳವಾಗುತ್ತದೆ. ದೇಹಕ್ಕೆ ವಿಶ್ರಾಂತಿ ಎಂಬುದು ಮೂಲಭೂತ ಅಗತ್ಯಗಳಲ್ಲೊಂದು. ಅದನ್ನು ಕೊಡದೇ ಹೋದಾಗ ಎರಡು ಪ್ರಮುಖ ಸಮಸ್ಯೆ ಆಗುತ್ತದೆ. ಮೊದಲನೆಯದು ಆರೋಗ್ಯದಲ್ಲಿ ವ್ಯತ್ಯಯವಾಗುತ್ತದೆ. ಏಕೆಂದರೆ ನಮ್ಮ ಅಂಗಾಂಗಗಳು ರಿಪೇರಿಯಾಗುವುದೇ ನಾವು ನಿದ್ದೆಯಲ್ಲಿದ್ದಾಗ. ಎರಡನೆಯದು ನಮ್ಮ ದೇಹದ ತೂಕ ನಿರಂತರ ಹೆಚ್ಚುತ್ತ ಹೋಗುತ್ತದೆ. ನಿಮ್ಮ ದೇಹದ ತೂಕದಲ್ಲಿ ವಿಪರೀತ ಹೆಚ್ಚಳವಾಗುತ್ತಿದೆಯಾ? ಎಲ್ಲಕ್ಕಿಂತ ಮೊದಲು ನೀವು ಗಮನಿಸಿಕೊಳ್ಳಬೇಕಾದುದು ನಿಮ್ಮ ನಿದ್ದೆಯ ಪ್ಯಾಟ್ರನ್ಸರಿ ಇದೆಯಾ ಎಂಬುದನ್ನು. ಹೊತ್ತಲ್ಲದ ಹೊತ್ತಿನಲ್ಲಿ ನಿದ್ದೆ ಮಾಡುವುದರಿಂದಲೂ ನೀವು ಬೊಜ್ಜಿನ ಸಮಸ್ಯೆಗೆ ತುತ್ತಾಗಬಹುದು ಹಾಗೂ ನಿದ್ದೆ ಮಾಡಬೇಕಾದ ಸಮಯದಲ್ಲಿ ಸಾಕಷ್ಟು ನಿದ್ದೆ ಮಾಡದೇ ಹೋದರೂ ನಿಮ್ಮ ದೇಹದ ತೂಕದಲ್ಲಿ ವ್ಯತ್ಯಾಸವಾಗಬಹುದು.

ಇನ್ನು ನಿದ್ದೆಯ ಕೊರತೆಯ ಮತ್ತೊಂದು ಅಪಾಯದ ಬಗ್ಗೆ ನಾನು ಹೇಳಲೇಬೇಕು. ನಿದ್ದೆಯ ಕೊರತೆ ದೇಹದ ತೂಕವನ್ನು ಹೇಗೆ ಹೆಚ್ಚಿಸುತ್ತದೆ ಗೊತ್ತಾ? ನಿದ್ದೆ ಕಡಿಮೆಯಾಗಿದಾಗ ಹಾರ್ಮೋನ್ಗಳ ಅಸಮತೋಲನ ಆಗುತ್ತದೆ. ನಮ್ಮ ದೇಹದಲ್ಲಿ ಹಸಿವನ್ನು ಉಂಟು ಮಾಡುವ ಹಾರ್ಮೋನು ಘ್ರೆಲಿನ್ (Ghrelin/ Hunger hormone) ಎನ್ನುವುದು. ನಿದ್ದೆ ಮಾಡದೇ ಎಚ್ಚರ ಇದ್ದಾಗ ಇದರ ಬಿಡುಗಡೆ ಹೆಚ್ಚಾಗುತ್ತದೆ. ಹಾಗಾಗಿಯೇ ರಾತ್ರಿ ವೇಳೆ ಎಚ್ಚರಿದ್ದರೆ ಹಸಿವು ಹೆಚ್ಚಾಗುವುದು. ಆದರೆ ನಾವು ಏನಾದರೂ ತಿಂದಾಗ ನಮಗೆ ತೃಪ್ತಿಯನ್ನು ನೀಡುವ ಲೆಪ್ಟಿನ್ (Leptin/ Satiety Hormone) ಎಂಬ ಹಾರ್ಮೋನ್ ಬಿಡುಗಡೆ ಕಡಿಮೆಯಾಗುತ್ತದೆ. ಇದರ ಪರಿಣಾಮ ಅನಗತ್ಯ ಹಸಿವು, ಜಂಕ್ ಫುಡ್ ತಿನ್ನುವ ಕ್ರೇವಿಂಗ್, ರಾತ್ರಿ ಏನಾದರೂ ಬಾಯಾಡುವುದು, ನಿದ್ದೆ ತಡೆಯಲು ಚಹಾ ಕಾಫಿ ಸೇವನೆ ಇತ್ಯಾದಿ ಪ್ರವೃತ್ತಿ ಹೆಚ್ಚುತ್ತದೆ.

ಈಗಾಗಲೇ ಹೇಳಿದಂತೆ ನಿದ್ರೆ ಕೊರತೆಯ ವಯಸ್ಕರಲ್ಲಿ ಬೇಸಲ್ ಮೆಟಾಬಾಲಿಕ್ ರೇಟ್ (BMR) ಅನ್ನು ಕಡಿಮೆ ಮಾಡುತ್ತದೆ. ಇದು ದೇಹವು ಕ್ಯಾಲೊರಿಯನ್ನು ಕರಗಿಸುವ ವೇಗ. ಇದೇ ನಿಧಾನವಾದಾಗ ಸಹಜವಾಗಿ ಕೊಬ್ಬಿನ ಶೇಖರಣೆ ಜಾಸ್ತಿಯಾಗುತ್ತದೆ. ಅಷ್ಟೇ ಅಲ್ಲ, ನಾವು ತಿಂದದ್ದೆಲ್ಲವೂ ದೇಹದಲ್ಲಿ ಸಕ್ಕರೆಯಾಗಿ (ಗ್ಲೂಕೋಸ್) ಪರಿವರ್ತನೆಯಾಗುತ್ತದೆ ಎಂಬುದನ್ನು ಹಿಂದಿನ ಲೇಖನಗಳಲ್ಲಿ ಹೇಳಿದ್ದೆ. ಹಾಗೆ ಪರಿವರ್ತನೆಯಾಗುವ ಸಕ್ಕರೆಯನ್ನು ಬಳಕೆಗೆ ಸಾಗಿಸುವ ಪ್ರಕ್ರಿಯೆಯಲ್ಲಿ ಇನ್ಸುಲಿನ್ನ ಪಾತ್ರವೇ ಮುಖ್ಯವಾದುದು. ನಿದ್ದೆ ಕಡಿಮೆ ಆದಾಗ ಈ ಇನ್ಸುಲಿನ್ ಪ್ರತಿರೋಧವನ್ನು ನಿದ್ದೆಯ ಕೊರತೆ ಹೆಚ್ಚಿಸುತ್ತದೆ. ಇದರಿಂದ ದೇಹದಲ್ಲಿ ಸಕ್ಕರೆಯ ಅಂಶ ಸರಿಯಾಗಿ ಬಳಕೆಯಾಗುವುದಿಲ್ಲ. ಬಳಕೆಯಾಗದೇ ಸಕ್ಕರೆ ಅಂಶವೇ ಕೊಬ್ಬಾಗಿ ಸಂಗ್ರಹವಾಗುವುದು. ಅದರಲ್ಲೂ ಮೊದಲು ಅದು ಹೋಗಿ ಸೇರಿಕೊಳ್ಳುವುದು ಹೊಟ್ಟೆ–ಸೊಂಟ ಮತ್ತದರ ಸುತ್ತಮುತ್ತಲೇ. ದೇಹದ ಈ ಭಾಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ನಾವು ನಮ್ಮ ಒತ್ತಡವನ್ನು ಹೇಗೆ ನಿಭಾಯುಸುತ್ತೇವೆ ಎಂಬುದರ ಮೇಲೆ ಅವಲಂಬಿತ. ನಿಮಗೆ ತಿಳಿದಿರಲಿ, ಒತ್ತಡ ಉಂಟಾಗುವುದು ಕಾರ್ಟಿಸಾಲ್(Cortisol/ Stress Hormone) ಎನ್ನುವ ಹಾರ್ಮೋನು ಬಿಡುಗಡೆಯಾಗುವುದರಿಂದ. ನಿದ್ದೆಯ ಕೊರತೆಯಿಂದ ಈ ಒತ್ತಡ ಹಾರ್ಮೋನ್ ಕಾರ್ಟಿಸಾಲ್ ಹೆಚ್ಚಳವಾಗುತ್ತದೆ. ಒತ್ತಡ ಜಾಸ್ತೀ ಆದಷ್ಟೂ ಹೊಟ್ಟೆಯ ಭಾಗದಲ್ಲಿ ಕೊಬ್ಬು ಜಮಾವಣೆ ಜಾಸ್ತಿ ಆಗುತ್ತದೆ. ಏಕೆಂದರೆ ಈ ಸ್ಟಿರಾಯ್ಡ್ಹಾರ್ಮೋದು ಬಿಡುಗಡೆಯಾಗುವುದೇ ಮೂತ್ರಜನಕಾಂಗದ ಗ್ರಂಥಿಗಳಿಂದ. ಮೂತ್ರಜನಕಾಂಗ ಇರುವುದು ಹೊಟ್ಟೆಯ ಆಸುಪಾಸೇ ಅಲ್ಲವೇ?

ಈಗ ಗೊತ್ತಾಯಿತಲ್ಲಾ, ನಿಮಗೆ ಯಾಕೆ ಇತ್ತೀಚೆಗೆ ವಿಪರೀತ ಹೊಟ್ಟೆ ಬರುತ್ತಿದೆ ಎಂದು? ಟೆನ್ಷನ್ಜಾಸ್ತಿ ಆದರೆ ಹೊಟ್ಟೆ ಜಾಸ್ತಿ ಬರುತ್ತದೆ. ಹೊಟ್ಟೆ ಕರಗಿಸಬೇಕೆಂದರೆ ಮೊದಲು ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡಿದರೆ ಸಾಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.