ಕಳೆದ ಲೇಖನದಲ್ಲಿ ( ತಿಂದುಂಡು ಸುಖವಾಗಿ: ದೇಹದ ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭದ ಸಪ್ತ ಸೂತ್ರ) ಮನುಷ್ಯನ ದೇಹಕ್ಕೆ ಎಷ್ಟು ಗಂಟೆಯ ನಿದ್ದೆ ಅಗತ್ಯವಿದೆ ಎಂಬುದನ್ನು ವಿವರಿಸಲಾಗಿತ್ತು. ಆರೋಗ್ಯವಂತ ಮನುಷ್ಯನೊಬ್ಬನಿಗೆ ಸಾಮಾನ್ಯ ದಿನಗಳಲ್ಲಿ ಸರಾಸರಿ 7–8 ಗಂಟೆಯ ನಿದ್ದೆಯ ಅಗತ್ಯವಿದೆ. ಆದರೆ ಇಂಥ ನಿದ್ದೆ ರಾತ್ರಿ ಹೊತ್ತಿನಲ್ಲೇ ಆಗಬೇಕೆಂಬುದು ಅತ್ಯಂತ ಪ್ರಮುಖ ಸಂಗತಿ. ಬದಲಾದ ಆಧುನಿಕ ಜೀವನ ಶೈಲಿಯಲ್ಲಿ ಬಹುತೇಕ ಯುವ ಜನತೆ ಉದ್ಯೋಗದ (ನೈಟ್ಶಿಫ್ಟ್) ಪಾಳಿಯೂ ಸೇರಿದಂತೆ ಹಲವು ಕಾರಣಗಳಿಗೆ ತಡರಾತ್ರಿಯವರೆಗೆ ಎಚ್ಚರಿವಿರುವುದು ಹಾಗೂ ಬೆಳಗ್ಗೆ ತಡವಾಗಿ ಏಳುವುದು ಸಾಮಾನ್ಯವಾಗಿದೆ. ಅದರಲ್ಲೂ ವಾರಾಂತ್ಯಗಳಲ್ಲಿ ರಾತ್ರಿ ಇಡೀ ಎಚ್ಚರವಿದ್ದು ಹಗಲು ಹೊತ್ತಿನಲ್ಲಿ ನಿದ್ದೆಗೆ ಶರಣಾಗುತ್ತಿದ್ದಾರೆ. ಇದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುವುದೇ ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ನಮ್ಮ ದೇಹದ ಮೆಟಬಾಲಿಸಂಗೂ, ನಿದ್ದೆಗೂ ನೇರವಾದ ಸಂಬಂಧವಿದೆ. ಇದನ್ನು ತಿಳಿದುಕೊಳ್ಳುವುದು ಅತ್ಯಂತ ಸುಲಭ, ಸೂರ್ಯ ಹುಟ್ಟುವ ವೇಳೆ ನಮ್ಮ ಮೇಟಬಾಲಿಸಂ( ಜೀರ್ಣಕ್ರಿಯೆ) ಆರಂಭವಾಗುತ್ತದೆ. ಹಾಗೆಯೇ ಸೂರ್ಯ ಏರುತ್ತಿದ್ದಂತೆಯೇ ಜೀರ್ಣಕ್ರಿಯೆ ಸಹ ಏರುತ್ತ ಸಾಗಿ ಮಧ್ಯಹ್ಯದ ಕಡುಬಿಸಿಲಿನ ಸಂದರ್ಭದಲ್ಲಿ ಉತ್ತುಂಗದಲ್ಲಿ ಇರುತ್ತದೆ. ಹಾಗೆಯೇ ಸೂರ್ಯ ಇಳಿಮುಖನಾಗುತ್ತ ಬಂದು, ಮುಳುಗುವಾಗ ನಮ್ಮ ಜೀರ್ಣ ಕ್ರಿಯೆಯೆ ವೇಗವೂ ಕುಸಿಯುತ್ತದೆ. ಸೂರ್ಯಾಸ್ಥದಿಂದ ಮತ್ತೆ ಸೂರ್ಯೋದಯದವರೆಗೆ ಜಠರ ಸೇರಿದಂತೆ ನಮ್ಮೆಲ್ಲ ಆಂತರಿಕ ಅಂಗಗಳೂ (ಇಂಟರ್ನಲ್ಆರ್ಗಾನ್ಗಳು) ತಮ್ಮ ಓವರಾಯಿಲ್ಪ್ರಕ್ರಿಯೆ ಅಂದರೆ ರಿಪೇರಿ ಕೆಲಸವನ್ನು ಮಾಡಿಕೊಳ್ಳುತ್ತವೆ. ಹೀಗಾಗಿ ನಾವು ಮಲಗಿ ವಿಶ್ರಾಂತಿ ತೆಗೆದುಕೊಳ್ಳಲು ಇದು ಸೂಕ್ತವಾದ ಸಮಯ.

ಈ ಸಂದರ್ಭದಲ್ಲಿ ನಾವು ಮಲಗದೇ ಎಚ್ಚರವಿರುವುದರಿಂದ ಮೂರು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಈಗಾಗಲೇ ಹೇಳಿದಂತೆ ರಾತ್ರಿ ವೇಳೆ ನಾವು ಮಲಗಿದರೂ ಹೃದಯ, ಜಠರ, ಶ್ವಾಸಕೋಶ, ಮೂತ್ರ ಕೋಶ ಇತ್ಯಾದಿ ಪ್ರಮುಖ ಅಂಗಾಂಗಗಳು ಮಲಗುವುದಿಲ್ಲ. (ಒಂದೊಮ್ಮೆ ಅವು ಮಲಗಿದರೆ ಅದು ನಮ್ಮ ಜೀವನದ ಚಿರ ನಿದ್ರೆಯಾಗುತ್ತದೆ) ಅದಕ್ಕೆ ಬದಲಾಗಿ ಅನಿವಾರ್ಯ ಪ್ರಕ್ರಿಯೆಯ ಜತೆಗೆ ಮರುದಿನದ ಕೆಲಸಕ್ಕೆ ಸಜ್ಜಾಗುತ್ತಿರುತ್ತವೆ. ಪಕ್ಕಾ ಉದಾಹರಣೆ ಕೊಡಬೇಕೆಂದರೆ ಹಿಟ್ಟಿನ ಮಿಲ್ಗಳು, ಇಲ್ಲಿ ಹಗಲಿಡೀ ಹಿಟ್ಟು ರುಬ್ಬುವ ಯಂತ್ರಗಳನ್ನು ರಾತ್ರಿ ಮಿಲ್ನ ಬಾಗಿಲು ಮುಚ್ಚಿದ ಬಳಿಕ ಚೆನ್ನಾಗಿ ತೊಳೆದು, ಒರೆಸಿ, ನಟ್ಟು–ಬೋಲ್ಟ್ಗಳನ್ನು ಬಿಗಿ ಮಾಡಿ, ಆಯಿಲ್ಬಿಡಬೇಕಾದಲ್ಲಿ ಬಿಟ್ಟು, ರೀಪೇರಿ ಅಗತ್ಯವಿರುವುದನ್ನು ರಿಪೇರಿ ಮಾಡಿ ಮರುದಿನಕ್ಕೆ ಮತ್ತೆ ಸಜ್ಜುಗೊಳಿಸಿಯೇ ಮಿಲ್ನ ಮಾಲೀಕ ಹೋಗುತ್ತಾನಲ್ಲಾ? ಹಾಗೆಯೇ ನಮ್ಮ ಜೀರ್ಣಾಂಗ ವ್ಯೂಹ ಸಹ. ಇಡೀ ರಾತ್ರಿ ಇಂಥ ಪ್ರೆಕ್ರಿಯೆಗೆ ಜಠರಕ್ಕೆ ಸಮಯ ಬೇಕು. ಒಂದೊಮ್ಮೆ ನಾವು ಎಚ್ಚರವಿದ್ದರೆ, ಸಹಜವಾಗಿ ಆ ಸಂದರ್ಭದಲ್ಲಿ ಮಾಡುವ ಕೆಲಸಕ್ಕೆ ಹೆಚ್ಚಿನ ಕ್ಯಾಲೊರಿ ಬೇಡುತ್ತದೆ ದೇಹ. ಆ ಕ್ಯಾಲೋರಿ ಪೂರೈಕೆಗೆ ಏನಾದರೊಂದನ್ನು ತಿನ್ನುತ್ತೇವೆ, ಇಲ್ಲವೇ ಕುಡಿಯುತ್ತೇವೆ. ಇದರಿಂದ ಅವುಗಳ ಮೇಲೆ ಒತ್ತಡ ಸಹಜವಾಗಿ ಹೆಚ್ಚಿ, ರಿಪೇರಿ ಕೆಲಸ ಹಾಗೆಯೇ ಉಳಿಯುತ್ತದೆ; ಇಲ್ಲವೇ ರಿಪೇರಿ ಕೆಲಸದ ನಡುವೆ ಜೀರ್ಣ ಸರಿಯಾಗಿ ಆಗುವುದಿಲ್ಲ. ಎರಡೂ ಅಪಾಯವೇ. ಒತ್ತಡ ಹೆಚ್ಚಿ ರಿಪೇರಿ ಆಗದಿದ್ದರೆ ಯಂತ್ರ ಬೇಗನೆ ಹಾಳಾಗಿ ಕೆಲಸ ನಿಲ್ಲಿಸುತ್ತದೆ. ಇಲ್ಲವೇ ಜೀರ್ಣ ಸರಿಯಾಗದೇ ಕ್ಯಾಲರಿ ಸಂಗ್ರಹ ಹೆಚ್ಚಿ ಕೊಬ್ಬಾಗಿ ಪರಿವರ್ತನೆಯಾಗಿ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸೂರ್ಯನಿಲ್ಲದ ವೇಳೆಯಲ್ಲಿ ಮೆಟಬಾಲಿಸಂ ಸಹ ನಿಧಾನವಾಗಿರುವುದರಿಂದ ಕೆಟ್ಟ ಕೊಬ್ಬಿನ ಸಂಗ್ರಹ ಹೆಚ್ಚುವ ಎಲ್ಲ ಅಪಾಯವಿದೆ.

ಅದಕ್ಕೇ ಹೇಳೋದು, ನಿದ್ದೆ ಮಾಡಬೇಕಾದ ಸಮಯಕ್ಕೆ ನಿದ್ದೆ ಮಾಡಿದರೆ, ತಿನ್ನೋ ಸಮಯಕ್ಕೆ ನಾವು ತಿನ್ನುತ್ತೇವೆ, ಜೀರ್ಣ ಆಗೋ ಸಮಯಕ್ಕೇ ಅದು ಜೀರ್ಣವಾಗುತ್ತೆ, ಜೀರ್ಣವಾದದ್ದು ಕ್ಯಾಲರಿಯಾಗಿ ಬೇಕಾದಾಗ ಬಳಕೆಯಾಗುತ್ತೆ. ಅದಿಲ್ಲದಿದ್ದರೆ, ಏನಾಗುತ್ತೆ ಅನ್ನೋದು ಹೇಳ್ತೀನಿ ನೋಡಿ, ರಾತ್ರಿ ನಾವು ತಡವಾಗಿ ಮಲಗ್ತೀವಾ? ಮಲಗದೇ ಎಚ್ಚರಿರುವಾಗ ಸಹಜವಾಗಿ ಹಸಿವಾಗುತ್ತೆ, ತಿಂತೀವಾ? ಆದರೆ ಆಗ ಮೆಟಬಾಲಿಸಂ ರೇಟ್ಕಡಿಮೆ ಇರುತ್ತೆ. ಹಾಗಾಗಿ ಆಗ ಆಗಬೇಕಾದ ಜೀರ್ಣ ಕ್ರಿಯೆ ಆಗಲ್ಲ. ಹಾಗೆಯೇ ಮಲಗಿ ಬಿಡ್ತೀವಿ. ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ಜೀರ್ಣವಾಗಿ ಉಳಿದ ತ್ಯಾಜ್ಯವನ್ನು (ಮಲ–ಮೂತ್ರ) ಹೊರ ಹಾಕಿ ಜಠರವನ್ನು ಸ್ವಚ್ಛಗೊಳಿಸಿಕೊಳ್ಳಬೇಕಿತ್ತು. ಆದರೆ ನಾವಿನ್ನೂ ಮಲಗೇ ಇರ್ತೀವಿ. ಹೀಗಾಗಿ ಹೊರಹೋಗಬೇಕಾದ್ದು ಹೋಗುವುದೂ ಇಲ್ಲ. ಒಳಗಿನದ್ದು ಕರಗಿಯೂ ಇರುವುದಿಲ್ಲ. ಪರಿಣಾಮ ಎಂಟು–ಹತ್ತು ಗಂಟೆಗೆ ಏಳುವಾಗ ಮೊದಲನೆಯದ್ದು ಆಲಸ್ಯ, ಎರಡನೆಯದ್ದು ಹಸಿವಿಲ್ಲದ ಸ್ಥಿತಿ, ಮೂರನೆಯದ್ದು ಒಳಗೇ ಗಂಧಕ, ಮೀಥೇನ್ನಂಥ ಅನಿಲಗಳು ಉತ್ಪತ್ತಿ ಆಗಿ ವಾಯು ಪ್ರಕೋಪಕ್ಕೆ ಹೊಟ್ಟೆ ಈಡಾಗಿರುತ್ತದೆ. ಆದ್ದರಿಂದ ಹಸಿವಾಗದೇ ಬ್ರೇಕ್ಪಾಸ್ಟ್ಸ್ಕಿಪ್ ಮಾಡಿ, ನೇರವಾಗಿ ಮಧ್ಯಹ್ನ ಒಮ್ಮೆಲೆ ಊಟ. ಒಮ್ಮೆಲೆ ಜಾಸ್ತಿ ಆಹಾರ ಅದರಲ್ಲೂ, ಕಾರ್ಬೋಹೈಡ್ರೇಟ್ಜಾಸ್ತಿ ಒಳಗೆ ಹೋಗಿ ಕೂರುತ್ತದೆ. ಹೊಟ್ಟೆ ಭಾರವಾಗುವುದರ ಜತೆಗೆ ರಾತ್ರಿ ನಿದ್ದೆ ಸರಿಯಾಗದೇ ಕಣ್ಣು ಎಳೆಯತೊಡಗುತ್ತದೆ. ಒಂದೋ ಮಲಗುತ್ತೇವೆ, ಅಥವಾ ಕೂಳಿತಲ್ಲಿಯೇ ಕುಳಿತಿರುತ್ತೇವೆ. ಇದರಿಂದ ಮೆಟಬಾಲಿಸಂ ಪೀಕ್ನಲ್ಲಿರುವಾಗ ಕ್ಯಾಲರಿ ಖರ್ಚಾಗದೇ ಹಾಗೆಯೇ ಉಳಿಯುತ್ತದೆ.

ಮತ್ತೆ ಸಂಜೆಯ ಹೊತ್ತಿಗೆ ಹಸಿವು. ಆಗ ಸೂರ್ಯ ಮುಳಗುತ್ತಿರುತ್ತಾನೆ. ಏನಾದರೂ ತಿನ್ನುತ್ತೇವೆ. ಹೀಗಾಗಿ ರಾತ್ರಿಯ ಊಟ ತಡವಾಗುತ್ತದೆ. ಮೆಟಬಾಲಿಸಂ ಬಹುತೇಕ ಸ್ಥಗಿತಗೊಂಡ ಬಳಿಕ, ಮಧ್ಯರಾತ್ರಿಗೆ ಮತ್ತೆ ಇನ್ಟೇಕ್...ಇದೇ ಪುನರಾವರ್ತನೆಗೊಂಡು ಬೊಜ್ಜಿನ ಸಮಸ್ಯೆಗೆ ಈಡಾಗುತ್ತಿರುವುದು ನಾವು. ಅರ್ಥವಾಯಿತಲ್ಲ? ಹೀಗಾಗಿ ಹಗಲಿನಲ್ಲಿ ನಿದ್ದೆ ಮಾಡುವುದು ಅಥವಾ ರಾತ್ರಿಯಲ್ಲಿ ನಿದ್ದೆ ಮಾಡದಿರುವುದು ಎರಡೂ ನಮ್ಮ ತೂಕವನ್ನು ಹೆಚ್ಚಿಸುತ್ತದೆ. ನಿದ್ದೆ ಹೋಗಲು ಸರಿಯಾದ ಸಮಯ ರಾತ್ರಿ 9 ರಿಂದ 10 ಗಂಟೆಯ ಒಳಗೆ. ಏಳುವುದು ಬೆಳಗ್ಗೆ 4ರಿಂದ 5 ಗಂಟೆಯೊಳಗೆ. ಆ ಸಮಯದಲ್ಲಿ ನಿದ್ದೆಯಿಂದ ಎದ್ದು, ಹೊಟ್ಟೆ ಖಾಲಿ ಮಾಡಿಕೊಳ್ಳಲೇಬೇಕು. ಆಗ ಮಾತ್ರ ಬೊಜ್ಜಿನ ಸಮಸ್ಯೆಯಿಂದ ಪಾರಾಗಲು ಸಾಧ್ಯ. ಇಲ್ಲಿ ಗಮನಿಸಬೇಕಾದುದು, ರಾತ್ರಿ ನಿದ್ದೆಗೂ ಎರಡು ಗಂಟೆ ಮೊದಲು ಆಹಾರ ತಿಂದಿರಬೇಕು, ಬೆಳಗ್ಗೆ ಎದ್ದ ಎರಡು ಗಂಟೆಯ ಬಳಿಕ ಮತ್ತೆ ಆಹಾರ ಸೇವಿಸಬೇಕು. ನಡುವೆ ನೀರು ಕುಡಿಯುವುದೊಂದೇ ನಾವು ಮಾಡಬಹುದಾದದ್ದು ಮತ್ತು ಮಾಡಬೇಕಾದುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.