ಸಾಮಾನ್ಯವಾಗಿ ನಮ್ಮಲ್ಲಿ ಊಟವಾದ ನಂತರ ಹಣ್ಣು ತಿನ್ನುವುದು ಅಭ್ಯಾಸ. ಅದರಲ್ಲೂ ವಿಶೇಷ ಭೋಜನ, ಸಮಾರಂಭಗಳು, ಹಬ್ಬದೂಟದ ಬಳಿಕ ಒಂದು ಬಾಳೆ ಹಣ್ಣನ್ನು ತಿಂದು, ಪಾನ್ ಹಾಕಿಕೊಳ್ಳದಿದ್ದರೆ ಆ ಊಟವೇ ಪರಿಪೂರ್ಣವಾಗುವುದಿಲ್ಲ. ಮೊದಲಿಂದಲೂ ಊಟದ ಬಳಿಕ 'ಡೆಸರ್ಟ್' ರೂಪದಲ್ಲಿ ಹಣ್ಣುಗಳನ್ನು ಫ್ರೂಟ್ಬೌಲ್ ಅಥವಾ ಫ್ರೂಟ್ಸ್ ಸಲಾಡ್ ಹಾಗೂ ಐಸ್ಕ್ರೀಮ್ ತಿನ್ನುವುದು ಪದ್ಧತಿಯಾಗಿ ಬಂದಿದೆ. ಹೋಟೆಲ್ಗಳಲ್ಲಿ, ಮಧುವೆಯಂಥ ಶುಭ ಸಮಾರಂಭಗಳಲ್ಲೂ ಹಣ್ಣನ್ನು ಕೊನೆಗೇ ಸರ್ವ್ ಮಾಡುತ್ತಾರೆ.

ಬಹುತೇಕ ಮನೆಯಲ್ಲಿ ಹಿರಿಯರು ಸಹ ಊಟದ ಬಳಿಕ ಹಣ್ಣನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಊಟದ ಸಮಯದಲ್ಲಿ ಏನಾದರೂ ಡೈನಿಂಗ್ ಟೇಬಲ್ ಮೇಲಿಟ್ಟ ಹಣ್ಣಿನ ಬೌಲ್ಗೆ ಕೈ ಹಾಕಿದರೆ, ಒಳಗೆ ಅಡುಗೆ ಮನೆಯಿಂದ ಅಮ್ಮ, ‘ಅಯ್ಯೋ, ಇನ್ನೇನು ಅಡುಗೆ ಆಗೇ ಹೋಯ್ತು. ಈಗ್ಯಾಕೆ ಹಣ್ಣು ತಿನ್ನೋದು? ಊಟ ಮಾಡೇ ಹಣ್ಣು ತಿನ್ನು’ ಅಂಥ ಆದೇಶಿಸುತ್ತಾರೆ. ಇನ್ನು ಅಪ್ಪೀ–ತಪ್ಪಿ ಮಕ್ಕಳಂತೂ ಊಟಕ್ಕೆ ಮುನ್ನ ಹಣ್ಣನ್ನು ಕೇಳಿದರೆ, ನೋ...ನೋ... ಈಗ ಹಣ್ಣು ಕೊಡಲ್ಲ. ಈಗ ಹಣ್ಣು ತಿನ್ಕೊಂಡ್ರೆ, ಮತ್ತೆ ಊಟ ಮಾಡಲ್ಲ. ಊಟ ಆದ ಮೇಲೆ ತಿನ್ನುವಿಯಂತೆ...‘ ಅಂತ ಗದರಿಸಿ ಹಣ್ಣನ್ನು ಎತ್ತಿ ಇಡ್ತೀವಿ, ಅಲ್ಲವಾ?

ಹಾಗಾದರೆ, ಹಣ್ಣನ್ನು ಊಟದ ನಂತರ ತಿನ್ನೋದು ಸರಿನಾ? ಆರೋಗ್ಯಕ್ಕೆ ಅದೇ ಒಳ್ಳೆಯದಾ, ಅನ್ನೋ ಪ್ರಶ್ನೆ ಕೇಳಿದರೆ, ಬಿಲ್ಕುಲ್ ತಪ್ಪು. ಯಾವುದೇ ಕಾರಣಕ್ಕೂ, ಅದರಲ್ಲೂ ತೂಕ ಇಳಿಸಿಕೊಳ್ಳಬೇಕು ಎನ್ನುವ ಪ್ರಯತ್ನದಲ್ಲಿ ಇರುವವರು ಊಟದ ನಂತರ ಹಣ್ಣನ್ನು ತಿನ್ನಲೇಬಾರದು. ಹಾಗಾದರೆ ಹಣ್ಣು ತಿನ್ನೋದರಿಂದ ತೂಕ ಜಾಸ್ತಿ ಆಗುತ್ತಾ, ಅಂದರೆ ಖಂಡಿತಾ ಹಣ್ಣಿನಿಂದ ತೂಕ ಜಾಸ್ತಿ ಆಗಲ್ಲ. ಆದರೆ ಊಟ–ತಿಂಡಿಯ ನಂತರ ನೀವು ಯಾವುದೇ ಹಣ್ಣನ್ನು ತಿಂದರೂ ನೂರಕ್ಕೆ ನೂರು ತೂಕ ಜಾಸ್ತಿ ಆಗುತ್ತೆ. ನನಗೆ ಗೊತ್ತು, ನಿಮ್ಮ ಮುಂದಿನ ಪ್ರಶ್ನೆ ತೂಕ ಜಾಸ್ತಿ ಇರೋರು ಹಣ್ಣೆ ತಿನ್ನಬಾರದಾ, ಹಣ್ಣನ್ನು ತಿನ್ನೋದೇ ಊಟದ ನಂತರ ಅಲ್ವಾ? ಎಂಬುದಾಗಿರುತ್ತೆ.

ದೇಹದ ತೂಕಕ್ಕೂ– ನಾವು ತೆಗೆದುಕೊಳ್ಳುವ ಆಹಾರಕ್ಕೂ ನೇರಾನೇರ ಸಂಬಂಧವಿದೆ. ಆಹಾರ ಎಂಬುದು ಬಂದಾಗ ಹಣ್ಣು ಸಹ ಅದರಲ್ಲಿ ಸೇರುತ್ತೆ. ಹೇಗೆ ಉಳಿದ ಆಹಾರ ಸೇವನೆಗೆ ಕ್ರಮ, ಸಮಯ, ಪ್ರಮಾಣ ಎಂಬುದು ಇರುತ್ತೋ, ಹಾಗೆಯೇ ಹಣ್ಣಿನ ಸೇವನೆಗೂ ಒಂದಷ್ಟು ಕ್ರಮಗಳಿವೆ. ಊಟದ ನಂತರ ಹಣ್ಣು ತಿನ್ನುವುದು ಆಹಾರ ವಿಜ್ಞಾನಕ್ಕೆ ತೀರಾ ವಿರುದ್ಧ. ಇದಕ್ಕೆ ಕಾರಣಗಳು ಹಲವು. ಹಣ್ಣಿನಲ್ಲಿ ಸಹಜವಾಗಿಯೇ ಹಲವು ವೈವಿಧ್ಯದ ವಿಟಮಿನ್ಸ್ಮತ್ತು ಮಿನರಲ್ಸ್ಗಳಿರುತ್ತವೆ. ಬೇರೆ ಆಹಾರದ ನಂತರ, ಅಥವಾ ಬೇರೆ ಆಹಾರದ ಜೊತೆಜೊತೆಗೆ ಯಾವಹಣ್ಣು ಸೇವಿಸುವುದರಿಂದ ಜೀರ್ಣಾಂಗಗಳಿಗೆ ಹಣ್ಣಿನಲ್ಲಿನ ಪೋಷಕಾಂಶಗಳನ್ನು ಸಂಪೂರ್ಣವಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನೊಂದು ಪ್ರಮುಖ ಸಂಗತಿಯೆಂದರೆ, ಹಣ್ಣಿನಲ್ಲಿ ಸಹಜವಾಗಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಹೀಗಾಗಿ ಬೇರೆ ಆಹಾರ ಸೇವನೆಯ ಬಳಿಕ ಯಾವುದೇ ಹಣ್ಣನ್ನು ತಿಂದರೆ, ಸಹಜವಾಗಿ ಕೊಬ್ಬಿನ ಉತ್ಪತ್ತಿ ಜಾಸ್ತಿಯಾಗಿ ಶೇಖರಣೆಗೊಳ್ಳುತ್ತದೆ.

ಹಾಗಾದರೆ ಹಣ್ಣನ್ನು ಯಾವಾಗ ತಿನ್ನಬೇಕು? ಈ ಪ್ರಶ್ನೆಯನ್ನು ಸಾರ್ವತ್ರಿಕಗೊಳಿಸುವುದಾದರೆ ರಾತ್ರಿ ವೇಳೆ ಹೊರತುಪಡಿಸಿ ಹಸಿದ ಹೊಟ್ಟೆಯಲ್ಲಿ ಯಾವಾಗಬೇಕಾದರೂ, ಯಾವ ಹಣ್ಣನ್ನು ಬೇಕಾದರೂ ತಿನ್ನಬಹುದು. ಸಾಮಾನ್ಯವಾಗಿ ಆರೋಗ್ಯ ವಿಜ್ಞಾನ ಹೇಳುವುದೇನೆಂದರೆ ಮಧ್ಯಾಹ್ನದ ಊಟಕ್ಕೂ ಎರಡು ಗಂಟೆ ಮೊದಲು ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ತಕ್ಷಣದ ಚೈತನ್ಯ ಸಿಗುತ್ತದೆ. ಆದರೆ, ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ನೀವು ಬಯಸುತ್ತೀರಾದರೆ, ಇವೆರಡೂ ಸ್ವಾತಂತ್ರ್ಯ ನಿಮಗೆ ಇಲ್ಲ. ನೀವು ಕೆಲವು ಹಣ್ಣುಗಳನ್ನು ಕೆಲ ದಿನಗಳ ಮಟ್ಟಿಗೆ ತಿನ್ನದಿರುವುದೇ ವಾಸಿ ಮಾತ್ರವಲ್ಲ, ತಿನ್ನಬಹುದಾದ ಹಣ್ಣುಗಳನ್ನೂ ಎಲ್ಲ ಸಂದರ್ಭದಲ್ಲಿ ತಿಂದರೆ ಮತ್ತೆ ತೂಕ ಹೆಚ್ಚಾಗಬಹುದು, ಎಚ್ಚರಿಕೆ.

ತೂಕ ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ನೀವಿದ್ದರೆ, ಈಗಾಗಲೇ ಹಿಂದಿನ ಲೇಖನದಲ್ಲಿ ಹೇಳಿದಂತೆ ಬೆಳಗ್ಗೆ ತಿಂಡಿಯ ಬದಲು ಫ್ರೂಟ್ ಬೌಲ್ ಅನ್ನು ಸೇವಿಸಬಹುದು. ಅದನ್ನು ಹೊರತು ಪಡಿಸಿದರೆ, ಮಧ್ಯಹ್ನ ಊಟದ ತಟ್ಟೆಯಲ್ಲೇ ಒಂದು ಭಾಗವಾಗಿ ಕೆಲವು ಹಣ್ಣುಗಳನ್ನು ಇಟ್ಟುಕೊಂಡು ಮುಖ್ಯ ಕಾರ್ಬೋಹೈಡ್ರೇಡ್ ಅಂದರೆ, ಅನ್ನ–ಚಪಾತಿ, ರಾಗಿ ಮುದ್ದೇ, ಜೋಳದ ರೊಟ್ಟಿ ಇಂಥವುಗಳ ಸೇವನೆಗೆ ಮೊದಲು ಹಣ್ಣನ್ನು ತಿಂದು ಮಗಿಸಿ. ಯಾವುದೇ ಕಾರಣಕ್ಕೂ ಹಣ್ಣನ್ನು ಕಾರ್ಬೋಹೈಡ್ರೇಡ್ನ ನಂತರ ತಿನ್ನಬೇಡಿ. ಇದರಿಂದ ಎರಡು ಸಮಸ್ಯೆ ಆಗುತ್ತದೆ, ಈಗಾಗಲೇ ಹೇಳಿದಂತೆ ಸಕ್ಕರೆ ಅಂಶ ಹೆಚ್ಚಿರುವುದರಿಂದ ಹಣ್ಣುಗಳು ಹೊಟ್ಟೆಯ ಒಳಗೆ ಹೋಗುತ್ತಿದ್ದಂತೆ ಗ್ಲೂಕೋಸ್ ಆಗಿ ಪರಿವರ್ತನೆ ಆಗಿ ಕ್ಯಾಲರಿ ಸಮತೋಲನವನ್ನು ತಪ್ಪಿಸುತ್ತವೆ. ಹಣ್ಣಿನಲ್ಲಿನ ಪೈಬರ್ ಅಂಶ ಪೂರ್ಣ ಪಚನ ಕ್ರಿಯೆಗೆ ಅಡ್ಡಿಪಡಿಸಿ ನೀವು ತಿಂದ ಆಹಾರದಲ್ಲಿನ ಎಲ್ಲ ಪೋಷಕಾಂಶಗಳನ್ನು ಸಣ್ಣ ಕರುಳು ಹಾಗೂ ವಿಲ್ಲೈಗಳು ಹೀರಿಕೊಳ್ಳಲಾಗದಂತೆ ಮಾಡಬಹುದು. ಇನ್ನೂ ಒಂದು ಪ್ರಮುಖ ಸಂಗತಿಯೆಂದರೆ, ಹಣ್ಣು ರುಚಿಕರವಾದುದರಿಂದ ಹೊಟ್ಟೆ ತುಂಬಿದ ನಂತರವೂ ನಾಲಗೆ ಅದನ್ನು ನಿರಾಕರಿಸುವುದಿಲ್ಲ. ಹೀಗಾಗಿ ಕಾರ್ಬ್ಸ್ ಬಳಿಕ ತಿಂದರೆ ಆಹಾರದ (ಕ್ಯಾಲರಿ) ಪ್ರಮಾಣ ಹೆಚ್ಚಾಗಬಹುದು. ಅದೇ, ಹಣ್ಣನ್ನು ಮೊದಲೇ ತಿಂದರೆ, ಹೊಟ್ಟೆ ತುಂಬಿದಂತಾಗಿ ಸ್ವಲ್ಪವೇ ಕಾರ್ಬ್ಸ್ ಸೇವನೆಗೆ ನಾವು ತೃಪ್ತರಾಗುತ್ತೇವೆ.

ಊಟದ ನಂತರ ಹಣ್ಣು ಯಾಕೆ ತಿನ್ನಬಾರದು?

ಜೀರ್ಣಕ್ರಿಯೆಯಲ್ಲಿ ಅಡ್ಡಿ: ನಾವು ತಿಂದ ಅನ್ನ, ಸಾರು ಅಥವಾ ರೊಟ್ಟಿ ಜೀರ್ಣವಾಗಲು ಕನಿಷ್ಠ 3-4 ಗಂಟೆ ಬೇಕು. ಊಟದ ಬೆನ್ನಲ್ಲೇ ಹಣ್ಣು ತಿಂದರೆ, ಹಣ್ಣುಗಳು ಜೀರ್ಣವಾಗದೆ ಹೊಟ್ಟೆಯಲ್ಲೇ ಉಳಿಯುತ್ತವೆ. ಇದರಿಂದ ಹಣ್ಣುಗಳು ಹುಳಿಯಾಗಲು (Fermentation) ಶುರುವಾಗಿ ಗ್ಯಾಸ್, ಹೊಟ್ಟೆಯುಬ್ಬರ ಮತ್ತು ಎದೆಯುರಿ ಕಾಣಿಸಿಕೊಳ್ಳಬಹುದು.

ಪೋಷಕಾಂಶಗಳ ನಷ್ಟ: ಊಟದ ಜೊತೆ ಹಣ್ಣು ಸೇರಿದಾಗ ದೇಹವು ಹಣ್ಣಿನಲ್ಲಿರುವ ವಿಟಮಿನ್ಗಳನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.

ಡಯಟ್ ಮಾಡುವವರು ಹಣ್ಣುಗಳನ್ನು ತಪ್ಪಿಸಲೇಬಾರದು. ಹಣ್ಣಿನಲ್ಲಿರುವ ನಾರಿನಂಶ (Fiber) ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ತೂಕ ಇಳಿಸುವ ಹಂಬಲ ಇರುವವರು ಊಟಕ್ಕೆ ಅರ್ಧ ಗಂಟೆ ಮೊದಲು ಹಣ್ಣು ಸೇವಿಸಿದರೆ, ಹಸಿವು ಕಡಿಮೆಯಾಗಿ ಅತಿಯಾಗಿ ಉಣ್ಣುವುದನ್ನು ತಡೆಯಬಹುದು. ಅಥವಾ ಕೆಲವೊಮ್ಮೆ ಊಟ–ತಿಂಡಿಗಳ ಬದಲಿಗೆ ಹಣ್ಣು ಸೇವಿಸಬಹುದು.

ಇದನ್ನು ಹೊರತುಪಡಿಸಿ, ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಇರುವವರು ಯಾವ ಹಣ್ಣನ್ನು ತಿನ್ನಬಹುದು, ಯಾವುದನ್ನು ತಿನ್ನಬಾರದು. ಮಧುಮೇಹಿಗಳು ಹಣ್ಣು ತಿನ್ನಬಹುದು. ಮಕ್ಕಳಿಗೆ ಯಾವೆಲ್ಲ ಹಣ್ಣನ್ನು ಕೊಡಬಹುದು ಇತ್ಯಾದಿ ಬಹುಮುಖ್ಯ ಸಂಗತಿಗಳನ್ನು ಮುಂದಿನ ಲೇಖನದಲ್ಲಿ ತಿಳಿಸುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.