ನಿಮ್ಮ ದೇಹಕ್ಕೆ ನೀವು ಅಗತ್ಯ ಇರುವಷ್ಟು ನೀರನ್ನು ಕೊಡುತ್ತಿದ್ದೀರೋ ಇಲ್ಲವೋ ಎಂಬುದನ್ನು ತಿಳಿಯುವುದು ಹೇಗೆ? ಒಂದೊಮ್ಮೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದ್ದರೆ ಏನೆಲ್ಲ ಸಮಸ್ಯೆಗಳಾಗುತ್ತವೆ. ನಿಜವಾಗಿ ದೇಹಕ್ಕೆ ನೀರು ಏಕೆ ಬೇಕು? ಯಾವ ಸಂದರ್ಭದಲ್ಲಿ, ಯಾರು ನೀರನ್ನು ಹೆಚ್ಚು ಕುಡಿಯಬೇಕು? ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಕುಡಿದರೆ ಏನಾಗುತ್ತದೆ...? ಇವೆಲ್ಲವೂ ನಾವು ತಿಳಿದಿರಲೇಬೇಕಾದ ಸಂಗತಿಗಳು.

ಈಗಂತೂ ಬೇಸಿಗೆಯ ಸಮಯ. ದೇಹ ಯಾವ ಸಂದರ್ಭದಲ್ಲಿ ನಿರ್ಜಲೀಕರಣ ಸ್ಥಿತಿಗೆ ಹೋಗುತ್ತದೆ ಎನ್ನುವುದನ್ನು ಊಹಿಸಲೇ ಆಗುವುದಿಲ್ಲ. ನಾವಂದುಕೊಳ್ಳುವುದು ಏನೆಂದರೆ, ಹೊರಗಡೆ ತುಂಬ ಬಿಸಿಲಿನಲ್ಲಿ ಸುತ್ತಾಡಿದರೆ, ಹೆಚ್ಚಿನ ಶ್ರಮದಾಯಕ ಕೆಲಸಗಳನ್ನು ಮಾಡಿದಾಗ, ಮಧ್ಯಹ್ನ ಬಿಸಿಲು ಹೆಚ್ಚಿರುವ ವೇಳೆಯಲ್ಲಿ... ಇಂಥ ಸಂದರ್ಭಗಳಲ್ಲಷ್ಟೇ ಡೀ ಹೈಡ್ರೇಷನ್ ಕಾಡುತ್ತದೆ ಎಂದು. ಆದರೆ ಅದು ಹಾಗಲ್ಲ. ನಾವು ಸೇವಿಸುವ ಆಹಾರ, ನಮ್ಮ ದಿನಚರಿ, ನಮ್ಮ ಆರೋಗ್ಯದ ಸನ್ನಿವೇಶ, ನಮ್ಮ ವಯಸ್ಸು, ನಮ್ಮ ದೇಹ ಪ್ರಕೃತಿ ಇಂಥವೆಲ್ಲವೂ ಡೀ ಹೈಡ್ರೇಷನ್ಗೆ ಕಾರಣವಾಗುವ ಸಂಗತಿಗಳು. ವ್ಯಾಯಾಮ ಮಾಡಿದಾಗ, ಶ್ರಮದ ಕೆಲಸ ನಿರ್ವಹಿಸಿದಾಗ, ಬಿಸಿಲಿನಲ್ಲಿ ಸುತ್ತಾಡಿ ಬಂದಾಗ ದೇಹ ತನ್ನಿಂದ ತಾನೇ ನೀರನ್ನು ಅಪೇಕ್ಷಿಸುತ್ತದೆ. ಬಾಯಾರಿಕೆ ಆದಂತೆನಿಸಿ ನೀರನ್ನು ಕುಡಿಯುತ್ತೇವೆ. ಆದರೆ ಇನ್ನು ಕೆಲವು ವೇಳೆ ದೇಹ ಕೇಳುವುದಿಲ್ಲ. ಅಂದ ಮಾತ್ರಕ್ಕೆ ನಮಗೆ ನೀರಿನ ಅಗತ್ಯವಿಲ್ಲ ಎಂದಲ್ಲ. ಹಾಗೆಂದುಕೊಂಡು ನಾವು ಕುಳಿತಾಗಲೇ ನಮಗೆ ನಿರ್ಜಲೀಕರಣದ ಸಮಸ್ಯೆ ಕಾಡುವುದು.

ಯಾವಾಗ ಹೆಚ್ಚು ನೀರು ಬೇಕು?

ಉದಾಹರಣೆಗೆ ಹೇಳುವುದಾದರೆ, ನಾವು ಯಾವುದೋ ಅನಾರೋಗ್ಯ ಸಮಸ್ಯೆಗೆ ಮಾತ್ರೆ, ಔಷಧಗಳನ್ನು ಸೇವಿಸುತ್ತೇವೆ. ಸ್ವಲ್ಪವೇ ನೀರನ್ನು ಕುಡಿದು ಸುಮ್ಮನೆ ಮಲಗಿಬಿಡುತ್ತೇವೆ. ದೇಹವನ್ನು ಸೇರಿದ ಔಷಧೀಯ (ಬಹತೇಕ ಸಂದರ್ಭದಲ್ಲಿ ರಾಸಾಯನಿಕ) ವಸ್ತುಗಳನ್ನು ಕರಗಿಸಿಕೊಳ್ಳಲು ಹೆಚ್ಚಿನ ನೀರಿನ ಅಗತ್ಯ ಇರುತ್ತದೆ. ಇನ್ನು ಜ್ವರ, ವಾಂತಿ–ಭೇದಿಯಂಥ ಸಮಸ್ಯೆಗಳು ಇರುತ್ತವೆ. ಆಗ ದೇಹದಿಂದ ನೀರು ಯಥೇಚ್ಛ ಹೊರಹೋಗಿರುತ್ತದೆ, ಆದರೆ, ನಮಗೆ ಏನನ್ನೂ ಕುಡಿಯುವ ಇಚ್ಛೆಯೇ ಇರುವುದಿಲ್ಲ. ಬಾಯಿ ರುಚಿ ಕೆಟ್ಟು ವಾಕರಿಕೆ ಬಂದ ಹಾಗೆ ಆಗುತ್ತಿರುತ್ತದೆ. ಅಂಥ ಸನ್ನಿವೇಶದಲ್ಲಿ ನಾವು ನೀರನ್ನೂ ಕುಡಿಯುವುದಿಲ್ಲ. ಆಗೆಲ್ಲ ನಮಗೇ ಅರಿವಿಲ್ಲದೇ ನಮ್ಮ ದೇಹ ನಿರ್ಜಲೀಕರಣಕ್ಕೆ ಒಳಪಟ್ಟುಬಿಡುತ್ತದೆ. ಎಷ್ಟೋ ವೇಳೆ ಇದು ಗಂಭೀರ ಅಪಾಯಕ್ಕೆ ನಮ್ಮನ್ನು ದೂಡಿಬಿಡಬಹುದು. ಎಷ್ಟೋ ಮಂದಿಯ ಪ್ರಾಣಕ್ಕೂ ಇಂಥ ನಿರ್ಜಲೀಕರಣ ಸ್ಥಿತಿ ಸಂಚಕಾರ ತದ್ದಿದ್ದೂ ಇದೆ. ಆಗಲೇ ವೈದ್ಯರು ಕೃತಕವಾಗಿ ಸಲೈನ್ ಚುಚ್ಚುವುದು.

ಇನ್ನು ಬಿಪಿ ಏರುಪೇರು, ವೀಕ್ನೆಸ್, ಮಾನಸಿಕ ಉದ್ವೇಗ–ಒತ್ತಡ, ಕೋಪ–ದುಃಖ, ಅನೀರೀಕ್ಷಿತ ಆಘಾತಗಳು, ಅನೀಮಿಕ್ನಂಥ ಸಮಸ್ಯೆಗಳು...ಈ ಎಲ್ಲ ಸನ್ನಿವೇಶದಲ್ಲಿ ದೇಹದಿಂದ ಬೆವರು ಹೆಚ್ಚು ಹೊರಹೋಗುತ್ತದೆ. ಆಗೆಲ್ಲ ನಾವು ಹೆಚ್ಚಿನ ನೀರನ್ನು ಸೇವಿಸಲೇಬೇಕು. ಅದಿಲ್ಲದಿದ್ದರೆ ಖಂಡಿತಾ ಅಪಾಯಗಳು ಕಟ್ಟಿಟ್ಟದ್ದು.

ಹೆಣ್ಣು ಮಕ್ಕಳಿಗೆ ಯಾವಾಗ ಹೆಚ್ಚು ನೀರು ಬೇಕು?

ಮಹಿಳೆಯರಾದರೆ, ಮಾಸಿಕ ಋತುಸ್ರಾವದ ಸಂದರ್ಭದಲ್ಲಿ, ಗರ್ಭಿಣಿಯರಾಗಿದ್ದರೆ ಅಥವಾ ಮಗುವಿಗೆ ಹಾಲೂಡಿಸುತ್ತಿದ್ದರೆ ಅದು ಯಾವುದೇ ಕಾಲವಾಗಿರಲಿ ದೇಹಕ್ಕೆ ಹೆಚ್ಚಿನ ನೀರನ್ನು ಕೊಡಲೇಬೇಕು. ಅದಿಲ್ಲದಿದ್ದರೆ ನಿತ್ರಾಣಗೊಂಡು ಎಚ್ಚರ ತಪ್ಪುವ ಸಾಧ್ಯತೆಗಳು ಇವೆ. ಮಾತ್ರವಲ್ಲ ಬಿಪಿ, ಮಧುಮೇಹ, ಬೊಜ್ಜಿನ ಸಮಸ್ಯೆಗಳಿಗೂ ಇದು ಕಾರಣವಾಗುತ್ತದೆ. ತುಂಬ ಮಹಿಳೆಯರಲ್ಲಿ ಬೊಜ್ಜಿನ ಸಮಸ್ಯೆಗೆ ಪ್ರಮುಖ ಕಾರಣವೇ ಸೂಕ್ತ ಪ್ರಮಾಣದಲ್ಲಿ ನೀರನ್ನು ಕುಡಿಯದಿರುವುದು.

ಇದೆಲ್ಲಕ್ಕಿಂತ ಮುಖ್ಯವಾಗಿ ನಾವು ಸೇವಿಸುವ ಆಹಾರ ನಮ್ಮನ್ನು ನಿರ್ಜಲೀಕರಣಕ್ಕೆ ದೂಡುತ್ತದೆ. ಹೆಚ್ಚಿನ ಮಸಾಲೆಯುಕ್ತ, ಉಪ್ಪು ಹೆಚ್ಚಿರುವ ಪದಾರ್ಥಗಳು, ಸಿಹಿ ತಿಂಡಿಗಳು, ಮಾಂಸಾಹಾರ ಸೇವನೆ, ತಂಬಾಕು ತಿನ್ನುವ ಅಭ್ಯಾಸ, ಮದ್ಯ ಸೇವನೆಯಂಥ ಸಂದರ್ಭದಲ್ಲಿ ಇವನ್ನು ಜೀರ್ಣಮಾಡಲು, ಕೊಬ್ಬನ್ನು ವಿಲೇವಾರಿ ಮಾಡಲು ದೇಹಕ್ಕೆ ಹೆಚ್ಚಿನ ನೀರು ಕೊಡುವುದು ಅತಿ ಮುಖ್ಯ. ಅದಿಲ್ಲದಿದ್ದರರೆ ಒಂದೋ ನಮ್ಮ ಕಿಡ್ನಿ ಮತ್ತು ಲಿವರ್ನ ಮೇಲೆ ಸಿಕ್ಕಾಪಟ್ಟೆ ಒತ್ತಡ ಬಿದ್ದು, ಅವುಗಳು ತಮ್ಮ ಕಾರ್ಯವನ್ನು ನಿಧಾನಗೊಳಿಸಿಬಿಡಬಹುದು. ಇಲ್ಲವೇ ಸುದೀರ್ಘ ಅವಧಿಯವರೆಗೆ ಇದು ಮುಂದುವರಿದಲ್ಲಿ, ಈ ಅಂಗಗಳು ತಮ್ಮ ಕಾರ್ಯವನ್ನೇ ನಿಲ್ಲಿಸಿಬಿಡುವ ಅಪಾಯಗಳಿವೆ. ಅದರಲ್ಲೂ ಯಾವುದೇ ಮಾತ್ರೆ–ಔಷಧಗಳ ಸೇವನೆ ಹಾಗೂ ತಂಬಾಕು ಮತ್ತು ಮಧ್ಯ ಸೇವನೆ ಮಾಡಿದಾಗ ನಿಯಮಿತ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಸೇವಿಸಲೇಬೇಕು.

ನೀರು ಕುಡಿಯದಿದ್ದರೆ ಏನಾಗುತ್ತದೆ?

ಒಂದೊಮ್ಮೆ ನೀರನ್ನು ಕುಡಿಯದಿದ್ದರೆ ಏನಾಗುತ್ತದೆ? ಸಹಜವಾಗಿ ದೇಹ ನಿತ್ರಾಣಗೊಂಡು, ಪ್ರಜ್ಞೆ ತಪ್ಪುವ, ರಕ್ತದೊತ್ತಡ ಏರುಪೇರಾಗುವ ಸಾಧ್ಯತೆಗಳಂತೂ ಸಹಜವಾಗಿ ಇದ್ದೇ ಇದೆ. ಇದರ ಜತೆಗೆ ದೇಹದ ಮೆಟಾಬಾಲಿಸಂ (ಕೊಬ್ಬು ಸುಡುವ ವೇಗ)ದಿನದಿಂದ ದಿನಕ್ಕೆ ಕುಸಿಯುತ್ತ ಸಾಗುತ್ತದೆ. ಹೀಗಾದಾಗಲೇ ದೇಹದ ಬೇರೆಬೇರೆ ಭಾಗಗಳಲ್ಲಿ ಕೊಬ್ಬು ಶೇಕರಣೆಗೊಳ್ಳತೊಡಗುತ್ತದೆ. ಆಗಲೇ ಯಾವ್ಯಾವುದೋ ಭಾಗ ಹೇಗೇ ಹೇಗೋ ಬೆಳೆದುಕೊಳ್ಳುವುದು. ಬೊಜ್ಜು ನಿಮಗೆ ವಿಕಾರವಾಗಿ ಕಾಣುವಂತೆ ನಿಮ್ಮ ಮಾಡುವುದು ಸರಿಯಾಗಿ ನೀರುಕುಡಿಯದೇ ಇದ್ದಾಗಲೇ. ಕೊಬ್ಬನ್ನು ‘ಬ್ರೇಕ್ ಡೌನ್’ ಮಾಡಲು ಅಗತ್ಯವಾದ ಲಿಪೋಲೈಸಿಸ್ ಎನ್ನುವ ಕ್ರಿಯೆಗೆ ನೀರು ಬೇಕೇಬೇಕು. ನಿಯಮಿತವಾಗಿ ಹಾಗೂ ಮೇಲೆ ಹೇಳಿದ ಸಂದರ್ಭದಲ್ಲಿ ಹೆಚ್ಚಿನ ನೀರನ್ನು ಸೇವಿಸಿದರೆ ದೇಹದ ತಾಪಮಾನದ ಸಮತೋಲನ ರಕ್ಷಣೆಯಾಗಿ ನಮ್ಮ ಮೆಟಬಾಲಿಕ್ ರೇಟ್ ಶೇ 5–10ರಷ್ಟು ಹೆಚ್ಚಾಗುತ್ತದೆ ಎನ್ನುತ್ತದೆ ಅಧ್ಯಯನಗಳು.

ಇನ್ನೂ ವಿಶೇಷವೆಂದರೆ ಚೆನ್ನಾಗಿ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗಿ ಓವರ್ ಈಟಿಂಗ್ ಕಡಿಮೆ ಆಗುತ್ತದೆ. ಅದಕ್ಕಾಗಿ ಆಹಾರದ 30 ನಿಮಿಷ ಮೊದಲು ಕನಿಷ್ಠ 300–500 ಮಿಲಿ ಲೀಟರ್ನಷ್ಟು ನೀರು ಕುಡಿಯಬೇಕು. ಆಗ ಕ್ಯಾಲೋರಿ ಸೇವನೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ

ಜಾಸ್ತಿ ಆದರೇನು ಅಪಾಯ?

ಹಾಗೆಂದು ಅತಿಯಾದ ನೀರು ಸೇವನೆ, ಒಮ್ಮೆಲೆ ಬೇಕಾಬಿಟ್ಟಿ ನೀರು ಕುಡಿದರೂ ದೇಹಕ್ಕೆ ಸಮಸ್ಯೆ ಆಗುತ್ತದೆ. ಈಗಾಗಲೇ ಹಿಂದಿನ ಲೇಖನಗಳಲ್ಲಿ (https://www.prajavani.net/health/wellness-diet/water-drinking-schedule-and-rules-details-3927206) ಹೇಳಿದಂತೆ ನಮ್ಮ ಬ್ಲಾಡರ್, ಕಿಡ್ನಿ–ಲಿವರ್ಗಳ ಮೇಲೆ ಒತ್ತಡ ಜಾಸ್ತಿ ಆಗಿ ಅವು ಸಮಸ್ಯೆಗೆ ಈಡಾಗುತ್ತವೆ. ಜತೆಗೆ ದಿನಕ್ಕೆ 4–5 ಲೀಟರ್ಗೂ ಮೀರಿ ನೀರು ಮತ್ತು ದ್ರವ ಪದಾರ್ಥಗಳು ದೇಹಕ್ಕೆ ಹೋದಲ್ಲಿ ದೇಹದಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಾಗಿ ಹೈಪೋನಾಟ್ರೀಮಿಯಾ (Hyponatremia) ಸಮಸ್ಯೆ ತಲೆದೋರುತ್ತದೆ. ತಲೆಸುತ್ತು, ವಾಂತಿ ತೀವ್ರಗೊಂಡು ಅಪಾಯವಾಗುತ್ತದೆ.

ತಿಳಿದುಕೊಳ್ಳುವುದು ಹೇಗೆ?

ಹಾಗಾದರೆ ನಾವು ದೇಹಕ್ಕೆ ಅಗತ್ಯವಿರುವಷ್ಟೇ ನೀರನ್ನು ಸೇವಿಸಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಅತಿ ಸುಲಭದ ಮಾರ್ಗ ನಮ್ಮ ಮೂತ್ರ ವಿಸರ್ಜನೆ. ಒಂದು ದಿನದಲ್ಲಿ ಆರೋಗ್ಯವಂತ ಮನುಷ್ಟು ಆರರಿಂದ ಏಳು(6–7) ಬಾರಿ ಮೂತ್ರ ವಿಸರ್ಜನೆ ಮಾಡಬೇಕು. ಅದಕ್ಕಿಂತ ಜಾಸ್ತಿ ಆದರೆ, ಒಂದೇ ಮಧುಮೇಹದಂಥ ಸಮಸ್ಯೆಗೆ ಈಡಾಗಿದ್ದೇವೆ ಎಂದರ್ಥ. ಇಲ್ಲವೇ ನೀರಿನ ಸೇವನೆ ಏರುಪೇರಾಗಿರುತ್ತದೆ. ಕಡಿಮೆಯಾದರಂತೂ ಗೊತ್ತೇ ಇದೆ. ನೀರು ಕಡಿಮೆ ಆಗಿದೆ.

ಇನ್ನೂ ಮುಖ್ಯವಾಗಿ ನಾವು ಗಮನಿಸಬೇಕಾದುದು ಮಲ ಮತ್ತು ಮೂತ್ರಗಳ ಬಣ್ಣ. ಮಲ ವಿಸರ್ಜನೆಯ ಸಂದರ್ಭದಲ್ಲಿ ಮಲದ ಬಣ್ಣ ತೀರಾ ಗಾಢವಾಗಿದ್ದರೆ, ಅಥವಾ ವಿಪರೀತ ವಾಸನೆಯಿಂದ ಕೂಡಿದ್ದರೆ, ಎಷ್ಟು ಪ್ರಶರ್ ಹಾಕಿದರೂ ಮಲವಿಸರ್ಜನೆ ಆಗುತ್ತಿಲ್ಲವೆಂದರೆ, ಮಲದೊಂದಿಗೆ ರಕ್ತದ, ಲೋಳೆಯಂಥ ಅಂಶ ಹೋಗುತ್ತಿದ್ದರೆ ಅದಕ್ಕೆ ಕಾರಣ ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆ ಆಗಿರುವುದೂ ಒಂದು.

ಮೂತ್ರ ಬಣ್ಣ ಹೇಗಿರಬೇಕು?

ಇನ್ನು ಮೂತ್ರದ ಬಣ್ಣ ಗಾಢ ಹಳದಿ, ಕೆಂಪು ಇಲ್ಲವೇ ಬಿಳಿಯದಾಗಿರಬಾರದು. ಮೂತ್ರದ ಬಣ್ಣ ಯಾವಾಗಲೂ ತಿಳಿಹಳದಿಯಾಗಿ ನೆಲ್ಲಿಕಾಯಿಯ ಬಣ್ಣದಲ್ಲಿರಬೇಕು. ನಮ್ಮ ಮೂತ್ರ ಗಾಢ ಹಳದಿಯಾಗಿದ್ದರೆ ನಾವು ನಿರ್ಜಲೀಕರಣಕ್ಕೆ ಒಳಗಾಗುತ್ತಿದ್ದೇವೆ ಎಂದರ್ಥ. ಹಾಗೆಯೇ ಕೆಂಪು ಬಣ್ಣಕ್ಕೆ ತಿರುಗಿದ್ದರೆ (ಒಂದೆರಡು ಬಾರಿ ಹಾಗಿದ್ದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಹಾಗೆಯೇ ಹೆಣ್ಣುಮಕ್ಕಳಿಗೆ ಋತುಸ್ರಾವದ ಸಂದರ್ಭದಲ್ಲಿ, ಗರ್ಭಿಣಿಯರಾಗಿದ್ದಾಗ ಇದು ಅನ್ವಯವಲ್ಲ) ಗಂಭೀರ ಆರೋಗ್ಯ ಸಮಸ್ಯೆಯೂ ಇರಬಹುದು. ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ಮೂತ್ರದ ಬಣ್ಣ ಸ್ವಚ್ಛ ನೀರಿನಂತೆ ಬಿಳಿ ಬಣ್ಣದಲ್ಲಿ ಹೋಗುತ್ತಿದ್ದರೆ, ಒಂದೋ ಅತಿ ನೀರಿನ ಸೇವನೆ ಆಗಿದೆ ಎಂದರ್ಥ, ಇಲ್ಲವೇ ನೀವು ಸೇವಿಸಿದ ದ್ರವ ಪದಾರ್ಥಗಳು ಸರಿಯಾಗಿ ಫಿಲ್ಟರ್ ಆಗದೇ ಇರಬಹುದು.

ಒಟ್ಟಾರೆ, ನಾವು ಕುಡಿಯುವ ನೀರು ಹಾಗೂ ಅದರ ಪ್ರಮಾಣ ನಮ್ಮ ಆರೋಗ್ಯದ ಪ್ರತೀಕ ಎಂಬುದನ್ನು ಮರೆಯಬೇಡಿ.

.ತಿಂದುಂಡು ಸುಖವಾಗಿ: ನಿಜಕ್ಕೂ ಬಿಸಿ ನೀರು ಕುಡಿದರೆ ತೂಕ ಕಡಿಮೆ ಆಗುತ್ತದೆಯೇ?.ತಿಂದುಂಡು ಸುಖವಾಗಿ: ನಿತ್ಯ ಹೊಟ್ಟೆ ನೋಡಿಕೊಂಡರೆ ಸಾಕು; ಬಿಪಿ, ಶುಗರ್ ಮಾಯ!.ತಿಂದುಂಡು ಸುಖವಾಗಿ: ಶುಗರ್, ಬಿಪಿಗಳಿಗೆ ಜೀವನವಿಡೀ ಮಾತ್ರೆ ತಿನ್ನಬೇಕಿಲ್ಲ!.ತಿಂದುಂಡು ಸುಖವಾಗಿ: ಶುಗರ್ ಇದ್ದವರೂ ಹಣ್ಣು ತಿನ್ನಬಹುದು; ಆದರೆ ಇದನ್ನು ಪಾಲಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.