ಊಟದ ತಟ್ಟೆಯು 40:30:30 ಅನುಪಾತದಲ್ಲಿರಲಿ. ಹೀಗಿದ್ದಲ್ಲಿ ದೇಹದ ತೂಕ ನಿರ್ವಹಣೆ ಅತ್ಯಂತ ಸುಲಭ ಎಂಬುದನ್ನು ಹಿಂದಿನ ಲೇಖನದಲ್ಲಿ ನಾನು ವಿವರಿಸಿದ್ದೆ.

ನೀವು ಕೇಳಬಹುದು; ಊಟ ಈ ಅನುಪಾತದಲ್ಲೇ ಏಕಿರಬೇಕು? ಪ್ರೋಟೀನ್ ಜಾಸ್ತಿ ಆದರೆ ಒಳ್ಳೆಯದಲ್ವಾ? ಮಸಲ್ ಇಂಪ್ರೂವ್ ಆಗುತ್ತಲ್ವಾ ಎಂದು. ಹಾಗೇನೂ ಇಲ್ಲ. ಯಾವುದನ್ನು ಇಲ್ಲಿ ಹೆಚ್ಚು ಕಡಿಮೆ ಮಾಡಿಕೊಂಡರೂ ನಮ್ಮ ದೇಹದ ತೂಕದಲ್ಲಿ ಹೆಚ್ಚು ಕಡಿಮೆ ಆಗುತ್ತದೆ. ಹೆಚ್ಚು ಪ್ರೋಟೀನ್ ಸೇವಿಸಿದರೂ ಅದು ಮತ್ತೆ ಫ್ಯಾಟ್ ಆಗಿಯೇ ಪರಿವರ್ತನೆ ಆಗಿ ಇನ್ನೂ ದಪ್ಪ ಆಗುತ್ತೀರ, ನೆನಪಿರಲಿ.

ಹೀಗಾಗಿ ಈ ಅನುಪಾತ ಕೇವಲ ಫ್ಯಾಷನ್ ಡಯಟ್ ಅಲ್ಲ; ದೇಹದ ಮೆಟಾಬಾಲಿಸಮ್, ಹಾರ್ಮೋನ್ ಸಮತೋಲನ ಮತ್ತು ದೀರ್ಘಕಾಲದ ಆರೋಗ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡ ಪೌಷ್ಟಿಕ ಮಾದರಿ. ಇದು ಅರ್ಥವಾಗಬೇಕಾದರೆ ನಾವು ಯಾವ್ಯಾವುದೂ ಏಕೆ ಬೇಕು ಎಂಬುದನ್ನು ತಿಳಿದಕೊಳ್ಳಬೇಕು.
.ತಿಂದುಂಡು ಸುಖವಾಗಿ: ಯಾವುದನ್ನು ಎಷ್ಟು ತಿನ್ನಬೇಕು; ತೂಕ ಇಳಿಸಲು ಊಟದ ಅನುಪಾತ.
ಕಾರ್ಬೋಹೈಡ್ರೇಟ್ – ಶಕ್ತಿಯ ಮುಖ್ಯ ಮೂಲ (40%)

ಕಾರ್ಬೋಹೈಡ್ರೇಟ್ ಅಂದರೆ ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುವ ಪ್ರಮುಖ ಪೋಷಕಾಂಶ. ನಮ್ಮ ಮೆದುಳು ಮತ್ತು ನರಮಂಡಲ ಮುಖ್ಯವಾಗಿ ಗ್ಲೂಕೋಸ್ನನ್ನೇ ಬಳಸುತ್ತವೆ. ನಾವು ಸೇವಿಸುವ ಎಲ್ಲವ ಊ ಗ್ಲೂಕೋಸ್ ಆಗಿಯೇ ವಿಘಟಿತಗೊಳ್ಳುತ್ತದೆ. ಮತ್ತು ನಮ್ಮ ಎಲ್ಲ ಆಹಾರದಲ್ಲೂ ಕಾರ್ಬೋಹೈಡ್ರೇಡ್ ಅಂಶ ಇದ್ದೇ ಇರುತ್ತದೆ. ಅದೇ ಶಕ್ತಿಯ ಮೂಲ. ಆದ್ದರಿಂದ ಕಾರ್ಬೋಹೈಡ್ರೇಟ್ ಆಹಾರದಲ್ಲಿ ಇರಲೇಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಿನ ಪಾಲು ಅದೇ ಆಗಿರಬೇಕು.

ಆದರೆ ಕೇವಲ ಇದನ್ನೇ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಏರುತ್ತದೆ. ಏಕೆಂದರೆ ಇದರ ಗ್ಲೈಸಮಿಕ್ ಇಂಡೆಕ್ಸ್ ಕಡಿಮೆ. ದೇಹ ಅದನ್ನು ನಿಯಂತ್ರಿಸಲು ಹೆಚ್ಚು ಇನ್ಸುಲಿನ್ ಉತ್ಪಾದಿಸುತ್ತದೆ. ಇದರ ಪರಿಣಾಮವಾಗಿ ಕೊಬ್ಬು ಸಂಗ್ರಹ ಹೆಚ್ಚಾಗಬಹುದು. ಹೀಗಾಗಿಯೇ ಕಾರ್ಬೋಹೈಡ್ರೇಟ್ಗಳನ್ನು ಸುಮಾರು 40% ಮಟ್ಟದಲ್ಲಿ ಇಡುವುದು ಸಮತೋಲನದ ಮಾರ್ಗ. ಇಲ್ಲಿ ಹೇಳಲೇಬೇಕಾದ ಸಂಗತಿ ಎಂದರೆ, ಅಕ್ಕಿ ರಾಗಿ, ಜೋಳ, ಹಣ್ಣು ತರಕಾರಿ ಎಲ್ಲವೂ ಕಾರ್ಬೋಹೈಡ್ರೇಡ್ಗಳೇ... ತುಂಬ ಜನ ಅನ್ನ ಮಾತ್ರವೇ ಕಾರ್ಬ್ಸ್ ಎಂದುಕೊಂಡುಬಿಟ್ಟಿದ್ದಾರೆ. ಹೀಗಾಗಿ ಅನ್ನ ತಿನ್ನೋದು ಬಿಟ್ಟಾಕ್ಷಣ ನೀವು ಏನನ್ನೂ ಸಾಧಿಸಿದಂತಾಗುವುದಿಲ್ಲ.
.ತಿಂದುಂಡು ಸುಖವಾಗಿ: ದಿನಾ ಅನ್ನ ತಿಂದರೆ ವೇಟ್ ಲಾಸ್ ಆಗಲ್ವಾ? ದಪ್ಪ ಆಗ್ತಾರಾ?.
ಪ್ರೋಟೀನ್ – ಮಸಲ್ ನಿರ್ಮಾಣ ಮತ್ತು ಅಂಗಾಂಗಗಳ ಮರುಸಂರಚನೆ (30%)

ಪ್ರೋಟೀನ್ ಅನ್ನು ಆಹಾರ ವಿಜ್ಞಾನದಲ್ಲಿ ‘ದೇಹವೆಂಬ ಕಟ್ಟಡದ ಫೌಂಡೇಷನ್ ಕಲ್ಲುಗಳು’ ಎಂದು ಕರೆಯುತ್ತಾರೆ. ಸ್ನಾಯುಗಳು, ಚರ್ಮ, ಹಾರ್ಮೋನ್ಗಳು, ಎಂಜೈಮ್ಗಳು—ಇವೆಲ್ಲವೂ ಪ್ರೋಟೀನ್ನಿಂದಲೇ ನಿರ್ಮಾಣವಾಗುವುದು.

ಪ್ರೋಟೀನ್ ಸೇವನೆಯಿಂದ ನಮ್ಮ ಸ್ನಾಯುಗಳ ಬೆಳವಣಿಗೆ ಉತ್ತಮವಾಗುತ್ತದೆ. ಮೆಟಾಬಾಲಿಸಮ್ ವೇಗವಾಗುತ್ತದೆ. ಹಸಿವನ್ನು ನೀಗಿಸಿ ಹೊಟ್ಟೆ ತುಂಬಿದ ಅನುಭವ ತರುತ್ತದೆ. ಇದರಿಂದ ಪದೇ ಪದೇ ಹಸಿವಾಗಿ, ಮೇಲಿಂದ ಮೇಲೆ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ.

ಫ್ಯಾಟ್ – ದೇಹದ ಆಂತರಿಕ ಅಂಗಾಗಗಳ ಸುಸ್ಥಿರತೆ (30%)

ಹಳೆಯ ಕಾಲದಲ್ಲಿ ಕೊಬ್ಬು ಎಂದರೆ ಹಾನಿಕಾರಕ ಎಂದು ಭಾವಿಸಲಾಗುತ್ತಿತ್ತು. ಹಾಗಂತ ಎಲ್ಲ ಕೊಬ್ಬೂ ಹಾನಿಕರ ಅಲ್ಲ. ಕೊಬ್ಬಿನಲ್ಲಿ ಬ್ಯಾಡ್ ಮತ್ತು ಗುಡ್ ಎಂಬ ಎರಡು ವಿಧಗಳಿರುತ್ತವೆ. ಗುಡ್ ಫ್ಯಾಟ್ ದೇಹದ ನಿರ್ವಹಣೆಗೆ ಬೇಕೇಬೇಕು. ಇದಲ್ಲದೇ ಜೀವಸತ್ವಗಳ (A, D, E, K) ಹೀರಿಕೊಳ್ಳುವಿಕೆಗೆ ಫ್ಯಾಟ್ ಸಹಕಾರಿ, ಮೆದುಳಿನ ಆರೋಗ್ಯ ಮತ್ತು ಕೋಶಗಳ ರಚನೆಯಲ್ಲೂ ಇದು ಪ್ರಮುಖ ಪಾತ್ರವಹಿಸುತ್ತದೆ. ಜೊತೆಗೆ, ಇದು ದೇಹದ ತಾಪಮಾನವನ್ನು ನಿಯಂತ್ರಿಸುತ್ತದೆ ಮತ್ತು ಆಂತರಿಕ ಅಂಗಗಳನ್ನು ರಕ್ಷಿಸುತ್ತದೆ. ಆದರೆ ದೇಹದಲ್ಲಿ ಕೊಬ್ಬಿನ ಶೇಖರಣೆ ಆಗತೊಡಗಿದರೆ, ಅಥವಾ ಕೆಟ್ಟ ಕೊಲೆಸ್ಟರಾಲ್ ಹೆಚ್ಚಿದರೆ ಖಂಡಿತಾ ಅಪಾಯಕಾರಿ.

ನಾರು (ಫೈಬರ್) – ಮರೆತುಹೋಗುವ ನಾಲ್ಕನೇ ಅಂಶ

ಕಾರ್ಬೋಹೈಡ್ರೇಟ್, ಪ್ರೋಟೀನ್, ಫ್ಯಾಟ್—ಈ ಮೂರರ ಜೊತೆಗೆ ನಾರು (ಫೈಬರ್) ಬಹಳ ಮುಖ್ಯವಾದ ನಾಲ್ಕನೇ ಅಂಶ. ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇದಷ್ಟೇ ಅಲ್ಲ ದೇಹದಲ್ಲಿ ಸಂಗ್ರಹವಾಗುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಅದಕ್ಕೇ ಹೇಳಿದ್ದು, ಆಹಾರವೆಂದರೆ ಕೇವಲ ಹೊಟ್ಟೆ ತುಂಬಿಸುವ ಕ್ರಿಯೆಯಲ್ಲ; ಅದು ದೇಹದ ಜೀವಕೋಶಗಳಿಗೂ ಶಕ್ತಿಯ ಮೂಲ. ಕಾರ್ಬೋಹೈಡ್ರೇಟ್, ಪ್ರೋಟೀನ್, ಫ್ಯಾಟ್ ಹಾಗೂ ಫೈಬರ್, ಈ ನಾಲ್ಕೂ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ದೀರ್ಘಕಾಲ ಉಳಿಯುತ್ತದೆ. ಆದ್ದರಿಂದ, 40:30:30 ಅನುಪಾತವನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ರೂಪಿಸುವುದು ತೂಕ ನಿಯಂತ್ರಣದಿಂದ ಹಿಡಿದು ದೀರ್ಘಕಾಲದ ಆರೋಗ್ಯದವರೆಗೆ ಅನೇಕ ಲಾಭಗಳನ್ನು ನೀಡುತ್ತದೆ.
.ತಿಂದುಂಡು ಸುಖವಾಗಿ: ಮೂರು ಹೊತ್ತೂ ಹೀಗೆ ತಿನ್ನಿ, ತೂಕ ಕಡಿಮೆ ಮಾಡಿಕೊಳ್ಳಿ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.