ಆರೋಗ್ಯ ವಿಷಯದಲ್ಲಿ ಇಂದಿಗೂ ಹಲವರು ಅಸಡ್ಡೆ ತೋರುತ್ತಾರೆ. ರೋಗದ ಲಕ್ಷಣಗಳು ತೀವ್ರವಾದಾಗ ಮಾತ್ರ ವೈದ್ಯರ ಬಳಿ ಹೋಗುತ್ತಾರೆ. ಇದರಿಂದಾಗಿ ರೋಗವನ್ನು ಗುಣಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ ಕಾಯಿಲೆ ಉಲ್ಬಣಗೊಂಡು ಮಾರಾಂತಿಕವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅನಾರೋಗ್ಯಕ್ಕೆ ಒಳಗಾದ ಮೊದಲ ಹಂತದಲ್ಲೆ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.

ಇಂದು (ಏಪ್ರಿಲ್ 7) ವಿಶ್ವ ಆರೋಗ್ಯ ದಿನವಾಗಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ.

ಕೆಲವು ಕಾಯಿಲೆಗಳು ಗೌಪ್ಯವಾಗಿಯೇ ನಮ್ಮ ದೇಹಕ್ಕೆ ಹಾನಿ ಮಾಡುತ್ತವೆ. ಉದಾಹರಣೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ಗಳಂತಹ ಕಾಯಿಲೆಗಳು ಆರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳನ್ನು ತೋರಿಸದಿರಬಹುದು. ಆದರೆ ಇವುಗಳನ್ನು ಪತ್ತೆ ಹಚ್ಚಲು ನಿಯಮಿತ ತಪಾಸಣೆ ಮತ್ತು ಪರೀಕ್ಷೆಗಳು ಬೇಕೇ ಬೇಕು. ಆದ್ದರಿಂದ ಆರೋಗ್ಯದಲ್ಲಿ ಸ್ಪಲ್ಪ ಏರುಪೇರಾದರೂ ವೈದ್ಯರನ್ನು ಸಂಪರ್ಕಿಸಬೇಕು.

ತಪಾಸಣೆಯಿಂದ ದೂರ ಉಳಿಯಲು ಕಾರಣಗಳು

ಜಾಗೃತಿಯ ಕೊರತೆ

ರೋಗ ನಿರ್ಧರಿಸುವ ಭಯ

ಹಣಕಾಸಿನ ಕಳವಳ

ವಿರಾಮವಿಲ್ಲದ ಜೀವನಶೈಲಿ

ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು

ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿ

ರಕ್ತದೊತ್ತಡದಂತಹ ಸಮಸ್ಯೆಗಳ ಮೇಲೆ ನಿಗಾವಹಿಸಿ

ಸಮತೋಲಿತ ಆಹಾರ ಸೇವಿಸಿ

ರೋಗದ ಸಣ್ಣ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಲೇಖಕರು: ಡಾ. ಬಸವರಾಜ ಎಸ್. ಕುಂಬಾರ್, ಆಂತರಿಕ ವೈದ್ಯಕೀಯ, ಆಸ್ಟರ್ ವೈಟ್ಫೀಲ್ಡ್ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.