ನಿದ್ದೆ ಮನುಷ್ಯನಿಗೆ ಆಹಾರದಷ್ಟೇ ಮುಖ್ಯವಾದದ್ದು. ನಿದ್ರಾಹೀನತೆಯು ಹತ್ತಾರು ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಸರಿಯಾದ ನಿದ್ದೆ ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ಅಲ್ಲದೇ ಕಣ್ಣುಗಳ ಆರೋಗ್ಯಕ್ಕೂ ಸಹಕಾರಿಯಾಗಿದೆ. ಮಾರ್ಚ್ 13ರಂದು ಜನರಲ್ಲಿ ಆರೋಗ್ಯಕರ ನಿದ್ದೆಯ ಮಹತ್ವ, ನಿದ್ರಾಹೀನತೆಯ ಸಮಸ್ಯೆ ಹಾಗೂ ನಿದ್ದೆಯಿಂದಾಗುವ ಮಾನಸಿಕ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ನಿದ್ರಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಉತ್ತಮ ನಿದ್ದೆಯಿಂದಾಗುವ ಲಾಭಗಳೇನು ಎಂಬುದನ್ನು ತಿಳಿಯೋಣ.

ದೇಹಕ್ಕೆ ಮಾತ್ರವಲ್ಲ, ಕಣ್ಣಿನ ಆರೋಗ್ಯಕ್ಕೂ ಸಹಕಾರಿ

ನಿದ್ದೆಯು ನಮ್ಮ ದೇಹಕ್ಕೆ ಚೈತನ್ಯ ನೀಡುತ್ತದೆ. ನಿದ್ದೆಗೆ ಜಾರಿದಾಗ ನಮ್ಮ ಮಿದುಳು ಮತ್ತು ದೇಹವು ವಿಶ್ರಾಂತಿ ಪಡೆಯುತ್ತದೆ. ನಿದ್ದೆಗೆ ಮುನ್ನ ನಮ್ಮ ಕಣ್ಣುಗಳು ನಿದ್ದೆಯ ಸಮಯವನ್ನು ಗ್ರಹಿಸಿ ಮಿದುಳಿಗೆ ನಿದ್ದೆಯ ಸಮಯವಾಗಿದೆ ಮಲಗು ಎಂಬ ಸಂದೇಶವನ್ನು ರವಾನಿಸುತ್ತದೆ. ನಿದ್ರಾಹೀನತೆಯಿಂದ ಈ ಕಾರ್ಯಕ್ಕೆ ಅಡಚಣೆ ಉಂಟಾಗುತ್ತದೆ. ಇದರಿಂದಾಗಿ ದೀರ್ಘಕಾಲದಲ್ಲಿ ಕಣ್ಣಿನ ದೃಷ್ಟಿ ಸಮಸ್ಯೆ, ಆಯಾಸ ಉಂಟಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ನಿದ್ರಾಹೀನತೆಯಿಂದಾಗುವ ತೊಂದರೆಗಳು..

ಕಣ್ಣು ಕೆಂಪಾಗುವುದು, ನೋವು ಅಥವಾ ಆಯಾಸ ಎನಿಸುವುದು

ಆಲಸ್ಯ

ಕಣ್ಣರೆಪ್ಪೆ ನಡುಗುವುದು

ಮಸುಕಾದ ದೃಷ್ಟಿ

ಕಣ್ಣು ಬೆಳಗಿಗೆ ಒಡ್ಡಿಕೊಳ್ಳಲು ಕಷ್ಟಪಡುವುದು

ದೀರ್ಘಕಾಲ ನಿದ್ರಾಹೀನತೆ ಉಂಟಾದರೆ, ಪ್ರತಿದಿನದ ಕಣ್ಣಿಗೆ ಒತ್ತಡ ಹೆಚ್ಚಾಗುತ್ತದೆ.

ಉತ್ತಮ ನಿದ್ದೆಗಾಗಿ ಈ ಅಭ್ಯಾಸಗಳನ್ನು ಪಾಲಿಸಿ.

ಪ್ರತಿದಿನ ನಿಗದಿತ ಸಮಯಕ್ಕೆ ಮಲಗುವುದು ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಿ.

ಶಾಂತ ಮತ್ತು ಆರಾಮದಾಯಕ ಕೋಣೆಯನ್ನು ನಿದ್ದೆಗೆ ಆರಿಸಿಕೊಳ್ಳಿ.

ರಾತ್ರಿ ವೇಳೆ ಸ್ಕ್ರೀನ್ ಬಳಸುವಾಗ, ಸಂಪೂರ್ಣ ಕತ್ತಲಲ್ಲಿ ಬಳಸಬೇಡಿ, ಸ್ವಲ್ಪ ಬೆಳಕಿನಲ್ಲಿ ಬಳಸುವುದು ಸೂಕ್ತ.

ಮೊಬೈಲ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ಗಳಿಂದ ಬರುವ ನೀಲಿ ಬೆಳಕನ್ನು ತ್ವರಿತವಾಗಿ ಕಡಿಮೆ ಮಾಡಿ.

ಮಲಗುವ ಮೊದಲು ಕನಿಷ್ಠ ಒಂದು ಗಂಟೆ ಮೊದಲ ಸ್ಕ್ರೀನ್ ಬಳಸುವುದನ್ನು ನಿಲ್ಲಿಸಿ.

20-20-20 ನಿಯಮ ಪಾಲಿಸಿ (ಪ್ರತಿ 20 ನಿಮಿಷಕ್ಕೊಮ್ಮೆ, 20 ಅಡಿ ದೂರ ನೋಡಿ, 20 ಸೆಕೆಂಡು)

ರಾತ್ರಿ ಮೋಡ್ ಬಳಕೆ ಸೂಕ್ತವಾಗಿದೆ.

ಲೇಖಕರು: ಡಾ. ಭವ್ಯಾ ರೆಡ್ಡಿ, ಸಲಹಾ ವೈದ್ಯರು, ನೇತ್ರ ವಿಜ್ಞಾನ, ಆಸ್ಟರ್ ವೈಟ್ಫೀಲ್ಡ್ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.