ಜಾರ್ಜ್ ಆರ್ವೆಲ್ ಎಂಬಾತ 1947ರಲ್ಲಿ ಸ್ಕಾಟ್ಲೆಂಡ್ನ ನಿರ್ಜನ ಪ್ರದೇಶವಾದ ಜುರಾ ಎಂಬ ದ್ವೀಪದ ಫಾರ್ಮ್ ಹೌಸ್ ಒಂದರಲ್ಲಿ ಬೆರಳಚ್ಚು ಯಂತ್ರದ ಮುಂದೆ ಕುಳಿತು ತನ್ನ ಜೀವನದ ಶ್ರೇಷ್ಠ ಕೃತಿ ‘1984' ಅನ್ನು ಪೂರ್ಣಗೊಳಿಸಲು ಹೋರಾಟ ನಡೆಸುತ್ತಿದ್ದರು. ಅಷ್ಟರಲ್ಲಾಗಲೆ ‘ಪ್ಲೇಗ್’ ಎಂಬ ರೋಗವು ಅವರ ಶ್ವಾಸಕೋಶವನ್ನು ಹೊಕ್ಕಿತ್ತು.

ಬಿಹಾರದ ಮೋತಿಹಾರಿಯಲ್ಲಿ ಜನಿಸಿದ ಜಾರ್ಜ್ ಆರ್ವೆಲ್ ಅವರು ಕ್ಷಯರೋಗದಿಂದ ಬಳಲುತ್ತಿದ್ದರು. ಅವರನ್ನು ವಿಪರೀತ ಕೆಮ್ಮು ಆವರಿಸಿಕೊಂಡಿತ್ತು. ಕೆಮ್ಮಿದಾಗ ರಕ್ತ ಬರುತ್ತಿತ್ತು. ಜೊತೆಗೆ ವಿಪರೀತ ಸುಸ್ತಿನಿಂದ ಪದೇ ಪದೇ ಕುಸಿದು ಬೀಳುತ್ತಿದ್ದರು. ಆದರೂ ಅವರು ಟೈಪ್ ಮಾಡುವುದನ್ನು ನಿಲ್ಲಿಸಿರಲಿಲ್ಲ. ಅವರು ಡಿಸೆಂಬರ್ ತಿಂಗಳಿನಲ್ಲಿ ‘1948’ ರಲ್ಲಿ ಪುಸ್ತಕವನ್ನು ಪೂರ್ಣಗೊಳಿಸಿದರು. ಅದಾರ ಒಂದು ವರ್ಷದ ನಂತರ ನಿಧನರಾದರು.

ಆರ್ವೆಲ್ ಅವರ ಈ ಪುಸ್ತಕವು ಕ್ಷಯರೋಗದಿಂದ ವಲಸೆ ಹೋದವರ ಅಥವಾ ಅಸಹಾಯಕರ ಕಾಯಿಲೆಯಾಗಿದೆ ಎಂಬುದನ್ನು ಒಂದು ನೆನಪಿಸುವುದಾಗಿದೆ.

ವಿಶ್ವ ಕ್ಷಯರೋಗ ದಿನವನ್ನು ಪ್ರತಿ ವರ್ಷ ಮಾರ್ಚ್ 24 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಡಾ. ರಾಬರ್ಟ್ ಕೋಚ್ ಎಂಬುವವರು ಕ್ಷಯ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಸಂಶೋಧಿಸಿದ್ದರಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಕ್ಷಯ ರೋಗದ ನಿರ್ಮೂಲನೆ ಜತೆಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಪ್ರತಿ ವರ್ಷ ವಿಶ್ವ ಕ್ಷಯರೋಗ ದಿನದಂದು ಹೌದು! ನಾವು ಕ್ಷಯರೋಗವನ್ನು ಕೊನೆಗಾಣಿಸಬಹುದು: ದೇಶಗಳ ನೇತೃತ್ವದಲ್ಲಿ, ಜನರ ಶಕ್ತಿಯಿಂದ’ ಎಂಬ ಆಶಯದೊಂದಿಗೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕ್ಷಯರೋಗ ನಿರ್ಮೂಲನೆಯ ಹಾದಿಯಲ್ಲಿರುವ ಸವಾಲುಗಳ ಕುರಿತು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.

ಪ್ರಸಿದ್ಧ ಲೇಖಕ ಜಾರ್ಜ್ ಆರ್ವೆಲ್ ಅವರ ಕಾಲದಲ್ಲಿ ಇಲ್ಲದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಮತ್ತು ತಂತ್ರಜ್ಞಾನಗಳು ಇಂದು ಲಭ್ಯವಿವೆ. ಆದರೆ, ದುರದೃಷ್ಟವಶಾತ್ ಜಾಗತಿಕ ಮಟ್ಟದ ನಿರ್ವಹಣಾ ವಿಧಾನಗಳು ಇನ್ನೂ ಹಳೆಯ ಪದ್ಧತಿಗಳಲ್ಲೇ ಸಿಲುಕಿಕೊಂಡಿವೆ. ಇಂದು ನಮ್ಮ ತಾಂತ್ರಿಕ ಸಾಮರ್ಥ್ಯವು ಕಾರ್ಯಾಚರಣೆಯ ಸಾಮರ್ಥ್ಯಕ್ಕಿಂತ ಬಹಳಷ್ಟು ಮುಂದಿದೆ. ಅಂದರೆ, ರೋಗವನ್ನು ಪತ್ತೆಹಚ್ಚುವ ಮತ್ತು ಗುಣಪಡಿಸುವ ಆಧುನಿಕ ಉಪಕರಣಗಳಿದ್ದರೂ, ಅವುಗಳನ್ನು ಜನರಿಗೆ ತಲುಪಿಸುವಲ್ಲಿ ವ್ಯವಸ್ಥೆಯು ವಿಫಲವಾಗುತ್ತಿದೆ.

ಈ ಮಾರಕ ಕಾಯಿಲೆಯನ್ನು ಸಂಪೂರ್ಣವಾಗಿ ಕೊನೆಗಾಣಿಸಲು, ನಾವು ಕ್ಷಯರೋಗವನ್ನು ಕೇವಲ ಸಂಕುಚಿತ ವೈದ್ಯಕೀಯ ದೃಷ್ಟಿಕೋನದಿಂದ ನೋಡುವುದನ್ನು ನಿಲ್ಲಿಸಬೇಕು. ಕೇವಲ ಔಷಧ ನೀಡಿದರೆ ಸಾಲದು, ಬದಲಿಗೆ ಲಕ್ಷಾಂತರ ಜನರನ್ನು ಚಿಕಿತ್ಸೆಯ ಜಾಲದಿಂದ ಹೊರಗಿಡುತ್ತಿರುವ ವ್ಯವಸ್ಥಿತ ಅಸಮರ್ಥತೆಗಳನ್ನು ಮೊದಲು ಸರಿಪಡಿಸಬೇಕಿದೆ. ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ಚಿಕಿತ್ಸೆಯಿಂದ ವಂಚಿತರಾಗುತ್ತಿರುವವರನ್ನು ಗುರುತಿಸಿ, ಅವರಿಗೆ ಸುಲಭವಾಗಿ ಚಿಕಿತ್ಸೆ ಸಿಗುವಂತೆ ಮಾಡುವುದೇ ಇಂದಿನ ತುರ್ತು ಅಗತ್ಯವಾಗಿದೆ.

ವೈಜ್ಞಾನಿಕ ಕ್ರಾಂತಿ

ಕ್ಷಯರೋಗ (ಡಿಆರ್-ಟಿಬಿ) ಪತ್ತೆಯಾದರೆ ಚಿಕಿತ್ಸೆ ನೀಡಿದ ನಂತರವೂ ಸಾವು ಹತ್ತಿರದಲ್ಲಿದೆ ಎಂದೇ ಅರ್ಥೈಸಿಕೊಳ್ಳಲಾಗುತ್ತಿತ್ತು. ರೋಗಿಗಳು ಸಾವಿರಾರು ಮಾತ್ರೆಗಳು ಮತ್ತು ಪ್ರತಿದಿನ ನೋವಿನ ಇಂಜೆಕ್ಷನ್ಗಳನ್ನು ಒಳಗೊಂಡ 18 ರಿಂದ 24 ತಿಂಗಳ ಸುದೀರ್ಘ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗಿತ್ತು. ಇದರಿಂದ ಸಾಮಾನ್ಯವಾಗಿ ಕಿವುಡುತನದಂತಹ ಶಾಶ್ವತ ಅಡ್ಡಪರಿಣಾಮಗಳು ಉಂಟಾಗುತ್ತಿದ್ದವು.

ಔಷಧ-ನಿರೋಧಕ ಕ್ಷಯರೋಗದ (ಡಿಆರ್-ಟಿಬಿ) ವಿರುದ್ಧದ ಹೋರಾಟದಲ್ಲಿ 'ಬಿಪಿಎಎಲ್ಎಂ' ಚಿಕಿತ್ಸಾ ಕ್ರಮವು ಹೊಸ ಆಶಾದಾಯಕ ಬೆಳವಣಿಗೆಯಾಗಿ ಹೊರಹೊಮ್ಮಿದೆ. ಬೆಡಾಕ್ವಿಲಿನ್, ಪ್ರೆಟೋಮನಿಡ್, ಲಿನೆಜೋಲಿಡ್ ಮತ್ತು ಮೊಕ್ಸಿಫ್ಲೋಕ್ಸಾಸಿನ್ ಎಂಬ ನಾಲ್ಕು ಔಷಧಿಗಳ ಈ ಸಂಯೋಜನೆಯು ವೈದ್ಯಕೀಯ ಲೋಕದಲ್ಲಿ ಒಂದು 'ಪವಾಡ' ಎಂದೇ ಬಿಂಬಿತವಾಗುತ್ತಿದೆ.

ಈ ಚಿಕಿತ್ಸೆಯ ಪ್ರಮುಖ ವಿಶೇಷತೆಯೆಂದರೆ, ಇದು ಕೇವಲ ಮಾತ್ರೆಗಳ ಮೂಲಕ ನೀಡಲಾಗುವ ಚಿಕಿತ್ಸೆಯಾಗಿದ್ದು, ಗುಣಮುಖವಾಗುವ ಅವಧಿಯನ್ನು ಕೇವಲ 6 ತಿಂಗಳಿಗೆ ಇಳಿಸಿದೆ. ಈ ಹಿಂದೆ ರೋಗಿಗಳು ದೀರ್ಘಕಾಲದವರೆಗೆ ಕಠಿಣ ಚಿಕಿತ್ಸೆ ಪಡೆಯಬೇಕಿತ್ತು. ಆದರೆ ಈಗ ಈ ಹೊಸ ವಿಧಾನವು ಆ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಆದರೆ, ಕೇವಲ ಮಾತ್ರೆಗಳಿಂದ ಮಾತ್ರವೇ ವ್ಯವಸ್ಥೆಯ ದೋಷಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕಿದೆ.

ಕೇವಲ 'ವೈದ್ಯಕೀಯ ಯಶಸ್ಸು' ಮತ್ತು 'ಸಾಮಾಜಿಕ ಯಶಸ್ಸಿನ' ನಡುವಿನ ವ್ಯತ್ಯಾಸವನ್ನು ಗಮನಿಸಬೇಕಿದೆ. ಒಬ್ಬ ರೋಗಿಯು ವೈದ್ಯಕೀಯವಾಗಿ ಬ್ಯಾಕ್ಟೀರಿಯಾದಿಂದ ಮುಕ್ತನಾಗಬಹುದು. ಆದರೆ ಆ ಆರು ತಿಂಗಳ ಚಿಕಿತ್ಸೆಯ ಅವಧಿಯಲ್ಲಿ ಆತ ತನ್ನ ಕೆಲಸವನ್ನು ಕಳೆದುಕೊಂಡರೆ ಅಥವಾ ಸಾಮಾಜಿಕ ಒತ್ತಡಕ್ಕೆ ಒಳಗಾದರೆ, ಪೂರ್ಣ ವ್ಯವಸ್ಥೆಯ ವೈಫಲ್ಯವನ್ನೇ ಎತ್ತಿ ತೋರಿಸುತ್ತದೆ. ಆದ್ದರಿಂದ, ಕ್ಷಯರೋಗ ನಿರ್ಮೂಲನೆಯಲ್ಲಿ ಕೇವಲ ಔಷಧೋಪಚಾರವಷ್ಟೇ ಅಲ್ಲದೆ, ರೋಗಿಗಳಿಗೆ ಸಾಮಾಜಿಕ ಭದ್ರತೆ ಮತ್ತು ಗೌರವಯುತ ಬದುಕು ನೀಡುವ ವ್ಯವಸ್ಥಿತ ಬದಲಾವಣೆಯೂ ಅಷ್ಟೇ ಅಗತ್ಯವಾಗಿದೆ.

ಪುರುಷರು ಏಕೆ ಚಿಕಿತ್ಸೆಯಿಂದ ದೂರ ಉಳಿಯುತ್ತಿದ್ದಾರೆ?

ಅಂಕಿ ಅಂಶಗಳ ಪ್ರಕಾರ, ಕ್ಷಯರೋಗದಿಂದ ಅತಿ ಹೆಚ್ಚು ತೊಂದರೆಗೊಳಗಾಗುವುದು ಪುರುಷರು. ಆದರೆ ಅವರು ಚಿಕಿತ್ಸೆ ಪಡೆಯುವಂತೆ ಮಾಡುವುದು ಅತ್ಯಂತ ಕಷ್ಟಕರ ಕೆಲಸವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತಿಕವಾಗಿ ಒಟ್ಟು ಕ್ಷಯರೋಗ ಪ್ರಕರಣಗಳಲ್ಲಿ ಪುರುಷರ ಪಾಲು ಸರಿಸುಮಾರು ಶೇ. 55 ರಷ್ಟಿದೆ. ಆ ಪೈಕಿ ಮಹಿಳೆಯರ ಪಾಲು ಶೇ. 33 ಮತ್ತು ಮಕ್ಕಳ ಪಾಲು ಶೇ. 12 ರಷ್ಟಿದೆ.

ಇದು ಕೇವಲ ಜೈವಿಕ ಆಕಸ್ಮಿಕವಲ್ಲ; ಇದೊಂದು ರಚನಾತ್ಮಕ ವೈಫಲ್ಯವೆಂಬುದೇ ಸರಿ. ಪುರುಷರಿಗೆ ಸಂಬಂಧಿಸಿದ ಸಾಮಾಜಿಕ ನಿಯಮಗಳು ಕಾಯಿಲೆ ಉಲ್ಬಣಗೊಳ್ಳುವವರೆಗೆ ಅವರು ಚಿಕಿತ್ಸೆ ಪಡೆಯದಂತೆ ತಡೆಯುತ್ತವೆ. ಕುಟುಂಬದ ಪ್ರದಾನ ದುಡಿಯುವವರಾದ ಕಾರಣ, ರೋಗಪತ್ತೆಯಾದರೆ ಎಲ್ಲಿ ವೇತನ ಅಥವಾ ಸಂಬಳ ಕಳೆದುಕೊಳ್ಳುತ್ತೇವೋ ಎಂಬ ಭಯ ಮತ್ತು ಸಾಮಾಜಿಕ ಒತ್ತಡ ಅವರನ್ನು ಆಸ್ಪತ್ರೆಗೆ ಭೇಟಿ ನೀಡದಂತೆ ತಡೆಯುತ್ತವೆ.

ಸೈಲೋ ಸಿಸ್ಟಮ್ ಮತ್ತು ಆರ್ಥಿಕ ವಾಸ್ತವ

ಕ್ಷಯರೋಗವನ್ನು ಪ್ರತ್ಯೇಕವಾಗಿ ಪರಿಗಣಿಸಿ ಚಿಕಿತ್ಸೆ ನೀಡುವುದು ಹಳೆಯ ತಂತ್ರವಾಗಿದೆ. ರೋಗಿಗಳು ಇಂದು ಎರಡು ರೀತಿಯ ಹೊರೆಯನ್ನು ಅನುಭವಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಕ್ಷಯರೋಗವು ಸಾಮಾನ್ಯವಾಗಿ ಮಧುಮೇಹ, ಅಪೌಷ್ಟಿಕತೆ ಅಥವಾ ಎಚ್ಐವಿ ಜೊತೆಗೂಡಿ ಬರುವ ಸಾಧ್ಯತೆಯೂ ಇರುತ್ತದೆ.

ಮಧುಮೇಹ: ಇದು ಕ್ಷಯರೋಗದ ಅಪಾಯವನ್ನು ಎರಡರಿಂದ ಮೂರು ಪಟ್ಟು ಹೆಚ್ಚಿಸುತ್ತದೆ.

ಎಚ್ಐವಿ: ಎಚ್ಐವಿ ಪೀಡಿತರು ಕ್ಷಯರೋಗಕ್ಕೆ ತುತ್ತಾಗುವ ಸಾಧ್ಯತೆ ಶೇ. 16 ಪಟ್ಟು ಹೆಚ್ಚು.

ಇಷ್ಟಾದರೂ, ನಮ್ಮ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಗಳು ಇಂದಿಗೂ ಹಳೆಯ ಪದ್ಧತಿಯಲ್ಲೇ ಉಳಿದಿವೆ. ಈ ಸಂದರ್ಭದಲ್ಲಿ ಚಿಕಿತ್ಸೆಯು ಕೇವಲ ವೈರಸ್ಗೆ ಮಾತ್ರವಲ್ಲದೆ, ಇಡೀ ವ್ಯಕ್ತಿಗೆ ಸಮಗ್ರವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ.

ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದರೆ ನಾವು ಕೇವಲ ರೋಗಿಯ ಶ್ವಾಸಕೋಶದ ಕಡೆಗೆ ಗಮನಹರಿಸಿದರೆ ಸಾಲದು. ಬದಲಿಗೆ ಆ ರೋಗದಿಂದ ಬಾಧಿತರಾದವರ ಒಟ್ಟಾರೆ ಜೀವನದ ಕಡೆಗೆ ದೃಷ್ಟಿ ಹರಿಸಬೇಕಾಗುತ್ತದೆ.

ಈ ರೋಗದ ಅಂತ್ಯವು ಕೇವಲ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯವಲ್ಲ, ವಿಶ್ವ ಕ್ಷಯರೋಗ ದಿನದ ಈ ಸಂದರ್ಭದಲ್ಲಿ ನಾವು ಕೇವಲ ನಮ್ಮ ಬದ್ಧತೆಗಳನ್ನು ಕಾಗದದ ಮೇಲೆ ನವೀಕರಿಸಿದರೆ ಸಾಲದು. ಬದಲಿಗೆ, ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಹೆಚ್ಚು ಹೊಣೆಗಾರರನ್ನಾಗಿ ಮಾಡುವ ಅಗತ್ಯವಿದೆ. ಇಂದು ಕ್ಷಯರೋಗ ಚಿಕಿತ್ಸೆಯ ವೆಚ್ಚ ವಿಪರೀತವಾಗಿರಲು ಕಾರಣ ಔಷಧಗಳಲ್ಲ, ಬದಲಿಗೆ ಆ ಔಷಧಗಳನ್ನು ವಿತರಿಸಲಾಗುತ್ತಿರುವ ಜಾಲವೇ ಕಾರಣವಾಗಿದೆ.

ಲೇಖಕರು; ಡಾ. ಸಾಗರ್. ಸಿ ಕನ್ಸಲ್ಟೆಂಟ್, ಪಲ್ಮನಾಲಜಿ, ನಾರಾಯಣ ಹೆಲ್ತ್ ಸಿಟಿ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.