ಶನಿವಾರ, ಮಾರ್ಚ್ 25, 2023
28 °C

ಜುಲೈ 6 ವಿಶ್ವ ಝೂನೋಸಸ್ ದಿನ: ಏನು ವಿಶೇಷ? ಆಚರಣೆ ಯಾಕೆ?

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

PTI file photo

ಬೆಂಗಳೂರು: ಜಾಗತಿಕವಾಗಿ ಜುಲೈ 6 ಅನ್ನು ವಿಶ್ವ ಝೂನೋಸಸ್ ಡೇ ಎಂದು ಆಚರಿಸಲಾಗುತ್ತದೆ. ಪ್ರಾಣಿಗಳಿಂದ ವೈರಸ್ ಮೂಲಕ ಮನುಷ್ಯನ ದೇಹಕ್ಕೆ ರೋಗ ಹರಡುವುದನ್ನು ಝೂನೋಸಸ್ ಎಂದು ಕರೆಯಲಾಗುತ್ತದೆ.

ಜುಲೈ 6, ಎಬೋಲಾ, ಏವಿಯನ್ ಇನ್‌ಫ್ಲುಯೆಂಜಾ ಮತ್ತು ವೆಸ್ಟ್ ನೈಲ್ ವೂರಸ್ ಮುಂತಾದ ವೈರಸ್ ಮೂಲಕ ಹರಡುವ ಕಾಯಿಲೆ ತಡೆಯಲು ಮೊದಲು ಲಸಿಕೆ ನೀಡಲಾದ ದಿನವಾಗಿದ್ದು, ಅದರ ನೆನಪಿಗೆ ವಿಶ್ವ ಝೂನೋಸಸ್ ದಿನವನ್ನಾಗಿ ಆಚರಿಸುವ ರೂಢಿಯಿದೆ.

ಕೊರೋನಾ ವೈರಸ್

ಬ್ಯಾಕ್ಟೀರಿಯಾ, ವೈರಸ್ ಅಥವಾ ಪ್ಯಾರಾಸಿಟಿಕ್ ರೂಪದಲ್ಲಿ, ನೇರವಾಗಿ ಮತ್ತು ಪರೋಕ್ಷವಾಗಿ, ಆಹಾರ, ನೀರು, ಪರಿಸರದ ಮೂಲಕ ಮನುಷ್ಯನಿಗೆ ವಿವಿಧ ರೋಗಗಳು ಹರಡುತ್ತವೆ. ಅದರಲ್ಲೂ ಕೊರೋನಾ ವೈರಸ್‌ನಂತಹ ಕಾಯಿಲೆ ಜಾಗತಿಕವಾಗಿ ಮನುಷ್ಯನ್ನು ಹೆಚ್ಚಾಗಿ ಬಾಧಿಸಿದೆ.

ಮೊದಲ ಲಸಿಕೆ

ಜುಲೈ 6, 1885ರಂದು ಫ್ರಾನ್ಸ್‌ನ ಜೀವಶಾಸ್ತ್ರಜ್ಞ ಲೂಯಿ ಪಾಶ್ಚರ್ ಮೊದಲ ಬಾರಿಗೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್‌ ಕಾಯಿಲೆಗೆ ಲಸಿಕೆ ನೀಡಿದ್ದರು.

ಪ್ರಾಣಿಗಳಿಂದ ಹರಡುವಿಕೆ

ವೈರಸ್ ಮತ್ತು ಬ್ಯಾಕ್ಟೀರಿಯ ಮೂಲಕ ಹರಡುವ ಶೇ 75ರಷ್ಟು ಕಾಯಿಲೆಗಳು, ಪ್ರಾಣಿಗಳಿಂದ ಬರುತ್ತವೆ ಎಂದು ತಜ್ಞರು ಹೇಳಿದ್ದಾರೆ.

ಸಾಕುಪ್ರಾಣಿಗಳು, ಮಾಂಸ, ಬೇಟೆ ಮತ್ತು ಸೋಂಕು ಇರುವ ಪ್ರಾಣಿ-ಪಕ್ಷಿಗಳ ಜತೆಗಿನ ಒಡನಾಟದಿಂದಲೂ ವೈರಸ್ ಸುಲಭದಲ್ಲಿ ಹರಡಿ ಮಾನವನ ದೇಹ ಪ್ರವೇಶಿಸುತ್ತದೆ.

ಪರಿಹಾರ ಏನಿದೆ?

ಕಾಯಿಲೆ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯಿಂದ ವೈರಸ್ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಬಹುದು. ಅಲ್ಲದೆ, ಸಾಂಕ್ರಾಮಿಕದ ಸಂದರ್ಭದಲ್ಲಿ ಆರೋಗ್ಯ ಇಲಾಖೆ, ವೈದ್ಯರ ಸಲಹೆ ಪಾಲಿಸುವ ಮೂಲಕವೂ ರೋಗದಿಂದ ದೂರವಿರಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು