7

ವಜ್ರಾಸನದಿಂದ ದೇಹಕ್ಕೆ ವಜ್ರದ ಭಲ

Published:
Updated:
ವಜ್ರಾಸನದ ಭಂಗಿ.

ಇದೊಂದು ಸುಲಭ ಸರಳ ಆಸನವಾಗಿದೆ. ಇದಕ್ಕೆ ಸಿಡಿಲು ಭಂಗಿ ಎಂಬ ಹೆಸರಿದೆ.

ಅಭ್ಯಾಸ ಕ್ರಮ: ಎರಡು ಕಾಲುಗಳನ್ನು ಹಿಂದಕ್ಕೆ ಮಡಚಿ ಕುಳಿತುಕೊಳ್ಳಬೇಕು. ಪಾದಗಳು ಮೇಲ್ಮುಖವಾಗಿರಬೇಕು. ಕಾಲ ಹೆಬ್ಬೆರಳು ಒಂದಕ್ಕೊಂದು ತಗಲುವಂತಿರಬೇಕು. ಕೈಗಳನ್ನು ನೇರವಾಗಿ ಚಾಚಿ ಆಯಾ ಮಂಡಿಗಳ ಮೇಲಿರಿಸಬೇಕು. (ಕೈಗಳು ಚಿನ್ಮುದ್ರೆಯಲ್ಲಿರಲಿ). ಬೆನ್ನು ಕುತ್ತಿಗೆ, ತಲೆ ನೇರವಾಗಿರಬೇಕು. ಈ ಆಸನದಲ್ಲಿ ಸಮ ಉಸಿರಾಟ ನಡೆಸುತ್ತಾ 1 ನಿಮಿಷದಿಂದ 3 ನಿಮಿಷಗಳವರಿಗೆ ಇರಬೇಕು. ಅನಂತರ ತುಸು ವಿಶ್ರಾಂತಿ.

ಉಪಯೋಗಗಳು: ವಜ್ರಾಸನ ಅಭ್ಯಾಸ ಮಾಡುವುದರಿಂದ ಮೊಣಕಾಲು ನೋವು, ಪಾದಗಳ ಗಂಟಿನ ನೋವು ಕಾಲುಗಳ ಸೆಳೆತ ಇತ್ಯಾದಿ ನಿವಾರಣೆಯಾಗುತ್ತವೆ. ವಜ್ರಾಸನದಲ್ಲಿ ಕುಳಿತುಕೊಂಡಾಗ ಬೆನ್ನು ನೇರವಾಗುವುದಲ್ಲದೆ, ಬೆನ್ನು ನೋವು, ಸೆಳೆತ ಇತ್ಯಾದಿ ಕಡಿಮೆಯಾಗುತ್ತದೆ. ಪ್ರಾಣಾಯಾಮ ಮತ್ತು ಧ್ಯಾನ ಮಾಡಲು ಈ ಆಸನವು ಬಹಳ ಉಪಯುಕ್ತ. ಬೆನ್ನು ಕೈ ಕಾಲುಗಳಿಗೆ ಲಘುತ್ವ ಉಂಟಾಗುವುದು. ಉಸಿರಾಟ ನಿರಾಯಾಸವಾಗುವುದು. ದೇಹವನ್ನು ವಜ್ರದಂತೆ ಕಾಪಾಡುವ ಆಸನವೇ ವಜ್ರಾಸನ. ಮಲಬದ್ಧತೆ ನಿವಾರಿಸಲು ಈ ಆಸನ ಸಹಕಾರಿ. ವಾತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ನಿಯಂತ್ರಗೊಳ್ಳುತ್ತದೆ. ವಜ್ರಾಸನದಲ್ಲಿ ಕುಳಿತುಕೊಂಡು ಪ್ರಾರ್ಥನೆ, ಪ್ರಾಣಾಯಾಮ, ಓಂಕಾರ ಧ್ಯಾನ, ಇತ್ಯಾದಿ ಅಭ್ಯಾಸ ಮಾಡಬಹುದಾಗಿದೆ.

ವಿ.ಸೂ : ತೀವ್ರ ಮಂಡಿನೋವು ಗಾಯಗಳಿದ್ದರೆ ಈ ಆಸನ ಅಭ್ಯಾಸ ಬೇಡ.

 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !