16 ರಿಂದ 24 ವರ್ಷದವರಲ್ಲೇ ಹೆಚ್ಚು ಒಂಟಿತನ: ಸಮೀಕ್ಷೆ

7

16 ರಿಂದ 24 ವರ್ಷದವರಲ್ಲೇ ಹೆಚ್ಚು ಒಂಟಿತನ: ಸಮೀಕ್ಷೆ

Published:
Updated:

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಒಂಟಿತನ ಎಂಬುದು ಬದುಕಿಗೆ ಪೆಡಂಭೂತವಾಗಿ ಕಾಡುತ್ತಿದೆ. ಜೀವನ ಶೈಲಿಯ ಬದಲಾವಣೆ, ಸಂವಹನ ಕೊರತೆ, ಅವಿಶ್ವಾಸ ಮನೋಭಾವ ಹೀಗೆ ಹಲವಾರು ಕಾರಣಗಳಿಂದಾಗಿ ಒಂಟಿತನ ಆವರಿಸಬಹುದು.

ಆದರೆ ಇಂತಹ ಸಮಯಗಳಲ್ಲಿ ಒಂಟಿತನ ಯಾರಲ್ಲಿ ಹೆಚ್ಚು ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಇದಕ್ಕೆ ಇತ್ತೀಚೆಗಿನ ಬಿಬಿಸಿ ಸಮೀಕ್ಷೆಯು ಉತ್ತರ ಕೊಟ್ಟಿದ್ದು, ಒಂಟಿತನ 16 ರಿಂದ 24 ವರ್ಷದವರಲ್ಲೇ ಅಧಿಕ ಎಂದು ಹೇಳಿದೆ. 

ಹಿಂದೆ ಈ ಸಮಸ್ಯೆ ಇಳಿವಯಸ್ಸಿನವರಲ್ಲಿ ಹೆಚ್ಚಾಗಿತ್ತು.  ಈ ಪ್ರಮಾಣದಲ್ಲಿ ಏರುಪೇರಾಗಿದ್ದು, 16 ರಿಂದ 24 ವರ್ಷದ ಶೇ40ರಷ್ಟು ಮಂದಿ ಇದರಲ್ಲಿ ಸಿಲುಕುತ್ತಾರೆ.  75 ವರ್ಷಕ್ಕೂ ಮೇಲ್ಪಟ್ಟವರು ಶೇ 27 ಮಾತ್ರ ಎಂದು ಸಮೀಕ್ಷೆ ಹೇಳುತ್ತದೆ. 

ಬಿಬಿಸಿಯು 55000ಕ್ಕೂ ಹೆಚ್ಚು ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿತ್ತು. ಈ ವೇಳೆ ತಾರತಮ್ಯವೇ ಒಂಟಿತನದ ಮೂಲ ಎಂಬ ಅಂಶ ತಿಳಿಯಿತು. 

ಒಂಟಿತನಕ್ಕೆ ಪ್ರಮುಖ ಕಾರಣಗಳು: 
* ಸಂವಹನದ ಕೊರತೆ
* ಪ್ರಪಂಚದೊಂದಿಗೆ ಸಂಬಂಧವಿಲ್ಲದಂತೆ ಬದುಕುವುದು
* ಅತಿಯಾದ ದುಃಖ
* ಭಾವನೆಗಳನ್ನು ಅರ್ಥಮಾಡಿಕೊಳ್ಳದಿರುವುದು

ಒಂಟಿತನದಿಂದ ದೂರವಿರುವುದು ಹೇಗೆ?
* ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗುವುದು ಹಾಗೂ ಅಧ್ಯಯನದಲ್ಲಿ ತೊಡಗುವುದು, ಉತ್ತಮ ಹವ್ಯಾಸ ಬೆಳೆಸಿಕೊಳ್ಳುವುದು
* ಸಾಮಾಜಿಕ ಸಂಘಗಳಿಗೆ ಸೇರಿ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವುದು
* ಸಕಾರಾತ್ಮಕ ಯೋಚನೆ ಬೆಳೆಸಿಕೊಳ್ಳುವುದು
* ಸಂವಹನ ಕೌಶಲ್ಯ ಬೆಳೆಸಿಕೊಳ್ಳುವುದು 
* ನಮ್ಮ ಭಾವನೆಗಳನ್ನು ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹಂಚಿಕೊಳ್ಳುವುದು
* ಭೇಟಿಯಾಗುವ ಪ್ರತಿಯೊಬ್ಬರಲ್ಲೂ ಒಳ್ಳೆಯತನವನ್ನು ಹುಡುಕುವುದು
* ಒಂಟಿತನದ ಬಗ್ಗೆ ಸ್ವಯಂ ಅವಲೋಕನಕ್ಕೆ ಒಳಗಾಗುವುದು

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !