ಮಳೆ: ವಿಮಾನ ಹಾರಾಟ ರದ್ದು

7

ಮಳೆ: ವಿಮಾನ ಹಾರಾಟ ರದ್ದು

Published:
Updated:

ಬೀಜಿಂಗ್‌: ನೈರುತ್ಯ ಚೀನಾದ ಸಿಚುವಾನ್‌ ಪ್ರಾಂತ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ 9,000ಕ್ಕೂ ಹೆಚ್ಚು ವಿಮಾನ ಪ್ರಯಾಣಿಕರು ಬುಧವಾರ ತೊಂದರೆಗೆ ಸಿಲುಕಿದರು. 

ಮಳೆಯಿಂದಾಗಿ 34 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಯಿತು. 98 ವಿಮಾನಗಳ ಹಾರಾಟದಲ್ಲಿ ವಿಳಂಬವಾದರೆ, 30 ವಿಮಾನಗಳು ಪರ್ಯಾಯ ನಿಲ್ದಾಣಗಳಲ್ಲಿ ಇಳಿದವು.

ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಪರಿಸ್ಥಿತಿ ಎದುರಿಸಲು ಸನ್ನದ್ಧರಾಗುವಂತೆ ಹವಾಮಾನ ಇಲಾಖೆ ಸೂಚಿಸಿದೆ. 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !